ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ವಜ್ರ'''ವು [[ಇಂಗಾಲ]]ದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು [[ಬೆಳಕು|ಬೆಳಕನ್ನು]] ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ "''It is a beautiful thing in the world''".
 
ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ. ಅತಿ ಕಠಿಣವಾಗಿರುವುದರಿಂದ ವಜ್ರವನ್ನು [[ಘರ್ಷಕ]]ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತರೆಉಪಯೋಗಿಸುತ್ತಾರೆ. ಒಂದು ವಜ್ರವನ್ನು ಗೀರಲು ಇನ್ನೊಂದು ವಜ್ರವೇ ಬೇಕು ಅಥವಾ [[ಬೋರಜೋನ್]], ಅತಿ ಗಡಸು [[ಫುಲ್ಲರೈಟ್]] ಅಥವ ವಜ್ರದ ನ್ಯಾನೋಕೊಳವೆಗಳು ಬೇಕು. ವಜ್ರವು ತನ್ನ ಹೊಳಪನ್ನು ಮತ್ತು ಮೆರುಗನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು.
 
ಪ್ರತಿವರ್ಷ ಸುಮಾರು ೧೩ ಕೋಟಿ [[ಕ್ಯಾರಟ್]] (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ [[ಬಿಲಿಯನ್]] ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.
 
ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ [[ಗ್ರೀಕ್ ಭಾಷೆ|ಗ್ರೀಕ್]] ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆವ್ಯುತ್ಪತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯ[[ರತ್ನ]]ವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರಗವನ್ನುವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗಜನರೆಡೆಗೆ ತಲುಪಿಸುತ್ತಿವೆ.
 
ವಜ್ರದ ಗುಣಮಟ್ಟವನ್ನು ಅದರ ತೂಕ ([[ಕ್ಯಾರಟ್]]), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.
 
ಜಗತ್ತಿನ ಒಟ್ಟೂಒಟ್ಟು ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು [[ಮಧ್ಯ ಆಫ್ರಿಕಾ|ಮಧ್ಯ]] ಮತ್ತು [[ದಕ್ಷಿಣ ಆಫ್ರಿಕಾ (ಪ್ರದೇಶ)|ದಕ್ಷಿಣ ಆಫ್ರಿಕಾ]]ಗಳಲ್ಲಿ ದೊರೆಯುತ್ತದೆ. ಉಳಿದಂತೆ [[ಕೆನಡ]], [[ಭಾರತ]], [[ರಷ್ಯಾ]], [[ಬ್ರೆಜಿಲ್]] ಮತ್ತು [[ಆಸ್ಟ್ರೇಲಿಯಾ]]ಗಳಲ್ಲಿ ಸಹ ಗಣನೀಯ ಪ್ರಮಾಣದ ವಜ್ರದ ನಿಕ್ಷೇಪವಿರುವುದು ಕಂಡುಬಂದಿದೆ. ವಜ್ರವನ್ನು ಕಿಂಬರ್ಲೈಟ್ ಮತ್ತು ಲಾಂಪೊರೈಟ್ ಗಳಿಂದ ಗಣಿಗಾರಿಕೆಯ ಮೂಲಕ ತೆಗೆಯಲಾಗುವುದು. ಈ ಎರಡೂ ಅದಿರುಗಳು ಭೂಗರ್ಭದಿಂದ [[ಜ್ವಾಲಾಮುಖಿ]]ಗಳ ಚಟುವಟಿಕೆಯಿಂದಾಗಿ ಮೇಲ್ಭಾಗಕ್ಕೆ ತಳ್ಳಲ್ಪಟ್ಟವಾಗಿವೆ. ಸಾಮಾನ್ಯವಾಗಿ ವಜ್ರದ ಹರಳುಗಳು ಬಹಳ ಆಳದಲ್ಲಿ ಅತಿಯಾದ ಉಷ್ಣತೆ ಮತ್ತು ಒತ್ತಡಗಳಿರುವ ಸನ್ನಿವೇಶದಲ್ಲಿ ಸೃಷ್ಟಿಯಾಗುತ್ತವೆ.
 
== ವಜ್ರದ ಗುಣಗಳು ==
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ