ಲವಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎ಉಪಯೋಗಗಳು: ಬೆಳೆಯುವ ವಿಧಾನ, ಮಣ್ಣು
೨೨ ನೇ ಸಾಲು:
 
== ಉಪಯೋಗಗಳು ==
ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.
==ಬೆಳೆಯುವ ವಿಧಾನ==
ಲವಂಗ ದೀರ್ಘಕಾಲೀನ ಬೆಳೆ. ಇದನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಇತರ ಬೆಳೆಗಳ ಮಧ್ಯೆ ಅಥವಾ ಬದುಗಳಲ್ಲಿ ಸಸಿ ನಾಟಿ ಮಾಡುತ್ತಾರೆ. ವರ್ಷದ ಯಾವುದೇ ತಿಂಗಳಲ್ಲೂ ನಾಟಿ ಮಾಡಬಹುದು. ಸಸಿಗಳನ್ನು 20 ್ಢ 20 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಗುಂಡಿ ಆಳ ಒಂದೂವರೆ ಅಡಿ ಇದ್ದರೆ ಸಾಕು. ಗುಂಡಿಗೆ ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಆಗಾಗ ನೀರು ಹಾಯಿಸುತ್ತಿರಬೇಕು. ಸಸಿ ನಾಟಿ ಮಾಡಿದ 5 ವರ್ಷದ ನಂತರ ಫಸಲು ನೀಡಲಾರಂಭಿಸುತ್ತದೆ. ಸಾಮಾನ್ಯ ಇದಕ್ಕೆ ಎಲೆಚುಕ್ಕೆ ರೋಗ ಹೆಚ್ಚು ಬಾಧಿಸುವುದು. ಇದು ಬಿಟ್ಟರೆ ಬೇರೆ ಯಾವ ರೋಗ ಬಾಧಿಸುವುದು ಕಮ್ಮಿ. ಇದರಲ್ಲಿ ಔಷಧಿಯ ಗುಣವಿರುವುದರಿಂದ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಹಾಗಾಗಿ ರೋಗಬಾಧೆ ಕಮ್ಮಿ ಎಂಬುದು ಅನುಭವಿ ಕೃಷಿಕರ ಮಾತು. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡವೊಂದರಿಂದ 1- 10 ಕೆ.ಜಿ.ವರೆಗೆ ಇಳುವರಿ ಪಡೆಯಬಹುದು.
==ಮಣ್ಣು==
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಆದರೂ ಮರಳು ಮಿಶ್ರಿತ ಕೆಂಪು ಮಣ್ಣು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ಲವಂಗ ಗಿಡ ಜಾಸ್ತಿ ಉಷ್ಣ ತಾಳದು. ಹಾಗಾಗಿ ಇದನ್ನು ಬೆಳೆಯಲು ಮಲೆನಾಡು ಪ್ರದೇಶ ಉತ್ತಮ.
 
==ಉಲ್ಲೇಖಗಳು==
{{Reflist}}
"https://kn.wikipedia.org/wiki/ಲವಂಗ" ಇಂದ ಪಡೆಯಲ್ಪಟ್ಟಿದೆ