ಪ್ರೊಟೆರೊಜೋಯಿಕ್ ಕಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
</div>
<b>ಪ್ರೊಟೆರೊಜೋಯಿಕ್ ಕಲ್ಪ</b>ವು ('''ಆದಿಜೀವಯುಗ''')<ref>ಇಂಗ್ಲೀಶ್ ವಿಕಿಪೀಡಿಯ [https://en.wikipedia.org/wiki/Proterozoic “Pretorzoic”] ಪುಟದ ಭಾಗಶ ಅನುವಾದ, ಪ್ರಾಪ್ತಿಯ ದಿನಾಂಕ 2016-08-17</ref> ಭೂಗೋಳಿಕ ಕಾಲಮಾನದಲ್ಲಿ ಎರಡನೆಯ ಕಲ್ಪ ಮತ್ತು ಇದರ ಕಾಲಮಾನ ೨೫೦೦ ರಿಂದ ೫೪೨ ±೧.೦ ದಶಲಕ್ಷ ವರುಷಗಳ ಹಿಂದೆ. ಇದನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಎಂದು ಮೂರು ಯುಗಗಳನ್ನಾಗಿ ವಿಭಜಿಸಲಾಗಿದೆ. ಆದಿಜೀವಯುಗ ಕೊನೆಗೊಂಡೊಡನೆ (ಅಂದರೆ ಸುಮಾರು 600 ದಶಲಕ್ಷ ವರ್ಷಗಳ ಹಿಂದೆ) ಪುರಾತನ ಜೀವಯುಗದ ಕೇಂಬ್ರಿಯನ್ ಕಲ್ಪ (ಇಪಕ್) ಪ್ರಾರಂಭವಾಯಿತು. ಆಗ ರೂಪುಗೊಂಡ ಶಿಲಾಶ್ರೇಣಿಗಳ ತಳದಲ್ಲಿರುವ ಅಗಾಧ ಶಿಲಾಸಮುದಾಯಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದು ಹೆಸರು. ಇದು ಭೂಮಿಯ ಇತಿಹಾಸ ಕಾಲದ ಸುಮಾರು ಮುಕ್ಕಾಲು ಭಾಗವನ್ನು ನಿರೂಪಿಸುತ್ತದೆ. ಈ ಶಿಲಾಸಮುದಾಯ ಸಂಪೂರ್ಣವಾಗಿ ಜೀವಾವಶೇಷರಹಿತವಾಗಿದೆ. ಇವುಗಳ ಮೇಲೆ ಸಂಚಯನಗೊಂಡಿರುವ ಶಿಲಾರಾಶಿಗಳಿಂದ ಕಾಲವನ್ನು ಸುಲಭವಾಗಿ ಗುರುತಿಸಬಹುದು.
 
==ಪ್ರೀ ಕೇಂಬ್ರಿಯನ್ ಶಿಲಾರಾಶಿ==
ಪ್ರೀ ಕೇಂಬ್ರಿಯನ್ ಶಿಲಾರಾಶಿಯನ್ನು ಕೆಳಭಾಗ ಮತ್ತು ಮೇಲ್ಭಾಗ ಎಂದು ಎರಡು ಭಾಗಗಳನ್ನಾಗಿ ವಿಭಜಿಸಬಹುದು. ಕೆಳಭಾಗ ಮುಖ್ಯವಾಗಿ [[ಗ್ರಾನೈಟ್]] ಮತ್ತು ನೈಸ್ ಮುಂತಾದ ಅಗ್ನಿಶಿಲೆಗಳಿಂದಲೂ, ರೂಪಾಂತರಪಡೆದ ಜಲಜಶಿಲೆಗಳಿಂದಲೂ ಕೂಡಿದೆ. ಮೇಲ್ಭಾಗ ಬಹುಭಾಗ ಜಲಜಶಿಲೆಗಳಿಂದ ಆಗಿದೆ. ಈ ಜಲಜಶಿಲೆಗಳು ನೊರಜುಶಿಲೆ, ಪೆಂಟು ಶಿಲೆ, ಮರಳ ಶಿಲೆ, ಜೇಡು ಶಿಲೆ ಮತ್ತು ಸುಣ್ಣ ಶಿಲೆಗಳಾಗಿವೆ. ಇವುಗಳಲ್ಲಿ ಪ್ರವಾಹ ಪದರ, ನಕಲ ಪದರ ಮುಂತಾದ ಸಾಗರ ಶಿಲೆ ರಚನೆಗಳನ್ನು ಕಾಣಬಹುದು. ಈ ಶಿಲಾಸಮುದಾಯಗಳಲ್ಲಿ ಕೆಳಭಾಗಕ್ಕೆ ಆರ್ಷೇಯ ಶಿಲಾಸಮುದಾಯವೆಂದೂ, ಮೇಲ್ಭಾಗಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದೂ ಹೆಸರು. ಇದು [[ಅಮೆರಿಕ]] ದೇಶದ ಅಲ್‍ಗಾಂಕಿಯನ್ ಸಮುದಾಯಕ್ಕೆ ಸಮವಾದುದು. ಕಡಪ ಮತ್ತು ವಿಂಧ್ಯಾ ಶಿಲಾವರ್ಗಗಳು ಈ ಸಮುದಾಯದ ಭಾಗಗಳು. ಇದು ಆದಿ ಜೀವಯುಗದ ಶಿಲಾಸಮುದಾಯ. ಆದಿ [[ಜೀವಯುಗ]]ದ ಶಿಲಾಸ್ಥೋಮ ಆದರ್ಶ ಜಲಜ ಶಿಲೆಗಳಿಂದ ಕೂಡಿ ಸಾವಿರಾರು ಅಡಿಗಳಷ್ಟು ಎತ್ತರವಿರುವ ಶಿಲಾಪದರಗಳ ಗುಂಪು. ಇವಕ್ಕೂ ಮತ್ತು ಆರ್ಷೇಯ ಯುಗದ ಶಿಲಾಸಮುದಾಯಗಳಿಗೂ ಮಧ್ಯದಲ್ಲಿ ದೊಡ್ಡ ಅನನುರೂಪತೆ ಇದೆ. ಇದಕ್ಕೆ ಈವಾರ್ಕೀಯನ್ ಅನನುರೂಪತೆಯೆಂದು ಹೆಸರು. ಈ ಕಾಲದ ಶಿಲಾರಾಶಿಯಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಅನನುರೂಪತೆಗಳಿವೆ. ಶಿಲಾನಿಕ್ಷೇಪದ ಕಾರ್ಯಗಳು ಅನೇಕ ಬಾರಿ ಪುನರಾವರ್ತಿಸಿರುವುದು ತಿಳಿಯುತ್ತದೆ. ಈ ಯುಗದ ಶಿಲೆಗಳು ವರ್ತಮಾನ ಕಾಲದಲ್ಲಿ ನಡೆಯುತ್ತಿರುವ ಶಿಥಿಲೀಕರಣ ಮತ್ತು ಶಿಲಾಸಂಚಯನ ಕಾರ್ಯಗಳಿಂದಲೇ ರೂಪುಗೊಂಡುವು. ಆದರೆ ಇವು ಜೀವಾವಶೇಷ ರಹಿತ. ಈ ಕಾಲದಲ್ಲಿ ಜೀವಿಗಳು ಇದ್ದುವು ಎಂಬುದಕ್ಕೆ ಸಹಜವಾದ ಸಾಕ್ಷ್ಯಗಳಿಲ್ಲ. ಆದರೆ ಅಪ್ರತ್ಯಕ್ಷ ಸಾಕ್ಷ್ಯಗಳಿಂದ ಇಂಥ ಜೀವಿಗಳಿದ್ದುವೆಂದು ಪುಷ್ಟೀಕರಿಸಬಹುದು.
 
==ಶಿಲಾನಿಕ್ಷೇಪರಾಶಿಯನ್ನು ವರ್ತಮಾನಕಾಲ==
ಶಿಲಾನಿಕ್ಷೇಪರಾಶಿಯನ್ನು ವರ್ತಮಾನಕಾಲದ ಭೂ ಇತಿಹಾಸದ ಆದಿಯವರೆಗೆ ಸ್ಥೂಲವಾಗಿ ಅವಲೋಕಿಸಿದರೆ ಜೀವವೃಕ್ಷ ಕೇಂಬ್ರಿಯನ್ ಕಾಲದ ಆದಿಯವರೆಗೆ ನಿರಾತಂಕವಾಗಿ ಬೆಳೆದಿರುವುದನ್ನು ಕಾಣಬಹುದು. ಆದರೆ ಇದಕ್ಕೆ ಹಿಂದಿನ ಕಾಲದಲ್ಲಿ ರೂಪುಗೊಂಡ ಶಿಲೆಗಳಲ್ಲಿ ಜೀವಾವಶೇಷದ ಕುರುಹೇ ಇಲ್ಲ. ಕೇಂಬ್ರಿಯನ್ ಯುಗದ ಪ್ರಾರಂಭದಲ್ಲಿ ಸಿಕ್ಕಿರುವ ಜೀವಾವಶೇಷಗಳು ಜೀವವೃಕ್ಷದ ಪ್ರಾರಂಭ ಕಾಲದವಲ್ಲ ಎಂಬುದು ನಮಗೆ ವ್ಯಕ್ತವಾಗುತ್ತದೆ. ಏಕೆಂದರೆ ಕೇಂಬ್ರಿಯನ್ ಕಾಲದ ಜೀವರಾಶಿ ಬಹು ಮುಂದುವರಿದಿದ್ದು ಬೆನ್ನೆಲುಬಿಲ್ಲದ ಎಲ್ಲ ಪ್ರಾಣಿಗಳಿಂದಲೂ ಪ್ರತಿನಿಧಿಸಲ್ಪಟ್ಟಿದೆ. ಆ ಮಟ್ಟವನ್ನು ಮುಟ್ಟಲು ಜೀವಿ ಬಹುಕಾಲದವರೆಗೆ ಸತತವಾಗಿ ವಿಕಾಸಹೊಂದಿದ ಅನಂತರವೇ ಸಾಧ್ಯ. ಅಂದರೆ ಕೇಂಬ್ರಿಯನ್ ಯುಗದಿಂದ ಈಗಿನವರೆಗೆ ಕಾಲಾವಧಿಯ ಪ್ರಮಾಣ ಎಷ್ಟೇ ಆದರೂ ಜೀವರಾಶಿ ಕೇಂಬ್ರಿಯನ್ ಕಾಲಕ್ಕಿಂತ ಬಹಳ ಮುಂಚಿತವಾಗಿ ಇದ್ದು ಅಧಿಕ ವಿಕಾಸ ಹೊಂದಿರಬೇಕು ಎಂಬುದನ್ನು ಶಾಸ್ತ್ರಜ್ಞರು ನಿರ್ಧರಿಸುವರು.
 
==ಭೂ ಇತಿಹಾಸ==
ಭೂ ಇತಿಹಾಸದ ಅನೇಕ ಘಟನೆಗಳ ವಿಚಾರದಲ್ಲಿ ನಾವು ಅಜ್ಞರು. ಅವುಗಳಲ್ಲಿ ಆದಿಜೀವಿಗಳ ವಿಚಾರದಲ್ಲಿ ನಮ್ಮ ಅಜ್ಞಾನ ಹೆಚ್ಚು. ಆ ಕಾಲದ ಶಿಲಾಪರಂಪರೆಗಳು ಅಂದಿನ ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾಗಿದ್ದುದೇ ಇದರ ಕಾರಣ. ಇದಕ್ಕೆ ವಿವರಣೆ ನೀಡಲು ಅನೇಕ ವಿಜ್ಞಾನಿಗಳು ಪ್ರಯತ್ನಿಸಿರುವರು. ಅವುಗಳನ್ನು ಈ ರೀತಿ ವರ್ಗೀಕರಿಸಬಹುದು : 1. ಆದಿ ಸಾಗರ; ಈಗಿನ ಸಾಗರಕ್ಕಿಂತ ಬಹು ಭಿನ್ನವಾಗಿತ್ತು. ಆದ್ದರಿಂದ ಆ ಕಾಲದಲ್ಲಿ ನಿಕ್ಷೇಪಗೊಂಡ ಶಿಲೆಗಳು ಜೀವಾವಶೇಷಗಳನ್ನು ಕಾಪಾಡಿ ಕಾದಿರಿಸಲು ಅಸಮರ್ಥವಾಗಿದ್ದುವು. 2. ಆ ಕಾಲದ ಜೀವರಾಶಿ ಬಹಳ ಪುರಾತನವಾಗಿದ್ದುದರಿಂದ ಅವುಗಳಲ್ಲಿ ಗಟ್ಟಿ ಭಾಗಗಳಿರಲಿಲ್ಲ. ಆದ್ದರಿಂದ ಅವುಗಳ ಅವಶೇಷಗಳು ಶಿಲೆಗಳಲ್ಲಿ ಉಳಿಯಲಿಲ್ಲ. 3. ಆ ಕಾಲದ ಸಾಗರಗಳ ನೀರಿನಲ್ಲಿ ವಿಲೀನಗೊಂಡ ಕ್ಯಾಲ್ಸಿಯಂ ಕಾರ್ಬೋನೇಟ್, ಸಿಲಿಕಾ ಮತ್ತು ಇತರ ಅಗತ್ಯವಾದ ವಸ್ತುಗಳಿರಲಿಲ್ಲ. ಆದ್ದರಿಂದ ಅಂದಿನ ಜೀವಿಗಳಿಗೆ ಗಟ್ಟಿ ಭಾಗಗಳನ್ನು ರಚಿಸಿಕೊಳ್ಳಲಾಗಲಿಲ್ಲ. 4. ಆದಿಜೀವಯುಗದ ಶಿಲೆಗಳು ಬಹಳ ಪುರಾತನ. ಅವು ಬಹುವಾಗಿ ರೂಪಾಂತರ ಹೊಂದಿ ಒಂದು ಪಕ್ಷ ಅವುಗಳಲ್ಲಿ ಜೀವಾವಶೇಷಗಳಿದ್ದರೂ ಅವೆಲ್ಲ ಈ ಕಾರಣದಿಂದ ನಾಶವಾಗಿ ಹೋಗಿವೆ.ಈ ವಿವರಣೆಗಳನ್ನು ಪರೀಕ್ಷಿಸೋಣ. ಆದಿಜೀವಯುಗದ ಶಿಲೆಗಳು ಅವುಗಳ ಅನಂತರ ಸಂಚಯನಗೊಂಡ ಶಿಲೆಗಳಂತೆಯೇ ಸಾಗರಜನಿತ ಶಿಲೆಗಳು. ಇವುಗಳಲ್ಲಿ ಅನೇಕ ಶಿಲೆಗಳು, ಅದರಲ್ಲಿಯೂ ಭಾರತದ ಕಡಪ ಮತ್ತು ವಿಂಧ್ಯ ಕಾಲದ ಶಿಲೆಗಳು ಸೂಕ್ಷ್ಮಕಣ ಶಿಲೆಗಳಾಗಿದ್ದು ಜೀವಾವಶೇಷಗಳನ್ನು ಕಾದಿರಿಸಲು ಬಹಳ ಯೋಗ್ಯವಾಗಿವೆ. ಆದ್ದರಿಂದ ಈ ಕಾಲದ ಶಿಲೆಗಳು ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾದುವು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಆದಿಜೀವಿ ಕಾಲದ ಜೀವಿಗಳ ದೇಹಗಳ ಗಟ್ಟಿ ಭಾಗಗಳನ್ನು ಕುರಿತ ವಾದ. ಈ ಯುಗ ಮುಗಿದೊಡನೆ ಬರುವ ಕೇಂಬ್ರಿಯನ್ ಕಲ್ಪದ ಪ್ರಾರಂಭದಲ್ಲೇ ಜೀವಿಗಳಿಗೆ ಗಟ್ಟಿ ಭಾಗ ಉಂಟಾದದ್ದು ಹೇಗೆ? ಅಂಥ ಸನ್ನಿವೇಶ ಹೇಗೆ ಉಂಟಾಯಿತು? ಈ ಆಕ್ಷೇಪಗಳಿಗೆ ಸಮರ್ಥ ವಿವರಣೆ ಇಲ್ಲ. ಆದ್ದರಿಂದ ಈ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೂರನೆಯ ವಾದ ಜೀವಾವಶೇಷಗಳು ರೂಪಾಂತರ ಪಡೆದು ನಾಶವಾಗಿವೆ ಎಂದು. ಇದನ್ನು ಎಲ್ಲ ಪ್ರದೇಶದ ಶಿಲಾ ಸಮುದಾಯಕ್ಕೂ ಅನ್ವಯಿಸಲಾಗುವುದಿಲ್ಲ. ಏಕೆಂದರೆ ಭಾರತದ ಕಡಪ ಮತ್ತು ವಿಂಧ್ಯ ಶಿಲಾಸಮುದಾಯಗಳು ಹೆಚ್ಚು ಚಲನೆಗೂ ರೂಪಾಂತರಕ್ಕೂ ಒಳಗಾಗಿಲ್ಲ. ಇವುಗಳಿಂದ ಆದಿಜೀವಯುಗದ ಶಿಲಾಸಮುದಾಯಗಳು ಜೀವಾವಶೇಷರಹಿತವಾಗಿರುವುದು ಒಂದು ದೊಡ್ಡ ಆಶ್ಚರ್ಯಕರ ಸಂಗತಿ. ಈ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.
 
==ಆಮ್ಲಜನಕ ಪೇರಿಕೆಯ ಘಟನೆ==