ಜೆ.ಕೆ.ರೌಲಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಸಣ್ಣ ಬದಲಾವನೆ
೩೦ ನೇ ಸಾಲು:
}}
 
ಜೋನ್ ರೌಲಿಂಗ್ ಅಥವಾ ಜೆ.ಕೆ.ರೌಲಿಂಗ್ ಬ್ರಿಟಿಷಿನ[[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷಿ]]ನ ಅತ್ಯಂತ ಶ್ರೇಷ್ಟವಾದ ಕಾದಂಬರಿಕಾರರು, ಚಿತ್ರಕಥೆಗಾರರು ಮತ್ತು ಚಲನಚಿತ್ರ ನಿರ್ಮಾಪಕರು. ಇವರು ಹುಟ್ಟಿದ್ದು ೩೧ನೇ ಜುಲೈ ೧೯೬೫ರಲ್ಲಿ ಹಾಗು ಜನಿಸಿದ್ದು ಯತೆ, ಘ್ಲೊಚೆಸ್ತೆರ್ಶಿರ್ ಇಂಗ್ಲೆಂಡಿನಲ್ಲಿ[[ಇಂಗ್ಲೆಂಡ್|ಇಂಗ್ಲೆಂಡಿ]]ನಲ್ಲಿ. ಇದಕ್ಕಿಂತ ಹೆಚ್ಚಾಗಿ ಅವರ ಜನಪ್ರಿಯವಾದ [[ಹ್ಯಾರಿ ಪಾಟರ್]] ಎಂಬ ಪುಸ್ತಕದ ಲೇಖಕಿಯಾಗಿ ಖ್ಯಾತಿಗೊಂಡಿದ್ದಾರೆ. ಈ ಪುಸ್ತಕ ಇತಿಹಾಸದಲ್ಲೇ ಅತ್ಯುತ್ತಮ ಮಾರಾಟವಾದ ಪುಸ್ತಕ ಸರಣ್ಣಿ. ರೌಲಿಂಗ್ ಅವರಿಗೆ ಈ ಪುಸ್ತಕದಿಂದ ಪ್ರಪಂಚದಾದ್ಯಂತ ಗಮನ ಹಾಗು ಹಲವಾರು ಪ್ರಶಸ್ತಿ ಸಿಕ್ಕಿದೆ. ರೌಲಿಂಗ್ ಅವರು ಲೇಖಕಗಳನ್ನು ಬರೆಯುವ ಮೊದಲು ಸಂಶೋಧಕರಾಗಿ ಮತ್ತು ದ್ವಿಭಾಷಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಜೆ.ಕೆ.ರೌಲಿಂಗ್ ಅವರ ತಂದೆ, ಪೀಟರ್ ಜೇಮ್ಸ್ ರೌಲಿಂಗ್ ಹಾಗು ಅವರ ತಾಯಿ, ಆನ್ ರೌಲಿಂಗ್. ರೌಲಿಂಗ್ ಅವರ ತಂದೆಯವರು ರೋಲ್ಸ್-ರೋಯ್ಸ್ ಎಂಜಿನಿಯರ್. ಅವರ ತಾಯಿಯವರು ವಿಜ್ಞಾನ ತಂತ್ರಜ್ಞೆ. ಜೆ.ಕೆ ರೌಲಿಂಗ್ ಅವರು ಸೆಂಟ್ ಮೈಕಲ್'ಸ್ ಪ್ರಥಮ ಶಾಲೆಯಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ವ್ಯೇದೆಯನ್ ಶಾಲಾ ಕಾಲೇಜಿನಲ್ಲಿ ತಮ್ಮ ಪ್ರೌಢಶಾಲಾಭ್ಯಾಸವನ್ನು ಪೂರ್ಣಗೊಳಿಸಿದರು.
ಬಾಲ್ಯದಿಂದಲೇ ರೌಲಿಂಗವರು ಫ್ಯಾಂಟಸಿ ಕಥೆಗಳನ್ನು ಬರೆದು ತಮ್ಮ ಸಹೋದರರಿಗೆ ಓದುತ್ತಿದ್ದರು. ಜೆ.ಕೆ.ರೌಲಿಂಗ್ ಅವರು ತಮ್ಮ ಹರೆಯದ ವರ್ಷಗಳನ್ನು ಅತೃಪ್ತಿಯಿಂದ ಕಳೆದುದ್ದಾಗಿ ಹೇಳಿದ್ದಾರೆ.
ಆ ಸಮಯದಲ್ಲಿ ಅವರ ಚಿಕ್ಕಮ್ಮ ನೀಡಿದ ಜೆಸಿಕ್ಕಾ ಮಿಟ್ ಫೋರ್ಡ್ ಅವರ 'ಹೋಂನ್ಸ್ ಮತ್ತು ರೆಬೆಲ್ಸ್' ಎಂಬ ಆತ್ಮ ಚರಿತ್ರೆ ಜೆ.ಕೆ.ರೌಲಿಂಗವರ ಜೀವನಕ್ಕೆ ಹೋಸ ಮಾರ್ಗ ನೀಡಿತ್ತು. ಸ್ಟೇವ್ ಎಡ್ದಿಯವರ ಸಹಾಯದಿಂದ ರೌಲಿಂಗವರು [[ಆಂಗ್ಲ|ಇಂಗ್ಲಿಷ್]] ಕಲಿತರು. ೧೯೮೨ರಲ್ಲಿ ರೌಲಿಂಗವರು 'ಆಕ್ಸ್ಪರ್ಡ್ ಯೂನಿವರ್ಸಿಟಿಯಲ್ಲಿ' ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಂಡರು, ಆದರೆ ಅವರನ್ನು ಸ್ವೀಕರಿಸಲಿಲ್ಲ. ೧೯೮೬ರಲ್ಲಿ ಪ್ಯಾರಿಸಲ್ಲಿ ಒಂದು ವರ್ಷ ಅಧ್ಯಯನವನ್ನು ಮೂಗಿಸಿ ನಂತರ ಅಮ್ನೆಸ್ಟಿ ಇಂಟರ್ನ್ಯಾಷನಲ್ ನಲ್ಲಿ ಸಂಶೋಧಕರಾಗಿ ಕೆಲಸ ಮಾಡಲು ಲಂಡನ್ ಗೆ ತೆರಳಿದರು.
೧೯೯೦ರಲ್ಲಿ, ನಾಲ್ಕು ಗಂಟೆ ತಡವಾಗಿದ ರೈಲ್ಲು ಪ್ರವಾಸದಲ್ಲಿ ಅವರಿಗೆ ಮಾಂತ್ರಿಕತೆ ಶಾಲೆಗೆ ಹೊಗುವ ಬಾಲಕನ ಒಂದು ಕಥೆಯು ಕಲ್ಪನೆಯಾಗಿ ತಮ್ಮ ಮನಸ್ಸಿಗೆ ಬಂದಿತು. ನಂತರ ಈ ಕಥೆಯನ್ನು ಅವರು ಬರೆಯಲು ಆರಂಭಿಸಿದರು.
ಇದ್ದಕ್ಕಿದ್ದಂತೆ ಡಿಸೆಂಬರಲ್ಲಿ, ರೌಲಿಂಗವರ ತಾಯಿ ಹತ್ತು ವರ್ಷಗಳಿಂದ ಬಳಲುತ್ತಿರುವ ಅಂಗಾಂಶ ಗಟ್ಟಿಯಾಗುವ ರೋಗದಿಂದ (ಮಲ್ಟಿಪ್ಲ್ ಸ್ಕ್ಲೆರೋಸಿಸ್) ಸತ್ತುಹೋದರು. ಇವರ ಸಾವು ರೌಲಿಂಗವರ ಬರವಣಿಗೆಯ ಮೇಲೆ ಹೆಚ್ಚು ಪ್ರಭಾವ ನೀಡಿತು.
೧೬ನೇ ಅಕ್ಟೋಬರ್ ೧೯೯೨ರಲ್ಲಿ, ಜೆ.ಕೆ.ರೌಲಿಂಗ್ [[ಪೋರ್ಚುಗೀಸ್]] ಕಿರುತೆರೆ ಪತ್ರಕರ್ತನಾದ ಜೋರ್ಜ್ ಆರ್ಯಾಂಟ್ಸ್ ಅವರನ್ನು ಮದುವೆಯಾದರು.ಆದರೆ ದುರದೃಷ್ಟದಿಂದ ಕೆಲವು ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು. ರೌಲಿಂಗವರು ಮದುವೆಯ ಜೀವನದಲ್ಲಿ ದೌರ್ಜನ್ಯಕ್ಕೆ ಒಳಗಾದವರು ಎಂದು ಜೀವನಚರಿತ್ರಕಾರರು ಸೂಚಿಸಿದ್ದಾರೆ. ರೌಲಿಂಗವರು ಡಿಸೆಂಬರ್ ೧೯೯೩ರಲ್ಲಿ, ಅವರ ಮಗಳಾದ ಜೆಸ್ಸಿಕಾ ಇಸಾಬೆಲ್ ರೌಲಿಂಗ್ ಆರ್ಯೂಂಟ್ಸ್ ಜೊತೆ ಸ್ಕಾಟ್ಲೆಂಡಿಗೆ ತಮ್ಮ ಸಹೋದರಿಯ ಬಳಿ ತೆರಳಿದರು.ವಿಶ್ವವಿದ್ಯಾಲಯದಿಂದ ತೇರ್ಗಡೆಯಾದ ಏಳು ವರ್ಷಗಳ ನಂತರ ರೌಲಿಂಗ್ ಸ್ವತಃ ತಮ್ಮನ್ನು ವೈಫಲ್ಯತೆಯಿಂದ ಕಂಡರು. ಆದರೆ ಈ ವೈಫಲ್ಯತೆಯಿಂದ ವಿಮೋಚನೆ ಹಾಗು ಇದೇ ತಮ್ಮ ಬರವಣಿಗೆಯ ಮೇಲೆ ಗಮನ ಕೊಡುವುದೆಂದು ರೌಲಿಂಗವರು ವಿವರಿಸಿದ್ದಾರೆ. ೨೬ನೇ ಡಿಸೆಂಬರ್ ೨೦೦೧ರಲ್ಲಿ, ರೌಲಿಂಗವರು ನೀಲ್ ಮೈಕೆಲ್ ಮುರ್ರೆಯ ಜೊತೆ ಎರಡನೆಯ ಮದುವೆ ಮಾಡಿಕೊಂಡರು.ಇವರ ಇಬ್ಬರು ಮಕ್ಕಳು ಡೇವಿಡ್ ಗಾರ್ಡನ್ ರೌಲಿಂಗ್ ಮುರ್ರೆ ಹಾಗು ಮೆಕೆನ್ಜ್ಯ್ ಜೀನ್ ರೌಲಿಂಗ್ ಮುರ್ರೆ. ೨೦೧೪ ಜೂನ್ ಪ್ರಕಾರ ರೌಲಿಂಗವರು ತಮ್ಮ ಈ ಕುಟುಂಬದ ಜೋತೆ ಸ್ಕಾಟ್ಲೆಂಡಲ್ಲಿ ವಾಸಿಸುತ್ತಿದ್ದಾರೆ.
೧೯೯೫ರಲ್ಲಿ, ಜೆ.ಕೆ.ರೌಲಿಂಗವರು 'ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಎಂಬ ಹಸ್ತಪ್ರತಿಯನ್ನು ಮುಗಿಸಿದರು. ಐದು ತಿಂಗಳ ನಂತರ ಈ ಪುಸ್ತಕಕ್ಕೆ 'ನೆಸ್ಲೆ ಸ್ಮಾರ್ಟೀಸ್ ಬುಕ್ ಪ್ರೈಸ್' ಎಂಬ ಮೊದಲನೆಯ ಪ್ರಶಸ್ತಿ ಸಿಕ್ಕಿತ್ತು. ಅನಂತರ ಅವರ ಕಾದಂಬರಿಗೆ ' ಬ್ರಿಟಿಷ್ ಬುಕ್ ಅವಾರ್ಡ್' ಹಾಗು 'ಚಿಲ್ದ್ರೆನ್ ಬುಕ್ ಅವಾರ್ಡ್'ಪ್ರಶಸ್ತಿಗಳು ದೊರೆಯಿತು.ರೌಲಿಂಗವರ 'ಹ್ಯಾರಿ ಪಾಟರ್ ಅಂಡ್ ದಿ ಛೇಂಬರ್ ಆಫ್ ಸೀಕ್ರೇಟ್ಸ್' ಹಾಗು 'ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಝ್ಕಬಾನ್' ಎಂಬ ಮುಂದಿನ ಪುಸ್ತಕಗಳಿಗೂ ಸ್ಮಾರ್ಟೀಸ್ ಪ್ರಶಸ್ತಿ ಬಂದಿತ್ತು. ಈ ಪ್ರಶಸ್ತಿಯನ್ನು ಮೂರು ಬಾರಿ ಜಯಿಸಿದ ಮೊದಲನೆಯ ವ್ಯಕ್ತಿ ಜೆ.ಕೆ.ರೌಲಿಂಗ್. ಜೆ.ಕೆ.ರೌಲಿಂಗ್ ಅವರ ನಾಲ್ಕನೇ ಪುಸ್ತಕ 'ಹ್ಯಾರಿ ಪಾಟರ್ ಅಂಡ್ ದಿ ಗಾಭ್ಲಿಟ್ ಆಫ್ ಫೈರ್' ಯು.ಎಸ್ ಹಾಗು ಯು.ಕೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ರೌಲಿಂಗ್ ಅವರನ್ನು ೨೦೦೦ ಬ್ರಿಟಿಷ್ ಬುಕ್ಕ್ ಅವಾರ್ಡಲ್ಲಿ ಆ ವರ್ಷದ ಲೇಖಕಿ ಎಂದು ಹೆಸರಿಸಲಾಗಿತ್ತು.
ಜೆ.ಕೆ. ರೌಲಿಂಗವರ ಮುಂದಿನ ಮೂರು ಪುಸ್ತಕಗಳು- 'ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್', 'ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲೋಸ್', 'ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್' ಬಹಳ ಪ್ರಸಿದ್ಧ ಪುಸ್ತಕಗಳಾಗಿ ಹೊರ ಬಂದಿವೆ. ರೌಲಿಂಗ್ ಅವರ ಹ್ಯಾರಿ ಪಾಟರ್ ಈಗ ಜಾಗತಿಕ ಬ್ರ್ಯಾಂಡ್. ಹಾಗೆಯೇ ಅವರ ಕೊನೆಯ ನಾಲ್ಕು ಪುಸ್ತಕಗಳು ಇತಿಹಾಸದಲ್ಲಿ ವೇಗವಾಗಿ ಮಾರಾಟವಾದ ಪುಸ್ತಕಗಳೆಂದು ದಾಖಲೆಯಾಗಿದೆ.
"https://kn.wikipedia.org/wiki/ಜೆ.ಕೆ.ರೌಲಿಂಗ್" ಇಂದ ಪಡೆಯಲ್ಪಟ್ಟಿದೆ