ಬಾನುಲಿ ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಸಂಗೀತರೂಪಕಗಳು, ಗೇಯನಾಟಕಗಳು ಬಾನುಲಿ ನಾಟಕಗಳಂತೆ ರೇಡಿಯೋದ ಪ್ರಕಾರದ ಮುಖ್ಯ ಅಂಗಗಳಾಗಿವೆ.ಭಾರತೀಯ ಹಬ್ಬಗಳನ್ನು ಕುರಿತು ಲೋಕಗೀತೆಗಳನ್ನು, ಲೋಕಕತೆಗಳನ್ನು ಸಂಗ್ರಹಿಸಿ ಇವುಗಳ ಮಹತ್ವಗಳನ್ನು ತಿಳಿಸಿ ಹೇಳುವ ಸಂಗೀತ ರೂಪಕಗಳು ಒಂದು ಪ್ರಕಾರವಾದರೆ ಯಾವ ವಾಚ್ಯಶಬ್ಧವೂ ಇಲ್ಲದೇ ಕೇವಲ ಗೀತಗಳ ಮೂಲಕವೆ ಹೆಣೆಯಲ್ಪಟ್ಟ ವಿಶೇಷ ಶುದ್ಧ ಸಂಗೀತ ನಾಟಕ ಗೇಯನಾಟಕವೆಂದು ಕರೆಯಲ್ಪಡುತ್ತದೆ. ಗೇಯನಾಟಕದ ಮೊದಲ ಪ್ರಯೋಗ ನಡೆದುದು ಕನ್ನಡದ ಮಟ್ಟಿಗಾದರೂ [[ಶಿವರಾಮ ಕಾರಂತ]]ರಿಂದ. ರಂಗಭೂಮಿಯ ಮೇಲೆ ಮೊದಲು ಯಶಸ್ವಿಯಾಗಿ ಪ್ರಯೋಗಿಸಿ ಆಮೇಲೆ ರೇಡಿಯೋದಲ್ಲಿ ಅದನ್ನು ಸಾದರಪಡಿಸಲಾಯಿತು. ಕಿಸಾಗೌತಮಿ, ಸೋಮಿಯ ಭಾಗ್ಯ, ಮದುವೆಗಿಂತ ಮಸಣವೇ ಲೇಸು ಯಶಸ್ವಿಯಾದುವು.ಕಾರಂತರ 'ನದೀ ದರ್ಶನ ಮಾತ್ರ' ಶಬ್ದ-ವಾದ್ಯಗಳಲ್ಲದೇ ಕೇವಲ ವಾದ್ಯ ಸಂಗೀತದಿಂದ ನಿರೂಪಿಸಲ್ಪಟ್ಟ ಸಾಂಕೇತಿಕ ಗೇಯನಾಟಕ.
===ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಕಗಳು===
ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ಮೊದಲ ಬಾನುಲಿ ನಾಟಕ ನೀರಗಂಟಿ ಮಾರ ಎಂದು ಹೇಳಬಹುದು ಎಂಬುದಾಗಿ ಎಚ್.ಕೆ ರಂಗನಾಥ್ ಅವರು ತಮ್ಮ ಪ್ರಸಾರ ನಾಟಕ ಪ್ರಬಂಧದಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಈ ನಾಟಕವು ಆರ್.ಕೆ ನಾರಾಯಣ ಅವರ ವಾಚ್‍ಮನ್ ಆಫ್ ದಿ ಲೇಕ್ ಎಂಬ ನಾಟಕದ ಅನುವಾದ.ಅನುವಾದಿಸಿದವರುವಿ.ಕೆ ಶ್ರೀನಿವಾಸನ್.ಶ್ರೋತೃಗಳಿಗೆ ತಲುಪುವ ನಿಟ್ಟಿನಲ್ಲಿ ಯಶಸ್ವಿ ನಾಟಕಕಾರಲ್ಲಿ ಶ್ರೀರಂಗ, ಶಿವರಾಮ ಕಾರಂತ,ಚದುರಂಗ,ಎಚ್.ಕೆ ರಂಗನಾತಥ್, ಸಮೇತನಹಳ್ಳಿ ರಾಮರಾವ್, ನಾ.ಕಸ್ತೂರಿ, ಶಿವಸ್ವಾಮಿ, ಬೀಚಿ, ಎ.ಕೆ ರಾಮಾನುಜನ್, ಬಿ.ಸಿ. ರಾಮಚಂದ್ರ ಶರ್ಮ , ಪರ್ವತವಾಣಿ ಮೊದಲಾದವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು.<ref>ಕರ್ನಾಟಕ ರಂಗಭೂಮಿ-ಕೆ.ಎಚ್ ರಂಗನಾಥ್</ref>
===ಮಂಗಳೂರು ಆಕಾಶವಾಣಿ===
ಮಂಗಳೂರು ಆಕಾಶವಾಣಿ ಡಿಸೆಂಬರ್ 11 1976ರಲ್ಲಿ ಪ್ರಾರಂಭವಾಯಿತು. ಇಲ್ಲಿ ಮೂರು ವಿಷಯಗಳುಳ್ಳ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಲಾಗುವುದು.ಅವುಗಳೆಂದರೆ ಮಾಹಿತಿ,ಶಿಕ್ಷಣ,ಮನೋರಂಜನೆ.ಮಂಗಳೂರು ಆಕಾಶವಾಣಿ ಯಲ್ಲಿ ಬೆಳಗ್ಗೆ 6.00 ರಿಂದ 3.5ರ ತನಕ ಹಾಗೂ ಸಂಜೆ 5.30ಯಿಂದ 11.5ರ ತನಕ ಕಾರ್ಯಕ್ರಮಗಳು ಪ್ರಸಾರವಾಗುವುದು.ಮಂಗಳೂರು ಆಕಾಶವಾಣಿ ಕೇಂದ್ರವೂ [[ದಕ್ಷಿಣ ಕನ್ನಡ]] ಜಿಲ್ಲೆ, [[ಕೇರಳ]] ರಾಜ್ಯದ [[ಕಾಸರಗೋಡು]] ಜಿಲ್ಲೆಗಳವರೆಗೂ ವಿಸ್ತರಿಸಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ರೇಡಿಯೋ ಕಾರ್ಯಕ್ರಮಗಳತ್ತ ಆಕರ್ಷಿಸಲು ಮತ್ತು [[ರೇಡಿಯೋ]] ಶ್ರೋತೃಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಮಂಗಳೂರು ಆಕಾಶವಾಣಿಯಲ್ಲಿ ವಂದನ,ಯುವವಾಣಿ, ರೈತರಿಗೆ ಸಲಹೆ ಹೀಗೆ ಅನೇಕ ಕಾರ್ಯಕ್ರಮಗಳು ರೇಡಿಯೋ ಶ್ರೋತೃಗಳಿಗೆ ನೀಡುತ್ತಾ ಬಂದಿದೆ.
೧೮ ನೇ ಸಾಲು:
==ಉಲ್ಲೇಖ==
 
 
[[ಕರ್ನಾಟಕ ರಂಗಭೂಮಿ-ಕೆ.ಎಚ್ ರಂಗನಾಥ್]]
 
[[ವರ್ಗ:ಎಸ್.ಡಿ.ಎಂ. ಉಜಿರೆ ವಿದ್ಯಾರ್ಥಿಗಳು ಸಂಪಾದಿಸಿದ ಲೇಖನಗಳು]]
"https://kn.wikipedia.org/wiki/ಬಾನುಲಿ_ನಾಟಕ" ಇಂದ ಪಡೆಯಲ್ಪಟ್ಟಿದೆ