ಆರಿಜೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಅರಿಜೋನ
೫೮ ನೇ ಸಾಲು:
|Website = www.az.gov
}}
'''ಆರಿಜೋನ''' ({{Audio|en-us-Arizona.ogg|ಉಚ್ಛಾರ}}) [[ಅಮೇರಿಕ ಸಂಯುಕ್ತ ಸಂಸ್ಥಾನ]]ದ [[ನೈರುತ್ಯ]] ಭಾಗದಲ್ಲಿನ ಒಂದು [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು|ರಾಜ್ಯ]]. ಇದರ ರಾಜಧಾನಿ [[ಫೀನಿಕ್ಸ್, ಆರಿಜೋನ|ಫೀನಿಕ್ಸ್]]. ''31 ಡಿಗ್ರಿ 20'37 ಡಿಗ್ರಿ
ಉ. ಅಕ್ಷಾಂಶ, 109 ಡಿಗ್ರಿ 2'- 114 ಡಿಗ್ರಿ 45' ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್ಲಿದ್ದು, ಉತ್ತರಕ್ಕೆ ಉಟ್ಹಾ, ಪೂರ್ವಕ್ಕೆ ನ್ಯೂಮೆಕ್ಸಿಕೊ, ದಕ್ಷಿಣಕ್ಕೆ ಮೆಕ್ಸಿಕೊ
ದೇಶದ ಸೊನೊರ ಪ್ರಾಂತ್ಯ ಹಾಗೂ ಪಶ್ಚಿಮಕ್ಕೆ ಕೊಲೊರಾಡೊ ನದಿಗಳಿವೆ. ಫೀನಿಕ್ಸ್
ರಾಜಧಾನಿ. ಟಸ್ಕಾನ್ ಮತ್ತು ಟೆಂಪೆ ಇತರ ಮುಖ್ಯ ನಗರಗಳು. ವಿಸ್ತೀರ್ಣ 2,95,260
ಚ.ಕಿಮೀ. ಅಪಾಚೀ ಇಂಡಿಯನ್ ಜನರ ನೆ¯ಯಾದ್ದರಿಂದ ಅಪ್ಯಾಚೀ ಪ್ರಾಂತ್ಯವೆ.ದೂ
ಪ್ರಪಂಚದ ಅತಿ ದೊಡ್ಡ ಹಿತ್ತಾಳೆ ಗಣಗಳನ್ನು ಹೊಂದಿರುವುದರಿಂದ ಹಿತ್ತಾಳೆ ಪ್ರಾಂತ್ಯವೆ.ದೂ
ಹೆಸರು ಪಡೆದಿದೆ. ಜನಸಂಖ್ಯೆ 47,78332 (2009). ಬಿಳಿಯರು, ಉಳಿದರವರು
ನೀಗೋಗಳು, ಆದಿವಾಸಿ ಇಂಡಿಯನ್ನರು ಇತ್ಯಾದಿ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ
6ನೆಯ ಸ್ಥಾನ ಪಡೆದಿರುವ ಅರಿಜೋನ ಒಟ್ಟು ಜನಸಂಖ್ಯೆಯಲ್ಲಿ ಶೇ. 84 ಭಾಗ
ನಗರವಾಸಿಗಳು ಉಳಿದ ಶೇ 16 ಭಾಗಮಾತ್ರ ಗ್ರಾಮೀಣರು.(ಕೆ . ಆರ್)
==ಮೇಲ್ಮೈಲಕ್ಷಣ==
ಅರಿಜೋನ ಸಮುದ್ರಮಟ್ಟದಿಂದ ಅಷ್ಟೊಂದು ಎತ್ತರವಾಗಿರದ
ಭೂಸ್ವರೂಪಗಳನ್ನು ಹೊಂದಿದೆ. ನೈರುತ್ಯ ಭಾಗ 30 ಮೀ ಎತ್ತರವಾಗಿದೆ. ಆದರೆ ಉತ್ತರ
ಭಾಗ 3,6600 ಮೀ. ಎತ್ತರವಾಗಿದೆ. ಉತ್ತರ ಮತ್ತು ಈಶಾನ್ಯ ಭಾಗಗಳು ಕೊಲೊರಾಡೊ
ಪ್ರಸ್ಥಭೂಮಿಯಲ್ಲಿವೆ. ಈ ಭಾಗವು ಲಕ್ಷಾಂತರ ವರ್ಷಗಳಿಂದ ಕೊಲೊರಾಡೊ ನದಿಯ
ಸರ್ವೆಗೊಳಪಟ್ಟ ಅತ್ಯಂತ ಆಳವಾದ ಗ್ರಾಂಡ್‍ಕ್ಯಾನಿಯನ್ (ಕಂದಕ) ಮತ್ತು ಕೊರಕಲುಗಳನ್ನು
ಹೊಂದಿದೆ. ಅನೇಕ ಉನ್ನತಶಿಖರಗಳಿವೆ. ಅವುಗಳಲ್ಲಿ ಹಂಪ್ರಿಶಿಖರ ಅತಿ ಎತ್ತರವಾದುದು
(3,862ಮೀ) ನೈರುತ್ಯಭಾಗವು ತಗ್ಗಾಗಿದೆ. ಅಲ್ಲಲ್ಲಿ ಚದುರಿದಂತಹ ಕೆಲವು ಬೆಟ್ಟಗುಡ್ಡಗಳಿವೆ.
ಕೊಲೊರಾಡೊ ಅರಿಜೋನದ ಪ್ರಮುಖ ನದಿವ್ಯೂಹ. ಲಿಟ್ಲ್ ಕೊಲೊರಾಡೊ, ಬಿಲ್
ವಿಲಿಯಂ ಮತ್ತು ಗಿಲಗಳು ಇದರ ಮುಖ್ಯ ಉಪನದಿಗಳು.
==ವಾಯುಗುಣ==
ನೈರುತ್ಯಬಾಗ ಬೇಸಗೆಯಲ್ಲಿ ಅಧಿಕ ಉಷ್ಣಾಂಶದಿಂದಾಗಿ 38 ಸೆಂ.
(100) ಶುಷ್ಕವಾಗಿರುತ್ತದೆ. ಹಗಲಿಗಿಂತ ರಾತ್ರಿ ತಂಪು. ಪೂರ್ವ-ಮಧ್ಯ ದ ಉನ್ನತ ಭಾಗಗಳಲ್ಲಿ
ಚಳಿಗಾಲದ ಉಷ್ಣಾಂಶ 300 ಸೆಂ ಗೆ ಇಳಿಯುತ್ತದೆ. ಮಳೆಯ ಹಂಚಿಕೆ ಕಡಿಮೆ.
ಸರಾಸರಿ ವಾರ್ಷಿಕ ಮಳೆ 8 ಸೆಂಮೀಗಳು.
==ಸಸ್ಯ ಮತ್ತು ಪ್ರಾಣಿವರ್ಗ==
ಮಳೆಯ ಕೊರತೆಯಿಂದ ಸಸ್ಯವರ್ಗ ಮರುಭೂಮಿ
ಯಂತಹದ್ದು. ಕಳ್ಳಿಯಂತಹ ಗಿಡ-ಮರಗಳು ಬೆಳೆಯುತ್ತವೆ. ಸಿಂಹ, ಜಿಂಕೆ, ಚಿರತೆ
ಕಾಡುಬೆಕ್ಕು ಪ್ರಮುಖ ವನ್ಯ ಪ್ರಾಣಗಳು, ವೈನ್, ಫರ್ ಮತ್ತು ಸ್ರ್ಪೂಸ್ ಮುಖ್ಯ ಮರಗಳು.
==ನೈಸರ್ಗಿಕ ಸಂಪತ್ತು==
ಅರಿಜೋನವು ಪ್ರಮುಖವಾಗಿ ತಾಮ್ರ ಉತ್ಪಾದಿಸುವ ಪ್ರಾಂತ್ಯ.
ಜೊತೆಗೆ ಚಿನ್ನ, ಸೀಸ, [[ಬೆಳ್ಳಿ]], ಸತು ಮತ್ತು ಕಲ್ನಾರುಗಳನ್ನು ಉತ್ಪಾದಿಸುತ್ತದೆ.
==ಕೃಷಿ==
ಒಣಹವೆ. ಮರುಭೂಮಿಯಂತಹ ಭೂಭಾಗವಿದ್ದರೂ ನೀರಾವರಿ ಸಹಾಯ
ದಿಂದ ಕೃಷಿ ಸಾಗುತ್ತದೆ. ಹತ್ತಿ ಮತ್ತು ಹಣ್ಣು ಬೆಳೆ ಮುಖ್ಯವಾದವು. ಸಾರಿಗೆ-ಸಂಪರ್ಕದ
ವ್ಯವಸ್ಥೆ ಸಾಧಾರಣ. ಕೈಗಾರಿಕೋದ್ಯಮ ಬಹಳಷ್ಟು ಮಟ್ಟಿಗೆ ಸ್ಥಳೀಯವಾಗಿ ದೊರೆಯುವ
ಲೋಹಾಂಶ ಖನಿಜಗಳನ್ನಾಧರಿಸಿದೆ. ಅವುಗಳಲ್ಲಿ ತಾಮದ ಲೋಹತಯಾರಿಕೆ ಮುಖ್ಯ.
ಒಟ್ಟಾರೆ ಅರಿಜೊನದ ಆರ್ಥಿಕತೆಯು ಐದು ಅಂಶಗಳನ್ನಾಧರಿಸಿದೆ: ತಾಮ್ರ, ಹತ್ತಿ,
ವಾಯುಗುಣ, ದನಗಳು ಮತ್ತು ಹುಳಿಹಣ್ಣುಗಳು.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
== ಉಲ್ಲೇಖಗಳು ==
{{Reflist}}
"https://kn.wikipedia.org/wiki/ಆರಿಜೋನ" ಇಂದ ಪಡೆಯಲ್ಪಟ್ಟಿದೆ