ಅಂತಾರಾಷ್ಟ್ರೀಯ ಆರ್ಥಿಕ ಮಂಡಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೧೫ ನೇ ಸಾಲು:
| website = [http://www.ifc.org/ ifc.org]
}}
 
'''ಅಂತಾರಾಷ್ಟ್ರೀಯ ಆರ್ಥಿಕ ಮಂಡಲಿ''' ಪ್ರಪಂಚದ ಹಲವಾರು ರಾಷ್ಟ್ರಗಳ, ಅದರಲ್ಲೂ ಹಿಂದುಳಿದ ದೇಶಗಳ, ಖಾಸಗಿ ಉದ್ಯಮಗಳಿಗೆ [[ಬಂಡವಾಳ]] ಒದಗಿಸುವ ಉದ್ದೇಶದಿಂದ ಈ ಅಂತಾರಾಷ್ಟ್ರೀಯ ಸಂಸ್ಥೆ (ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ - ಐ.ಎಫ್.ಸಿ) 1956ರಲ್ಲಿ ಸ್ಥಾಪಿತವಾಯಿತು. ಇದು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಂತೆ ಒಂದು ಸಾರ್ವಜನಿಕ ಸಂಸ್ಥೆ. ಅಂತಾರಾಷ್ಟ್ರೀಯ ಪುನಾರರಚನೆ ಮತ್ತು ಅಭಿವೃದ್ಧಿ ಬ್ಯಾಂಕಿನ ಒಂದು ಉಪಸಂಸ್ಥೆ. ಆದರೂ ಈ ಸಂಸ್ಥೆಗೆ ತನ್ನದೇ ಆದ ವೈಶಿಷ್ಟ್ಯ, ಸ್ವತಂತ್ರನೀತಿ ಇವೆ. ಆದರೆ ಈ ಸಂಸ್ಥೆಗೆ ಅಂತಾರಾಷ್ಟ್ರೀಯ ಬ್ಯಾಂಕಿನ ಸದಸ್ಯರು ಮಾತ್ರ ಸದಸ್ಯರಾಗಬಹುದೆಂದೂ ಮತ್ತು ಪುರ್ಣ ಪ್ರಯೋಜನ ಪಡೆಯಬಹುದೆಂದೂ ನಿಯಮವಿದೆ. 1957ರಲ್ಲಿ ವಿಶ್ವದ ಸುಮಾರು ಮೂವತ್ತೆರಡು ದೇಶಗಳು ಮಂಡಲಿಯ ಸದಸ್ಯರಾಗಿದ್ದುವು. ಪ್ರಮುಖಸದಸ್ಯ ರಾಷ್ಟ್ರಗಳಲ್ಲಿ [[ಭಾರತ]]ದೇಶ ಒಂದು. ಸಂಸ್ಥೆಯ ಅಧಿಕೃತ ಬಂಡವಾಳ ಒಂದು ಸಾವಿರ ದಶಲಕ್ಷ ಡಾಲರ್‍ಗಳು. ಈ ಪೈಕಿ ಹೂಡಿಕೆಯಾದ ಬಂಡವಾಳ 78.4 ದಶಲಕ್ಷ ಡಾಲರ್ಗಳು. ಈ ಸಂಸ್ಥೆಯ ನಾಲ್ಕನೆಯ ಸದಸ್ಯರಾಷ್ಟ್ರವಾದ ಭಾರತ ಸುಮಾರು 4.43 ದಶಲಕ್ಷ ಡಾಲರುಗಳಷ್ಟು ಹಣವನ್ನು ಬಂಡವಾಳವಾಗಿಕೊಟ್ಟಿದೆ. ಸದಸ್ಯರಾಷ್ಟ್ರಗಳಲ್ಲಿ ಅಗ್ರಸ್ಥಾನ ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಸೇರಿದೆ.
ಈ ಆರ್ಥಿಕ ಸಂಸ್ಥೆ ಅಂತಾರಾಷ್ಟ್ರೀಯ ವ್ಯವಹಾರ, ವಾಣಿಜ್ಯ, ವ್ಯವಸಾಯ ಮುಂತಾದ ಕ್ಷೇತ್ರಗಳಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ರಾಷ್ಟ್ರಗಳ ಆರ್ಥಿಕ ಬೆಳೆವಣಿಗೆ ಸಾಧಿಸಲು ಹಲವಾರು ಮಹತ್ತರವಾದ ಉದ್ದೇಶಗಳನ್ನು ಹೊಂದಿದೆ.