ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಲೇಖನವನ್ನು ಪರಿಷ್ಕರಿಸಲಾಗಿದೆ.
೬೪ ನೇ ಸಾಲು:
 
==ಅಲ್ಯೂಮಿನೇಟ್==
* ಅಲ್ಯೂಮಿನಿಯಂ ಆಕ್ಸೈಡ್ ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ, ನೀರಿನಲ್ಲಿ ವಿಲೀನವಾಗುವ ಲಕ್ಷಣ ಸಂಪನ್ನವಾಗಿ, ಅದನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ಕ್ಯಾಲ್ಸಿಯಂ, ಸಿಲಿಕೇಟ್ ನೀರಿನಲ್ಲಿ ಲೀನವಾಗದೆ ಹಿಂದುಳಿಯುತ್ತದೆ. ಅದನ್ನು ಕಾಸಿ ಸಿಮೆಂಟ್ ತಯಾರಿಕೆಯಲ್ಲಿ ಉಪಯೋಗಿಸುವರು.
* ಬದಲಾಗಿ ಕಬ್ಬಿಣಾಂಶ ಹೆಚ್ಚಾಗಿರುವ ಬಾಕ್ಸೈಟ್ ಅದುರನ್ನು ರಾಸಾಯನಿಕವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಆದ ಸುಣ್ಣಕಲ್ಲಿನೊಡನೆ ಮೊದಲು ಕಾಸಿದರೆ ಕ್ಯಾಲ್ಸಿಯಂ ಅಲ್ಯೂಮಿನೇಟ್ ಮತ್ತು ಕಬ್ಬಿಣ ಬೇರೆ ಆಗುತ್ತವೆ. ಈಗ ಬಿಸಿ ಸೋಡಿಯಂ ಕಾರ್ಬೊನೇಟ್ ದ್ರಾವಣದಿಂದ ತೊಳೆದರೆ, ಕ್ಯಾಲ್ಸಿಯಂ ಅಲ್ಯೂಮಿನೇಟ್, ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ ನೀರಿನ ಜೊತೆ ಲೀನವಾಗಿ ಪ್ರತ್ಯೇಕವಾಗುತ್ತದೆ. ಈ ವಿಧಾನವನ್ನು ರಷ್ಯದೇಶದಲ್ಲಿ ಬಳಸುವುದಾಗಿ ವರದಿಯಾಗಿದೆ.
* ವಿದ್ಯುತ್ ವಿಭಜನಾಕ್ರಮದಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯುವ ಕೈಗಾರಿಕೆಯಲ್ಲಿ ಬೇಯರ್‍ನ ಬಾಕ್ಸೈಟ್ ಶುದ್ಧೀಕರಣ ವಿಧಾನಕ್ಕೂ ಮತ್ತು ವಿದ್ಯುಚ್ಛಕ್ತಿ ಪೂರೈಕೆಗೂ ಬಹಳ ಬಂಡವಾಳ ಬೇಕು. ಆದ್ದರಿಂದ ಕಡಿಮೆ ಬಂಡವಾಳ ಸಾಕಾಗುವ ರಾಸಾಯನಿಕ ಅಪಕರ್ಷಣ ವಿಧಾನಗಳನ್ನೂ, ಆಗ ಬೇರ್ಪಡುವ ಅಲ್ಯೂಮಿನಿಯಂ ಲೋಹವನ್ನು ಭಟ್ಟಿ ಇಳಿಸುವುದರ ಮೂಲಕ ಹೊರತೆಗೆಯುವ ಕ್ರಮವನ್ನೂ ಕೈಗಾರಿಕಾ ಮಟ್ಟದಲ್ಲಿ ಉಪಯೋಗಿಸುವ ಸಾಧ್ಯತೆಯ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇವೆ.
 
==ಗುಣಗಳು==
* ಬೆಳ್ಳಿಯ ಹೊಳಪಿನ, ಹಗುರತೆಗೆ ಪ್ರಸಿದ್ಧವಾದ ಲೋಹ. ಸಾಂದ್ರತೆ 2.708 ಗ್ರಾಂ. ಮಿ. ಲೀಟರ್. ಬಲು ಶುದ್ಧಲೋಹ. ಮೆದು ಮತ್ತು ದುರ್ಬಲವಾದುದಾದರೆ ಅಲ್ಪ ಪ್ರಮಾಣದಲ್ಲಿ ಇತರ ಲೋಹಗಳು ಮಿಶ್ರವಾದರೆ ಉತ್ತಮಗಡುಸು ಲೋಹವಾಗುತ್ತದೆ. ತೆಳ್ಳಗೆ ತಗಡಾಗಿ ಬಡಿಯಬಹುದು. ಸಣ್ಣ ವ್ಯಾಸದ ತಂತಿಯಾಗಿ ಎಳೆಯಲೂಬಹುದು. ಕಾಸಿದರೆ 6600ಸೆಂ. ಗ್ರೇ. ಉಷ್ಣತೆಯಲ್ಲಿ ದ್ರವವಾಗುವುದು.
* ಆದರೆ ಕುದಿಯಲು 24500ಸೆಂ. ಗ್ರೇ. ಉಷ್ಣತೆಯ ಮಟ್ಟ ಬೇಕು. ಒಂದು ಅತ್ಯುತ್ತಮ ಉಷ್ಣವಾಹಕ ಮತ್ತು ವಿದ್ಯುದ್ವಾಹಕ ಲೋಹ. ಸಾಮಾನ್ಯ ವಾತಾವರಣದಲ್ಲಿ ಉತ್ತಮ ತುಕ್ಕು ನಿರೋಧಕ ಲಕ್ಷಣಕಾರಿ. ನಯವಾದ ಪುಡಿಯ ರೂಪದಲ್ಲಿ ಅಲ್ಯೂಮಿನಿಯಂ ಲೋಹ ಆಮ್ಲಜನಕ ಅಥವಾ ಗಾಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಉಷ್ಣ ಸೂಸುತ್ತ ಜಾಜ್ಜ್ವಲ್ಯಮಾನವಾಗಿ ಉರಿಯಬಲ್ಲದು.
* ಈ ಗುಣವನ್ನು ಕ್ರೋಮಿಯಂ ಮುಂತಾದ ಲೋಹಗಳನ್ನು ಅವುಗಳ ಆಮ್ಲಜನಕ ಸಂಯುಕ್ತಗಳಾದ ಆಕ್ಸೈಡ್‍ಗಳಿಂದ ಬೇರ್ಪಡಿಸಲು ಬಳಸುವ ಒಂದು ವಿಶಿಷ್ಟ ಪದ್ಧತಿಯಲ್ಲಿ ಥರ್ಮೈಟ್ ವಿಧಾನದಲ್ಲಿ ಉಪಯೋಗಿಸಿಕೊಳ್ಳುವರು. ಶುದ್ಧಘನಲೋಹಶುದ್ಧ ಘನ ಲೋಹ ಗಾಳಿಯಲ್ಲಿನ ಆಕ್ಸಿಜನ್ನಿನೊಡನೆ ಬೇಗ ಸಂಯೋಗ ಹೊಂದುವುದಾದರೂ ಪರಿಣಾಮವಾಗಿ ಲೋಹದ ಮೇಲ್ಮೈ ಮಾತ್ರ ಆಕ್ಸೈಡ್ ಪೊರೆಯ ರಕ್ಷಣಾಕವಚದಿಂದ ಆವೃತವಾಗಿ, ಒಳಮೈ ಯಾವ ರಾಸಾಯನಿಕ ಕ್ರಿಯೆಗೂ ಸಿಕ್ಕದಂತಾಗುತ್ತದೆ.
* ಆದ್ದರಿಂದಲೇ ಅಲ್ಯೂಮಿನಿಯಂ ಲೋಹ ಉತ್ತಮ ತುಕ್ಕು ಅಥವಾ ಕಿಲುಬು ನಿರೋಧಕ ಲೋಹವಾಗಿ ವರ್ತಿಸುತ್ತದೆ. ಅಲ್ಯೂಮಿನಿಯಂ ಲೋಹಕ್ಕೆ ಬಣ್ಣ ಹಚ್ಚುವುದು ಅಥವಾ ಬೇರೊಂದು ಲೋಹ ಲೇಪನ ಮಾಡುವುದು ಅಥವಾ ಲೋಹವನ್ನು ಉದ್ದೇಶವಾಗಿ ವಿದ್ಯುತ್ ಉತ್ಕರ್ಷಣಕ್ಕೆ (ಆಕ್ಸಿಡೇಷನ್) ಒಳಪಡಿಸುವುದು-
* ಹೀಗೆ ಅನೇಕ ವಿಧಗಳಿಂದ ಅಲ್ಯೂಮಿನಿಯಂ ಲೋಹವನ್ನು ತುಕ್ಕಿನಿಂದ ಮತ್ತಷ್ಟು ಕಾಪಾಡಬಹುದು. ಅಲ್ಯೂಮಿನಿಯಂ ಮೂಲವಸ್ತುವಿನ ಸಂಯೋಗಶಕ್ತಿ +3. ಅದರಿಂದಲೇ ಅದರ ಲವಣಗಳಿಗೆ ಸಾಮಾನ್ಯ ಸೂತ್ರ ಂಟಘಿ3. ಇದರಲ್ಲಿ ಘಿ ಎಂಬುದು ಅಲ್ಯೂಮಿನಿಯಂನೊಡನೆ ಸಂಯೋಗ ಹೊಂದಿರುವ ಅಲೋಹ.
* ಅಸಿಟಿಕ್ ಆಮ್ಲ, ನೈಟ್ರಿಕ್ ಆಮ್ಲಗಳು ಅಲ್ಯೂಮಿನಿಯಂ ಲೋಹದ ಮೇಲೆ ನಿಷ್ಕ್ರಿಯ ಆಮ್ಲಗಳು. ಆದರೆ ಹೈಡ್ರೊಫ್ಲೋರಿಕ್ ಆಮ್ಲ, ಹೈಡ್ರೊಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲಗಳಲ್ಲಿ ಲೋಹ ಕ್ರಿಯೆಗೊಳಗಾಗುವುದು. ಪ್ರಬಲಕ್ಷಾರ ದ್ರಾವಣಗಳು ಅಲ್ಯೂಮಿನಿಯಂ ಆಕ್ಸೈಡ್ ಹೊರಪೊರೆಯನ್ನು ಜೀರ್ಣಮಾಡಿಕೊಂಡು ಲೋಹವನ್ನು ಕ್ರಮೇಣ ತಿಂದುಹಾಕುತ್ತವೆ.
* ಉಪ್ಪಿನ ನೀರಿನಲ್ಲಿ ಅಲ್ಯೂಮಿನಿಯಂ ಲೋಹ ರಾಸಾಯನಿಕ ಕ್ರಿಯೆಗೊಳಗಾಗುವುದು. ಆದರೆ ಬಲು ಶುದ್ಧ ಅಲ್ಯೂಮಿನಿಯಂ ಲೋಹ ಅಥವಾ ಅಲ್ಯೂಮಿನಿಯಂ ಮೆಗ್ನೀಸಿಯಂ ಮಿಶ್ರಲೋಹ ಸಮುದ್ರದ ನೀರಿನಲ್ಲಿ ಅನೇಕ ವರ್ಷಗಳ ಕಾಲ ತುಕ್ಕು ಹಿಡಿಯುವುದಿಲ್ಲ.
* ಅಂದರೆ ಅಲ್ಯೂಮಿನಿಯಂ ಲೋಹದ ರಾಸಾಯನಿಕ ಚಟುವಟಿಕೆ ಬಲುಮಟ್ಟಿಗೆ ಅದರ ಶುದ್ಧತೆ, ಅದರೊಡನೆ ಬೆರೆತಿರುವ ಪ್ರಕೃತಿ ಮತ್ತು ಪ್ರಮಾಣವನ್ನವಲಂಬಿಸಿದೆ. ಅಲ್ಯೂಮಿನಿಯಂ ಆಕ್ಸೈಡ್ ಪ್ರಬಲ ಆಮ್ಲ ಮತ್ತು ಕ್ಷಾರಗಳೆರಡರಲ್ಲೂ ಲೀನವಾಗುವ ಲಕ್ಷಣ ಹೊಂದಿದೆ. ಪಾದರಸ ಅಥವಾ ಅದರ ಸಂಯುಕ್ತಗಳ ಸಂಪರ್ಕದಲ್ಲಿಯೂ ಅಲ್ಯೂಮಿನಿಯಂ ರಾಸಾಯನಿಕ ಕ್ರಿಯೆಗೊಳಗಾಗುವುದು.
* ಅಲ್ಯೂಮಿನಿಯಂ ಲೋಹ ಇಂಗಾಲ, ಸಾರಜನಕ, ಗಂಧಕ, ರಂಜಕಗಳೇ ಮುಂತಾದ ಅನೇಕ ಅಲೋಹಗಳೊಂದಿಗೆ ಸಂಯೋಗ ಹೊಂದಬಲ್ಲುದು. ಅಲ್ಯೂಮಿನಿಯಂ ಲೋಹ ಅಥವಾ ಅದರ ಆಮ್ಲಜನಕ ಸಂಯುಕ್ತಗಳು ಮಾನವ ಶರೀರದೊಳಕ್ಕೆ ಹೊಕ್ಕಲ್ಲಿ ಯಾವ ದುಷ್ಪರಿಣಾಮವೂ ಆಗುವುದಿಲ್ಲ.
* ಬದಲಾಗಿ ಅತಿಯಾಗಿ ದೂಳನ್ನು ಸೇವನೆ ಮಾಡಬೇಕಾದ ಸಂದರ್ಭಗಳಲ್ಲಿ ಆಗಬಹುದಾದ ಶರೀರದ ಆಂತರಿಕ ದುಷ್ಪರಿಣಾಮಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ. ಜಠರದ ವ್ರಣರೋಗವನ್ನು ಗುಣಪಡಿಸಲು ಪರಿಣಾಮಕಾರಿಯಾದುದು ಅಲ್ಯೂಮಿನಿಯಂ ಹೈಡ್ರಾಕ್ಸೈಡ್. ಆದುದರಿಂದಲೇ ಅಲ್ಯೂಮಿನಿಯಂ ಪಾತ್ರೆಗಳಲ್ಲಿನ ಅಡುಗೆ ಯಾವ ರೀತಿಯಲ್ಲೂ ಅಹಿತವಲ್ಲ.
 
==ಅಲ್ಯೂಮಿನಿಯಂ ಸಂಯುಕ್ತ==
* ಅಲ್ಯೂಮಿನಿಯಂ ಸಂಯುಕ್ತಗಳಲ್ಲಿ ಮುಖ್ಯವಾದುವು ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಅಲ್ಯೂಮಿನಿಯಂ ಸಲ್ಫೇಟ್ ಸಂಬಂಧಿತ ಪಟಿಕ ಜಾತಿಯ ಲವಣಗಳು. ಇವುಗಳ ಪ್ರಾಮುಖ್ಯ ಮತ್ತು ಗುಣಗಳನ್ನು ಈಗಾಗಲೇ ವಿವರಿಸಲಾಗಿದೆ. ಅಲ್ಯೂಮಿನಿಯಂ ಪಟಿಕಗಳಿಗೆ ಒ' ಒ''' (Sಔ4)2.12 ಊ2ಔ ಎಂಬ ಸೂತ್ರ ಅನ್ವಯಿಸುತ್ತದೆ. ಇದರಲ್ಲಿ ಒ' ಎಂಬುದು ಸೋಡಿಯಂ, ಪೊಟ್ಯಾಸಿಯಂ, ಅಮೋನಿಯಂ ಆಗಲಿ, ಒ''' ಎಂಬುದು ಕಬ್ಬಿಣ, ಅಲ್ಯೂಮಿನಿಯಂ, ಕ್ರೋಮಿಯಂ ಆಗಲಿ ಅಲ್ಯೂಮಿನಿಯಂ ಸಂಯುಕ್ತಗಳನ್ನೆಲ್ಲ ಅಲ್ಯೂಮಿನಿಯಂ ಅಥವಾ ಅಲ್ಯೂಮಿನಿಯಂ ಆಕ್ಸೈಡ್ ಮೂಲದಿಂದ ತಯಾರಿಸಬಹುದು.
* ಅಲ್ಯೂಮಿನಿಯಂ ಮಿಶ್ರಲೋಹಗಳು : ಅಲ್ಯೂಮಿನಿಯಂನೊಡನೆ ಇತರ ಲೋಹಗಳನ್ನು ಮಿಶ್ರಮಾಡುವ ಮುಖ್ಯೋದ್ದೇಶ ಅಲ್ಯೂಮಿನಿಯಂ ಲೋಹದ ಉಪಯುಕ್ತ ಗುಣಗಳನ್ನು ಮತ್ತಷ್ಟು ವೃದ್ಧಿಪಡಿಸುವುದು. ಸಾಮಾನ್ಯವಾಗಿ ಪೇಟೆಯಲ್ಲಿ ದೊರಕುವ ಅಲ್ಯೂಮಿನಿಯಂ ಲೋಹ 99%-99.6% ರಷ್ಟು ಮಾತ್ರ ಶುದ್ಧ. ಅಲ್ಪಪ್ರಮಾಣದಲ್ಲಿ ಕಬ್ಬಿಣ, ಸಿಲಿಕಾನ್‍ಗಳು ಇದ್ದೇ ಇರುತ್ತವೆ.
* ಅವು ಇರುವುದು ಅಲ್ಯೂಮಿನಿಯಂಗೆ ಶಕ್ತಿದಾಯಕ. ಆದರೆ ತುಕ್ಕು ಹಿಡಿಯುವ ಪ್ರವೃತ್ತಿಗೆ ಉತ್ತೇಜನಕಾರಿ. ಅಲ್ಯೂಮಿನಿಯಂ ಮಿಶ್ರಲೋಹ ಉತ್ಪಾದನೆಯಲ್ಲಿ ಬಳಸುವ ಇತರ ಲೋಹಗಳೆಂದರೆ ಮುಖ್ಯವಾಗಿ ತಾಮ್ರ , ಮೆಗ್ನೀಸಿಯಂ, ಸತು, ನಿಕ್ಕಲ್ ಮತ್ತು ಮ್ಯಾಂಗನೀಸ್. ಇನ್ನೂ ಅನೇಕ ಇತರ ಲೋಹಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸುವುದೂ ಉಂಟು. ಡೂರಲ್ಯೂಮಿನ್, ಮೆಗ್ನೀಸಿಲಿಯಂ ಇವು ಕೆಲವು ಜನಪ್ರಿಯ ಮಿಶ್ರಲೋಹಗಳು.
 
==ಉಪಯೋಗಗಳು==
* ಬಲು ಹಗುರವಾದ ಮತ್ತು ಇತರ ಸೂಕ್ಷ್ಮ ಲೋಹಗಳ ನಿಯಂತ್ರಿತ ಮಿಶ್ರಣದಿಂದ ವೃದ್ಧಿತ ಗಡಸು ಪಡೆಯುವ ಅಲ್ಯೂಮಿನಿಯಂ ಲೋಹದ ಅತಿ ಮುಖ್ಯ ಉಪಯೋಗ ವಿಮಾನ, ರೈಲು, ಲಾರಿ ಮತ್ತಿತರ ಪ್ರಯಾಣಿಕರ ವಾಹನಗಳಲ್ಲಿ; ಹಡಗುಗಳು, ಗೃಹನಿರ್ಮಾಣಕ್ಕೆ ಕಿಟಕಿ, ಬಾಗಿಲು, ಮೇಲ್ಚಾವಣಿಗಳೇ ಮುಂತಾದ ರಚನಾಕಾರ್ಯಗಳಲ್ಲಿ, ಇದರಿಂದ ವಾಹನಗಳ ತೂಕ ಕಡಿಮೆಯಾಗಿ, ವಾಹನಗಳ ಎಂಜಿನ್‍ಗಳು ಇನ್ನೂ ಹೆಚ್ಚಿನ ಭಾರದ ಸಾಮಗ್ರಿಗಳನ್ನು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಎಳೆಯುವ ಸಾಮಥ್ರ್ಯ ಹೊಂದುತ್ತವೆ.
* ರಚನಾ ಹಂತದಲ್ಲಿಯಾಗಲೀ ಅಥವಾ ರಿಪೇರಿ ಮಾಡಬೇಕಾದ ಸಂದರ್ಭಗಳಲ್ಲಿಯಾಗಲಿ ಅಲ್ಯೂಮಿನಿಯಂ ಲೋಹವನ್ನು ವೆಲ್ಡ್ ಮಾಡಬಹುದು, ರಿವೆಟ್ ಮಾಡಬಹುದು, ಅಂಟಿಸಬಹುದು. ಆದರೆ ಬೆಸುಗೆ ಸರಿಯಾಗಿ ಹಿಡಿಯುವುದಿಲ್ಲ. ಆಕರ್ಷಕ ಬಣ್ಣಗಳನ್ನು ಹಚ್ಚಬಹುದು ಅಥವಾ ಎನಾಮಲ್ ಮಾಡಲೂಬಹುದು.
* ಪ್ರಾಯೋಗಿಕವಾಗಿ ಸೇತುವೆಗಳೂ ಕೂಡ ನಿರ್ಮಾಣವಾಗಿವೆ. ಎರಡನೆಯ ಮುಖ್ಯ ಬಳಕೆ ಹಗುರತೆ, ಗಡಸು, ಉಷ್ಣವಾಹಕತೆ, ಕಿಲುಬು ಹಿಡಿಯದಿರುವಿಕೆಯ ಗುಣಗಳ ಮೇಲೆ ಆಧಾರಿತವಾಗಿದೆ. ಅದೆಂದರೆ ಆಹಾರ ಸಾಮಗ್ರಿಗಳ ಶೇಖರಣಾ ಡಬ್ಬಿಗಳು, ಔಷಧಿ ಮಾತ್ರೆಗಳ, ಲೇಹ್ಯಗಳ ಡಬ್ಬಿಗಳು, ಅಡಿಗೆ ಪಾತ್ರೆಗಳು, ಕ್ಷೀರಕೇಂದ್ರಗಳ ಸಲಕರಣೆಗಳು, ಮದ್ಯ ಸಾರಾಯಿ ತಯಾರಿಕಾ ಕೇಂದ್ರಗಳಲ್ಲಿನ ಪಾತ್ರೆ, ಸಲಕರಣೆಗಳು ಇತ್ಯಾದಿ. ಅಡುಗೆ ಪಾತ್ರೆಗಳಾಗಿ ಉಪಯೋಗಿಸುವಾಗ ಅನುಭವಕ್ಕೆ ಬಂದಿರುವ ಒಂದೆರಡು ಲೋಪದೋಷಗಳೆಂದರೆ ಪಾತ್ರೆಗಳು ಬಲುಬೇಗ ಕಾದು ಅಡುಗೆ ಸೀದುಹೋಗುವುದು. ಅಥವಾ ತಳಕ್ಕೆ ಅಂಟಿಕೊಳ್ಳುವುದು. ಪಾತ್ರೆಗಳ ಒಳಭಾಗಕ್ಕೆ ಟೆಪ್ಲಾನ್ ಎಂಬ ಉಷ್ಣ ಮತ್ತು ಅಂಟುನಿರೋಧಕವಸ್ತುವಿನ ಪೊರೆಯೊಂದನ್ನು ಬಳಿಯುವುದರ ಮೂಲಕ ಆ ಲೋಪದೋಷಗಳನ್ನು ನಿಯಂತ್ರಿಸುವುದು ಆಚರಣೆಗೆ ಬಂದಿದೆ. ಅಮೋನಿಯ, ನೈಟ್ರಿಕ್ ಆಮ್ಲ, ಹೈಡ್ರೋಜನ್ ಪೆರಾಕ್ಸೈಡ್, ಅಸಿಟಿಕ್ ಆಮ್ಲ ಸಂಬಂಧಿತ ರಾಸಾಯನಿಕ ಕೈಗಾರಿಕೆಗಳಲ್ಲಿನ ಶೇಖರಣಾ ಪಾತ್ರೆಗಳನ್ನು ಅಲ್ಯೂಮಿನಿಯಂನಿಂದಲೇ ಮಾಡಬಹುದು.
* ಶೇಖರಿತ ರಾಸಾಯನಿಕಗಳಿಂದ ಅಲ್ಯೂಮಿನಿಯಂ ಲೋಹದ ಮೇಲೆ ಆಗಬಹುದಾದ ರಾಸಾಯನಿಕ ಕ್ರಿಯೆಗಳನ್ನು ಸ್ತಬ್ಧಗೊಳಿಸಿ ಲೋಹ ಜೀರ್ಣವಾಗದಂತೆ ಕಾಪಾಡಬಹುದು. ಆ ಕಾರ್ಯ ಕೆಲ ರಾಸಾಯನಿಕ ವಸ್ತುಗಳನ್ನು ಬೆರೆಸುವುದರ ಮೂಲಕ ಸಾಧ್ಯ. ಸಾಮಾನ್ಯವಾಗಿ ಬಳಸುವ ಆ ಜಾತಿಯ ಕೆಲ ಸಂಯುಕ್ತಗಳೆಂದರೆ ಪಿಷ್ಟಗಳು, ಅಂಟುಗಳು, ಪೊಟ್ಯಾಸಿಯಂ ಡೈಕ್ರೋಮೇಟ್, ಹೈಡ್ರೊಜನ್ ಪೆರಾಕ್ಸೈಡ್ ಇತ್ಯಾದಿ.
 
==ವಿದ್ಯುದ್ವಾಹಕತೆಯ ಪರಿಣಾಮ==
* ಉತ್ತಮ ವಿದ್ಯುದ್ವಾಹಕತೆಯ ಪರಿಣಾಮವಾಗಿ, ದುಬಾರಿ ಬೆಲೆಯ ವಿರಳಲೋಹ ತಾಮ್ರದ ಬದಲು, ವಿದ್ಯುಚ್ಛಕ್ತಿಯ ಪ್ರಸರಣಕ್ಕೆ ಇತ್ತೀಚೆಗೆ ವಿಶೇಷವಾಗಿ ಅಲ್ಯೂಮಿನಿಯಂ ಲೋಹ ಉಪಯೋಗವಾಗುತ್ತಿದೆ. ಧಾಷ್ಟ್ರ್ಯ ಉಕ್ಕಿನ ತಂತಿಗಳ ಮೇಲೆ ಅಲ್ಯೂಮಿನಿಯಂ ಲೋಹವನ್ನು ಶೇಖರಿಸಿ ಬಲಾಢ್ಯ ಉತ್ತಮ ವಿದ್ಯುತ್ ಪ್ರಸರಣ ತಂತಿಗಳನ್ನು ತಯಾರಿಸುವರು.
* ಇತರ ಉಪಯೋಗಗಳಲ್ಲಿ ಉಕ್ಕಿನ ತಯಾರಿಕೆಯಲ್ಲಿ ಆಮ್ಲಜನಕವನ್ನು ಹೊರತೆಗೆಯಲು ಅಲ್ಯೂಮಿನಿಯಂ ಲೋಹದ ಬಳಕೆ ಮುಖ್ಯವಾದುದು. ಅಲ್ಯೂಮಿನಿಯಂ ಬಣ್ಣಗಳು, ಬೆಳಕಿನ ಕಿರಣಗಳನ್ನು ಪ್ರತಿಫಲಿಸುವ ಫಲಕಗಳ ತಯಾರಿಕೆ, ಗೃಹಾಲಂಕರಣ ವಸ್ತುಗಳ ಉತ್ಪಾದನೆ ಇವೇ ಮುಂತಾದ ಇತರ ಉಪಯೋಗಗಳೂ ಇವೆ.
* ಬಾಕ್ಸೈಟ್‍ಗೆ ಕುಲುಮೆಗಳಿಗಾಗಿ ಉಷ್ಣಸಹಿಷ್ಣು ಇಟ್ಟಿಗೆಗಳ ತಯಾರಿಕೆಯಲ್ಲಿಯೂ ಸಿಮೆಂಟ್ ತಯಾರಿಕೆಯಲ್ಲಿಯೂ ಜಲಾಂಶರಹಿತ ಅಲ್ಯೂಮಿನಿಯಂ ಆಕ್ಸೈಡ್‍ಗೆ ತೇವವನ್ನು ಹೀರುವುದಕ್ಕೂ ಪೆಟ್ರೋಲಿಯಂ ಕೈಗಾರಿಕೆಯಲ್ಲಿ ವೇಗವರ್ಧಕವಾಗಿಯೂ (ಕ್ಯಟಲಿಸ್ಟ್) ಉಪಯೋಗಗಳಿವೆ.
* ಅಲ್ಯೂಮಿನಿಯಂ ಪೊಟ್ಯಾಸಿಯಂ ಅಥವಾ ಅಲ್ಯೂಮಿನಿಯಂ ಅಮೋನಿಯಂ ಪಟಿಕ ಲವಣಗಳನ್ನು ನೀರನ್ನು ಶುದ್ಧಿಮಾಡುವ ಕಾರ್ಯದಲ್ಲಿ ಉಪಯೋಗಿಸುವರು. ಈ ಪಟಿಕಗಳಲ್ಲಿನ ಅಲ್ಯೂಮಿನಿಯಂ (ಂಟ3+) ವಿದ್ಯುದ್ವಾಹಿ ಕಣಗಳು, ಬಗ್ಗಡದ ನೀರಿನಲ್ಲಿ ತೇಲುತ್ತಿರುವ ಸೂಕ್ಷ್ಮಕಣಗಳನ್ನು ಒಂದುಗೂಡುವಂತೆ ಮಾಡಿ, ತತ್ಪರಿಣಾಮವಾಗಿ ಅವು ಭಾರವಾಗಿ ಜಲಾಶಯಗಳಲ್ಲಿ ನೀರಿನಲ್ಲಿ ಮುಳುಗುವುವು.
* ನೀರು ತಿಳಿಯಾಗುವುದು. ಇನ್ನೂ ಕಡಿಮೆ ಬೆಲೆಯ ಅಲ್ಯೂಮಿನಿಯಂ ಸಲ್ಫೇಟ್ ಲವಣವನ್ನು ಈ ಉದ್ದೇಶಕ್ಕಾಗಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಬಳಸುತ್ತಿರುವರು. ಪಟಿಕಗಳನ್ನು ಚರ್ಮಹದಮಾಡುವುದು, ಕಾಗದ ತಯಾರಿಕೆ, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು ಇವೇ ಮುಂತಾದ ಕೈಗಾರಿಕೆಗಳಲ್ಲಿ ಬಳಸುವರು. ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ಒಂದು ಉತ್ತಮ ರಾಸಾಯನಿಕ ಅಪಕರ್ಷಣಕಾರಿ.
* ಅಲ್ಯೂಮಿನಿಯಂ ಕ್ಲೋರೈಡ್ ಪೆಟ್ರೋಲಿಯಂ ಕೈಗಾರಿಕೆಯಲ್ಲಿ ಉಪಯೋಗಿಸುವ ಒಂದು ವೇಗವರ್ಧಕ. ಅಲ್ಯೂಮಿನಿಯಂ ಅಸಿಟೇಟ್ ಬಟ್ಟೆಗಳಿಗೆ ಬಣ್ಣ ಕಚ್ಚಿಸುವ ಕಾರ್ಯ, ಜ್ವಾಲೆಗಳನ್ನು ನಿರೋಧಿಸುವ ಬಟ್ಟೆಗಳ ತಯಾರಿಕೆ, ನೀರಿನಿಂದ ತೇವವಾಗದ ಕಾಗದಗಳ ತಯಾರಿಕೆಗಳಲ್ಲಿ ಉಪಯೋಗಕಾರಿ. ಬಿಳಿಯ ಜೇಡಿಮಣ್ಣಿನಿಂದ ಬಟ್ಟೆಗಳ ಬಿಳುಪಿಗೆ ಉಪಯೋಗಿಸುವ ನೀಲಿಯನ್ನು (ಅಲ್ಟ್ರಾಮೆರೀನ್ ಬ್ಲೂ) ತಯಾರಿಸುವರು.
 
==ಅಲ್ಯೂಮಿನಿಯಂ ಗುರುತಿಸುವಿಕೆ==
Line ೮೩ ⟶ ೧೦೩:
 
==ಅಲ್ಯೂಮಿನಿಯಂ ಪ್ರಮಾಣಮಾಪನೆ==
* ಅಲ್ಯೂಮಿನಿಯಂ ಮಿಶ್ರಲೋಹ ಒಂದರಲ್ಲಿಯಾಗಲಿ ಅಥವಾ ಅಲ್ಯೂಮಿನಿಯಂನ ಸಂಯುಕ್ತವಸ್ತುವೊಂದರಲ್ಲಿಯಾಗಲಿ ಅಲ್ಯೂಮಿನಿಯಂ ಲೋಹಾಂಶ ಪ್ರಮಾಣವನ್ನು ನಿಖರವಾಗಿ ಅಳೆಯಲು ಅನೇಕ ವಿಧಾನಗಳನ್ನು ಅನುಸರಿಸಬಹುದು. ಮೊದಲು ಘನವಸ್ತುವನ್ನು ದ್ರಾವಣ ರೂಪಕ್ಕೆ ಮಾರ್ಪಾಡು ಮಾಡಬೇಕು. ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಮಿಶ್ರ ಲೋಹ ಕರಗಿಸಬಹುದು.
* ಸಂಯುಕ್ತಗಳು ಪೂರ್ಣವಾಗಿ ನೀರಿನಲ್ಲಿ ವಿಲೀನವಾಗದೆ ಇದ್ದರೆ ಹೈಡ್ರೋಕ್ಲೋರಿಕ್ ಆಮ್ಲವನ್ನು ಉಪಯೋಗಿಸಬಹುದು. ದ್ರಾವಣದೊಳಗಿನ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯಬಹುದು. ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಬೆರೆಸುವುದರಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯಬಹುದು. ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ನೀರಿನಲ್ಲಿ ಲೀನವಾಗುವುದಿಲ್ಲ.
* ಆದುದುರಿಂದ ನೀರಿನಲ್ಲಿ ಚೆನ್ನಾಗಿ ತೊಳೆದರೆ ಅಂತ್ಯದಲ್ಲಿ ಬಿಳಿಯ ಗಷ್ಟು ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಉಳಿಯುತ್ತದೆ. ಅದನ್ನು ಪಿಂಗಾಣಿ ಮೂಸೆಯಲ್ಲಿ ಹಾಕಿ ಕಾಸಿದರೆ ಜಲಾಂಶವೆಲ್ಲವೂ ಹೊರಬಿದ್ದು ಶುದ್ಧ ಒಣ ಅಲ್ಯೂಮಿನಿಯಂ ಆಕ್ಸೈಡ್ ಉಳಿಯುತ್ತದೆ. ಅದರ ತೂಕವನ್ನು ಕಂಡುಹಿಡಿದು ಅಲ್ಯೂಮಿನಿಯಂ ಮೂಲ ದ್ರಾವಣದಲ್ಲಿ ಎಷ್ಟು ಇತ್ತು ಎಂಬುದನ್ನು ಲೆಕ್ಕಾಚಾರ ಮಾಡಿ ತಿಳಿಯಬಹುದು.
* ವಿಶ್ಲೇಷಣೆಗೆ ಒಳಪಡಿಸಿರುವ ಮೂಲ ವಸ್ತುವಿನಲ್ಲಿ ಕಬ್ಬಿಣದ ಅಂಶವೇನಾದರೂ ಇದ್ದಲ್ಲಿ ಅಮೋನಿಯಂ ಬದಲು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಉಪಯೋಗಿಸಿದರೆ, ಕಬ್ಬಿಣದ ಆಕ್ಸೈಡ್ ವಿಲೀನವಾಗದೆ ಉಳಿದು, ಸೋಸಿ ಪ್ರತ್ಯೇಕಿಸಬಹುದು. ಅಲ್ಯೂಮಿನಿಯಂ ಮಾತ್ರ ಲೀನವಾಗುತ್ತದೆ.
* ತತ್ಪರಿಣಾಮವಾಗಿ ಉಂಟಾದ ಸೋಡಿಯಂ ಅಲ್ಯೂಮಿನೇಟ್ ದ್ರಾವಣದಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಹೊರಬರುವಂತೆ ಮಾಡಿ, ಮೇಲೆ ವಿವರಿಸುವಂತೆ ಅಲ್ಯೂಮಿನಿಯಂ ಪ್ರಮಾಣವನ್ನು ಲೆಕ್ಕಾಚಾರ ಮಾಡಬಹುದು. ಅಲ್ಯೂಮಿನಿಯಂ ದ್ರಾವಣದಿಂದ ಅಲ್ಯೂಮಿನಿಯಂ ಅಂಶವನ್ನು ಆಕ್ಸಿನ್ ಎಂಬ ಇಂಗಾಲ ಸಂಯುಕ್ತದೊಡನೆಯೂ ಕ್ರಿಯೆಗೊಳಪಡಿಸಿ, ಅಲ್ಯೂಮಿನಿಯಂ ಆಕ್ಸಿನೇಟ್ ಎಂಬ ನೀರಿನಲ್ಲಿ ಲೀನವಾಗದಿರುವ ಸಂಯುಕ್ತವನ್ನು ಹೊಂದಬಹುದು. ಅದನ್ನು ಸೋಸಿ ಬೇರ್ಪಡಿಸಿ ಒಣಗಿಸಿ ತೂಕ ಮಾಡಿ ಅದರಿಂದಲೂ ಅಲ್ಯೂಮಿನಿಯಂ ಲೋಹಾಂಶವನ್ನು ಲೆಕ್ಕಾಚಾರ ಮಾಡಬಹುದು.
 
==ಉಲ್ಲೇಖಗಳು==
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ