ಈಜಿಪ್ಟಿನ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಸುಮಾರು ಅರುವತ್ತು ಶತಮಾನಗಳ ಹಿಂದೆ ವಿಶಿಷ್ಟ ಸಂಸ್ಕøತಿಯೊಂದನ್ನು ಕಟ್ಟಿ ಬೆ...
 
No edit summary
೧೩ ನೇ ಸಾಲು:
 
==ಪರಕೀಯರ ಸಾಮ್ರಾಜ್ಯ==
ಈ ಮಧ್ಯೆ ಪೂರ್ವದಲ್ಲಿ ಪರ್ಷಿಯ ಸಾಮ್ರಾಜ್ಯ ಪ್ರಬಲಿಸಿತ್ತು. ಅದು ಬ್ಯಾಬಿಲೋನಿಯ, ಲಿಡಿಯ, ಮೀಡಿಯ ರಾಜ್ಯಗಳನ್ನು ಗೆದ್ದು ಕ್ರಿ. ಪೂ. 525ರಲ್ಲಿ ಈಜಿಪ್ಟನ್ನೂ ವಶಪಡಿಸಿಕೊಂಡಿತು. ನೈಲ್ ನದೀ ಬಯಲು ಪರ್ಷಿಯ ಚಕ್ರಾಧಿಪತ್ಯದ ಒಂದು ಪ್ರಾಂತ್ಯವಾಗಿ (ಸತ್ರಪಿ), ಮಂಡಲಾಧಿಪತಿಯ (ಸತ್ರಪ್) ಆಳ್ವಿಕೆಗೊಳಪಟ್ಟು. ಪರ್ಷಿಯನ್ ಸೈನ್ಯ ತುಕಡಿಗಳು ಇಲ್ಲಿ ಬಂದು ಕುಳಿತಾಗ ಇಲ್ಲಿನ ಜನ ಮುಳಿದು ಆಗಿಂದಾಗ್ಗೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದರು. ಆದರೆ ಕ್ರಿ. ಪೂ. 332ರಲ್ಲಿ ಅಲೆಕ್ಸಾಂಡರ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಇವರಿಗೆ ಪರ್ಷಿಯನ್ನರ ಆಳ್ವಿಕೆ ತಪ್ಪಲಿಲ್ಲ.ಅಲೆಕ್ಸಾಂಡರ್ ಕ್ರಿ.ಪೂ. 323ರಲ್ಲಿ ಕಾಲವಾದ. ಆತನ ಚಕ್ರಾಧಿಪತ್ಯದ ಬೇರೆ ಬೇರೆ ಭಾಗಗಳನ್ನು ಅವನ ಸೇನಾಧಿಪತಿಗಳು ಆಕ್ರಮಿಸಿಕೊಂಡು ಸ್ವತಂತ್ರರಾಗಿ ಆಳತೊಡಗಿದರು. ಈಜಿಪ್ಟ್ ಟಾಲಮಿಯೆಂಬ ದಂಡನಾಯಕನ ಸ್ವಾಧೀನಕ್ಕೆ ಬಂತು. ಕ್ರಿ.ಪೂ. ಸುಮಾರು 306ರಲ್ಲಿ ಈತ ಸ್ವತಂತ್ರ ದೊರೆಯೆಂದು ಸಾರಿಕೊಂಡ. ಕ್ರಿ.ಪೂ. 30ರಲ್ಲಿ ಕ್ಲಿಯೊಪಾತ್ರ ಮರಣ ಹೊಂದುವವರೆಗೂ ಈತನ ಸಂತತಿಯವರು ಈಜಿಪ್ಟನ್ನಾಳಿದರು. ಇವರೆಲ್ಲರಿಗೂ ಟಾಲಮಿ ದೊರೆಗಳೆಂದು ಹೆಸರು. ಈ ಕಾಲದಲ್ಲಿ ಇಡೀ ದೇಶವೇ ಒಂದು ನೆಡುತೋಟವಾಗಿ ಇದು ಕೃಷಿಯಲ್ಲಿ ಮುಂದರಿಯಿತು. ಮರುವರ್ಷದ ಸ್ಥಿತಿಗತಿ ಆವಶ್ಯಕತೆಗಳನ್ನೆಲ್ಲ ಪೂರ್ವಭಾವಿಯಾಗಿ ಯೋಚಿಸಿ ಬೆಳೆ ನಿರ್ಣಯ ಮಾಡುವ ವ್ಯವಸ್ಥೆಯಿದ್ದದ್ದರಿಂದ, ಮರುವರ್ಷದ ಉತ್ಪನ್ನವೂ ಕಂದಾಯವೂ ಎಷ್ಟೆಂಬುದು ಮೊದಲೇ ಗೊತ್ತಿರುತ್ತಿತ್ತು. ಕೃಷಿವಿಷಯದಲ್ಲಿ ಮಾತ್ರವಲ್ಲದೆ ಬಟ್ಟೆ, ಎಣ್ಣೆ, ಗಣಿ, ಬ್ಯಾಂಕು-ಎಲ್ಲದರ ಮೇಲೂ ಸರ್ಕಾರದ್ದೇ ಏಕಸ್ವಾಮ್ಯ. ನೈಲ್ ನದೀಮುಖದಲ್ಲಿ ಅಲೆಕ್ಸಾಂಡರ್ ಕಟ್ಟಿಸಿದ ಅಲೆಕ್ಸಾಂಡ್ರಿಯ ಈಜಿಪ್ಟಿನ ರಾಜಧಾನಿಯಾಯಿತಲ್ಲದೆ ಗ್ರೀಕರ ಸಾಹಿತ್ಯ, ಕಲೆ ಮತ್ತು ವಿe್ಞÁನಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಭಾವ ಕೇಂದ್ರವೂ ಆಯಿತು. ಅಲ್ಲಿನ ಸುಪ್ರಸಿದ್ಧ್ದ ಪುಸ್ತಕ ಭಂಡಾರದಲ್ಲೂ ವಸ್ತುಸಂಗ್ರಹಶಾಲೆಯಲ್ಲೂ ಯೂಕ್ಲಿಡ್, ಇರಾಟೋ ಸ್ತನೀಸ್, ಅರಿಸ್ಟಾರ್ಕಸ್ ಮುಂತಾದ ಪ್ರಖ್ಯಾತ ಗ್ರೀಕ್ ವಿದ್ವಾಂಸರು ಟಾಲಮಿಗಳ ಆಶ್ರಯದಲ್ಲಿ ಕೆಲಸಮಾಡಿದರು. ಸರ್ಕಾರದ ವ್ಯವಹಾರವೆಲ್ಲ ನಡೆಯುತ್ತಿದ್ದದ್ದು ಗ್ರೀಕ್ ಭಾಷೆಯಲ್ಲಿ; ಸ್ಥಳೀಯ ಭಾಷೆಯ ಬೆಳೆವಣಿಗೆಗೂ ಅವಕಾಶವಿತ್ತು. ಈಜಿಪ್ಟಿನ ಪುರಾತನ ಸಂಸ್ಕøತಿಯ ಮೇಲೆ ಗ್ರೀಕ್ ಸಂಸ್ಕøತಿ ಬೀರಿದ ಪ್ರಭಾವ ಅಪಾರ.
 
==ರೋಮನ್ನರ ಸ್ವಾಧೀನ==
೨೮ ನೇ ಸಾಲು:
 
ಟ್ಯೂಫಿಕ್ ಪಾಷಾ==
[[ಟ್ಯೂಫಿಕ್ ಪಾಷಾ]] ಹೆಸರಿಗೆ ಮಾತ್ರ ದೊರೆ; ಆಡಳಿತವೆಲ್ಲ ಬ್ರಿಟಿಷ್ ಮತ್ತು ಫ್ರೆಂಚ್ ಕೈವಶ. ಪರಿಣಾಮವಾಗಿ ಜನರಲ್ಲಿ ಮೂಡಿದ ಆತೃಪ್ತಿ ಹೆಚ್ಚಿ ದೇಶದ ಸ್ವಾತಂತ್ರ್ಯಕ್ಕಾಗಿ 1882ರಲ್ಲಿ ಜನ ದಂಗೆಯೆದ್ದರು.ಬ್ರಿಟಿಷರು ಈ ದಂಗೆಯನ್ನಡಗಿಸಿದರು. ಮುಂದೆ ಅರ್ಧಶತಮಾನ ಕಾಲ ಈಜಿಪ್ಟ್ ಸಂಪೂರ್ಣವಾಗಿ ಬ್ರಿಟಿಷರ ಹತೋಟಿಗೊಳಪಟ್ಟಿತು. ಅದರ ಸೈನ್ಯದ ಮೇಲೆ ಬ್ರಿಟಿಷರ ಹಿಡಿತ ಏರ್ಪಟ್ಟಿತಲ್ಲದೆ ಅವರ ಸೈನ್ಯವೂ ಅಲ್ಲಿ ಠಾಣೆ ಹೂಡಿತು. ದೇಶದ ಹಣಕಾಸು ವ್ಯವಸ್ಥೆಯೂ ಬ್ರಿಟಿಷರ ವಶವಾಯಿತು.ಪರಾಂಕುಶ ನಿವಾರಣೆಗಾಗಿ ಈಜಿಪ್ಟಿನಲ್ಲಿ ಹೋರಾಟವಂತೂ ಸಾಗಿಯೇ ಇತ್ತು. ಅಹಮದ್ ಅರಬಿ ಎಂಬ ಉಚ್ಚ ಸೇನಾಪತಿಯೇ ಈ ಚಳವಳಿಯ ಮೊದಲ ಮುಖಂಡ. ಟೆಲ್-ಎಲ್-ಕಬೀರ್ ಕಾಳಗದಲ್ಲಿ ಆತ ಬ್ರಿಟಿಷರಿಂದ ಸೋತು, ದೇಶ ಭ್ರಷ್ಟನಾದ. ದೇಶದ ಅಭಿವೃದ್ಧಿಗಾಗಿ ಬ್ರಿಟಿಷರು ನಾನಾ ಸುಧಾರಣೆಗಳನ್ನು ಜಾರಿಗೆ ತಂದರು. ದಕ್ಷಿಣದ ಸೂಡಾನಿನಲ್ಲಿ ನಡೆದ ದಂಗೆ ಬಲು ಭೀಕರವಾಗಿತ್ತು. ಬ್ರಿಟಿಷ್ ಸೈನ್ಯಕ್ಕೆ ಕಷ್ಟನಷ್ಟ ಸಂಭವಿಸಿದ ನಷ್ಟವಂತೂ ಆಗಾಧ.ಈಜಿಪ್ಟಿನ ಈ ಪ್ರತಿಭಟನೆ 1900ರ ವರೆಗೂ ಮುಂದುವರಿದು ಆ ವರ್ಷ ನಿಂತಿತು. ಇಂಥ ಪರಿಸ್ಥಿತಿಯಲ್ಲೂ ಬ್ರಿಟಿಷರ ಸಮರ್ಥ ಆಡಳಿತದ ಪರಿಣಾಮವಾಗಿ ದೇಶದ ಆರ್ಥಿಕ ಪ್ರಗತಿ ತಕ್ಕಮಟ್ಟಿಗೆ ಉತ್ತಮಗೊಂಡಿತೆನ್ನಬಹುದು. ಈಜಿಪ್ಷಿಯನ್ ಮಂತ್ರಿಗಳ ಹಾಗೂ ಮೇಲ್ದರ್ಜೆ ನೌಕರರ ಅಧಿಕಾರ ಕುಗ್ಗಿತು.
 
==ಸ್ವತಂತ್ರ ಈಜಿಪ್ಟ್==
ಒಂದನೆಯ ಮಹಾಯುದ್ಧದಲ್ಲಿ ತುರ್ಕಿ ಬ್ರಿಟಿಷರಿಗೆ ವಿರೋಧವಾಗಿ ನಿಂತದ್ದರಿಂದ ಈಜಿಪ್ಟನ್ನು [[ಬ್ರಿಟಿಷ್]] ರಕ್ಷಿತ ರಾಜ್ಯವೆಂದು ಘೋಷಿಸಲಾಯಿತು. ಆಗ ಈಜಿಪ್ಟಿನ ಮೇಲೆ ಬ್ರಿಟನ್ನಿಗೆ ಸಂಪೂರ್ಣ ಹತೋಟಿ ದೊರಕಿತು. ಆದರೆ ಈಜಿಪ್ಟಿನ ಜನತೆ ತೆಪ್ಪಗಿರಲಿಲ್ಲ. 1919ರಲ್ಲಿ ಸಾಅದ್ ಸಗ್ಲೂಲ್ ಪಾಷಾ ಮುಖಂಡತ್ವದಲ್ಲಿ ಭಾರೀ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಯಿತು. ತಾತ್ಕಾಲಿಕವಾಗಿ ಇದನ್ನು ಅಡಗಿಸಲು ಸಾಧ್ಯವಾಯಿತಾದರೂ ಈಜಿಪ್ಟಿನ ಜನರ ಬೇಡಿಕೆಯ ನಿರಾಕರಣೆ ಸಾಧ್ಯವಿಲ್ಲವೆಂಬುದನ್ನು ಮನಗಂಡ ಬ್ರಿಟಿಷ್ ಸರ್ಕಾರ 1922ರಲ್ಲಿ ಈಜಿಪ್ಟ್‍ನ್ನು ಸ್ವತಂತ್ರರಾಜ್ಯವೆಂಬುದನ್ನು ಘೋಷಿಸಿತು. ಆದರೆ ನಾಲ್ಕು ವಿಷಯಗಳ ತೀರ್ಮಾನವನ್ನು ಮಾತ್ರ ಮುಂದಕ್ಕೆ ತಳ್ಳಲಾಯಿತು. ಬ್ರಿಟಿಷ್ ಚಕ್ರಾಧಿಪತ್ಯದ ನಾನಾಭಾಗಗಳ ಸಂಪರ್ಕವ್ಯವಸ್ಥೆ, ಹೊರರಾಷ್ಟ್ರಗಳು ಯುದ್ಧ ಹೂಡಿದಾಗ ಅನುಸರಿಸಬೇಕಾದ ರೀತಿ ನೀತಿ, ಈಜಿಪ್ಟಿನಲ್ಲಿದ್ದ ಐರೋಪ್ಯರ ಆಸ್ತಿಪಾಸ್ತಿ ರಕ್ಷಣೆ, ಸೂಡಾನಿನ ಪ್ರಶ್ನೆ-ಇವೇ ಆ ನಾಲ್ಕು. 1923ರಲ್ಲಿ ಈಜಿಪ್ಟಿನಲ್ಲಿ ಸಂವಿಧಾನಬದ್ಧ ರಾಜಪ್ರಭುತ್ವ ಸ್ಥಾಪನೆಯಾಯಿತು. ಮೊದಲನೆಯ ಫೌದ್ ಸುಲ್ತಾನನಾದ. ಆದರೂ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಜನತೆಯ ಹೋರಾಟ ನಿಲ್ಲಲಿಲ್ಲ. ಆನೇಕ ಬ್ರಿಟಿಷ್ ಅಧಿಕಾರಿಗಳು ಕೊಲೆಯಾದರು. ಕೊನೆಗೆ 1936ರಲ್ಲಿ ಇಂಗ್ಲೆಂಡ್ ಈಜಿಪ್ಟಗಳ ನಡುವೆ ಒಪ್ಪಂದವಾಗಿ, ಇಪ್ಪತ್ತು ವರ್ಷಕಾಲ ಬ್ರಿಟಿಷ್ ಸೈನ್ಯ ಈಜಿಪ್ಟಿನಲ್ಲಿರತಕ್ಕದ್ದೆಂದೂ ಇಂಗ್ಲೆಂಡಿನ ವ್ಯಾಪಾರಕ್ಕೆ ಅತ್ಯಾವಶ್ಯಕವಾದ ಸೂಯೆeóï ಕಾಲುವೆಯ ವಿಷಯದಲ್ಲಿ ಕೆಲವು ವಿಶಿಷ್ಟ ಸೌಕರ್ಯಗಳನ್ನು ಇಂಗ್ಲೆಂಡ್ ಹೊಂದಿರಬೇಕೆಂದೂ ತೀರ್ಮಾನವಾಯಿತು. ಎರಡನೆಯ ಮಹಾಯುದ್ಧದ ಪ್ರತಿಕೂಲ ಪರಿಸ್ಥಿತಿಯಲ್ಲೂ ಈಜಿಪ್ಟ್ ಸರ್ಕಾರ ಈ ಒಪ್ಪಂದವನ್ನು ಮುರಿಯಲಿಲ್ಲ.
 
==ಎರಡನೆಯ ಮಹಾಯುದ್ಧ==
"https://kn.wikipedia.org/wiki/ಈಜಿಪ್ಟಿನ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ