ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಜ್ನಾನ → ಜ್ಞಾನ using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮ ನೇ ಸಾಲು:
:ಅದ್ವೈತ ಸಿದ್ಧಾಂತವು , ಪ್ರಸಿದ್ಧಿ ಮತ್ತು ಜನಪ್ರಿಯತೆ ಪೆಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು -ಒಂದೇ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: "ಸರ್ವಂ ಖಲ್ವಿದಂ ಬ್ರಹ್ಮ" ; "ಆತ್ಮೈವೇದ ಸರ್ವಂ" ; "ಅಯಮಾತ್ಮಾಬ್ರಹ್ಮ;" ; "ಬ್ರಹ್ಮ"ವೇದ ಬ್ರಹ್ಮೈವ ಭವತಿ" ; ಇತ್ಯಾದಿ
ಇವುಗಳ ಆಧಾರದಿಂದ, ಒಂದು ವ್ಯವಸ್ಥಿತವಾದ ದರ್ಶನವನ್ನು ರೂಪಿಸುವ ಕೆಲಸ ಆಗಿರಲಿಲ್ಲ. ಸುಮಾರು ಕ್ರಿ. ಶ. ೫೦೦ ರ ರಲ್ಲಿ ಬದುಕಿರಬಹುದಾದ , ಗೌಡಪಾದ ಮುನಿಗಳು, ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮತ್ತು ದೃಢವಾಗಿ ಪ್ರತಿಪಾದಿಸಿದರು.
ಗೌಡಪಾದರ ಶಿಷ್ಯರು, ಗೋವಿಂದ ಭಗವತ್ಪಾದರು., ಅವರ ಶಿಷ್ಯರು ಶ್ರೀ ಶಂಕರರು. ಗೋವಿಂದ ಭಗವತ್ಪಾದರು "ರಸತಂತ್ರ" ವೆಂಬ ರಸಾಯನ ಶಾಸ್ತ್ರದ ಗ್ರಂಥವನ್ನು ಮಾತ್ರಾಮಾತ್ರ ರಚಿಸಿದ್ದಾಗಿ ತಿಳಿದು ಬುರುತ್ತದೆ.
:ಶ್ರೀಶಂಕರಾಚಾರ್ಯರು (ಕ್ರಿಶ.೭೮೮-೮೨೦)ಒಬ್ಬ ಅದ್ಭುತ ವ್ಯಕ್ತಿ . ಕೇರಳದ ಕಾಲಟಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತವನ್ನು ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ, ಅದ್ವೈತದ ಧ್ವಜವನ್ನು ಎತ್ತಿ ಹಿಡಿದವರು. ಅವರು ಬದುಕಿದ್ದು ಕೇವಲ ೩೨ ವರ್ಷಗಳ ಕಾಲ ಮಾತ್ರವಾದರೂ , ಪ್ರತಿಯೊಂದು ಕ್ಷಣವನ್ನೂ, ಸಾರ್ಥಕ ಪಡಿಸಿಕೊಂಡವರು. ಅವರ ಬಗೆಗೆ ಜನಶ್ರುತಿ ಹೀಗಿದೆ :
:'''ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್''' |
:'''ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್''' ||
:ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಹೊರಟು ಹೋದರು .
:ಅವರ ಅತ್ಯಂತ ಪ್ರಸಿದ್ಧವಾದ ಕೃತಿ [[ಬ್ರಹ್ಮ ಸೂತ್ರ ಭಾಷ್ಯ]]. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು . ಅದೊಂದು ಅಮೋಘ ಕೃತಿ. ಹಾಗೆಯೇ [[ಉಪನಿಷತ್ತು]] ಮತ್ತು [[ಭಗವದ್ಗೀತೆ]]ಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ . ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು . ಅವರು ಪ್ರಸ್ಥಾನ ತ್ರಯದಪ್ರಸ್ಥಾನತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ -ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. ಶಂಕರರ ಇನ್ನೊಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ
 
== ಶಂಕರ ಪೂರ್ವ ಯುಗ ==
:ನಂತರ ಬಂದ ವಿದ್ಯಾರಣ್ಯರ "ಪಂಚದಶೀ" ಅತ್ಯಂತ ಜನಪ್ರಿಯ ಕೃತಿ. '''ಅದ್ವೈತ ದರ್ಶನ'''ವನ್ನು '''ಶಂಕರ ಪೂರ್ವ ಯುಗ''' ; '''ಶಂಕರ ಯುಗ''' ; '''ಶಂಕರೋತ್ತರ ಯುಗ'''ವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ, ವಿವಾದ, ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ