ಹಳೇಬೀಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
fix template, replaced: Infobox settlement → Infobox ಊರು using AWB
Content deleted Content added
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
{{cn}}
{{Infobox settlementಊರು
| name = ಹಳೇಬೀಡು Halebidu
| settlement_type = city
೪೦ ನೇ ಸಾಲು:
===ಐತಿಹಾಸಿಕ ಹಿನ್ನಲೆ===
 
ಸುಮಾರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ '''ದೋರ''' ಎಂಬುವವನು ಈ ಊರಿನಲ್ಲಿ ದೊಡ್ಡಕೆರೆಯೊಂದನ್ನು ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಈ ಕೆರೆಯು ೧೨೦೦ ಎಕರೆಗೂ ಮೀರಿ ವ್ಯಾಪ್ತಿಯನ್ನು ಹೊಂದಿದ್ದು ಈಗಲೂ ಕೆರೆಯು ನೀರಿನಿಂದ ತುಂಬಿಕೊಂಡಾಗ ಸಮುದ್ರದಂತೆ ತೋರುತ್ತದೆ. ಈ ಕಾರಣದಿಂದಾಗಿಯೇ ಈ ಕೆರೆಯನ್ನು '''ದೋರಸಮುದ್ರ''' ಎಂದು ಉಲ್ಲೇಖಿಸಲಾಗಿದೆಯೆಂದು ತಿಳಿದುಬರುತ್ತದೆ. ಅಂದಿನ ಕಾಲಕ್ಕೆ ದೋರಸಮುದ್ರ ಎನ್ನುವ ಹೆಸರೇ ಊರಿಗೂ ಇತ್ತೆಂದು ಹೊಯ್ಸಳರ ಕಾಲದ ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಹದಿನೆಂಟನೆಯ ಶತಮಾನದ ಆಸು-ಪಾಸಿನಲ್ಲಿ ದ್ವಾರಾವತಿ-ದ್ವಾರಸಮುದ್ರ ಎನ್ನುವ ಹೆಸರಿನ ಬಳಕೆಯೂ ಇತ್ತೆಂದು ಜನಪದದಿಂದ ತಿಳಿದುಬರುತ್ತದೆ. ದೋರಸಮುದ್ರ ಕೆರೆಯೇ ಅಂದಿನ ಕಾಲಕ್ಕೆ ಇಡೀ ರಾಜಧಾನಿಯ ಮತ್ತು ಸುತ್ತಲಿನ ಪ್ರದೇಶಗಳ ಮುಖ್ಯ ನೀರಾವರಿ ಸೌಲಭ್ಯವಾಗಿತ್ತು. ಇಂದಿನ [[ಬೇಲೂರು]] ಪಟ್ಟಣದ ಮೂಲಕ ಹರಿಯುವ [[ಯಗಚಿ ನದಿ]] ಅಥವಾ '''ಸೋಮವತೀ''' ಎನ್ನುವ ನದಿಯು ಈ ಕೆರೆಗೆ ನೀರುಣಿಸುವ ಮುಖ್ಯ ಮೂಲವಾಗಿತ್ತು. ಹನ್ನೆರಡೆನೆಯ ಶತಮಾನದಲ್ಲೇ ನದಿಯ ಪಾತ್ರದಿಂದ ದೊಡ್ಡ ಕಾಲುವೆಗಳನ್ನು ನಿರ್ಮಿಸಿರುವ ಕುರುಹುಗಳನ್ನು ಇಂದೂ ಕಾಣಬಹುದು. ಕೆಲವು ಕಾಲುವೆಗಳು ಇಂದಿಗೂ ದೊಡ್ಡಕೆರೆಗೆ ನೀರುಣಿಸುತ್ತಿವೆ.
 
ರಾಜ [[ವಿಷ್ಣುವರ್ಧನ]]ನ ಕಾಲವನ್ನು ಹೊರತುಪಡಿಸಿ ಮಿಕ್ಕ ಎಂಟು ರಾಜರ ಕಾಲದಲ್ಲೂ ಇಂದಿನ ಹಳೇಬೀಡು ಪಟ್ಟಣವೇ ರಾಜಧಾನಿಯಾಗಿತ್ತೆಂದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಹೊಯ್ಸಳರಲ್ಲಿ ಒಂಬತ್ತು ಮಂದಿ ರಾಜರುಗಳು ಆಗಿಹೋಗಿದ್ದರೂ '''ವೀರಬಲ್ಲಾಳ''' , '''ವಿಷ್ಣುವರ್ಧನ''' ಮತ್ತು '''ನರಸಿಂಹ ಬಲ್ಲಾಳ''' ರು ಮಾತ್ರ ಹೆಚ್ಚು ಸಾಮರ್ಥ್ಯವುಳ್ಳರಾಗಿದ್ದರೆಂದು ಇತಿಹಾಸವು ಹೇಳುತ್ತದೆ.
 
ಅಂದಿನ ಈ ನಗರದಲ್ಲಿ ಸುಮಾರು ಒಂದು ಲಕ್ಷ ಮಂದಿ ವಾಸಿಸುತ್ತಿದ್ದು ನಗರದ ರಕ್ಷಣೆಗಾಗಿ ಹೊರವಲಯದಲ್ಲಿ ಸುತ್ತಲೂ ದೊಡ್ಡ ಕಲ್ಲುಗಳಿಂದ ಎರಡು ಸುತ್ತಿನ ಕೋಟೆಯನ್ನು ನಿರ್ಮಿಲಾಗಿತ್ತು. ಕೋಟೆಯ ಕುರುಹುಗಳನ್ನು ಇಂದೂ ಕಾಣಬಹುದು. ಊರಿನ ಪ್ರವೇಶಕ್ಕೆ ಒಟ್ಟು ಐದು ಹೆಬ್ಬಾಗಿಲುಗಳಿದ್ದುದು ಕೋಟೆಯ ರಚನೆಯಲ್ಲಿ ಕಂಡುಬರುತ್ತದೆ.
೫೯ ನೇ ಸಾಲು:
 
* '''[[ಹೊಯ್ಸಳೇಶ್ವರ ದೇವಸ್ಥಾನ]]'''- ರಾಷ್ಟ್ರೀಯ ಸ್ಮಾರಕ/ದೇವಾಲಯ
 
* '''ಕೇದಾರೇಶ್ವರ ದೇವಾಲಯ''' - ರಾಷ್ಟ್ರೀಯ ಸ್ಮಾರಕ
 
* '''ಹುಲಿಕೆರೆ ಕಲ್ಯಾಣಿ(ಕೊಳ)''' - ರಾಷ್ಟ್ರೀಯ ಸ್ಮಾರಕ
 
* '''ಜೈನ ಬಸದಿಗಳು''' - ರಾಷ್ಟ್ರೀಯ ಸ್ಮಾರಕ/ದೇವಾಲಯ
 
* '''ನಗರೇಶ್ವರ ದೇವಾಲಯ ಸಂಕೀರ್ಣ''' - ರಾಷ್ಟ್ರೀಯ ಸ್ಮಾರಕ
 
* '''ಮಲ್ಲಿಕಾರ್ಜುನ ದೇವಾಲಯ''' - ಧಾರ್ಮಿಕ ಕೇಂದ್ರ/ಮಠ
 
* '''ದೋರಸಮುದ್ರ ಕೆರೆ''' - ಕೆರೆ/ವಿಹಾರಕೇಂದ್ರ
 
Line ೭೫ ⟶ ೬೯:
 
* '''ಬಸ್ಸು''' -- ಹಳೇಬೀಡಿಗೆ [[ಹಾಸನ]], [[ಬೇಲೂರು]] , [[ಅರಸೀಕೆರೆ]], [[ಬಾಣಾವರ]] ಗಳಿಂದ ಉತ್ತಮ ಸರ್ಕಾರಿ ಬಸ್ಸಿನ ಸೌಲಭ್ಯವಿದೆ. ಈ ಪ್ರದೇಶಗಳಿಗೆ ರಾಜ್ಯದ ಎಲ್ಲಾ ಭಾಗಳಿಂದಲೂ ಬಸ್ ಮಾರ್ಗವಿದೆ.
 
* '''ಕಾರು''' -- ಹಳೇಬೀಡು, ಜಿಲ್ಲಾಕೇಂದ್ರವಾದ ಹಾಸನ ದಿಂದ ೩೦ ಕಿ.ಮೀ. ದೂರದಲ್ಲಿದ್ದು ಇಲ್ಲಿಗೆ ತಲುಪಲು ಎರಡು ಮಾರ್ಗಗಳು ಚಾಲ್ತಿಯಲ್ಲಿದೆ. ೧. ಹಾಸನ-ಸಾಲಗಾಮೆ ಮಾರ್ಗ. ೨. ಹಾಸನ-ಹಗರೆ
ಮಾರ್ಗ.ತಾಲ್ಲೂಕು ಕೇಂದ್ರವಾದ ಬೇಲೂರಿನಿಂದ ೧೬ ಕಿ.ಮೀ. ಅಂತರದಲ್ಲಿದ್ದು ಬೇಲೂರು-ಹೆಬ್ಬಾಳು ಮಾರ್ಗವಾಗಿ ತಲುಪಬಹುದು. ಬೆಂಗಳೂರಿನಿಂದ ೨೨೫ ಕಿ.ಮೀ. ಮತ್ತು ಮಂಗಳೂರಿನಿಂದ ೧೮೫ ಕಿ.ಮೀ.ಅಂತರದಲ್ಲಿದೆ.
 
* '''ರೈಲು''' -- ಹಾಸನ(೩೦) ಮತ್ತು ಅರಸೀಕೆರೆ(೩೮ ಕಿ.ಮೀ.) ಹತ್ತಿರದ ರೈಲುನಿಲ್ದಾಣಗಳು. ಬಾಣಾವರ(೩೦)ದಲ್ಲಿ ಸದ್ಯ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾತ್ರ ಇದೆ.
 
* '''ವಿಮಾನ''' -- ಹತ್ತಿರದ ವಿಮಾನ ನಿಲ್ದಾಣಗಳು ೧. '''ಬಜ್ಪೆ [[(ಮಂಗಳೂರು)]]''' ೧೭೫ ಕಿ.ಮೀ. ೨. [[ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ]] - ೨೪೦ ಕಿ.ಮೀ.
 
 
===ತಂಗಲು ವ್ಯವಸ್ಥೆ===
 
 
* ಹೋಟೆಲ್ ಮಯೂರ ಶಾಂತಲಾ (ಕರ್ನಾಟಕ ಪ್ರವಾಸೋದ್ಯಮ ನಿಗಮದ ಹೋಟೆಲ್)
 
* ಹೋಟೆಲ್ ಕಲ್ಪತರು ರೆಸಿಡೆನ್ಸಿ (ಖಾಸಗಿ)
 
 
==ಚಿತ್ರಗಳು==
೪,೭೫೩

edits

"https://kn.wikipedia.org/wiki/ವಿಶೇಷ:MobileDiff/836015" ಇಂದ ಪಡೆಯಲ್ಪಟ್ಟಿದೆ