ರಾಜು ಅನಂತಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ರಾಜು ಅನಂತಸ್ವಾಮಿ''' ಪ್ರತಿಭೆಯ ಅನಂತತೆಯ ಮಹಾನ್ ಶಿಖರರಾದ ಮೈಸೂರು ಅನಂತಸ್...
 
No edit summary
೧ ನೇ ಸಾಲು:
'''ರಾಜು ಅನಂತಸ್ವಾಮಿ'''<ref>http://www.sallapa.com/2014/01/blog-post_9092.html</ref> ಪ್ರತಿಭೆಯ ಅನಂತತೆಯ ಮಹಾನ್ ಶಿಖರರಾದ ಮೈಸೂರು ಅನಂತಸ್ವಾಮಿಯವರ ಮಗ. ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಗೆ ಇಳಿದು ಯಶಸ್ವೀಯಾಗಿದ್ದರು.
==ಜನನ/ಜೀವನ==
* ರಾಜು ಅನಂತಸ್ವಾಮಿ ಅವರು ಹುಟ್ಟಿದ ದಿನ ಏಪ್ರಿಲ್ 19, 1972. ಪ್ರತಿಭೆಯ ಅನಂತತೆಯ ಮಹಾನ್ ಶಿಖರರಾದ ಮೈಸೂರು ಅನಂತಸ್ವಾಮಿಗಳ ಮಗನಾದ ರಾಜು ಅನಂತಸ್ವಾಮಿ, ತಂದೆಯೊಂದಿಗೆ ಪುಟ್ಟ ಹುಡುಗನಾಗಿದ್ದಾಗಲೇ ತಬಲಾದಲ್ಲಿ ತಾಳ ಹಾಕುತ್ತಾ ಶ್ರದ್ಧೆಯಿಂದ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
೭ ನೇ ಸಾಲು:
 
==ಹಾಡಿರುವ ಹಾಡುಗಳ ಪಟ್ಟಿ==
* ರಾಜು ಅನಂತಸ್ವಾಮಿ<ref>http://vijaykarnataka.indiatimes.com/district/shivamogga/-/articleshow/52469385.cms</ref> ಅವರು ಹಾಡಿರುವ ಹಾಡುಗಳ ಪಟ್ಟಿ ಹೇಳುತ್ತ ಹೋದರೆ, ಆಕಾಶದಲ್ಲಿ ತುಂಬಿರೋ ನಕ್ಷತ್ರಗಳನ್ನು ಎಣಿಸಿದ ಹಾಗೆ. ಅವರ ಹಾಡುಗಳು ಕೂಡಾ ನಕ್ಷತ್ರಗಳಷ್ಟೇ ಪ್ರಕಾಶಿಸುವಂತಹವು.
# ರತ್ನನ ಪದಗಳು,
# ಹೆಂಡತಿ ಒಬ್ಬಳು,
೨೩ ನೇ ಸಾಲು:
* ನಟನೆಯಲ್ಲಿ ಅವರು ಮೂಡಿಸಿದ ಲೀಲಾಜಾಲ ಅಭಿವ್ಯಕ್ತಿ ಯಾವುದೇ ಮೇಧಾವಿ ಕಲಾವಿದನ ಸಾಮರ್ಥ್ಯಕ್ಕೂ ಕಡಿಮೆಯಾದದ್ದಲ್ಲ ಎನ್ನುತ್ತಾರೆ ಅವರನ್ನು ನಿರ್ದೇಶಿಸಿದ್ದ ಗೆಳೆಯರು. ಅವರು ರಂಗಭೂಮಿಯಲ್ಲಿ ನೀಡಿದ ಸಂಗೀತ ಸಂಯೋಜನೆ ಪ್ರೇಮಾ ಕಾರಂತರನ್ನೂ ಕೂಡಾ ಅಚ್ಚರಿಗೀಡು ಮಾಡಿತ್ತು ಎನ್ನುತಾರೆ ಸಿನಿಮಾ ಮತ್ತು ರಂಗಭೂಮಿ ನಟ ನಿರ್ದೇಶಕ ಮಂಡ್ಯ ರಮೇಶ್.
==ನಿಧನ==
ಜನವರಿ 17, 2009ರಂದು ರಾಜು ಅನಂತಸ್ವಾಮಿ<ref>http://www.sallapa.com/2014/01/blog-post_9092.html</ref> ಅವರು ಈ ಲೋಕವನ್ನು ಬಿಟ್ಟು ಹೋದರು. ಇಂದು ಅವರಿಲ್ಲ, ಆದರೂ ಇದ್ದಾರೆ -ಕನ್ನಡಿಗರ ಹೃದಯ ಸಿಂಹಾಸನದಲ್ಲಿ. ಎಂದೆಂದೂ ಇರುತ್ತಾರೆ ಸಂಗೀತದ ಅಲೆ ಅಲೆಯಲ್ಲಿ, ಅದು ಹೊರಹೊಮ್ಮಿಸುವ ಅನಂತತೆಯಲ್ಲಿ.ಹೀಗೆ ತಾವು ನಡೆದ ಹಾದಿಯಲ್ಲೆಲ್ಲಾ ಹೂವುಗಳನ್ನು ಅರಳಿಸಿ ಹೋದ ರಾಜು ಅನಂತಸ್ವಾಮಿ<ref>http://kannada.oneindia.com/topic/%E0%B2%B0%E0%B2%BE%E0%B2%9C%E0%B3%81-%E0%B2%85%E0%B2%A8%E0%B2%82%E0%B2%A4%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF</ref> ಈಗಿರುವ ಭುವಿಯಾಚೆಗಿನ ಲೋಕದಲ್ಲಿ ಕೂಡಾ ತಮ್ಮದೇ ಆದ ಸೊಬಗಿನ ಲೋಕ ನಿರ್ಮಿಸಿರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆ ನಲಿವಿನಲ್ಲಿ ಆತನಿಗೆ ಇಲ್ಲಿ ಅನುಭವಿಸಿದ ನೋವುಗಳೆಲ್ಲಾ ಮಾಗಿ ಆತನ ಆತ್ಮ ಆನಂದಭರಿತವಾಗಿ ಚಿರಶಾಂತಿ, ನಲ್ಮೆ, ಶಾಂತಿ ಸೌಖ್ಯಗಳಿಂದ ದೇದೀಪ್ಯಮಾನವಾಗಿ ಕಂಗೊಳಿಸುತ್ತಿರಲಿ.
 
==ಉಲ್ಲೇಖಗಳು==
"https://kn.wikipedia.org/wiki/ರಾಜು_ಅನಂತಸ್ವಾಮಿ" ಇಂದ ಪಡೆಯಲ್ಪಟ್ಟಿದೆ