ಆಲ್ಫ್ರೆಡ್ ನೊಬೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೧೮ ನೇ ಸಾಲು:
೧೮೬೩ರಲ್ಲಿ ಅವರ ಕುಟುಂಬದ ನೈಟ್ರೊಗ್ಲಿಸರಿನ್ ಕಾರ್ಖಾನೆ ಸ್ಫೋಟಕ ವಸ್ತು ಸಿಡಿದು ನಾಶವಾದಾಗ ಆಲ್ಪ್ರೆಡ್ ನೊಬೆಲ್ ತಮ್ಮ ಪ್ರಯೋಗಗಳನ್ನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಮುಂದುವರಿಸಬೇಕಾಯಿತು. ಮೂಲತಃ ವಿಲಕ್ಷಣ ಸ್ವಭಾವದವರಾಗಿದ್ದ ಅವರು ದುಂದು ವೆಚ್ಚಗಾರರಾಗಿದ್ದರು. ಬೇಕೆಂದಲ್ಲಿಗೆ ಹೋಗಿ ಬರುತ್ತಿದ್ದರು. ಅವರ ಬ್ರಹ್ಮಚರ್ಯ ಬದುಕೂ ಅವರ ಈ ವಿಲಕ್ಷಣ ಸ್ವಭಾವಕ್ಕೆ ಇಂಬಾಗಿತ್ತು.
ಪಟ್ಟು ಬಿಡದೆ ಮಾಡಿದ ಪ್ರಯೋಗಗಳ ಫಲವಾಗಿ ಆಲ್ಪ್ರೆಡ್ ನೊಬೆಲ್ ಕೊನೆಗೂ ಮೊತ್ತ ಮೊದಲನೆಯ, ಪರಿಣಾಮಕಾರಿಯಾದ ಸುರಕ್ಷಿತ ಸ್ಫೋಟಕ ವಸ್ತು ಡೈನಾಮೈಟ್ ಅನ್ನು ಕಂಡು ಹಿಡಿಯುವುದರಲ್ಲಿ ಸಫಲರಾದರು. ತಾವು ಕಂಡು ಹಿಡಿದ ಡೈನಾಮೈಟ್ ಗೆ ೧೮೬೬ರಲ್ಲಿ ಗ್ರೇಟ್ ಬ್ರಿಟನ್ ನಲ್ಲೂ, ೧೮೬೭ರಲ್ಲಿ ಸಂ. ರಾ. ಅಮೆರಿಕದಲ್ಲೂ ಪೇಟೆಂಟ್ (ಸ್ವಾಮ್ಯದ ಹಕ್ಕು) ಪಡೆದರು. ೧೮೮೮ರಲ್ಲಿ ಅವರು ಮೊತ್ತ ಮೊದಲನೆಯ ಹೊಗೆರಹಿತ ನೈಟ್ರೊಗ್ಲಿಸರಿನ್ ಪೌಡರ್ ಗಳಲ್ಲೊಂದಾದ ಬಾಲಿಸ್ಟೈಟ್ ಅನ್ನು ಉತ್ಪಾದಿಸಿದರು. ಸ್ಫೋಟಕಗಳ ಉತ್ಪಾದನೆಯಿಂದ ಮತ್ತು ರಶಿಯದ ಬಕು ತೈಲ ಕ್ಷೇತ್ರಗಳಿಂದ ಲಭ್ಯವಾದ ಸಂಪಾದನೆಯಿಂದ ಅವರು ಅಪಾರ ಸಂಪತ್ತು ಗಳಿಸಿದರು.
 
ಉತ್ತರಾಧಿಕಾರಿಗಳಿಗೆ ಆಸ್ತಿಯನ್ನು ಬಿಟ್ಟು ಹೋಗುವ ಪದ್ಧತಿಯನ್ನು ಆಲ್ಪ್ರೆಡ್ ನೊಬೆಲ್ ವಿರೋಧಿಸಿದರು. ಅಂತಲೇ ಅವರು ತಮ್ಮ ಆಸ್ತಿಯನ್ನೆಲ್ಲ ಮಾನವಕುಲದ ಹಿತಕ್ಕಾಗಿ ಶ್ರಮಿಸುವ, ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಪಾರಿತೋಷಕ ನೀಡಲು ಕೊಡಮಾಡಿದರು. ಆಲ್ಫ್ರೆಡ್ ನೊಬೆಲ್ ೧೮೯೬ರಲ್ಲಿ ನಿಧನ ಹೊಂದಿದರು.
 
ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರ), ಅರ್ಥಶಾಸ್ತ್ರ, ಸಾಹಿತ್ಯ ಹಾಗೂ ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ದುಡಿದವರಿಗೋಸ್ಕರ ಪ್ರತಿವರ್ಷ ನೀಡಲಾಗುವ ನೊಬೆಲ್ ಪಾರಿತೋಷಕ ಆಲ್ಫ್ರೆಡ್ ನೊಬೆಲ್ ರ ಕೊಡುಗೆ.
'''ಗಣಿತಶಾಸ್ತ್ರಕ್ಕೆ ನೋಬೆಲ್ ಏಕಿಲ್ಲ?'''<ref>ಟುಡೆ ಐ ಫೌಂಡ್ ಔಟ್http://www.todayifoundout.com</ref>
"https://kn.wikipedia.org/wiki/ಆಲ್ಫ್ರೆಡ್_ನೊಬೆಲ್" ಇಂದ ಪಡೆಯಲ್ಪಟ್ಟಿದೆ