ಆರಿಯೋಸ್ಟೊ, ಲುಡೋವಿಕೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೨೬ ನೇ ಸಾಲು:
[[Image:Ludovico Ariosto statue - Ferrara, Italy.JPG|thumb|right|ಫೆರಾರದಲ್ಲಿರುವ ನೆನಪಿನ ಪುತ್ಥಳಿ ಮತ್ತು ಉದ್ಯಾನವನ.]]
ಕಥನಕಲೆಯಲ್ಲಿ ಕವಿಯದು ಸಿದ್ಧಹಸ್ತ. ಘಟನೆಗಳಲ್ಲಿ, ಕಥೆಯ ವಿವಿಧ ಹಂತಗಳಲ್ಲಿ, ಗಾಂಭೀರ್ಯವನ್ನೂ, ಕಟಕಿಯನ್ನೂ ಜಾಣ್ಮೆಯಿಂದ ಬೆರಸುತ್ತಾನೆ. ಸೊಗಸಾದ, ನವಿರಾದ ಹಾಸ್ಯದ ಸನ್ನಿವೇಶಗಳನ್ನು ಕಲ್ಪಿಸುತ್ತಾನೆ. ಅನಂತರ ಬಂದ ಸ್ಪೇನಿನ ಕಥೆಗಾರ ಸರ್ವಾಂಟಿಸ್ ಈ ಬಗೆಯ ಹಾಸ್ಯವನ್ನು ಅನ್ಯಾದೃಶವಾಗಿ ಸೃಷ್ಟಿಸಿದ್ದಾನೆ. ಆರ್ಲಾಂಡೊವಿನ ಕಳೆದುಹೋದ ಬುದ್ಧಿಯನ್ನು ಹುಡುಕುವುದಕ್ಕಾಗಿ ಆಸ್ಟೊಲ್ಪೊ ಚಂದ್ರನೊಳಕ್ಕೆ ಪ್ರಯಾಣಮಾಡುವುದು, ರಾಣಿ ಏಂಜಲಿಕ ಮಿಡೋರೋ ಎಂಬ ಸಾಮಾನ್ಯ ಸೈನಿಕರಿಗೆ ಮನಸೋಲುವುದು ಇತ್ಯಾದಿ ಸನ್ನಿವೇಶಗಳಲ್ಲಿ ಈ ಭಾವ ಬೆಳೆದಿದೆ. ಭಾವಾವೇಶದ ಪ್ರಸಂಗಗಳನ್ನು ಚಿತ್ತಾಕರ್ಷಕವಾಗಿ ಚಿತ್ರಿಸಬಲ್ಲನಾದರೂ, ಕಥನಶೈಲಿಯಲ್ಲಿ ವಸ್ತುನಿಷ್ಠೆಯನ್ನು ಈತ ಅನುಸರಿಸುತ್ತಾನೆ. ಘಟನೆಗಳ, ದೃಶ್ಯಗಳ ವರ್ಣನೆಯಲ್ಲಿ ಜೀವಂತ ಶಕ್ತಿಯನ್ನೂ ಮೂರ್ತತೆಯನ್ನೂ ಮೂಡಿಸಬಲ್ಲ. ಕಥೆಯ ಆಖ್ಯಾನಕ್ಕೆ ಮೆರಗು ಕೊಡಲು ರೂಪಕ, ಪ್ರತಿಮೆಗಳಿಗಿಂತಲೂ ಉಪಮೆಯನ್ನೇ ಹೆಚ್ಚು ಬಳಸುತ್ತಾನೆ. ನವಿರಾದ ವಿಡಂಬನೆ, ತಿಳಿಹಾಸ್ಯ ಈ ಕಾವ್ಯದ ಮುಖ್ಯ ಲಕ್ಷಣಗಳು. ಈ ಕಾವ್ಯವಲ್ಲದೆ ಈತ ಹಲವಾರು ಪ್ರೇಮಗೀತೆಗಳನ್ನೂ, ಪ್ರಹಸನ, ವಿಡಂಬನ ಕವನಗಳನ್ನೂ ಬರೆದಿದ್ದಾನೆ.
 
ಕವಿಯದು ಸೌಂದರ್ಯಕ್ಕೆ ಮೀಸಲಾದ ದೃಷ್ಟಿ. ವಿಸ್ತಾರಪ್ರಕೃತಿ ಮತ್ತು ಮಾನವಲೋಕ ದಲ್ಲಿ ಹುದುಗಿರುವ, ಹಬ್ಬಿರುವ ಸೌಂದರ್ಯಸೃಷ್ಟಿಯನ್ನು ಕಾಮನಬಿಲ್ಲಿನಂಥ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾನೆ. ಕಾವ್ಯದುದ್ದಕ್ಕೂ ಅಲ್ಲಲ್ಲಿ ಮಿಂಚಿ ಹೊಳೆಯುವ, ಯುದ್ಧ, ಕಾಳ್ಗಿಚ್ಚು, ಮಹಾಪುರ, ಚಂಡಮಾರುತಗಳ ರೌದ್ರವರ್ಣನೆಯನ್ನು ಓದುವಾಗ ನಮಗೆ ಅವನ ಕಾಲದಲ್ಲಿ ಪ್ರಸಿದ್ಧವಾಗಿ ಮೆರೆದ ಟಿಷಿಯನ್ ಮುಂತಾದ ಚಿತ್ರಕಾರರ ನೆನಪಾಗುತ್ತದೆ.
 
ಈ ಕಥನಕಾವ್ಯ ಅನಂತರ ಬಂದ ನಾನಾ ಭಾಷೆಯ ಕವಿಗಳಿಗೆ, ನಾಟಕಕಾರರಿಗೆ, ಕಾದಂಬರಿಕಾರರಿಗೆ ಸಮೃದ್ಧಭಂಡಾರವಾಗಿದೆ. ಷೇಕ್್ಸಪಿಯರ್, ಸಿಡ್ನಿ, ಗ್ರೀನ್, ಸ್ಪೆನ್ಸರ್, ಮಿಲ್ಟನ್ ಮತ್ತು ೧೯ನೆಯ ಶತಮಾನದ ಇಂಗ್ಲಿಷ್ ಕವಿಗಳೂ ಆರಿಯೋಸ್ಟೊಗೆ ಋಣಿಯಾಗಿದ್ದಾರೆ.
==ಬಾಹ್ಯ ಸಂಪರ್ಕಗಳು==