ಉತ್ತರ ಆಸ್ಟ್ರೇಲಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
Clean up My contribs round 2 using AWB
೧ ನೇ ಸಾಲು:
'''ಉತ್ತರ ಆಸ್ಟ್ರೇಲಿಯ''': [[ಆಸ್ಟ್ರೇಲಿಯ]]ದ ಆರು ರಾಜಕೀಯ ವಿಭಾಗಗಳಲ್ಲಿ ಒಂದಾದ ಉತ್ತರ ಸೀಮೆ (ನಾರ್ದರ್ನ್ ಟೆರಿಟರಿ). ಆಸ್ಟ್ರೇಲಿಯದ ಸಂಯುಕ್ತ ಸರ್ಕಾರದ ಆಳ್ವಿಕೆಗೆ ಒಳಪಟ್ಟ ಎರಡು ಪ್ರದೇಶಗಳಲ್ಲಿ ಒಂದು. (ಇನ್ನೊಂದು ಆಸ್ಟ್ರೇಲಿಯದ ರಾಜಧಾನಿಯ ಪ್ರದೇಶ.) ಆಸ್ಟ್ರೇಲಿಯದ ಉತ್ತರ ಭಾಗದ ಮಧ್ಯದಲ್ಲಿರುವ ಈ ಪ್ರಾಂತ್ಯವು ದ. ಅ. 26ಲಿ ಯಿಂದ ಆಸ್ಟ್ರೇಲಿಯದ ಉತ್ತರ ತೀರದವರೆಗೂ ಪು.ರೇ. 129ಲಿ ಸೆ.=138ಲಿಸೆ.ಯ ವರೆಗೂ ಹಬ್ಬಿದೆ. ದಕ್ಷಿಣ ಪಾಶರ್ವ್‌ದಲ್ಲಿ ಮಕರಸಂಕ್ರಾಂತಿ ವೃತ್ತ ಹಾದು ಹೋಗುತ್ತದೆಯಾದ್ದರಿಂದ ಇದು ಬಹುಮಟ್ಟಿಗೆ ಉಷ್ಣವಲಯದಲ್ಲೇ ನೆಲಸಿರುವ ಪ್ರದೇಶ.
 
ಉತ್ತರ ಆಸ್ಟ್ರೇಲಿಯ: [[ಆಸ್ಟ್ರೇಲಿಯ]]ದ ಆರು ರಾಜಕೀಯ ವಿಭಾಗಗಳಲ್ಲಿ ಒಂದಾದ ಉತ್ತರ ಸೀಮೆ (ನಾರ್ದರ್ನ್ ಟೆರಿಟರಿ). ಆಸ್ಟ್ರೇಲಿಯದ ಸಂಯುಕ್ತ ಸರ್ಕಾರದ ಆಳ್ವಿಕೆಗೆ ಒಳಪಟ್ಟ ಎರಡು ಪ್ರದೇಶಗಳಲ್ಲಿ ಒಂದು. (ಇನ್ನೊಂದು ಆಸ್ಟ್ರೇಲಿಯದ ರಾಜಧಾನಿಯ ಪ್ರದೇಶ.) ಆಸ್ಟ್ರೇಲಿಯದ ಉತ್ತರ ಭಾಗದ ಮಧ್ಯದಲ್ಲಿರುವ ಈ ಪ್ರಾಂತ್ಯವು ದ. ಅ. 26ಲಿ ಯಿಂದ ಆಸ್ಟ್ರೇಲಿಯದ ಉತ್ತರ ತೀರದವರೆಗೂ ಪು.ರೇ. 129ಲಿ ಸೆ.=138ಲಿಸೆ.ಯ ವರೆಗೂ ಹಬ್ಬಿದೆ. ದಕ್ಷಿಣ ಪಾಶರ್ವ್‌ದಲ್ಲಿ ಮಕರಸಂಕ್ರಾಂತಿ ವೃತ್ತ ಹಾದು ಹೋಗುತ್ತದೆಯಾದ್ದರಿಂದ ಇದು ಬಹುಮಟ್ಟಿಗೆ ಉಷ್ಣವಲಯದಲ್ಲೇ ನೆಲಸಿರುವ ಪ್ರದೇಶ.
ವಿಸ್ತೀರ್ಣ: 1,349,130 ಚ.ಕಿಮೀ. ಜನಸಂಖ್ಯೆ : 200,019 (2001)
ಟಿಮಾರ್ ಸಮುದ್ರದ ಮೇಲಿರುವ ಡಾರ್ವಿನ್ ಮುಖ್ಯ ಬಂದರು, ರಾಜಧಾನಿ. ದಕ್ಷಿಣ ಭಾಗದಲ್ಲಿನ ಆಲಿಸ್ ಸ್ಟ್ರಿಂಗ್ಸ್‌ ಮುಖ್ಯಪಟ್ಟಣ.
Line ೧೮ ⟶ ೧೭:
ಕಬ್ಬು, ರಬ್ಬರ್, ಕಾಫಿ ಮುಂತಾದ ಹಣದ ಬೆಳೆ ಬೆಳೆಯಲು ಪ್ರಯತ್ನಗಳು ನಡೆದವು. ಆದರೆ ಪ್ರತಿಕೂಲ ವಾಯುಗುಣ, ದೂರ ಹಾಗೂ ಪ್ರತಿಕೂಲವಾದ ಜಮೀನು ಹಿಡುವಳಿ ಪದ್ಧತಿ ಇವುಗಳಿಂದಾಗಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ತೋಟಗಳನ್ನು ಬೆಳೆಸಲೂ ಲೋಕೋಪಯೋಗಿ ಕಾಮಗಾರಿಗಾಗಿಯೂ ಚೀನಿಯರನ್ನು ಕರೆಸಲಾಗಿತ್ತು. ಅವರು ಚಿನ್ನದ ಆಸೆಗೆ ಬಲಿ ಬಿದ್ದು ಆ ಲೋಹದ ಅನ್ವೇಷಣೆಯಲ್ಲಿ ತೊಡಗಿ ಭಗ್ನಮನೋರಥರಾದರು. ಡಾರ್ವಿನ್ನಿನಿಂದ ದಕ್ಷಿಣಕ್ಕೆ ಪೈನ್ಕ್ರೀಕ್ವರೆಗೆ ಸುಮಾರು 200 ಕಿಮೀ. ದೂರ ದಕ್ಷಿಣ ಆಸ್ಟ್ರೇಲಿಯದ ಪೋರ್ಟ್ ಆಗಸ್ಟದಿಂದ ಆಲಿಸ್ ಸ್ಪ್ರಿಂಗ್ಸ್‌ಗೂ ರೈಲು ಮಾರ್ಗಗಳು ನಿರ್ಮಾಣವಾದವು.
1911ರಲ್ಲಿ ಆಸ್ಟ್ರೇಲಿಯ ಸರ್ಕಾರ ಈ ಪ್ರದೇಶದ ಆಡಳಿತವನ್ನು ದಕ್ಷಿಣ ಆಸ್ಟ್ರೇಲಿಯದಿಂದ ತೆಗೆದುಕೊಂಡಿತು. ಉತ್ತರ ಸೀಮೆಯ ನಾನಾ ಸಮಸ್ಯೆಗಳ ಬಗ್ಗೆ ಆಯೋಗಗಳು ವರದಿ ಸಲ್ಲಿಸಿದವು. ಇದರ ಆಡಳಿತದಲ್ಲಿ ನಾನಾ ಸುಧಾರಣೆಗಳಾದವು. 20ನೆಯ ಶತಮಾನದ 2ನೆಯ ದಶಕದಲ್ಲಿ ಇದನ್ನು ಮಧ್ಯ ಆಸ್ಟ್ರೇಲಿಯ ಮತ್ತು ಉತ್ತರ ಆಸ್ಟ್ರೇಲಿಯ ಎಂದು ಎರಡು ಭಾಗ ಮಾಡಲಾಯಿತು. ಆದರೆ 1931ರಲ್ಲಿ ಇವನ್ನು ಮತ್ತೆ ಒಂದುಗೂಡಿಸಲಾಯಿತು. ಅಂತೂ ಈ ಪ್ರದೇಶ ಸಮಸ್ಯೆಗಳಿಂದ ತುಂಬಿದೆ. ಪ್ರಗತಿ ನಿಧಾನ. ಡಾರ್ವಿನ್ನಿನಲ್ಲಿ ಕಾರ್ಮಿಕ ತೊಂದರೆಗಳು ಹೆಚ್ಚು.
20ನೆಯ ಶತಮಾನದ 3ನೆಯ ದಶಕದಲ್ಲಿ ವಿಮಾನ ಸೌಲಭ್ಯ ಬೆಳೆದಾಗ ಡಾರ್ವಿನ್ ಹೆಚ್ಚು ಪ್ರಾಮುಖ್ಯಕ್ಕೆ ಬಂತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಇದರ ಮೇಲೆ ಕಣ್ಣುಹಾಕಿದರು. 1942ರಲ್ಲಿ ಡಾರ್ವಿನ್ ಜಪಾನಿಗಳ ಬಾಂಬಿಗೆ ಗುರಿಯಾಗಲಾಗಿ ಉತ್ತರ ಆಸ್ಟ್ರೇಲಿಯದಲ್ಲೇ ಸೈನಿಕ ನೆಲೆಗಳನ್ನು ಸ್ಥಾಪಿಸಲಾಯಿತು. ಆಸ್ಟ್ರೇಲಿಯ ಸರ್ಕಾರಕ್ಕೆ ಈ ಪ್ರದೇಶದಲ್ಲಿ ಆಸಕ್ತಿ ಹೆಚ್ಚಿತು. ಯುದ್ಧಾನಂತರ ಇಲ್ಲಿ ಗಣಿಗಾರಿಕೆಯನ್ನು ಬೆಳೆಸಲಾಗುತ್ತಿದೆ. ಮೂಲನಿವಾಸಿಗಳ ಹಿತರಕ್ಷಣೆಯ ಕಾರ್ಯ ಸಾಗಿದೆ. 1962ರಲ್ಲಿ ಅವರಿಗೆ ಮತದಾನದ ಹಕ್ಕು ಲಭಿಸಿತ್ತು. ಅವರಿಗಾಗಿ ಅನೇಕ ಶಾಲೆಗಳನ್ನು ತೆರೆಯಲಾಯಿತು.
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ನಗರಗಳು]]
[[ವರ್ಗ:ಆಸ್ಟ್ರೇಲಿಯ]]
"https://kn.wikipedia.org/wiki/ಉತ್ತರ_ಆಸ್ಟ್ರೇಲಿಯ" ಇಂದ ಪಡೆಯಲ್ಪಟ್ಟಿದೆ