ಸದಸ್ಯ:Meghana dholli/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಕೆಪ್ಲರ್ ಡಿಸೆಂಬರ್ ೨೭ ರಂದು ಸೇಂಟ್ ಜಾನ್ ಸುವಾರ್ತಾಬೋಧಕ ಫೀಸ್ಟ್ ಡೇ, ೧೫೭೧, ವೇಲ್ ಡೆರ್ ಸ್ಟಾಡ್'ನ ಮುಕ್ತ ಚಕ್ರಾಧಿಪತ್ಯದ ನಗರದಲ್ಲಿ ಜನಿಸಿದರು. ಇವರ ತಾತ ಸೇಬಾಲ್ಡ್ ಕೆಪ್ಲರ್, ನಗರದ ಲಾರ್ಡ್ ಮೇಯರ್ ಆಗಿದ್ದರು. ಜೋಹಾನ್ಸ್ ಅವರು ಜನಿಸಿದ ವೇಳೆಗೆ, ಅವರ ಇಬ್ಬರು ಸಹೋದರರ ಮತ್ತು ಒಬ್ಬ ಸಹೋದರಿಯ ಮತ್ತು ಕೆಪ್ಲರ್ ಕುಟುಂಬದ ಅದೃಷ್ಟ ಕ್ಷೀಣಿಸುತ್ತದೆ. ಅವರ ತಂದೆ, ಹೆನ್ರಿಕ್ ಕೆಪ್ಲರ್, ಅನಿಶ್ಚಿತ ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಅವರು ಜೋಹಾನ್ಸ್ ಐದು ವರ್ಷದವರಿದ್ದಾಗ ಕುಟುಂಬವನ್ನು ಬಿಟ್ಟು ಹೋದರು. ನೆದರ್ಲ್ಯಾಂಡ್ಸ್ ನಲ್ಲಿ ಎಂಭತ್ತು ವರ್ಷಗಳ ಯುದ್ಧದಲ್ಲಿ ಸಾವನ್ನಪ್ಪಿದ ಎಂದು ನಂಬಲಾಗಿದೆ. ಅವರ ತಾಯಿ ಕಥರೀನಾ ಗುಲ್ಡೆನ್ಮ್ಯಾನ್, ಛತ್ರಗಾರನ ಮಗಳು ಒಬ್ಬ ವೈದ್ಯೆ ಮತ್ತು ಸಸ್ಯ ತಜ್ಞೆ ಆಗಿದ್ದರು. ಅಕಾಲಿಕವಾಗಿ ಜನಿಸಿದ ಜೋಹಾನ್ಸ್, ಬಾಲ್ಯದಲ್ಲಿ ದುರ್ಬಲ ಮತ್ತು ರೋಗಿಷ್ಠ (ಬಲಹೀನ) ಆಗಿದ್ದನು ಎಂದು ಹೇಳಿಲಾಗಿದೆ. ಆದಾಗ್ಯೂ, ಅವರು ಸಾಮಾನ್ಯವಾಗಿ ತನ್ನ ಅದ್ಭುತ ಗಣಿತದ ಬೋಧನೆಯಿಂದ ತನ್ನ ತಾತನ ವಸತಿಗೃಹಕ್ಕೆ ಬರುವ ಪ್ರಯಾಣಿಕರನ್ನು ಆರ್ಕಷಿಸುತ್ತಿದ್ದರು.
 
ಅವರು ತಮ್ಮ ಬಾಲ್ಯದಲ್ಲೇ ಖಗೋಳಶಾಸ್ತ್ರವನ್ನು ಪರಿಚಯಿಸಿದರು. ಅವರು ಖಗೋಳಶಾಸ್ತ್ರವನ್ನು ಬಹಳ ಪ್ರೀತಿಯನ್ನು ಬೆಳೆಸಿಕೊಂಡರು ಹಾಗೂ ತಮ್ಮ ಸಂಪೂರ್ಣ ಜೀವನವನ್ನೇ ವ್ಯಾಪಿಸಿದರು. ಆರನೆಯ ವಯಸ್ಸಿನಲ್ಲಿಯೇ ಅವರು ''ಗ್ರೇಟ್ ಕಾಮೆಟ್ ೧೫೭೭'' ಅನ್ನು ಕಂಡರು, ಅದರಲ್ಲಿ ಅವರು "ತಮ್ಮ ತಾಯಿ ಅವರನ್ನು ಬಹು ದೂರದ ಸ್ಥಳಕ್ಕೆ, ಅದನ್ನು ನೋಡಲು ಕರೆದುಕೊಂಡು ಹೋಗಿದ್ದರು" ಎಂದು ಬರೆದಿದ್ದಾರೆ. ೧೫೮೦ ರಲ್ಲಿ, ಒಂಬತ್ತನೇ ವಯಸ್ಸಿನಲ್ಲಿ, ಅವರು ಮತ್ತೊಂದು ಖಗೋಳ ಕ್ರಿಯೆಯನ್ನು ಗಮನಿಸಿದರು, ಅದು ಚಂದ್ರ ಗ್ರಹಣ ಮತ್ತು ಚಂದ್ರನು "ಸಾಕಷ್ಟು ಕೆಂಪು ಕಾಣಿಸಿಕೊಂಡಿತು" ಎಂಬುದನ್ನು ಗಮನಿಸಿದ್ದಾರೆ. ಆದಾಗ್ಯೂ, ಬಾಲ್ಯದಲ್ಲಿ ಸಿಡುಬಿನ ಕಾಯಿಲೆಯಿಂದ ಅವರಿಗೆ ದುರ್ಬಲ ದೃಷ್ಟಿ ಮತ್ತು ಕೈಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿತು. ಇದರಿಂದ ಖಗೋಳ ವೀಕ್ಷಣಾ ಅಂಶಗಳಲ್ಲಿ ತನ್ನ ಸಾಮರ್ಥ್ಯವನ್ನು ಸೀಮಿತಗೊಳಿಸಬೇಕಾಯಿತು.
 
==ನಡುನಾಡಿನ ಹರಳರಿಮೆಯ ವರುಷ==
ವಿಶ್ವ ಒಕ್ಕೂಟವು (United Nations) ೨೦೧೪ ನೇ ವರುಶವನ್ನು ನಡುನಾಡಿನ ಹರಳರಿಮೆಯ ವರುಶ(International Year of Crystallography) ಎಂದು ಸಾರಿದೆ. ಹಿಂದಿನ ಬರಹದಲ್ಲಿ ನಾವು ಹರಳರಿಮೆಯ ಕುರಿತಾಗಿ ಕೆಲವು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಮುಕ್ಯವಾಗಿ ಕಡುಚಿಕ್ಕದಾದ, ಮನುಷ್ಯನ ಕಣ್ಣಿಗೆ ಕಾಣಿಸದ ಅಣುಗಳ ಮತ್ತು ತುಣುಕುಗಳ ಬಗ್ಗೆ ತಿಳಿಯಬೇಕಾದರೆ ಎಕ್ಸ್-ಕದಿರುಗಳನ್ನು(X-rays) ಬಳಸಬೇಕಾಗುತ್ತದೆ. ಆದರೆ ಎಕ್ಸ್-ಕದಿರುಗಳಿಂದ ಎಲ್ಲವೂ ತಿಳಿದುಕೊಳ್ಳಬಹುದೇ ? ಆ ತಿಳಿವಳಿಕೆ ಪಡೆಯುವುದಕ್ಕೆ ಅರಿಮೆಯ ಯಾವ ಅಡಿಕಟ್ಟಲೆಗಳು ನೆರವೇರಬೇಕು ?
 
ಹರಳರಿಮೆಯ ಮೂಲಕ ವಸ್ತುಗಳ ಒಳ ಇಟ್ಟಳ(internal structure) ಅಂದರೆ ಅಣುಗಳು ಯಾವ ನಿರುಗೆಯಲ್ಲಿ (arrangement) ಹೆಣೆದುಕೊಂಡಿವೆ ಎಂದು ತಿಳಿಯಲು ಎರಡು ಮುಕ್ಯವಾದ ಪರಿಚೆಗಳು ಬೇಕಾಗುತ್ತದೆ. ಒಂದು ನಡುಗೆರೆ ಹೊಂದಿಕೆ(symmetry) ಮತ್ತೊಂದು ಅಲೆಬಾಗುವಿಕೆ(diffraction). ಈ ಬರಹದಲ್ಲಿ ನಡುಗೆರೆ ಹೊಂದಿಕೆ ಬಗ್ಗೆ ತಿಳಿದುಕೊಳ್ಳೋಣ.
 
===ನಡುಗೆರೆ ಹೊಂದಿಕೆ ಅಂದರೆ ಏನು ?===
 
ಈ ನಡುನಾಡಿನ ಹರಳರಿಮೆಯ ವರುಶಕ್ಕೆ ಮತ್ತೊಂದು ಹೆಚ್ಚುಗಾರಿಕೆಯಿದೆ. ಅದೇನೆಂದರೆ ಜೊಹಾನ್ಸ್ ಕೆಪ್ಲರ್ ಎಂಬಾತ 1611ರಲ್ಲಿ ಮಂಜುಬಿಲ್ಲೆಗಳ(snowflakes) ನಡುಗೆರೆ ಹೊಂದಿಕೆಯ ಕುರಿತಾಗಿ ಮೊದಲ ಸರತಿ ಬಿಡಿಸಿ ಹೇಳಿದ್ದರು.
 
ಜೋಹಾನ್ಸ್ ಕೆಪ್ಲರ್
ಜೋಹಾನ್ಸ್ ಕೆಪ್ಲರ್
ನಮಗೆ ತಿಳಿದಿರುವಂತೆ ಕನ್ನಡಿ ಎದುರಿಗೆ ಇಲ್ಲವೇ ನೀರಿನ ಮೇಲೆ ವಸ್ತುಗಳನ್ನು ಹಿಡಿದಾಗ ಅದರ ಎದುರುಪರಿಜನ್ನು(reflected image) ನಾವು ಕಾಣುತ್ತೇವೆ. ಅಂದರೆ ಕನ್ನಡಿ/ನೀರಿನ ಮಟ್ಟಸವನ್ನು(plane) ನಡುಮಟ್ಟಸವಾಗಿ(central plane) ತೆಗೆದುಕೊಂಡರೆ ಅದರ ಎರಡೂ ಕಡೆ ಹೊಂದಿಕೆ ಇರುವುದನ್ನು ಕಾಣಬಹುದು.
 
Harlu2ಅದನ್ನೇ ಎರಡು-ದಿಕ್ಕಿನ(2-D) ಹಾಳೆಯ ಮೇಲೆ ತಂದಾಗ ನಡುವೆ ಒಂದು ಗೆರೆ(axis) ಎಳೆದು ಅದರ ಎರಡೂ ಬದಿಯಲ್ಲಿ ಇರುವ ಹೊಂದಿಕೆಯನ್ನು ಕಾಣಬಹುದು. ಇದಕ್ಕೆ symmetry ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಡುಗೆರೆ ಹೊಂದಿಕೆ, ಸರಿಬದಿ ಎಂದು ಹೆಸರಿಸಬಹುದು. ಕೆಪ್ಲರ‍್‌ಗೆ ಆರುಮೂಲೆಗಳುಳ್ಳ ಮಂಜುಬಿಲ್ಲೆಯೊಂದು ದಾರಿಯಲ್ಲಿ ಸಿಗುತ್ತದೆ. ಆರುಬದಿಗಳುಳ್ಳ ಯಾವುದೇ ಪರಿಜಿಗೆ ಆರು-ಮಡಚಿನ ಹೊಂದಿಕೆ(6-fold symmetry) ಇದೆಯೆಂದು ಹೇಳಬಹುದು.
 
Harlu3
ಆರ‍್ಬದಿ ಮಡಚು ಇರುವ ಮಂಜುಬಿಲ್ಲೆಗಳು
ಕೆಪ್ಲರ‍್‌ಗೆ ಒಂದು ವಿಶಯ ಕಾಡುತ್ತದೆ – ಅದೇನೆಂದರೆ ಆ ನಡುಗೆರೆ ಹೊಂದಿಕೆ ಯಾಕೆ ಆರು-ಮಡಚಿನದ್ದೇ ಆಗಿರಬೇಕು ? ಅದಕ್ಕೆ ತಕ್ಕುದಾದ ಸಲುವುಗಳಿವೆಯೇ ಎಂಬುದನ್ನು ಹುಡುಕಲು ಹೊರಟಾಗ ಅವನಿಗೆ ಕೆಲವು ಸೋಜಿಗದ ವಿಶಯಗಳು ತೋಚುತ್ತವೆ. ಕೆಪ್ಲರ್ ಪ್ರಕಾರ ಆರ‍್ಬದಿಯ ಮಡಚಿನಿಂದ (6 fold packing) ತುಂಬಿದರೆ ಹೆಚ್ಚು ಬಿಗಿಯಾಗಿರುತ್ತದೆ ಮತ್ತು ನಡುವಿನಲ್ಲಿ ಎಡೆ/ಬಿರುಕು ಮೂಡುವುದು ಆದಶ್ಟು ಕಡಿಮೆಯಾಗುತ್ತದೆ. ಜೇನುಗೂಡನ್ನು ಗಮನಿಸಿದ್ದರೆ ಅದಕ್ಕೆ ಆರ‍್ಬದಿ ಮಡಚು ಇರುವುದನ್ನು ನೆನಪಿಸಕೊಳ್ಳಬಹುದು.
 
Harlu4
ಜೇನುಗೂಡು
ಇದೇ ದೂಸರನ್ನು(reasoning) ಬಳಸಿ ಕೆಪ್ಲರ್ ಹರಳುಗಳೂ(crystals) ಕೂಡ ಹೀಗೆ ಅಣುಗಳ/ತುಣುಕುಗಳ(particles) ಒಟ್ಟಿಲಾಗಿ(stack) ತುಂಬಿಕೊಂಡಿರುತ್ತದೆ ಎಂದು ಹೇಳುತ್ತಾರೆ. ಈ ಸಾರುಹವೇ ಹರಳರಿಮೆಯ ತಿಳಿವಳಿಕೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಹೇಳಬಹುದು. ಅದೇ ಮಾದರಿಯಲ್ಲಿ ಅಡಕಗಳ/ವಸ್ತುಗಳ ಒಳಗೆ ಇರುವ ಅಣುಗಳೂ ಕೂಡ ಒಂದು ತೆರನಾದ ಒಡ್ಡವದಲ್ಲಿ ಹರಡಿಕೊಂಡಿರುತ್ತದೆ.
ಅಂದರೆ ಒಂದು ಅಣುಗೂಡು(unit cell) ಅದರ ಪಕ್ಕದ ಅಣುಗೂಡಿನಂತೆಯೇ ಇರುತ್ತದೆ. ಅದರ ಪಕ್ಕದ್ದು ಹಾಗೆಯೇ. ಹಾಗಾಗಿ ಎರಡು ಅಣುಗೂಡುಗಳ ನಡುವೆ ಗೆರೆ ಎಳೆದರೆ ನಡುಗೆರೆ ಹೊಂದಿಕೆಯನ್ನು ಗುರುತಿಸಬಹುದು. ಹೀಗೆ ಒಂದರ ಪಕ್ಕ ಒಂದರಂತೆ ಕೋಟಿಗಟ್ಟಲೆ ಅಣುಗೂಡುಗಳು ಒಂದೊಂದು ವಸ್ತುವಿನಲ್ಲಿ ಒಂದೊಂದು ಬಗೆಯಲ್ಲಿ ಇರುತ್ತದೆ. ಈ ಪರಿಚೆಗೆ ಅರಿಮೆಯಲ್ಲಿ ಹರಳುತನ(crystallinity) ಎನ್ನುತ್ತಾರೆ. ಈಗ ನಾವು ಕದಿರುಗಳ ಬಗ್ಗೆ ಮತ್ತು ನಡುಗೆರೆ ಹೊಂದಿಕೆಯ ಬಗ್ಗೆ ಈ ಎರಡು ಬರಹಗಳಲ್ಲಿ ತಿಳಿದುಕೊಂಡೆವು. ಇವರೆಡನ್ನು ಬೆಸೆಯುವ ಮತ್ತೊಂದು ಅರಿಮೆಯ ಕಟ್ಟಲೆಯಾದ ಅಲೆಬಾಗುವಿಕೆಯ(diffraction) ಬಗ್ಗೆ ಮುಂದಿನ ಬರಹದಲ್ಲಿ ತಿಳಿದುಕೊಳ್ಳೋಣ.