ಬಾನುಲಿ ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಬಾನುಲಿ ನಾಟಕಗಳು(ರೇಡಿಯೋ)==
ಜಗತ್ತಿನಲ್ಲಿ [[ರಂಗಭೂಮಿ]]ಗೆ ಒಂದು ಮಹತ್ವವಿದೆ. ರಂಗಭೂಮಿಯ [[ನಾಟಕ]]ಗಳು ಇರುವುದು ನಾಟಕ ನೋಡುವ ಪ್ರೇಕ್ಷಕರಿಗಾಗಿ. ಅದೊಂದು ದೃಶ್ಯಕಾವ್ಯ. ಬಾನುಲಿ ನಾಟಕಗಳು ಇರುವುದು ಪ್ರೇಕ್ಷಕನಲ್ಲದ ಶ್ರೋತೃಗಳಿಗಾಗಿ. ಇಲ್ಲಿ ದೃಶ್ಯವನ್ನೆಲ್ಲಾ ಶ್ರಾವ್ಯವಾಗಿ ಪರಿವರ್ತಿಸಬೆಕಾಗುತ್ತದೆ. ಒಂದರ್ಥದಲ್ಲಿ ಬಾನುಲಿ ನಾಟಕಗಳನ್ನು ಅಲಂಕಾರಿಕವಾಗಿ ಹೇಳುವುದಾದರೆ ಕುರುಡರ ರಂಗಭೂಮಿ ಎಂದೇ ಹೇಳಬಹುದು. ಯಾವಾಗ ಬಾನುಲಿ ನಾಟಕಗಳು ತಯಾರಾಗುತ್ತದೆ ಆ ಸಮಯಕ್ಕೆ ದೃಶ್ಯ ಧ್ವನಿಯಾಗಿ ಪರಿವರ್ತನೆ ಹೊಂದುವಾಗ ಸಾಕಷ್ಟು ಗಮನಿಸಬೇಕಾಗುತ್ತದೆ. ಶ್ರೋತೃಗಳು ಪಾತ್ರಗಳನ್ನು ಧ್ವನಿಯ ಮೂಲಕ ವಿಭಿನ್ನವಾಗಿ ಗುರುತಿಸಬೇಕಾಗುತ್ತದೆ.ಆ ಸಂದರ್ಭದಲ್ಲಿ ಕ್ಲಿಷ್ಟವಾದ ರೀತಿಯಲ್ಲಿ ಸಮಸ್ತ ವಾಕ್ಯ ರಚನೆ ಹಾಗೂ ತೀರ ಕಾವ್ಯಮಯವಾಗಿದರೆ ಶ್ರೋತೃ ಗೊಂದಲಕ್ಕೀಡಾಗುವ ಸಂಭವ ಹೆಚ್ಚು.ಸಂಭಾಷಣೆಯಲ್ಲಿ ಸಣ್ಣ ಸಣ್ಣ ವಾಕ್ಯಗಳಿರುವುದು ಬಾನುಲಿ ನಾಟಕದ ಮೊದಲ ಲಕ್ಷಣ.ರಂಗಭೂಮಿಯ ಮೇಲೆ ಉಪವನದ ದೃಶ್ಯವನ್ನು ಕಾಣಿಸಲು ಅಸಾಧ್ಯವಾದ್ದರಿಂದ ಪಕ್ಷಿಗಳ ಕಲಕಲ, ಕೋಗಿಲೆ ಕಲರವ ವೀಣಾಗಾನ ಮುಂತಾದವುಗಳಿಂದ ಆ ಭಾವವನ್ನು ಮೂಡಿಸಬೇಕಾಗುವುದು.<ref>ಕನ್ನಡ ವಿಶ್ವಕೋಶ ಭಾಗ-೧೦</ref><ref>[http://www.bbc.co.uk/programmes/articles/1j94Sg0D452YpLFz2SLYLpd/the-radio-drama-company The Radio Drama Company]</ref> 
</ref>
===ರೇಡಿಯೋದಲ್ಲಿ ಬಾನುಲಿ ನಾಟಕಗಳ ಇತಿಹಾಸ===
ಬಾನುಲಿ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ತೀರ ಹೊಸದು. ಗ್ರಂಥಸ್ಥ ಬಾನುಲಿ ನಾಟಕಗಳು ಕನ್ನಡದಲ್ಲಿ ಅತ್ಯಂತ ಕಡಿಮೆ. ನಮ್ಮ ದೇಶದಲ್ಲಿ [[ಆಕಾಶವಾಣಿ]] ಪ್ರಾರಂಭವಾದ ಸಂದರ್ಭದಲ್ಲಿ ಇತರ ಭಾಷೆಗಳಿಗೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ಬಾನುಲಿ ನಾಟಕಗಳ ಪ್ರಸಾರ ತೀರ ವಿರಳ. ತತ್ಪೂರ್ವದಲ್ಲಿ ಮೈಸೂರು ಆಕಾಶವಾಣಿ ಸ್ವತಂತ್ರವಾಗಿ ಪ್ರಸಾರ ಮಾಡುತ್ತಿತ್ತು.
"https://kn.wikipedia.org/wiki/ಬಾನುಲಿ_ನಾಟಕ" ಇಂದ ಪಡೆಯಲ್ಪಟ್ಟಿದೆ