ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೬ ನೇ ಸಾಲು:
* ಸೃಷ್ಟಿ ವಿಷಯವೂ ಸಾಂಖ್ಯ ಔಪನಿಷದಿಕ ತತ್ತ್ವಪ್ರಣಾಲಿಗಳೂ ಮನ್ವಂತರ ವಿವರಣೆಯೊಂದಿಗೇ ಪುರಾಣವನ್ನು ಸೇರಿಕೊಂಡಿದ್ದು ಈ ಮೆಟ್ಟಲಲ್ಲಿ. ಸೂತ್ರವಾಙ್ಮಯದ ಯುಗ ಪುರಾಣಪರಿವೃದ್ಧಿಯ ಮೂರನೆಯ ಕಾಲಮಾನ. ಆಪಸ್ತಂಬಸೂತ್ರದಲ್ಲಿ ಹೇಳಿದೆ. ವದತೋವ್ಯಾಘಾತವುಳ್ಳ ಭವಿಷ್ಯತ್ಪುರಾಣವೆಂಬ ತಲೆಬರಹದಿಂದ ಪುರಾಣವೆಂಬ ಪದದ ಮೂಲಾರ್ಥ ಮಾಯಾವಾಗಿ ಅದೊಂದು ವಿಶಿಷ್ಟವರ್ಗದ ಗ್ರಂಥಗಳ ಹೆಸರೆನಿಸಿದ್ದು ಸ್ಪಷ್ಟವಾಗುತ್ತದೆ. ಈ ಹಂತದ ಪುರಾಣಗಳೇ ಬಹುಶಃ ಪಂಚಲಕ್ಷಣಗಳ ಅನ್ವಯಕ್ಕೆ ಎಡೆಗೊಟ್ಟಿರಬೇಕು.
*ಈ ಸಂದರ್ಭದಲ್ಲೇ ಅವುಗಳಲ್ಲಿ ಭಕ್ತಿಗೂ ಭೂ ವಿವರಣೆಗೂ ಸಂಬಂಧಿಸಿದ ವಿಷಯಗಳು ಸೇರಿಕೊಳ್ಳಲಾರಂಭಿಸಿರಬೇಕು. ವರ್ಣ, ಆಶ್ರಮ, ಶ್ರಾದ್ಧ, ದಾನ, ದೀಕ್ಷೆ, ವ್ರತ, ತೀರ್ಥಯಾತ್ರೆ-ಮುಂತಾದ ಮತ ಧಾರ್ಮಿಕ ವಿಷಯಗಳು ಅವನ್ನು ಹೊಕ್ಕಿರಬೇಕು. ಅಂದರೆ ಪ್ರ.ಶ. ಸು. 4ನೆಯ ಶತಮಾನದಷ್ಟು ಹೊತ್ತಿಗೆ ಉಪಲಬ್ಧ ಪುರಾಣಗಳ ರೂಪರಚನೆ ನಿರ್ದಿಷ್ಟವಾಗಿ ಖಚಿತಗೊಂಡು ಪುರಾಣಸಾಹಿತ್ಯದ ವಿಶಿಷ್ಟಶೈಲಿಯ ಮಾದರಿ ಬೆಳಕಿಗೆ ಬಂತೆನ್ನಬಹುದು. ಆಮೇಲೆ ಪ್ರತಿ ತಲೆಮಾರೂ ಪುರಾಣಗಳಿಗೆ ವಿವಿಧ ವಿಷಯಗಳನ್ನು ಸೇರಿಸುತ್ತ ಬಂದಿತು.
*ಪುರಾಣಗಳ ಪ್ರಕಾರ ಸೃಷ್ಟಿಯಿರುವುದು ಬ್ರಹ್ಮನ ಹಗಲಿನಲ್ಲಿ. ಆತನ ಹಗಲಿಗೆ 14 ಮನ್ವಂತರಗಳು ಅಥವಾ 423ಕೋಟಿ423 ಕೋಟಿ ಮಾನುಷ ವರ್ಷಗಳು. ಸಾವಿರ ದೇವ ಯುಗದಳಕ್ಕೆ ಸಮಾನ. ಅದೊಂದು ಕಲ್ಪ. ಒಂದೊಂದು ಮನ್ವಂತರಕ್ಕೆ 30 ಕೋಟಿ, 67 ಲಕ್ಷ, 20 ಸಾವಿರ ವರ್ಷಗಳು. ಇಂಥ 14 ಮನ್ವಂತರಗಳೂ 15 ಸಂಧಿಕಾಲಗಳೂ ಬ್ರಹ್ಮನ ಒಂದು ಹಗಲಿಗೆ ಸಮಾನ. ಮನುಷ್ಯರ ಚತುರ್ಯುಗ ಚಕ್ರವೊಂದಕ್ಕೆ ಒಂದು ದೇವ ಅಥವಾ ಮಹಾಯುಗ.
*ಒಂದು ಮಹಾಯುಗಕ್ಕೆ 43 ಲಕ್ಷ, 20 ಸಾವಿರ ವರ್ಷಗಳು. ಕಲ್ಪಾಂತದಲ್ಲಿ ಮಹಾಪ್ರಳಯ. ಅನಂತರ ಮತ್ತೊಂದು ಕಲ್ಪ ಬ್ರಹ್ಮನ ರಾತ್ರಿ. ಆಗ ವಿಶ್ವವಿಲ್ಲ. ಒಂದೊಂದು ಮನ್ವಂತರ ಮುಗಿದ ಕೂಡಲೆ ಕೆಳವರ್ಗದ ಪ್ರಾಣಿಗಳ ಮತ್ತು ಕೆಳಲೋಕಗಳ ನಾಶವುಂಟಾಗು ತ್ತದೆನಾಶವುಂಟಾಗುತ್ತದೆ. ಈ ಅಲ್ಪ ಪ್ರಳಯದಲ್ಲಿ ಋಷಿ. ದೇವತೆಗಳೂ ವಿಶ್ವದ ಮೂಲದ್ರವವೂ ನಾಶ ಹೊಂದದು. ಪ್ರತಿಸರ್ಗವೆಂಬ ನೈಮಿತ್ತಿಕಮಹಾಪ್ರಲಯನೈಮಿತ್ತಿಕಮಹಾಪ್ರಳಯ ಕಲ್ಪಕ್ಕೊಂದು; ಆಗ ಸರ್ವನಾಶ. ಮೂಲದ್ರವ್ಯವಾದ ಪ್ರಕೃತಿ ನಷ್ಟಹೊಂದುವ ಈ ಮಹಾಪ್ರಳಯವೊಂದು ಪ್ರಾಕೃತಪ್ರಲಯಪ್ರಾಕೃತಪ್ರಳಯ.
* ಇದರಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ಪರಬ್ರಹ್ಮಲೀನನಾಗುವನು. ಸಂಧಿಕಾಲರಹಿತವಾದ ಒಂದೊಂದು ಮನ್ವಂತರ 71 ಚತುರ್ಯುಗ ಚಕ್ರಗಳಿಗೆ ಸಮವೆಂದು ಮಾಡಿದ್ದು ಅನಂತರದ ವ್ಯವಸ್ಥೆ. ಕೃತ, ತ್ರೇತ, ದ್ವಾಪರ, ಕಲಿ ಎಂಬ ನಾಲ್ಕು ಯುಗಗಳ ವರ್ಷಸಂಖ್ಯೆ 4:3:2:1 ಎಂಬ ಇಳಿತಾಯದ ಪ್ರಮಾಣದಲ್ಲಿ ನಿಷ್ಕೃಷ್ಟವಾದದ್ದೂ ಆಮೇಲಿನ ಕಲ್ಪನೆಯಿಂದಲೇ. ಭಾರತದ ಕುರುಕ್ಷೇತ್ರ ಕದನ ದ್ವಾಪರಾಂತ್ಯದಲ್ಲಿ ನಡೆಯಿತು. ಅನಂತರ ಕಲಿಯುಗಾರಂಭ.
*ಕೃತದಲ್ಲಿ 7ನೆಯವನಾದ ವೈವಸ್ವತ ಮನುವಿನಿಂದ ಹಿಡಿದು 40 ತಲೆಮಾರುಗಳು ಅಳಿದ ಬಳಿಕ ಹೈಹಯರ ನಾಶದಿಂದ ಆ ಯುಗ ಕೊನೆಗೊಂಡಿತೆಂದೂ ತ್ರೇತೆಯಲ್ಲಿ ಸಗರ ಚಕ್ರವರ್ತಿಯ ಆಳ್ವಿಕೆಯಿಂದ ಆರಂಭಿಸಿ 25 ತಲೆಮಾರುಗಳು ಅದನ್ನು ನಡೆಸಿಕೊಂಡು ಹೋದುವೆಂದೂ ದ್ವಾಪರ ದಲ್ಲಿದ್ವಾಪರದಲ್ಲಿ ಚಂದ್ರವಂಶದ 30 ತಲೆಮಾರುಗಳ ಅರಸರು ಆಳಿ ಅಳಿದರೆಂದೂ ಪುರಾಣಗಳಲ್ಲಿ ಹೇಳಿದೆ. ಕುರುಕ್ಷೇತ್ರ ಕದನದ ಕಾಲ ಪ್ರ.ಶ.ಪು. 1400 ಎಂದು ಇತಿಹಾಸಜ್ಞರ ಮತ.
*ಅದಕ್ಕೆ 1800 ವರ್ಷಗಳ ಹಿಂದೆ ಅಥವಾ ಪ್ರ.ಶ.ಪು. 3200ರಲ್ಲಿ-ಮಹಾಪ್ರವಾಹದ ಉತ್ತರಕಾಲದಲ್ಲಿ-ಭಾರತದ ಪಾರಂಪರಿಕ ಚರಿತ್ರೆಯ ಕಾಲ ಆರಂಭಿಸಿತೆನ್ನಬಹುದು. ಪುರಾಣದ ಭೂಗೋಳವಿಜ್ಞಾನ ಬಹಳ ಸ್ವಾರಸ್ಯವಾಗಿದೆ. ಮೇರುಪರ್ವತ ಭೂಲೋಕದ ಮಧ್ಯಸ್ಥಳ. ಸುತ್ತಲೂ ಉಪ್ಪುನೀರಿನ, ಕಬ್ಬಿನ ಹಾಲಿನ, ಹೆಂಡದ, ತುಪ್ಪದ, ಮೊಸರಿನ, ಹಾಲಿನ ಮತ್ತು ಶುದ್ಧವಾದ ನೀರಿನ ಏಳು ಕಡಲುಗಳಿವೆ.
*ಅವುಗಳಲ್ಲಿ ಒಂದೊಂದರಿಂದ ಪ್ರತ್ಯೇಕವಾಗಿ ಸುತ್ತುವರಿಯಲ್ಪಟ್ಟ ಜಂಬು, ಪ್ಲಕ್ಷ (ಗೋವೇದಕ) ಶಾಲ್ಮಲ, ಕುಶ, ಕ್ರೌಂಚ, ಶಾಕ ಮತ್ತು ಮುಷ್ಕರ ಎಂಬ ಹೆಸರಿನ ಏಳು ದ್ವೀಪರೂಪದ ಖಂಡಗಳಿವೆ. ಭಾರತ ಜಂಬೂದ್ವೀಪದ ಒಂದು ವರ್ಷ ಅಥವಾ ದೇಶ. ಇಂದ್ರದ್ವೀಪ, ಕಶೇರುಮತ್, ಠಾಮ್ರವರ್ಣ, ಗಭಸ್ತಿಮತ್, ನಾಗದ್ವೀಪ, ಸೌಮ್ಯ, ಗಾಂಧರ್ವ, ವಾರುಣ, ಕುಮಾರಕ-ಎಂಬೀ ಒಂಬತ್ತು ಪುರಾಣ ಭಾರತದ ಪ್ರಾಂತರಾಜ್ಯಗಳು.
 
==ಅಷ್ಟಾದಶ ಪುರಾಣಗಳು ==
===ಬ್ರಹ್ಮಪುರಾಣ===
"https://kn.wikipedia.org/wiki/ಅಷ್ಟಾದಶ_ಪುರಾಣಗಳು" ಇಂದ ಪಡೆಯಲ್ಪಟ್ಟಿದೆ