ಥಾರ್ ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರ ಅಳವಡಿಕೆ
೧೦೧ ನೇ ಸಾಲು:
[[ದಿಕ್ಕುಗಳು|ಈಶಾನ್ಯಕ್ಕೆ]] [[ಸಟ್ಲೆಜ್ ನದಿ]], ಪೂರ್ವಕ್ಕೆ [[ಅರಾವಳಿ ಶ್ರೇಣಿ]] ದಕ್ಷಿಣಕ್ಕೆ [[ಗುಜರಾತ್|ಗುಜರಾತಿನ]] [[ಕಚ್ ಜೌಗುಪ್ರದೇಶ]] ಹಾಗು ಪಶ್ಚಿಮಕ್ಕೆ [[ಸಿಂಧೂ ನದಿ]]ಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.
==ಭೌಗೋಳಿಕ ಸ್ಥಾನ==
[[File:GreeningdesertTharIndia.jpg|thumb|Greening desert with plantations of [[jojoba]] at [[Fatehpur, Shekhawati]]]]
[[File:Greeningdesert1.jpg|thumb|Checking of shifting sand dunes through plantations of ''[[Acacia tortilis]]'' near [[Laxmangarh]] town]]
[[File:Indira Gandhi Canal.jpg|thumb|[[Indira Gandhi Canal]] flowing in Thar Desert near Sattasar village, [[Bikaner district]], Rajasthan]]
ಥಾರ್ ಮರುಭೂಮಿ - ಭಾರತದ ರಾಜಸ್ಥಾನ್ ರಾಜ್ಯದಲ್ಲಿ [[ಬಿಕಾನೇರ್]], [[ಜೈಸಲ್ಮೇರ್]], [[ಜೋಧ್‍ಪುರ]], ಜಿಲ್ಲೆಗಳನ್ನೂ ಜಯಪುರ ಜಿಲ್ಲೆಯ ಕೆಲವು ಭಾಗಗಳನ್ನೂ [[ಪಾಕಿಸ್ತಾನ]]ದ [[ಬಹವಾಲ್‍ಪುರ]] ಮತ್ತು ಪೂರ್ವ ಸಿಂಧನ್ನೂ ಆವರಿಸಿರುವ ಮರುಭೂಮಿ. ಇದರ ಪಶ್ಚಿಮದಲ್ಲಿ ಸಿಂಧೂ ನದಿಯ ನೀರಾವರಿ ಬಯಲು, ದಕ್ಷಿಣದಲ್ಲಿ ಕಚ್ಛ್‍ನ [[ರಣ್]], ಆಗ್ನೇಯದಲ್ಲಿ [[ಅರಾವಳಿ ಶ್ರೇಣಿ]], ಉತ್ತರ ಮತ್ತು ಈಶಾನ್ಯದಲ್ಲಿ ಪಂಜಾಬಿನ ಬಯಲು ಇವೆ. 2,00,000 ಚಕಿಮೀ. (77,000 ಚಮೈ) ವಿಸ್ತಾರವಾಗಿರುವ ಈ ಮರುಭೂಮಿಗೆ ಭಾರತದ ಮಹಾ ಮರುಭೂಮಿ ಎಂದೂ ಹೆಸರಿದೆ. ಮರಳು ಗುಡ್ಡಗಳು ಎಂಬರ್ಥದ ಶಬ್ದದಿಂದ ಥಾರ್ ಎಂಬ ಹೆಸರು ಬಂದಿದೆ. ಇದರ ಮೇಲೆ ಬೀಸುವ ಮಾನ್ಸೂನ್ ಮಾರುತಗಳು ಸಾಕಷ್ಟು ಮಳೆ ತರುವುದಿಲ್ಲವಾದ್ದರಿಂದ ಮರುಭೂಮಿ ಸಂಭವಿಸಿದೆ. ಥಾರ್‍ನಲ್ಲಿ ಸು. 70,00,000 ವಾಸಿಸುತ್ತಾರೆ.
[[File:Map of Vedic India.png|thumb|The position of Thar desert (orange colour) in [[Vedic civilization|Iron Age Vedic India]].]]
[[File:Sarasvati.png|right|thumb|Course of Sarasvati river through Thar desert]]
==ರಚನೆ==
460 ಕೋಟಿ ವರ್ಷಗಳ ಹಿಂದೆ ಆರಂಭವಾದ ಅತ್ಯಂತ ಪ್ರಾಚೀನ ಭೂವೈಜ್ಞಾನಿಕ ಯುಗದಲ್ಲಿ ರೂಪುಗೊಂಡ ಪ್ರಿ - ಕೇಂಬ್ರಿಯನ್ ನೀಸ್ ಶಿಲೆಗಳು (ಗ್ರಾನೈಟ್‍ನಂಥ ರೂಪಾಂತರಿತ ಶಿಲೆಗಳು). 57 ಕೋಟಿ - 25 ಕೋಟಿ ವರ್ಷಗಳಷ್ಟು ಹಳೆಯದಾದ ಅವಸಾಧಿ ಶಿಲೆಗಳು ಮತ್ತು ಇತ್ತೀಚೆಗೆ ನದಿಗಳು ತಂದು ತುಂಬಿದ ಮೆಕ್ಕಲು ಮಣ್ಣು - ಇವುಗಳ ಮೇಲೆ ಮರಳಿನ ಹೊದಿಕೆಯಿದೆ. ಅತ್ಯಂತ ಇತ್ತೀಚಿನದಾದ- ಎಂದರೆ 70 ವರ್ಷಗಳ ಹಿಂದೆ ಆರಂಭವಾದ - ಚತುರ್ಥ ಕಲ್ಪದಲ್ಲಿ ಗಾಳಿಯಿಂದಾಗಿ ಈ ಪ್ರದೇಶದ ಮೇಲೆ ಮರಳು ತುಂಬಿಕೊಂಡಿತು.
Line ೧೧೧ ⟶ ೧೧೬:
ಮರುಭೂಮಿ ಪ್ರದೇಶದಲ್ಲಿ ವಾರ್ಷಿಕ ಮಳೆ, ಸಾಮಾನ್ಯವಾಗಿ ಬಹು ಅಲ್ಪ. ಪಶ್ಚಿಮದಲ್ಲಿ 4" ಇಂದ ಪೂರ್ವದಲ್ಲಿ 20" ವರೆಗೆ ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಬಹಳ ಮಟ್ಟಿಗೆ ಅನಿಶ್ಚಿತ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ-ಮುಂಗಾರಿನಲ್ಲಿ-ಸೇ. 90 ರಷ್ಟು ಮಳೆ. ಉಳಿದ ಕಾಲದಲ್ಲಿ ಈಶಾನ್ಯದ ಕಡೆಯಿಂದ ಗಾಳಿ ಬೀಸುತ್ತದೆ. ಮೇ, ಜೂನ್, ತಿಂಗಳುಗಳಲ್ಲಿ ಉಷ್ಣತೆ ಅತ್ಯಧಿಕ; 500 ಅ. (122 ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಆಗ ಮಾಧ್ಯ ಕನಿಷ್ಠ ಉಷ್ಣತೆ 50 - 100 ಅ. (410 - 500ಈ) ಮೇ - ಜೂನ್ ತಿಂಗಳುಗಳಲ್ಲಿ 140 - 150 ಕಿಮೀ (87 - 93 ಮೈ) ವೇಗದಲ್ಲಿ ದೂಳಿನಿಂದ ತುಂಬಿದ ಗಾಳಿ ಬೀಸುತ್ತದೆ.
==ಸಸ್ಯಗಳು==
[[File:Blackbuck male female.jpg|thumb|left|Blackbuck male and female]]
[[File:Chinkara.jpg|thumb|Chinkara or 'Indian Gazelle' is found across Thar desert]]
[[File:Khejri.jpg|thumb|''[[Prosopis cineraria]]'' or ''Khejri'']]
ಮರಭೂಮಿಯಲ್ಲಿ ಬೆಳೆಯುವ ಸಸ್ಯ ಬಹುತೇಕ ಮೂಲಿಕೆ ಜಾತಿಯದು; ಅಥವಾ ಮೋಟು ಕಂಟಿ. ಅಲ್ಲಲ್ಲಿ ಮರಗಳಿವೆ. ಬೆಟ್ಟಗಳ ಮೇಲೆ ಗೊಬ್ಬಳಿ, ಕಳ್ಳಿ ಬೆಳೆಯುತ್ತವೆ. ಎಲ್ಲೆಲ್ಲೂ ವುನ್ನೆ ಮರಗಳಿವೆ. ಎಲಚಿ ಮುಂತಾದ ಇತರ ಮರಗಳೂ ಪೊದೆಗಳೂ ಉಂಟು. ಗಟ್ಟಿಯಾದ ಮರಳುದಿಣ್ಣೆಯಲ್ಲಿ ಹುಲ್ಲು, ಪೊದೆ, ಮರ ಬೆಳೆಯುತ್ತವೆ. ಕಾಡು ಸೋರೆ ತುಂಬ ವ್ಯಾಪಕವಾಗಿದೆ. ಹುಲ್ಲು ಬೆಳೆಯುವಲ್ಲಿ ಹುಲ್ಲೆಕರ ಮತ್ತು ಚಿಂಕಾರಗಳೂ ಫ್ರಾಂಕೊಲಿನ್, ಲಾವುಗೆ ಮುಂತಾದ ಪಕ್ಷಿಗಳೂ ಇವೆ. ವಲಸೆಗಾರ ಹಕ್ಕಿಗಳು ಮರಳುವಕ್ಕಿ, ಬಾತು ಕೋಳಿ ಮುಂತಾದವು. ನಷ್ಟಜೀವಿಯಾಗುತ್ತಿರುವ ಗುನಾ ಹದ್ದಿಗೂ ಇದು ವಾಸಸ್ಥಳ. ಇಲ್ಲಿ ಐದು ಬಗೆಯ ದನಗಳನ್ನೂ ಕುರಿ ಒಂಟೆಗಳನ್ನೂ ಸಾಕುತ್ತಾರೆ.
==ಜನಜೀವನ==
[[File:House in the Thar.JPG|thumb|left|Huts in the Thar desert]]
[[File:Derawar-bw01.jpg|thumb|The great [[Derawar Fort]] located within [[Bahawalpur]], Pakistan]]
[[File:gaduliya.jpg|right|thumb| A girl from the [[Gadia Lohar]]s nomadic tribe of [[Marwar]], cooking her food]]
ಇಲ್ಲಿಯ ಜನ ಬಹುತೇಕ ಗ್ರಾಮಸ್ಥರು. ಜನಸಾಂದ್ರತೆ ಚ.ಮೈ.ಗೆ 4ರಿಂದ 104ರವರೆಗೆ ವ್ಯತ್ಯಾಸವಾಗುತ್ತದೆ. ಹಿಂದೂಗಳೂ ಮುಸ್ಲಿಮರೂ ಇದ್ದಾರೆ. ಅಲೆಮಾರಿಗಳು ಸಾಮಾನ್ಯವಾಗಿ ದನಗಾಹಿಗಳು.
 
"https://kn.wikipedia.org/wiki/ಥಾರ್_ಮರುಭೂಮಿ" ಇಂದ ಪಡೆಯಲ್ಪಟ್ಟಿದೆ