ಮನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚಿತ್ರದ ಅಡಿಬರಹ
೧೨ ನೇ ಸಾಲು:
 
ಎಲ್ಅಮ್ರದಲ್ಲಿ (ಪ್ರ.ಶ.ಪು.3000) ಮನೆಯೊಂದರ ಮಣ್ಣಿನಮಾದರಿ ದೊರೆತಿದೆ. ಇದು ಅಂದಿನ ಮನೆಗಳಿರುತ್ತಿದ್ದ ಬಗೆಯನ್ನು ಸೂಚಿಸುತ್ತದೆ. ಅವು ಆಯತಾಕಾರದ ಮನೆಗಳು. ಉದ್ದವಾದ ಭಾಗದಲ್ಲಿ ಮನೆಯೊಳಗೆ ಹೋಗಲು ಪ್ರವೇಶವಿದ್ದು ಅಲ್ಲಿ ಮಣ್ಣಿನ ಚೌಕಟ್ಟಿನ ದ್ವಾರವಿತ್ತು. ಇಂಥ ಮನೆಗಳು ಸುಮಾರು 7.5 - 5.5 ಚದರ ಮೀಟರುಗಳಷ್ಟು ವಿಶಾಲವಾಗಿದ್ದುವು.
[[File:Kamena kuca u Pokreveniku.jpg|thumb|Traditionalಸೆರ್ಬಿಯಾದಲ್ಲಿನ stoneಸಾಂಪ್ರದಾಯಿಕ houseಕಲ್ಲಿನ in Serbiaಮನೆಗಳು]]
[[ಮೆಸಪೊಟೇಮಿಯ]]ದ ಖಲತ್ ಜರ್ಮೊ ಎಂಬಲ್ಲಿ ಆಹಾರವನ್ನು ಬೆಳೆಸಲು ಕಲಿಯಲಾರಂಭಿಸಿದ ಜನ ಸಣ್ಣ ಮನೆಗಳನ್ನು ಕಟ್ಟಿರುವುದು [[ಉತ್ಖನನ]]ದಿಂದ ಬೆಳಕಿಗೆ ಬಂದಿದೆ. ಅಲ್ಲಿನ ರೈತರು ಗಟ್ಟಿಸಿದ ಜೇಡಿಮಣ್ಣಿನ ಗೋಡೆಗಳುಳ್ಳ ಸರಳವಾದ ಮನೆಗಳನ್ನು ಕಟ್ಟುತ್ತಿದ್ದರು. ಮನೆಗೆ ಜೊಂಡಿನ ನೆಲಗಟ್ಟು ಇತ್ತು. [[ಟೈಗ್ರಿಸ್ ನದಿ]]ಯ ಪಶ್ಚಿಮಕ್ಕಿರುವ ಹಸ್ಸುನ ಎಂಬಲ್ಲಿ [[ನವಶಿಲಾಯುಗ]]ದ ಜನರು ವಾಸಿಸಿದ್ದುದಕ್ಕೆ ಕುರುಹುಗಳು ದೊರೆತಿವೆ. ಅತಿ ಕೆಳಗಿನ ಪದರಗಳಲ್ಲಿ ಮನೆಗಳ ಅವಶೇಷಗಳು ಇಲ್ಲವಾದರೂ ಮೇಲಿನ ಪದರಗಳಲ್ಲಿ ಇವು ಸ್ಪಷ್ಟವಾಗಿವೆ. ಅತಿಪ್ರಾಚೀನ ಗ್ರಾಮದಲ್ಲಿ ವಕ್ರವಾದ ಗೋಡೆಗಳ ಅವಶೇಷಗಳಿವೆ. ಇದರ ಬಳಿಕ ಈ ಮನೆಗಳು ಹೆಚ್ಚು ಸಜ್ಜುಗೊಂಡಿವೆ. ಹಲವಾರು ಕೊಠಡಿಗಳಿಂದಕೂಡಿದ ಇವುಗಳಿಗೆ ಆಯತಾಕಾರವಿತ್ತು. ಮನೆಯ ಆವರಣದೊಳಗೆ ಒಂದು ಅಂಗಳವೂ ಇತ್ತು. ಮನೆಗಳಿಗೆ ಕಲ್ಲಿನ ಕುಳಿಯ ಸುತ್ತಲೂ ತಿರುಗುವ ತಿರುಗು ಗೂಟಗಳುಳ್ಳ ಮರದ ಬಾಗಿಲುಗಳಿದ್ದುವು. ಅಂಗಳದಲ್ಲಿ ಆಹಾರಬೇಯಿಸಲು ಮಣ್ಣಿನ ಗುಂಡಾದ ಒಲೆಗಳಿದ್ದವು. ಇವು ಕೆಲವೊಮ್ಮೆ ಕೊಠಡಿಗಳೊಳಗೆ ಇದ್ದುದೂ ಕಂಡುಬಂದಿದೆ. ಇವೆಲ್ಲ ಪ್ರ.ಶ.ಪು. ಸುಮಾರು 3000 ವರ್ಷಗಳಿಗೂ ಹಿಂದೆ ಪ್ರಚಲಿತವಿದ್ದ ನಾಗರಿಕತೆಗಳು.
 
"https://kn.wikipedia.org/wiki/ಮನೆ" ಇಂದ ಪಡೆಯಲ್ಪಟ್ಟಿದೆ