ಕಂಪ್ಯೂಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೬ ನೇ ಸಾಲು:
 
===ಅಪ್ಲಿಕೇಶನ್ ಸಾಫ್ಟ್‌ವೇರ್‌===
ಕಂಪ್ಯೂಟರ್‌ ಎಂದರೆ ಬಹೂಪಯೋಗಿ ಯಂತ್ರ ಎಂಬುದು ಈ ಅಪ್ಲಿಕೇಶನ್ ಸಾಫ್ಟ್‌ವೇರ್ ಕುರಿತು ತಿಳಿದಾಗ ನಮಗೆ ಅರಿವಾಗುತ್ತದೆ. ವಿಭಿನ್ನ ಕಾರ್ಯಗಳಲ್ಲಿ ಸಹಾಯಕವಾಗುವಂತೆ ಈ ಅಪ್ಲಿಕೇಶನ್ ಅಥವಾ ಬಳಕೆಯ ಸಾಫ್ಟ್‌ವೇರ್‌ಗಳನ್ನು ರೂಪಿಸಿರಲಾಗುತ್ತದೆ. ಇದರಲ್ಲಿ ಅನೇಕ ಪ್ರಕಾರದ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳಿದ್ದು, ಇಂಟರ್ನೆಟ್ ಬಳಸಲು ಬೇಕಾದ ಬ್ರೌಸರ್ ಕೂಡಾ ಇದರಲ್ಲಿ ಬರುತ್ತದೆ. ಬರವಣಿಗೆ ಮಾಡಲು, ಕಂಪ್ಯೂಟರ್ ಆಧಾರಿತ ಚಿತ್ರ ರಚಿಸಲು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲು, ದತ್ತಾಂಶ ಸಂಗ್ರಹಣೆಮಾಡಲು, ಗಣನಗಣಕ ಕಾರ್ಯಗಳಿಗೆ ಬಳಸಲು ಮತ್ತು ವೀಡಿಯೋ ಗೇಮ್‌ಗಳಿಗಾಗಿ ವಿಭಿನ್ನ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಇರುತ್ತವೆ. ಸಾಮಾನ್ಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್‌ನಲ್ಲಿ ಈ ಕೆಳಗಿನ ಅಪ್ಲಿಕೇಶನ್‌ಗಳು ಇರುತ್ತವೆ: ಬರವಣಿಗೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ ವರ್ಡ್‌ಪ್ಯಾಡ್, ನೋಟ್‌ಪ್ಯಾಡ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ,ಎಂ ಎಸ್ ಪವರ್ ಪೋಯಿಂಟ್ ಮುಂತಾದ ಸಾಫ್ಟ್‌ವೇರ್‌ಗಳು, ಚಿತ್ರ ಬಿಡಿಸಲು ಪೇಂಟ್, ಗೇಮ್‌ಗಳು, ಇಂಟರ್ನೆಟ್ ಬ್ರೌಸರ್ ಮುಂತಾದವುಗಳು ಇರುತ್ತವೆ. ಇವಲ್ಲದೇ ಅಗತ್ಯಕ್ಕೆ ತಕ್ಕಂತೆ ನಾವು ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಕೂಡಾ ಸ್ಥಾಪನೆ (ಇನ್‌ಸ್ಟಾಲ್) ಮಾಡಿಕೊಳ್ಳಬಹುದು. ಉದಾಹರಣೆಗೆ ಡೆಸ್ಕ್‌ಟಾಪ್ ಡಿಕ್ಷನರಿಗಳು, ಮ್ಯಾಪ್‌ಗಳು, ಫೋಟೋ ಎಡಿಟ್ ಮಾಡುವ ಅಡೋಬ್ ಫೋಟೋಶಾಪ್, ಪುಟವಿನ್ಯಾಸ ಮಾಡುವ ಇನ್‌ಡಿಸೈನ್ ಅಥವಾ ಕ್ವಾರ್ಕ್ ಎಕ್ಸ್‌ಪ್ರೆಸ್, ಡಿಜಿಟಲ್ ಚಿತ್ರಗಳನ್ನು ಹಾಗೂ ಎನಿಮೇಶನ್ ಚಿತ್ರಗಳನ್ನು ಮಾಡುವ ಇಲ್ಲಸ್ಟ್ರೇಟರ್ ಮುಂತಾದವುಗಳು. ಇವಲ್ಲದೇ ಬೇರೆ ಬೇರೆ ವಿಜ್ಞಾನ, ವೈದ್ಯಕೀಯ, ಬೇರೇ ಬೇರೆ ವ್ಯವಹಾರಗಳಲ್ಲಿರುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಿಕೊಂಡು ಬಳಸುತ್ತಾರೆ. ಈ ಸಾಫ್ಟ್‌ವೇರ್‌ಗಳ ಬಳಕೆಯಿಂದ ಅವರ ದೈನಂದಿನ ಕಾರ್ಯಗಳು ಅತ್ಯಂತ ಸುಲಭವಾಗುತ್ತವೆ. ಸಾಫ್ಟ್‌ವೇರ್ ಇಂಜಿನಿಯರುಗಳು ಇಂತಹ ವಿಭಿನ್ನ ಕ್ಷೇತ್ರಗಳ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ರೂಪಿಸುತ್ತಾರೆ. ಈ ಎಲ್ಲ ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳಲು ಒಂದು ವೇದಿಕೆಯಿದ್ದು, ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ. ಆಪರೇಟಿಂಗ್ ಸಿಸ್ಟಮ್‌ ಸಹಾ ಒಂದು ಅತ್ಯಂತ ಮುಖ್ಯ ಸಾಫ್ಟ್‌ವೇರ್ ಆಗಿದೆ. ಇದು ಕಂಪ್ಯೂಟರ್‌ನಲ್ಲಿರುವ ಮೆಮರಿ, ಸಂಗ್ರಹ, ಪ್ರಕ್ರಿಯೆಗಳು, ಎಲ್ಲ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ನಿರ್ವಹಿಸುತ್ತದೆ. ಡಾಸ್, ವಿಂಡೋಸ್, ಲಿನಕ್ಸ್ ಮುಂತಾದವುಗಳು ಈ ಆಪರೇಟಿಂಗ್ ಸಿಸ್ಟಮ್‌ಗೆ ಉದಾಹರಣೆಯಾಗಿವೆ.
 
== ಯಂತ್ರಾಂಶ ==
"https://kn.wikipedia.org/wiki/ಕಂಪ್ಯೂಟರ್" ಇಂದ ಪಡೆಯಲ್ಪಟ್ಟಿದೆ