ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨೩ ನೇ ಸಾಲು:
==ನಾಟಕಗಳಲ್ಲಿ ಮಹತ್ವದ ಪ್ರಯೋಗ==
ಚಿತ್ರ ಮುಗಿದ ನಂತರ ರಾಯರು ಮೈಸೂರಿಗೆ ಹಿಂದಿರುಗಿ, ನಾಯುಡು ಅವರೊಂದಿಗೆ ತಮ್ಮ ಹೊಸ ನಾಟಕ ಸಂಸ್ಥೆಯನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ಬೆಳಕಿನ ವ್ಯವಸ್ಥೆಯ ಬಗೆಗೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು. ಅವರು ಆರಿಸಿಕೊಂಡಿದ್ದ ನಾಟಕ ‘ಭೂಕೈಲಾಸ’, ಅದರ ಮೂಲಪ್ರತಿ ನಾಟಕಕ್ಕೆ ಆಗುವಷ್ಟು ವ್ಯಾಪಕವಾಗಿರಲಿಲ್ಲವಾದ್ದರಂದ ರಾಯರೇ ಹೊಸ ಅಂಶಗಳನ್ನು ಸೇರಿಸಿ ‘ಭೂಕೈಲಾಸ’ ನಾಟಕ ಬರೆದರು. ರಂಗದಲ್ಲಿ ದೀಪದ ವ್ಯವಸ್ಥೆ ಹೇಗಿರಬೇಕೆಂಬುದಕ್ಕೆ ಅನೇಕ ಪುಸ್ತಕಗಳನ್ನು ಓದಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಂಡರು. ಅಲೆಅಲೆಯಾದ ಬೆಳಕು, ವಿವಿಧ ವರ್ಣಗಳ ಬೆಳಕುಗಳ ಮಿಶ್ರಣ, ಅಗತ್ಯ ಪಾತ್ರದ ಮೇಲಷ್ಟೇ ಬೆಳಕನ್ನು ಕೇಂದ್ರೀಕರಿಸುವುದು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಂಡರು. ಅಗತ್ಯವಾದ ವಿದ್ಯುತ್ ಬಲ್ಬುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರಕದ ಕೆಲವು ಉಪಕರಣಗಳನ್ನು ತಾವೇ ರೂಪಿಸಿದರು. ನಾಗೇಂದ್ರರಾಯರ ಪ್ರತಿಭೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಬಲ್ಲುದಾಗಿತ್ತು.
೧೯೩೭ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ‘ಭೂ ಕೈಲಾಸ’ ನಾಟಕ ಪ್ರದರ್ಶನವಾದಾಗ ಅದರ ರಂಗ ವೈಭವ, ಬೆಳಕಿನ ಮಾಯಲೋಕ, ಅಭಿನಯ ವೈಶಿಷ್ಟ್ಯಗಳನ್ನು ನೋಡಿ ಜನ ಬೆರಗಾಗಿ ಹೋದರು. ನಾಟಕ ಪ್ರಚಂಡ ಯಶಸ್ಸುಗಳಿಸಿ ಆರುತಿಂಗಳ ಕಾಲ, ತುಂಬಿದ ನಾಟಕ ಗೃಹದಲ್ಲಿ ಪ್ರದರ್ಶಿತವಾಯಿತು. ಮುಂದೆ ತುಮಕೂರು, [[ಬೆಂಗಳೂರು]] ಮತ್ತು ಮದರಾಸಿನಲ್ಲಿಯೂ ಆರುತಿಂಗಳ ಕಾಲ ನಡೆಯಿತು.. ಮುಂದೆ ‘ಭೂಕೈಲಾಸ’ ವನ್ನು ತಮಿಳುನಲ್ಲಿಯೂ ನಾಟಕವಾಗಿ ಅಭಿನಯಿಸಿ ಮದರಾಸಿನಲ್ಲಿ ಹೆಸರು ಗಳಿಸಿದರು. ಎಚ್ಚಮನಾಯಕನ ಕಥೆಯನ್ನು ಆಧರಿಸಿದ ‘ರಾಷ್ಟ್ರವೀರ’ ನಾಟಕ ಅವರ ಕಂಪನಿಯ ಪ್ರಸಿದ್ಧ ನಾಟಕಗಳಲ್ಲಿ ಒಂದು. ಅದನ್ನೂ ತಮಿಳಿಗೆ ಅನುವಾದಿಸಿ ಆಡಿದರು. ಇದರಲ್ಲಿ ರಾಯರು ಚಾಂದಾಖಾನನ ಪಾತ್ರ ಮಾಡುತ್ತಿದ್ದರು.
==ಚಿತ್ರರಂಗದಲ್ಲಿ ಮಹಾನ್ ಸಾಧನೆಗಳು==
ಪ್ರಗತಿ ಪಿಕ್ಜರ್ಸ್ ಅವರು ‘ಭೂಕೈಲಾಸ’ವನ್ನು ತೆಲುಗಿನಲ್ಲಿ ಚಲನಚಿತ್ರವಾಗಿ ತಯಾರಿಸಿದರು. ಅದು ಆ ವರ್ಷದ ಅತ್ಯುತ್ತಮ ತೆಲುಗು ಚಿತ್ರವೆಂದು ಹೆಸರುಗಳಿಸಿತು. ಇದರ ನಂತರ 1949ರಲ್ಲಿ ನಾಗೇಂದ್ರರಾಯರು ಪಾಲುದಾರರೊಡನೆ ತಯಾರಿಸಿದ ‘ವಸಂತಾಸೇನಾ’ ಚಲನಚಿತ್ರ ಅಪಾರ ಜನಮನ್ನಣೆಗಳಿಸಿ ಪ್ರಸಿದ್ಧಿಯಾಯಿತು ಈ ಚಿತ್ರದಲ್ಲಿ ನಾಗೇಂದ್ರರಾಯರು ಶಕಾರನ ಪಾತ್ರದ ಮೂಲಕ ನೀಡಿದ ಅಭಿನಯ ಇಂದಿಗೂ ಒಂದು ಅತ್ಯುಚ್ಚ ಮಾದರಿಯಾಗಿ ಉಳಿದಿದೆ. ಅಭಿನಯದ ಜೊತೆಗೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಾಯರೇ ಬರೆದರು. ಈ ಚಿತ್ರಕ್ಕೆ ಹೆಸರಿಗೆ ಮಾತ್ರ ಒಬ್ಬ ಕನ್ನಡ ಬಾರದ ನಿರ್ದೇಶಕರು ಇದ್ದರು. ಎಲ್ಲ ಕೆಲಸವನ್ನು ನಾಗೇಂದ್ರರಾಯರೇ ನಿರ್ವಹಿಸಿದ್ದರು. ಈ ಚಿತ್ರದಿಂದ ಮೊದಲುಗೊಂಡಂತೆ ಒಮ್ಮೆ ಚಿತ್ರಿಕರಣವಾದ ದೃಶ್ಯಕ್ಕೆ ಅನಂತರ ಹಾಡನ್ನು ಅಳವಡಿಸುವ ‘ಪೋಸ್ಟ್ ಸಿಂಕ್ರೊನೈಸೇಷನ್’ ಎಂಬ ವಿಧಾನ ರೂಢಿಗೆ ಬಂತು.
"https://kn.wikipedia.org/wiki/ಆರ್.ನಾಗೇಂದ್ರರಾವ್" ಇಂದ ಪಡೆಯಲ್ಪಟ್ಟಿದೆ