ಇಂಡೋ - ಆರ್ಯನ್ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಈಗ ಭಾರತದಲ್ಲಿ ಬಳಕೆಯಲ್ಲಿರುವ ಸಂಸ್ಕøತಿ ಮತ್ತು ತಜ್ಜನ್ಯ ಭಾಷೆಗಳು. ಜಗತ್...
 
No edit summary
೧ ನೇ ಸಾಲು:
ಈಗ [[ಭಾರತ]]ದಲ್ಲಿ ಬಳಕೆಯಲ್ಲಿರುವ ಸಂಸ್ಕøತಿ ಮತ್ತು ತಜ್ಜನ್ಯ ಭಾಷೆಗಳು. ಜಗತ್ತಿನ [[ಭಾಷೆ]]ಯ ಗುಂಪುಗಳಲ್ಲಿ ಇದೂ ಒಂದು ಪ್ರಮುಖ ಗುಂಪು. ಆದರೆ ಇದು ಒಂದು ಸ್ವತಂತ್ರ ಘಟಕವಾಗಿರದೆ ಜಗತ್ತಿನ ಅತಿ ಮಹತ್ತ್ವದ ಇಂಡೋ-ಯೂರೋಪಿಯನ್ ಭಾಷಾವರ್ಗದ ಅತಿಮಹತ್ತ್ವದ ಶಾಖೆಯಾಗಿದೆ. (ನೋಡಿ- ಇಂಡೋ-ಯೂರೋಪಿಯನ್-ಭಾಷೆಗಳು) ಇಂಡೋ-[[ಯೂರೋಪಿಯನ್]] ಶಾಖೆಯ (ಶತಮ್) ಗುಂಪಿಗೆ ಇವು ಸೇರಿವೆ. ಕೆಂಟುಮ್ ಇನ್ನೊಂದು ಗುಂಪು. ಇನ್ನು ಕೆಲವರ ಪ್ರಕಾರ ಇದಕ್ಕೂ ಹಿಂದಿನದು ಇಂಡೋಹೆಟ್ಟೈಟ್ ಶಾಖೆ. ವಿವಾದಾಸ್ಪದವಾದ ಈ ಇಂಡೋಹೆಟ್ಟೈಟ್ ಗುಂಪಿನ ಸ್ಥಾನದ ಉಲ್ಲೇಖವನ್ನು ಕಡೆಗಣಿಸಿ, ಇಂಡೋ-ಯೂರೋಪಿಯನ್ ಗುಂಪಿನಿಂದ ವಂಶವೃಕ್ಷವನ್ನು ಪ್ರಾರಂಭಿಸಿದರೆ ಅದರಲ್ಲಿ [[ಇಂಡೋ-ಇರಾನಿಯನ್]], ಗ್ರೀಕ್, [[ಲ್ಯಾಟಿನ್]] ಮುಂತಾದ ಶಾಖೆಗಳಾಗುತ್ತವೆ. ಆಮೇಲೆ ಈ ಇಂಡೋ-ಇರಾನಿಯನ್ ಶಾಖೆಯಲ್ಲಿ ಇರಾನಿಯನ್ ಮತ್ತು ಇಂಡೋ-ಆರ್ಯನ್ ಎಂಬ ಶಾಖೆಗಳೊಡೆಯುತ್ತವೆ. ಇಂಡೋ-ಇರಾನಿಯನ್ ಶಾಖೆ ಆರ್ಯರು ಇನ್ನೂ ಭಾರತವನ್ನು ಪ್ರವೇಶಿಸುವುದಕ್ಕಿಂತ ಮುಂಚಿನ ಘಟ್ಟ. ಇದು ಕ್ರಿ.ಪೂ. 2000 ವರ್ಷಗಳಷ್ಟು ಪೂರ್ವದಲ್ಲಿಯೇ ಮೆಸೊಪೊಟೇಮಿಯ ಪ್ರದೇಶದಲ್ಲಿ ಬಳಕೆಯಲ್ಲಿತ್ತು. ಇಲ್ಲಿ ಇಂದ್ರ, ಮಿತ್ರ, ವರುಣ, ಸೂರ್ಯ ಮುಂತಾದ ಮುಂದಿನ ಆರ್ಯದೇವತೆ0ಗಳು ಪ್ರಚಾರದಲ್ಲಿದ್ದುದು, ಈ ಮಾತಿಗೆ ಪುಷ್ಟಿಯನ್ನೊದಗಿಸುತ್ತವೆ. ಈ ಆರ್ಯರಲ್ಲಿಯ ಒಂದು ಗುಂಪು ಈಗಿನ ಇರಾನ್ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶದಲ್ಲಿ ನೆಲೆನಿಂತು ಇರಾನೀ ಶಾಖೆಗೆ ಕಾರಣವಾಯಿತು. ಇನ್ನೊಂದು ಗುಂಪು ಹಾಗೇ ಮುಂದುವರಿದು ಭಾರತವನ್ನು ಪ್ರವೇಶಿಸಿದ ಮೇಲೆ ಇಂಡೋ-ಆರ್ಯನ್ ಶಾಖೆ ಉಂಟಾಯಿತು. ಇಂಡೋ-ಆರ್ಯನ್ ಭಾಷೆಗಳ ಇತಿಹಾಸ ಪ್ರಾರಂಭವಾಗುವುದು ಆರ್ಯರು ಭಾರತದಲ್ಲಿ ಕಾಲಿಟ್ಟಿದಿನಿಂದ.<ref>http://bayalu.weebly.com/325432623256327732363277324832643247-3245326232553270322332513265.html</ref>
 
==ಇಂಡೋ-ಇರಾನಿಯನ್ ಮತ್ತು ಇಂಡೋ-ಆರ್ಯನ್‍ಗಳಲ್ಲಿಯ ಭಿನ್ನತೆ==