ಕೊರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಚಿತ್ರ:Satellite image of Korea 2004-01-04.jpg| 355 × 480 pixelspx|thumb|right|ಉಪಗ್ರಹದಿಂದ ತೆಗೆದ ಕೊರಿಯಾದ ಚಿತ್...
 
ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಳು
೨೬ ನೇ ಸಾಲು:
 
ಜಪಾನಿನ ಆಕ್ರಮಣಕ್ಕೊಳಗಾದ ಕೂಡಲೇ ಕೊರಿಯದಲ್ಲಿ ರಾಷ್ಟ್ರೀಯ ಮನೋಭಾವ ತೀವ್ರವಾಯಿತು. ಒಂದನೆಯ ಮಹಾಯುದ್ಧಕ್ಕೆ ಹಿಂದೆ ಕೊರಿಯನರು ಜಪಾನಿನ ವಿರುದ್ಧ ಅನೇಕ ಬಾರಿ ದಂಗೆಯೆದ್ದರು. ಜಪಾನ್ ಈ ದಂಗೆಗಳನ್ನೆಲ್ಲ ಅಡಗಿಸಿತು. ಯುದ್ಧಾನಂತರ ಕೊರಿಯನರು ಜಪಾನಿನ ಸಂಚು ಮತ್ತು ಅಸಹಕಾರವನ್ನು ಮುಂದುವರಿಸಿದರು. ಜಪಾನು ಬಿಗಿ ಮುಷ್ಟಿಯ ನೀತಿಯನ್ನನುಸರಿಸಿ ಕೊರಿಯನರ ರಾಷ್ಟ್ರೀಯ ಚಳವಳಿಯನ್ನು ಹತ್ತಿಕ್ಕಿತು. 1919ರಲ್ಲಿ ಜಪಾನಿನ ವಿರುದ್ಧ ಕ್ರಾಂತಿಯೆದ್ದ ಕೊರಿಯನರು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಹವಣಿಸಿದರು. ಜಪಾನ್ ಉಗ್ರಕ್ರಮದಿಂದ ಕ್ರಾಂತಿಯನ್ನು ಹತ್ತಿಕ್ಕಿತು. ಸಹಸ್ರಾರು ಮಂದಿ ಬಂಧನಕ್ಕೊಳಗಾದರು. ಅನೇಕರು ದೇಶದಿಂದ ಹೊರದೂಡಲ್ಪಟ್ಟರು. ಕೊರಿಯದ ರಾಷ್ಟ್ರಭಕ್ತರು ಸೈಬೀರಿಯ, ಚೀನ ಮತ್ತು ಅಮೆರಿಕಗಳಲ್ಲಿ ಸಂಘಗಳನ್ನು ಸ್ಥಾಪಿಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದರು. ಅನೇಕ ಮಂದಿ ಕೊರಿಯನರು ಷಾಂಘೈ ನಗರದಲ್ಲಿ ಸೇರಿ ಕೊರಿಯದ ರಾಷ್ಟ್ರೀಯ ಸರ್ಕಾರವನ್ನು ರಚಿಸಿಕೊಂಡರು. ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಮಾಡಿದ ಸಿಂಗ್‍ಮನ್ ರ್ಹೀ ಅವರಲ್ಲೊಬ್ಬ. ಕೊರಿಯದ ರಾಷ್ಟ್ರಭಕ್ತರು ಪ್ಯಾರಿಸ್ ಸಮ್ಮೇಳನದ ಮುಂದೆಯೂ ಅನಂತರ ಸ್ಥಾಪಿತವಾದ ಲೀಗ್ ಆಫ್ ನೇಷನ್ಸ್ ಮುಂದೆಯೂ ತಮ್ಮ ಬೇಡಿಕೆಯನ್ನು ಮಂಡಿಸಿದರು. ಕ್ರಾಂತಿಕಾರಿ ರಾಷ್ಟ್ರೀಯರು ಜಪಾನ್ ಚಕ್ರವರ್ತಿಯ ಹತ್ಯೆಗೂ ಪ್ರಯತ್ನಪಟ್ಟರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿನ ವಿರುದ್ಧ ಕೊರಿಯನರ ಚಳವಳಿ ಮುಂದುವರಿಯಿತು. ಕೊರಿಯಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದಾಗಿ 1943ರ ಕೈರೋ ಘೋಷಣೆಯಲ್ಲಿ ಬ್ರಿಟನ್, ಚೀನ ಮತ್ತು ಅಮೆರಿಕೆಗಳು ಅದಕ್ಕೆ ವಾಗ್ದಾನ ಮಾಡಿದುವು. 1945ರಲ್ಲಿ ಜರ್ಮನಿ ಸೋತು ಐರೋಪ್ಯ ಕ್ಷೇತ್ರದಲ್ಲಿ ಯುದ್ಧ ಮುಕ್ತಾಯವಾದ ಮೇಲೆ ಸೋವಿಯತ್ ಸೈನ್ಯ ಆಗಸ್ಟ್ 12ರಂದು ಉತ್ತರದ ಕಡೆಯಿಂದಲೂ ಅಮೆರಿಕನ್ ಸೈನ್ಯ ಸೆಪ್ಟೆಂಬರ್ 9ರಂದು ದಕ್ಷಿಣದ ಕಡೆಯಿಂದಲೂ ಕೊರಿಯವನ್ನು ಪ್ರವೇಶಿಸಿದುವು. ಜಪಾನಿನ ಶರಣಾಗತಿಯನ್ನು ನಿರ್ವಹಿಸುವ ಸೇನಾಕಾರ್ಯಾಚರಣೆಯ ಸಲುವಾಗಿ 38ನೆಯ ಅಕ್ಷಾಂಶದ ಉತ್ತರದ್ದು ಸೋವಿಯತ್ ಪ್ರದೇಶವೆಂದೂ ಅದರ ದಕ್ಷಿಣದ್ದು ಅಮೆರಿಕನ್ ಪ್ರದೇಶವೆಂದೂ ಪರಿಗಣಿಸಲಾಯಿತು. ಅನಂತರ ಉತ್ತರ ದಕ್ಷಿಣ ಭಾಗಗಳಲ್ಲಿ ಪ್ರತ್ಯೇಕ ಕೊರಿಯನ್ ಸರ್ಕಾರಗಳು ಸ್ಥಾಪಿತವಾದುವು.<ref>http://www.pureinsight.org/node/1065</ref><ref>https://books.google.co.in/books?id=sNpD5UKmkswC&q=%22As+the+self-proclaimed+successor+to+Koguryo+and+the+protector+of+Parhae+refugees,+many+of+them+of+Koguryo+origin,+Koryo+considered+the+northern+territories+in+Manchuria+its+rightful+legacy.%22&redir_esc=y#v=snippet&q=%22As%20the%20self-proclaimed%20successor%20to%20Koguryo%20and%20the%20protector%20of%20Parhae%20refugees%2C%20many%20of%20them%20of%20Koguryo%20origin%2C%20Koryo%20considered%20the%20northern%20territories%20in%20Manchuria%20its%20rightful%20legacy.%22&f=false</ref>
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು ==
"https://kn.wikipedia.org/wiki/ಕೊರಿಯ" ಇಂದ ಪಡೆಯಲ್ಪಟ್ಟಿದೆ