ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
| death_date = ಫೆಬ್ರುವರಿ ೯, ೧೯೭೭
}}
ಆರ್ ನಾಗೇಂದ್ರರಾವ್ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದವರು. ಕನ್ನಡ ರಂಗಭೂಮಿ, ಚಿತ್ರರಂಗಗಳಲ್ಲದೆ ಇತರ ಭಾಷೆಗಳಲ್ಲೂ ಪ್ರಸಿದ್ಧಿ ಪಡೆದವರು. ನಟನೆ, ಚಿತ್ರ ನಿರ್ಮಾಣ, ನಿರ್ದೇಶನ ಮಾತ್ರವಲ್ಲದೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಅಂತಹ ಸಂಸ್ಥೆಯನ್ನೂ ಮೂಡಿಸಿದವರು. ಅವರ ಮೂವರೂ ಮಕ್ಕಳಾದ ಆರ್ ಎನ್ ಜಯಗೋಪಾಲ್, ಕೃಷ್ಣ ಪ್ರಸಾದ್ ಮತ್ತು ಸುದರ್ಶನ್ ಕೂಡಾ ಚಿತ್ರರಂಗದಲ್ಲಿ ಮಹತ್ಸಾಧಕರುಚಿತ್ರರಂಗದಲ್ಲಿದ್ದಾರೆ.
==ಜೀವನ==
ರಟ್ಟೆಹಳ್ಳಿ ಕೃಷ್ಣರಾವ್ ಮತ್ತು ರುಕ್ಮಿಣಿದೇವಿ ದಂಪತಿಗಳಿಗೆ ಆರ್. ನಾಗೇಂದ್ರರಾವ್ ಎರಡನೆಯ ಮಗನಾಗಿ ೧೮೯೬ನೆಯ ಇಸವಿ ಜೂನ್ ೨೩ರಂದು ಜನಿಸಿದರು. ಅವರ ಜನ್ಮಸ್ಥಳ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ. ತಂದೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. 1900ರ ಸುಮಾರಿನಲ್ಲಿ ಕೃಷ್ಣರಾಯರು ಕಾರಾಣಾಂತರದಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಬಂದರು. ನಾಗೇಂದ್ರ ರಾಯರು ಮೈಸೂರಿನಲ್ಲಿರುವಾಗ ಚಿಕ್ಕವಯಸ್ಸಿನಲ್ಲೇ ‘ಇಂದಿರಾನಂದ’ ಎಂಬ ನಾಟಕದಲ್ಲಿ ಪಾತ್ರವಹಿಸಿದ್ದರು. ಆಸ್ಥಾನ ವಿದ್ವಾಂಸರಾದ ಕರಿಗಿರಿರಾಯರಿಂದ ಸಂಗೀತ ಪಾಠವೂ ನಡೆಯಿತು. ಮುಂದೆ ತಮ್ಮ ಕುಟುಂಬ ಹೊಳೆನರಸೀಪುರಕ್ಕೆ ವಲಸೆ ಬಂದಾಗ ನಾಗೇಂದ್ರರಾವ್ ಅಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಪ್ರಭಾವಿತರಾಗಿ, ತಾವು ಕಂಡ ಪಾತ್ರಗಳನ್ನೇ ಯಥಾವತ್ತಾಗಿ ಅಭಿನಯಿಸುತ್ತಿದ್ದರು. ಇನ್ನೂ ಚಿಕ್ಕವರಿರುವಾಗಲೇ ತಂದೆ ನಿಧನರಾದರು. ತಾಯಿ ಮತ್ತು ಸಹೋದರಿಯ ಜೊತೆ ಬೆಂಗಳೂರಿಗೆ ಬಂದರು. ತಾಯಿ ಅಲ್ಲಿ ಇಲ್ಲಿ ಮನೆ ಕೆಲಸ ಮಾಡಿ ಹೊಟ್ಟೆ ತುಂಬುತ್ತಿತ್ತು.
"https://kn.wikipedia.org/wiki/ಆರ್.ನಾಗೇಂದ್ರರಾವ್" ಇಂದ ಪಡೆಯಲ್ಪಟ್ಟಿದೆ