ಜಲ್ಲಿಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
 
[[file:Jallikattu_-_Kadaladi_Village_606_908.jpg|thumb|400px|right|ಜಲ್ಲಿಕಟ್ಟು ಕ್ರೀಡೆಗೆ ಕೊಂಬುಗಳಿಗೆ ಬಾವುಟಗಳನ್ನು ಕಟ್ಟಿ ತಯಾರು ಮಾಡಿರುವ ಗೂಳಿ ]]
 
==ಹಿನ್ನೆಲೆ==
ಪುರಾತನ ತಮಿಳು ಸಂಗಮ ಕುಲದಲ್ಲಿ ಜಲ್ಲಿಕಟ್ಟನ್ನು ಎರುತಳುವಲ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿಟ್ಟಿದ್ದರು. ಎರು ತಳುವಲ್ ಎಂಬ ಹೆಸರಿನ ಅರ್ಥ ಗೂಳಿಯನ್ನು ನಿಯಂತ್ರಿಸುವುದು ಎಂದೇ ಆಗಿದೆ. ಇದೆ ಕ್ರೀಡೆಯನ್ನು ಜಲ್ಲಿಕಟ್ಟು ಎಂದು ಕರೆಯಲು ಮುಖ್ಯ ಕಾರಣ ಈ ಕ್ರೀಡೆಗಾಗಿ ಹಣ ಕಟ್ಟಿ ಆಡುತ್ತಿದ್ದುದು. ಜಲ್ಲಿಕಟ್ಟು ಎಂಬ ಪದ ಜನ್ಮ ತಳೆದಿರುವುದು 'ಸಲ್ಲಿಕಟ್ಟು' ಎಂಬ ಪದದಿಂದ 'ಸಲ್ಲಿ' ಎಂದರೆ ನಾಣ್ಯಗಳು ಹಾಗು ಕಟ್ಟು ಎಂದರೆ ಕನ್ನಡ ಭಾಷೆಯ ಕಟ್ಟು ಪದದ ಅರ್ಥವೇ ಬರುತ್ತದೆ. ಈ ಕ್ರೀಡೆಗಾಗಿ ನಾಣ್ಯಗಳನ್ನು ಪಣವಾಗಿ ಕಟ್ಟುತ್ತಿದ್ದ ಕಾರಣ ಜಲ್ಲಿ ಕಟ್ಟು ಎಂಬ ಹೆಸರು ಬಂದಿದೆ. ಪಣವಾಗಿ ಇಡುತ್ತಿದ್ದ ನಾಣ್ಯಗಳನ್ನು ಗೂಳಿಯ ಕೊಂಬಿಗೆ ಕಟ್ಟಿ ಬಿಡಲಾಗುತ್ತಿತ್ತು. ಆ ನಾಣ್ಯಗಳನ್ನು ಯಾರು ಕೊಂಬಿನಿಂದ ಬಿಡಿಸಿ ಕೊಳ್ಳುತ್ತಾರೋ ಹಣ ಅವರದೇ.
 
==ಇತಿಹಾಸ==
ಜಲ್ಲಿ ಕಟ್ಟು ಕ್ರೀಡೆಯ ಇತಿಹಾಸ ಕ್ರಿಸ್ತ ಪೂರ್ವದ್ದು. ಕ್ರಿ.ಪೂ ೪೦೦ ರಿಂದ ಕ್ರಿ.ಪೂ ೧೦೦ ತಮಿಳು ಶಾಸ್ತ್ರೀಯ ಯುಗದಲ್ಲೇ ಈ ಕ್ರೀಡೆ ಜನಿಸಿದೆ ಎಂದು ಅಂದಾಜಿಸಲಾಗಿದೆ. ತಮಿಳಿನ ಆಯರ್ ಹಾಗು ಯಾದವ ಕುಲಗಳಲ್ಲಿ ಈ ಕ್ರೀಡೆ ಸಾಮಾನ್ಯವಾಗಿತ್ತು. ಮೊದಲು ಪುರಾತನ ತಮಿಳು ಪ್ರಾಂತದ 'ಮುಲ್ಲೈ' ಪ್ರದೇಶದಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿದ್ದು, ಆಟಗಾರರ ಚಾಣಾಕ್ಷತನ, ಧೈರ್ಯವಂತಿಕೆ, ಚತುರತನಗಳನ್ನೂ ಒರೆಗೆ ಹಚ್ಚುವ ಕ್ರೀಡೆಯಾಗಿದ್ದು ಬಹುಮಾನ ರೂಪದಲ್ಲಿ ಹಣವನ್ನು ಹಾಗು ಗೌರವವನ್ನು ಗಳಿಸುವ ಕಾರಣದಿಂದ ಕ್ರಮೇಣ ತಮಿಳುನಾಡಿನಾದ್ಯಂತ ಜನಪ್ರಿಯವಾಗಿದೆ. ಸಿಂಧು ನದಿ ವ್ಯಾಪ್ತಿಯ ಪುರಾತನ ನಾಗರೀಕತೆಯಲ್ಲೂ ಗೂಳಿ ಕಾಳಗದ ಕುರುಹುಗಳಿದ್ದು ಅವುಗಳನ್ನು ದೆಹಲಿಯ ರಾಷ್ಟ್ರೀಯ ವಸ್ತು ಪ್ರದರ್ಶನಾಲಯದಲ್ಲಿ ಇರಿಸಲಾಗಿದೆ.
[[file:A Bull baiting inscription 2.JPG|thumb|200px|right| ಜಲ್ಲಿಕಟ್ಟು ಕ್ರೀಡೆಯ ಬಗ್ಗೆ ದೊರೆತ ತಮಿಳು ಶಾಸನ]]
ಮದುರೈ ಬಳಿಯ ಗುಹೆಯೊಂದರಲ್ಲಿ ಗೂಳಿ ಕಾಳಗದ ವರ್ಣ ಚಿತ್ರವೂ ದೊರಕಿದ್ದು ಅದು ಸುಮಾರು ಎರಡೂವರೆ ಸಾವಿರ ವರ್ಷದ ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಜಲ್ಲಿಕಟ್ಟು ಕ್ರೀಡೆಯ ಕೆತ್ತನೆಯಿರುವ ಶಾಸನವೊಂದು ತಮಿಳುನಾಡಿನ ಸರ್ಕಾರಿ ವಸ್ತುಪ್ರದರ್ಶನಾಲಯದಲ್ಲಿದೆ.
 
 
 
==ಜಲ್ಲಿಕಟ್ಟು ನಿಷೇಧ==
"https://kn.wikipedia.org/wiki/ಜಲ್ಲಿಕಟ್ಟು" ಇಂದ ಪಡೆಯಲ್ಪಟ್ಟಿದೆ