ಅರ್ಜೆಂಟೀನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Smartin.JPGರ ಬದಲು ಚಿತ್ರ José_de_San_Martín_(retrato,_c.1828).jpg ಹಾಕಲಾಗಿದೆ.
೮೦ ನೇ ಸಾಲು:
 
==ಚರಿತ್ರೆ==
[[File:SmartinJosé de San Martín (retrato, c.JPG1828).jpg|thumb|200px|Portrait of General [[José de San Martin]], ''[[Libertadores|Libertador]]'' of Argentina, [[Chile]] and [[Peru]]|alt=Painting of San Martín holding the Argentine flag]]
೧೬ನೆಯ ಶತಮಾನದ ಮೊದಲ ದಶಕಗಳಲ್ಲಿ [[ಸ್ಪೇನ್]] ಮತ್ತು [[ಪೋರ್ಚುಗಲ್]] ದೇಶಗಳ ಸಾಹಸಿಗ ನಾವಿಕರು ದಕ್ಷಿಣ ಅಮೆರಿಕಕ್ಕೆ ಹೋಗಿ ಅಲ್ಲಿನ ದೇಶಗಳ ಸಂಪತ್ತನ್ನು ಸೂರೆಗೊಳ್ಳಲುಪಕ್ರಮಿಸಿದಾಗ [[ಪೆರು]] ಮುಂತಾದ ದೇಶಗಳಲ್ಲಿ ಅವರು ಕಂಡ ಬೆಳ್ಳಿ ಮತ್ತು ಚಿನ್ನದ ಗಣಿಗಳನ್ನಾಗಲಿ, ಬಹುಕಾಲದಿಂದ ಬೆಳೆದು ಬಂದಿದ್ದ ನಾಗರಿಕತೆಯನ್ನಾಗಲಿ ಆರ್ಜೆಂಟೀನದಲ್ಲಿ ಕಾಣಲಿಲ್ಲ. ಅಲ್ಲದೆ ಸಣ್ಣ ಸಣ್ಣ ಪಂಗಡಗಳನ್ನು ಮಾಡಿಕೊಂಡು ಅಲ್ಲಿ ವಾಸಿಸುತ್ತಿದ್ದ ಇಂಡಿಯನ್ನರಿಂದ ಪ್ರಬಲ ಪ್ರತಿಭಟನೆಯನ್ನೆದುರಿಸಬೇಕಾಯಿತು. ಜುಆನ್ ದ ಗಾರೆ ಎಂಬ ಸ್ಪೇನಿನ ಅಧಿಕಾರಿ ೧೫೮೦ರಲ್ಲಿ ಬ್ಯೂನೆಸ್ ಐರಿಸ್ ನಗರವನ್ನು ಸ್ಥಾಪಿಸಿ ಇಂಡಿಯನ್ನರ ಪ್ರಾಬಲ್ಯವನ್ನು ಮುರಿದ ಮೇಲೆ ಅರ್ಜೆಂಟೈನ ಸ್ಪೇನಿನ ಆಡಳಿತಕ್ಕೆ ಸೇರಿತೆನ್ನಬಹುದು. ೧೭೭೬ರಲ್ಲಿ ದಕ್ಷಿಣ ಅಮೆರಿಕದಲ್ಲಿ ಸ್ಪೇನಿಗೆ ಸೇರಿದ ದೇಶಗಳನ್ನೆಲ್ಲ ಒಂದು ಪ್ರಾಂತ್ಯವನ್ನಾಗಿ ಮಾಡಿದಾಗ ಬ್ಯೂನೆಸ್ ಐರಿಸ್ ಅದರ ರಾಜಧಾನಿಯಾಯಿತು. ನೆಪೋಲಿಯನ್ನನ ಕಾಲದಲ್ಲಿ ಬ್ರಿಟಿಷರು ದೇಶವನ್ನು ಸ್ವಾಧೀನಪಡಿಸಿಕೊಳ್ಳಲೆತ್ನಿಸಿ ವಿಫಲರಾದರು. ಈ ವಿಜಯದಿಂದ ಉತ್ತೇಜಿತರಾದ ಆರ್ಜೆಂಟೀನದ ಪ್ರಜೆಗಳು ಸ್ವಾತಂತ್ರ್ಯಕ್ಕಾಗಿ ಸ್ಪೇನಿನ ವಿರುದ್ಧ ಹೋರಾಡತೊಡಗಿದರು. ಕೊನೆಗೆ ೧೮೧೦ರಲ್ಲಿ ಪ್ರಜಾಧಿಪತ್ಯ ಸ್ಥಾಪಿತವಾಯಿತು. ಆದರೂ ಸುಲಭವಾಗಿ ದೊರೆತಿದ್ದ ಇಂಥ ಸಂಪದ್ಭರಿತ ದೇಶವನ್ನು ಬಿಟ್ಟು ಕೊಡಲು ಸ್ಪೇನ್ ಒಪ್ಪಲಿಲ್ಲ; ಹೋರಾಟ ಮುಂದುವರೆಯಿತು. ೧೮೪೨ರ ಕೊನೆಗೆ ಅರ್ಜೆಂಟೀನದ ಸ್ವಾತಂತ್ರ್ಯವನ್ನು ಸ್ಪೇನ್ ಒಪ್ಪಲೇಬೇಕಾಯಿತು. ಸ್ವಾತಂತ್ರ್ಯವನ್ನು ಗಳಿಸಿದರೂ ದೇಶದಲ್ಲಿ ಅಂತರ್ಯುದ್ಧಗಳು ನಡೆಯುತ್ತಲೇ ಬಂದವು. ನೆರೆ ದೇಶಗಳೊಂದಿಗೆ ಹೋರಾಟವೂ ನಡೆಯಿತು. ಇದು ೧೯ನೆಯ ಶತಮಾನದ ಉತ್ತರಾರ್ಧದಲ್ಲೆಲ್ಲ ನಡೆಯಿತು. ಚಿಲಿ ದೇಶದೊಂದಿಗೆ ನಡೆದ ಯುದ್ಧ ನಿಂತು, ಎರಡು ದೇಶಗಳ ಗಡಿಯ ಉಸ್ಪಲಾಟ ಕಣಿವೆಯಲ್ಲಿ, ಕ್ರೈಸ್ತನ ಬೃಹತ್ ಶಿಲಾವಿಗ್ರಹವೊಂದು ೧೯೦೨ರಲ್ಲಿ ಸ್ಧಾಪಿತವಾದಾಗ ನೆರೆ ದೇಶಗಳೊಡನೆ ಯುದ್ಧ ನಿಂತಿತೆನ್ನಬಹುದು. ದೇಶದ ರಾಜಕೀಯ ಪರಿಸ್ಥಿತಿ ಮಾತ್ರ ಮುಂದೂ ಸ್ಥಿಮಿತಕ್ಕೆ ಬರಲಿಲ್ಲ. ಸೈನ್ಯದ ಸಹಾಯದಿಂದ ನಿರಂಕುಶಪ್ರಭುತ್ವ ಮುಂದುವರಿಯಿತು. ಮೊದಲ ಮಹಾಯುದ್ಧದಲ್ಲಿ ಅರ್ಜೆಂಟೈನ ತಟಸ್ಥವಾಗುಳಿದರೂ ಎರಡನೆಯ ಮಹಾಯುದ್ಧದ ಕೊನೆಯ ಕಾಲದಲ್ಲಿ ಮಿತ್ರ ರಾಷ್ಟ್ರಗಳ ಪಕ್ಷವಹಿಸಿ ಹೋರಾಟಕ್ಕಿಳಿಯಬೇಕಾಯಿತು. ೧೯೪೫ರಲ್ಲಿ ಅದಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿತು. ಸೈನ್ಯದ ಬೆಂಬಲ ಪಡೆದ ನಿರಂಕುಶಾಧಿಕಾರವಂತೂ ಇಂದಿಗೂ ಮುಂದುವರಿದಿದೆ.
 
"https://kn.wikipedia.org/wiki/ಅರ್ಜೆಂಟೀನ" ಇಂದ ಪಡೆಯಲ್ಪಟ್ಟಿದೆ