ಆರ್ಟೀಸಿಯನ್ ಬಾವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
ಚು Wikipedia python library
 
೪ ನೇ ಸಾಲು:
ಘರ್ಷಣೆಯಿಲ್ಲದೆ ನೀರು ಮೇಲೇಳುವ ಮಟ್ಟ ಕೆಲವು ಪ್ರದೇಶಗಳಲ್ಲಿ ಇಂಥ ಶಿಲಾಪ್ರಸ್ತರಗಳು ಬಾಣಲೆಯಂತಿರುವ ತಗ್ಗನ್ನು ತೋರ್ಪಡಿಸದೆ ಕೇವಲ ಒಂದೇ ದಿಕ್ಕಿಗೆ ನೆಲಮಟ್ಟದಿಂದ ವಾಲಿರುವುದೂ ಉಂಟು. ಈ ಬಗೆಯ [[ಶಿಲಾ]]ವಿನ್ಯಾಸವೂ ಆರ್ಟೀಸಿಯನ್ ಬಾವಿಗೆ ಉತ್ತಮವಾದದ್ದೇ. ಒತ್ತಡ ಅಧಿಕವಾಗಿದ್ದಲ್ಲಿ ಈ ಸನ್ನಿವೇಶದಲ್ಲೂ ನೀರು ಮೇಲಕ್ಕೆ ಚಿಮ್ಮುತ್ತದೆ.
ಅಮೆರಿಕ ಸಂಯುಕ್ತಸಂಸ್ಥಾನದ ಡಕೋಟ ಪ್ರಾಂತ್ಯದಲ್ಲಿ ಕೆಲವು ಚಿಲುಮೆಗಳ ನೀರು ಇನ್ನೂರು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಚಿಮ್ಮುತ್ತದೆ. ಇದೇ ಪ್ರಾಂತ್ಯದ ವೂನ್ಸಾಕೆಟ್ ಎಂಬಲ್ಲಿನ ಆರ್ಟೀಸಿಯನ್ ಬಾವಿಯ ಮೂಲಕ ಚಿಮ್ಮುವ ನೀರು ಬಹು ರಭಸದಿಂದ ಹೊರಬರುತ್ತದೆ. ರಭಸದಲ್ಲಿನ ದ್ರವ ಒತ್ತಡವನ್ನು ರೂಢಿಸಿಕೊಂಡು ಜಲ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಯಿತು. ಅಲ್ಲದೆ ಒಂದು ಹಿಟ್ಟಿನ ಗಿರಣಿಯನ್ನೂ ಈ ವಿದ್ಯುಚ್ಛಕ್ತಿಯ ಮೂಲಕ ನಡೆಸುತ್ತಿದ್ದರು. ಆದರೆ ಈ ತೆರನಾದ ಬಾವಿಗಳ ವಿಸ್ತೀರ್ಣ ಅಷ್ಟಾಗಿರುವುದಿಲ್ಲ. ದ್ರವ ಒತ್ತಡ ಕಡಿಮೆ ಇರುವ ಆರ್ಟೀಸಿಯನ್ ಬಾವಿಗಳನ್ನು ಕಡಿಮೆ ಒತ್ತಡದ ಆರ್ಟೀಸಿಯನ್ ಪ್ರವಾಹಗಳೆಂದೂ ಕರೆಯುತ್ತಾರೆ. ಇವುಗಳ ನೀರು ಎತ್ತರಕ್ಕೆ ಚಿಮ್ಮಲಾರದು; ಆದರೆ ವಿಸ್ತಾರವಾದ ಪ್ರದೇಶಗಳನ್ನು ಆಕ್ರಮಿಸುತ್ತದೆ. ಇವು ಹೆಚ್ಚು ನೀರನ್ನೂ ಒದಗಿಸುತ್ತವೆ. ಅಮೆರಿಕಾದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಈ ಬಗೆಯ ಆರ್ಟೀಸಿಯನ್ ಬಾವಿಯಲ್ಲಿ ತಿಂಗಳಿಗೆ 6,000 ಗ್ಯಾಲನ್ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ದೊರೆತ ದಾಖಲೆಗಳಿವೆ.
 
ಆರ್ಟೀಸಿಯನ್ ಬಾವಿಗಳನ್ನು ತೋಡುವ ಕ್ರಮ ಮತ್ತು ಅವುಗಳ ಬಳಕೆ ಪ್ರಾಚೀನ ಕಾಲದ (ಪ್ರ.ಶ.ಪು.೨೦೦೦ ವರ್ಷಕ್ಕೂ ಮುಂಚೆ) ಈಜಿಪ್ಟಿನವರಿಗೆ ತಿಳಿದಿತ್ತು. ಕ್ರೈಸ್ತಧರ್ಮದ ಇತಿಹಾಸದಲ್ಲಿ ಕೇಳಿಬರುವ ಮೋಸೆಸ್ ಇವರಿಂದಲೇ ಬಂಡೆಗಳಲ್ಲಿ ನೀರನ್ನು ಪಡೆಯುವ ವಿದ್ಯೆಯನ್ನು ಕಲಿತನೆಂದು ಪ್ರತೀತಿ. ಅದೇ ಕಾಲದ ಥೀಬನ್, ಷಾಬ್ ಮತ್ತು ಡಾಷೆಲ್ ಓಯಸಿಸ್ಗಳಿಗೆ ಅಸಂಖ್ಯಾತ ಆರ್ಟೀಸಿಯನ್ ಬಾವಿಗಳಿಂದ ನೀರು ಒದಗುತ್ತಿತ್ತೆಂಬ ಅಂಶವನ್ನೂ ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ ಆ ಕಾಲದಲ್ಲೇ ಕೆಲವು ಆರ್ಟೀಸಿಯನ್ ಬಾವಿಗಳನ್ನು ೧೫೦ ಮೀ ಮೀರಿದ ಆಳಕ್ಕೆ ತೋಡಲಾಗಿತ್ತು.
ಯುರೋಪಿನಲ್ಲಿ ೧೨ನೆಯ ಶತಮಾನದಲ್ಲಿ ಆರ್ಟೀಸಿಯನ್ ಬಾವಿಗಳನ್ನು ತೋಡುವುದು ಮೊದಲಾಯಿತು. ಮೊತ್ತಮೊದಲನೆಯ [[ಬಾವಿ]]ಯನ್ನು ದಕ್ಷಿಣ ಫ್ರಾನ್್ಸನ ಆರ್ಟಾಯ್್ಸ ಪ್ರಾಂತ್ಯದ ಲಿಲಿಯರ್ಸ್ ಬಳಿ ೧೧೨೬ರಲ್ಲಿ ತೋಡಲಾಯಿತು. ಹೀಗಾಗಿ ಆ ಪ್ರಾಂತ್ಯದ ಹೆಸರಿನ ನಂಟು ಈ ಬಗೆಯ ಬಾವಿಗಳಿಗೆ ಅಂಟಿತು. ಮುಂದೆ ೧೭ನೆಯ ಶತಮಾನದಲ್ಲಿ ಇಟಲಿ ಮತ್ತು ಆಸ್ಟ್ರಿಯ ದೇಶಗಳಲ್ಲಿ ಅಸಂಖ್ಯಾತ ಬಾವಿಗಳನ್ನು ತೋಡಿದರು. ಇಂದಿಗೂ ಈ ಬಾವಿಗಳಿಂದ ಅಲ್ಲಿನ ಜನರಿಗೆ ಮಹೋಪಕಾರವಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಆಧುನಿಕ ವೈಜ್ಞಾನಿಕ ವಿಧಾನಗಳನ್ನನುಸರಿಸಿ ಹೊಸ ಹೊಸ ಭೂಭೌತ ಯಂತ್ರೋಪಕರಣಗಳ ಸಹಾಯದಿಂದ ಆಧುನಿಕ ಭಗೀರಥರು ಪಾತಾಳ ಗಂಗೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಪಂಚದ ಅನೇಕ ಭಾಗಗಳಲ್ಲಿ ಸಹಸ್ರಾರು ಆರ್ಟೀಸಿಯನ್ ಬಾವಿಗಳ ಜನಕರಾಗಿದ್ದಾರೆ. ಇದು ಸಾಲದೆ ಹಲವಾರು ಆರ್ಟೀಸಿಯನ್ ಪ್ರವಾಹಗಳನ್ನೇ (ಗುಪ್ತನದಿ) ಪತ್ತೆ ಹಚ್ಚಿದ್ದಾರೆ. ಉತ್ತರ ಅಮೆರಿಕ ಮತ್ತು ಕೆನಡ ದೇಶಗಳಲ್ಲಿ ಕಂಡುಬರುವ ಡಕೋಟ ಮರಳು ಶಿಲಾಪ್ರಸ್ತರ ಈ ದಿಸೆಯಲ್ಲಿ ಮಹತ್ತ್ವಪುರ್ಣವಾದುದು. ಇದು ಮಧ್ಯ ಅಮೆರಿಕ, ಪಶ್ಚಿಮ ಅಮೆರಿಕ ಮತ್ತು ಕೆನಡಗಳಲ್ಲೂ ಸಹಸ್ರಾರು ಮೈಲಿ ವಿಸ್ತೀರ್ಣವಾದ ಪ್ರದೇಶಗಳಲ್ಲಿ ವ್ಯಾಪಿಸಿದೆ. ಇದು ಎತ್ತರದ ರಾಕಿ ಪರ್ವತಶ್ರೇಣಿಗಳಲ್ಲಿ ಮೊದಲಾಗಿ ಪುರ್ವದ ಕಡೆಗೆ ಇಳಿವೋರೆಯನ್ನು ತೋರಿಸುತ್ತ ಸಾಸ್ಕಚವಾನ್, ಮಾಂಟಾನ, ಡಕೋಟ, ವ್ಯೋಮಿಂಗ್, ನೆಬ್ರಾಸ್ಕ ಮತ್ತು ಕಾನ್ಸಾಸ್ ಪ್ರಾಂತ್ಯಗಳಲ್ಲೆಲ್ಲ ನೆಲಮಟ್ಟದಿಂದ ಆಳಕ್ಕೆ ಹುದುಗಿದೆ. ಪರ್ವತ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಮರಳುಶಿಲೆಯಲ್ಲಿ ಸುಲಭವಾಗಿ ವ್ಯಾಪಿಸಿ ಆ ಮೂಲಕ ನಾನಾಕಡೆ ತೋಡಿರುವ ಸಹಸ್ರಾರು ಆರ್ಟೀಸಿಯನ್ ಬಾವಿಗಳಿಗೆ ಮೂಲಕಾರಣವಾಗಿದೆ. ಇದಲ್ಲದೆ ಆರ್ಜೆಂಟೀನ ಮತ್ತು ಆಸ್ಟ್ರೇಲಿಯದ ಅನೇಕ ಪ್ರಾಂತ್ಯಗಳಲ್ಲಿ ಇಂದಿಗೂ ಆರ್ಟೀಸಿಯನ್ ಬಾವಿಗಳೇ ಜನರಿಗೆ ಮತ್ತು ಬೇಸಾಯಕ್ಕೆ ಮುಖ್ಯ ಆಸರೆ. ನಮ್ಮ ದೇಶದ ಪಾಂಡಿಚೆರಿಯ ಸುತ್ತಮುತ್ತ ಹಲವಾರು ಆರ್ಟೀಸಿಯನ್ ಬಾವಿಗಳಿವೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಆರ್ಟೀಸಿಯನ್_ಬಾವಿ" ಇಂದ ಪಡೆಯಲ್ಪಟ್ಟಿದೆ