ಕಾಜಿರಂಗ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
/ more info /
೧೧ ನೇ ಸಾಲು:
}}
 
'''ಕಾಜಿರಂಗ ರಾಷ್ಟ್ರೀಯ ಉದ್ಯಾನ'''ವು [[ಭಾರತ]]ದ [[ಅಸ್ಸಾಂ]] ರಾಜ್ಯದಲ್ಲಿದೆ. [[ವಿಶ್ವ ಪರಂಪರೆಯ ತಾಣ]]ವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ [[ಘೇಂಡಾಮೃಗ]] (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ. ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ ೪೩೦ ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ [[ಹುಲಿ]]ಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ೨೦೦೬ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ. ಜೊತೆಗೆ ಇಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ [[ಆನೆ]]ಗಳು, ಕಾಡಿನ [[ನೀರೆಮ್ಮೆಕಾಡುಕೋಣ]]ಗಳು ಮತ್ತು [[ಜಿಂಕೆ]]ಗಳು ಸಹ ವಾಸವಾಗಿವೆ. ಉಳಿದಂತೆ [[ಚಿರತೆ]], [[ಮೀನುಗಾರ ಕಾಡುಬೆಕ್ಕು]], [[ಪುನುಗು ಬೆಕ್ಕು]], [[ಸಾಂಬಾರ್ ಜಿಂಕೆ]], [[ಬೊಗಳುವ ಜಿಂಕೆ]], [[ಹೂಲಾಕ್ ಗಿಬ್ಬನ್]], [[ಕಿರೀಟವುಳ್ಳ ಲಂಗೂರ್]], [[ಕರಡಿ]] ಮತ್ತು [[ಗಂಗಾ ಡಾಲ್ಫಿನ್‍‍]]ಗಳು ಸಹ ಈ ಪ್ರದೇಶದಲ್ಲಿ ನೆಲೆಸಿವೆ. ವಿಶ್ವದ ಒಂದು ಪ್ರಮುಖ [[ಪಕ್ಷಿ]]ನೆಲೆಯಾಗಿ ಸಹ ಇದನ್ನು ಗುರುತಿಸಲಾಗಿದೆ. ಪೂರ್ವ [[ಹಿಮಾಲಯ]]ದ ಜೈವಿಕ ಕ್ರಿಯಾಕೇಂದ್ರದ ಅಂಚಿನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ದೊಡ್ಡ ಪ್ರಮಾಣದಲ್ಲಿ [[ಜೀವವೈವಿಧ್ಯ]]ವನ್ನು ತೋರುತ್ತದೆ.
[[Image:Kaziranga-National-Park-map-en-mod.svg|thumb|300px|ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಕಾಶೆ ]]
[[Image:Assam 028 bcs edit.jpg|thumb|ಕಾಜಿರಂಗದ ಹುಲ್ಲುಗಾವಲು ಮತ್ತು ಅರಣ್ಯ]]