ಉಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
[[ವರ್ಗ:ಮಾನವ ಶರೀರ]]
[[ವರ್ಗ:ಶರೀರ ಶಾಸ್ತ್ರ]]
ಬೆರಳ ತುದಿಗಳನ್ನ ರಕ್ಷಣೆ ಮಾಡಲು ಇರುವ ಭಾಗವೇ ಉಗುರು. ಬೆರಳಿನ ತುದಿ ತುಂಬಾನೆ ಸೂಕ್ಷ್ಮಮವಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ಉಗುರು ಬೆಳೆಯುತ್ತದೆ. ನರಗಳ ತುದಿ ಇರೋದು ಅಲ್ಲಿಯೇ. ನಮ್ಮ [[ದೇಹ]]ದಲ್ಲಿ ಅತಿ ಹೆಚ್ಚು ಸ್ಪರ್ಶ ನೀಡುವ ಭಾಗ ಬೆರಳ ತುದಿ. ಉಗುರು ಮತ್ತು ಕೂದಲು ಒಂದೇ ತರದ ಪ್ರೊಟಿನ್‌ನಿಂದ ತಯಾರಾಗುತ್ತದೆ. ಕೆರಾಟಿನ್ ಪ್ರೊಟಿನ್ ನಿಂದ ಉಗುರು ಬೆಳೆಯುತ್ತದೆ. ಮೇಲ್ಭಾಗದಲ್ಲಿರುವ ಕೆರಾಟಿನ್ [[ಜೀವಕೋಶ]]ಗಳು ಗಟ್ಟಿಯಾಗಿರುತ್ತದೆ. ಉಗುರಿನ ಪದರದ ಕೆಳಗೆ ಬೆಳೆಯುವುದರಿಂದ ಹೊಸ ಜೀವಕೋಶ ಹಳೇಯದನ್ನು ಮೇಲಕ್ಕೆ ತಳ್ಳುವುದರಿಂದ ಉಗುರು ರಚನೆ ಆಗುತ್ತದೆ. ಉಗುರಿನ ಕೆಳಗೆ ಕಾಣುವ ನಸುಗೆಂಪು [[ಬಣ್ಣ]] ರಕ್ತನಾಳಗಳಲ್ಲಿ ಹೊಸ [[ಜೀವಕೋಶ]]ಗಳು ಉತ್ಪತ್ತಿಯಾಗುತ್ತದೆ. ಉಗುರು ಎಂದು ನಾವು ಕರೆಯುವುದು [[ಜೀವಕೋಶ]]ಕ್ಕೆಗಳಿಗೆ.<ref>https://antekante.com/ನಿಮ್ಮ-ಉಗುರಿನ-ಬಗ್ಗೆ-ನಿಮಗೆ/</ref>
===ಉಗುರಿನ ಬೆಳವಣಿಗೆ ===
ಕೈಬೆರಳಿನ ಉಗುರು ತಿಂಗಳಿಗೆ ೨.೫ ಮಿಲಿ ಮೀಟರ್ [[ಉದ್ದ]] ಬೆಳೆಯುತ್ತದೆ. ಉಗುರನ್ನು ಹಾಗೆ ಬಿಟ್ಟರೆ ಬೆಳೆಯುತ್ತಲೆ ಹೋಗುತ್ತದೆ. ಕಾಲಿನ ಉಗುರುಗಳಿಗಿಂತ [[ಕೈಬೆರಳು]]ಗಳ ಉಗುರು ಜಾಸ್ತಿ ಬೆಳೆಯುತ್ತವೆ. ಕೈ ಬೆರಳಿನ ಉಗುರು ತಿಂಗಳಿಗೆ ೨.೫ ಮಿಲಿ [[ಮೀಟರ್]] ಬೆಳೆದರೆ ಕಾಲ್ಬೆರಳಿನ ಉಗುರು ೨ ಮಿಲಿ [[ಮೀಟರ್]] ಬೆಳೆಯುತ್ತದೆ. ಅತಿ [[ವೇಗ]]ವಾಗಿ ಬೆಳೆಯುವ ಉಗುರು ಉಂಗುರ ಬೆರಳು ಅಥವಾ ಮಧ್ಯ ಬೆರಳಿನದ್ದು. ನಿಧಾನಕ್ಕೆ ಬೆಳೆಯುವುದು ಹೆಬ್ಬೆರಳಿನ ಉಗುರು.
ಯಾವ ಕೈ ಹೆಚ್ಚಾಗಿ ಬಳಕೆಮಾಡುತ್ತೆವೆಯೋ ಆ ಕೈ ಉಗುರು ವೇಗವಾಗಿ ಬೆಳೆಯುತ್ತದೆ. ವಯಸ್ಸಾದಂತೆ ಉಗುರಿನ ಬೆಳವಣಿಗೆಯು ಕಮ್ಮಿ ಆಗುತ್ತ ಹೋಗುತ್ತದೆ. [[ಗರ್ಭಿಣಿ]] ಹೆಂಗಸರಲ್ಲಿ ಉಗುರು ಬಹಳ ವೇಗವಾಗಿ ಬೆಳೆಯುತ್ತದೆ. ಉಗುರಿನ ಬೆಳವಣಿಗೆ ಮೇಲೆ ವಾತಾವರಣವೂ ಪ್ರಭಾವ ಬೀರುತ್ತೆ. [[ಬೇಸಿಗೆ]] ಮತ್ತು ಬಿಸಿ ವಾತಾವರಣದಲ್ಲಿ ಉಗುರು ವೇಗವಾಗಿ ಬೆಳೆಯುತ್ತದೆ. [[ಜ್ವರ]] ಬಂದಾಗ ಹಾರ್ಮೋನ್ ಬ್ಯಾಲೆನ್ಸ್ ತಪ್ಪಿದಾಗ ಉಗುರಿನ ಬೆಳವಣಿಗೆ ಕಡಿಮೆ ಆಗುತ್ತದೆ. [[ರಾತ್ರಿ]]ಗಿಂತ [[ಹಗಲು]] ವೇಳೆ ಉಗುರಿನ ಬೆಳವಣಿಗೆ ವೇಗವಾಗಿ ಇರುತ್ತದೆ. ಕೈಬೆರಳಿನ ಉಗುರಿಗಿಂತ ಕಾಲಿನ ಉಗುರು ತುಂಬಾ ಗಟ್ಟಿ ಇರುತ್ತದೆ. ಉಗುರಿನಲ್ಲಿ ಕೆರಾಟಿನ್ ಪ್ರಮಾಣ ಹೆಚ್ಚಾದಂತೆ ಉಗುರಿನ ಸಾಮಥ್ಯ ಹೆಚ್ಚಾಗಿರುತ್ತದೆ.
===ಉಗುರಿನ ಆರೋಗ್ಯ===
ಉಗುರಿನ ಮೇಲೆ [[ಬಿಳಿ]] ಚುಕ್ಕಿಗಳಿದ್ದರೆ ಜಿಂಕ್ ಕೊರತೆ ಇರುತ್ತದೆ. ಉಗುರಿನ ಕೆಳಗಿರುವ [[ರಕ್ತನಾಳ]] ಉಗುರಿನ ಬೆಳವಣಿಗೆಗೆ ಕಾರಣವಾಗುತ್ತದೆ. ಉಗುರಿನ [[ಬಣ್ಣ]] ಕೂಡ ಅದರಿಂದಲೇ ತಿಳಿಯುತ್ತದೆ. ರಕ್ತನಾಳಗಳಿಂದ ಹಾಗೂ ಉಗುರಿನ [[ಬಣ್ಣ]]ದಿಂದ [[ಆರೋಗ್ಯ]] ಸೂಚನೆ ಸಿಗುತ್ತದೆ. ತಿನ್ನುವ [[ಆಹಾರ]] ಹಾಗೂ [[ಆರೋಗ್ಯ]]ದ ಸ್ಥಿತಿ ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ. ಉಗುರಿನ ಮೇಲೆ ಬಿಳಿ ಗೆರೆಗಳಿದ್ದರೆ ಲಿವರ್ ಸಮಸ್ಯೆ ಇದೆ.<ref>https://vijaykarnataka.indiatimes.com/lifestyle/beauty/tips-to-nail-care/articleshow/62526013.cms</ref>
===ಉಲ್ಲೇಖ===
"https://kn.wikipedia.org/wiki/ಉಗುರು" ಇಂದ ಪಡೆಯಲ್ಪಟ್ಟಿದೆ