ಯೇಸು ಕ್ರಿಸ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
 
==ಯೇಸು ಪದದ ನಿಷ್ಪತ್ತಿ==
'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ '''I-e-sous''' ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ '''ಯೇಸು ಕ್ರಿಸ್ತ''' (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. [[ಇಸ್ಲಾಮ್]] ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ.
 
==ಜನನ, ಜೀವನ==
ಯೇಸು ಹುಟ್ಟಿದ್ದು [[ಬೆತ್ಲೆಹೆಮ್‌]]ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ [[ಸಂತ ಜೋಸೆಫ್]] ಒಬ್ಬ ಬಡಗಿ. ತಾಯಿ [[ಸಂತ ಮೇರಿ]]. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗೃಹದೀಂದ,ಪವಿತ್ರಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿ ಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು, ಇವತ್ತಿಗು ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ.
 
==ಧರ್ಮಗ್ರಂ==
==ಧರ್ಮಗ್ರಂಥ==
*ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ [[ಬೈಬಲ್‌]]ನ [[ಹೊಸ ಒಡಂಬಡಿಕೆ]]ಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. [[ಹಳೇ ಒಡಂಬಡಿಕೆ ]] ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು.
* ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಏಸುವನ್ನು [[ಶಿಲುಬೆ]]ಗೆ ಏರಿಸಲ್ಪಡುತ್ತಾರೆ. ಯೇಸು ಶಿಲುಬೆಗೆ ಏರಿದ ದಿನವನ್ನು 'ಗುಡ್‍ಫ್ರೈಡೇ' ಎನ್ನುತ್ತಾರೆ. ಶಿಲುಬೆಗೆ ಏರುವ ಸಂದರ್ಭದಲ್ಲಿ ಏಸು ಸಾಮಾನ್ಯ ಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಭಾರವಾದ ಶಿಲುಬೆಯನ್ನು ಹೊತ್ತು, ಮುಳ್ಳಿನ ಕಿರೀಟವನ್ನು ಧರಿಸಿ, ಅರಿಷಡ್ವರ್ಗಗಳನ್ನು ಗೆದ್ದು, ಶಿಲುಬೆಗೆ ಏರುವಾಗಲೂ 'ದೇವರೇ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು' ಎಂದು,ದೇವರಲ್ಲಿ ತಮ್ಮನ್ನು ಶಿಲುಬೆಗೆ ಏರಿಸಿದವರಿಗೂ ಕ್ಷಮಾದಾನ ನೀಡುತ್ತಾರೆ. ಹಾಗೂ ಶುಲುಬೆಯ ಮೇಲೆ ಇದ್ದಾಗ ಕೊನೆಯಲ್ಲಿ ಏಳು ಶಬ್ದಗಳನ್ನು, ನುಡಿದು ತಮ್ಮ ಪ್ರಾಣವನ್ನು ದೇವರಿಗೆ ಅರ್ಪಿಸುತ್ತಾರೆ.
"https://kn.wikipedia.org/wiki/ಯೇಸು_ಕ್ರಿಸ್ತ" ಇಂದ ಪಡೆಯಲ್ಪಟ್ಟಿದೆ