ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.
 
ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. [[ಆಲಮಟ್ಟಿ ಅಣೆಕಟ್ಟು|ಆಲಮಟ್ಟಿ ಅಣೆಕಟ್ಟಿನ]] ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ.
 
==ನದಿಗಳು==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ