ಸೂತ್ರದ ಗೊಂಬೆಯಾಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಸಣ್ಣ ಬದಲಾವನೆ
ಚು ಸಣ್ಣ ಬದಲಾವನೆ
೧ ನೇ ಸಾಲು:
[[ಜನಪದ]] ಕಲಾಕ್ಷೇತ್ರದ ಅದರಲ್ಲೂ ಜನಪದ ರಂಗಭೂಮಿಯ ಒಂದು ಚಮತ್ಕಾರಯುತ ಆಕರ್ಷಕ ಕಲೆ ಸೂತ್ರದ ಗೊಂಬೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ಜೀವಂತ ವ್ಯಕ್ತಿಗಳಿಗೆ ಬದಲಾಗಿ ಗೊಂಬೆಗಳನ್ನು ಸೂತ್ರದ ಹಿಡಿತದಲ್ಲಿ ತನ್ನ ಕೈಚಳಕದಿಂದ ಆಡಿಸಿ ತೋರಿಸುವ ಸೂತ್ರಧಾರನ ಕಲಾಕುಶಲತೆ ಮೆಚ್ಚತಕ್ಕದ್ದು. ವಿಶೇಷವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು. ದೂರದಿಂದ ನೋಡುವ ಪ್ರೇಕ್ಷಕರಿಗೆ ರಂಗ ಸಜ್ಜಿಕೆಯ ಮೇಲೆ ಪಾತ್ರದ ಸಂದರ್ಭಕ್ಕನುಗುಣವಾಗಿ ಗೊಂಬೆಗಳು ಬಂದು ಪ್ರದರ್ಶನ ನೀಡಿ ಹೋಗುವುದು ಮಾತ್ರ ಕಾಣುತ್ತದೆ. ಸೂತ್ರದ ಹಿಡಿತದಲ್ಲಿ ಆಡುತ್ತಿರುವುದು ಕಾಣಿಸುವುದಿಲ್ಲ. ಆಧುನಿಕ ರೀತಿಯ ಚಲನಚಿತ್ರಗಳ ಪ್ರವೇಶವಾಗುವ ಮೊದಲು ಕಾಲಿರಿಸಿದ ಮೂಕಿ ಚಿತ್ರಗಳನ್ನು ನೆನಪಿಗೆ ತರುವ ಈ ಕಲೆ ಆ ಚಿತ್ರಗಳಿಗಿಂತ ಅನೇಕ ಪಾಲು ಆಕರ್ಷಕ ರೀತಿಯಲ್ಲಿ ಕಂಡು ಬರುತ್ತದೆ. ಈ ಕಲೆಯನ್ನು 'ಪುತ್ಥಳಿ ಗೊಂಬೆಯಾಟ’ವೆಂದೂ ಕರೆಯುತ್ತಾರೆ.
 
[[ಕನ್ನಡ]] ನಾಡಿನಲ್ಲಿ ಈ ಕಲೆ ಅತ್ಯಂತ ಪ್ರಾಚೀನತೆಯನ್ನು ಹೊಂದಿರುವುದಕ್ಕೆ ಆಧಾರಗಳಿವೆ. ವಚನಗಳಲ್ಲಿ ಇವುಗಳ ಪ್ರಸ್ತಾಪ ಬರುತ್ತದೆ. ದಾಸರ ಪದಗಳಲ್ಲಿ ಬರುವ 'ಗೊಂಬೆಯಾಟ’ ಶಬ್ದ ಹಾಗೂ ಕೆಲವು ಶಾಸನಗಳಲ್ಲಿನ ಉಲ್ಲೇಖಗಳು ಗಮನಾರ್ಹ. ಸೂತ್ರದ ಗೊಂಬೆಯಾಟಕ್ಕೂ [[ಯಕ್ಷಗಾನ]] [[ಬಯಲಾಟ]]ಕ್ಕೂ ಒಂದು ಬಗೆಯ ಸಂಬಂಧವಿದ್ದು ಅವು ಪರಸ್ಪರ ಪೂರಕವಾಗಿವೆ. ಎರಡು ಕಲೆಗಳಲ್ಲಿ ಯಾವುದು ಪ್ರಾಚೀನ ಎಂಬುದನ್ನು ಸ್ಪಷ್ಟವಾಗಿ ಹೇಳಬರುವುದಿಲ್ಲ.
೫ ನೇ ಸಾಲು:
ಸೂತ್ರದ ಗೊಂಬೆಯಾಟ ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದುಬಂದಿರುವ ಕಲೆ. ಗ್ರಾಮಾಂತರ ಪ್ರದೇಶಗಳ ಮೇಲೆ ನಾಗರಿಕತೆಯ ಪ್ರಭಾವ ಬೀಳುವುದಕ್ಕೆ ಮುಂಚೆ ಈ ಕಲೆಗೆ ಒಳ್ಳೆಯ ಆಕರ್ಷಣೆಯಿತ್ತು. ಮನರಂಜನೆಯ ಸಾಧನವಾಗಿ ಸೂತ್ರದ ಗೊಂಬೆ ಪ್ರಚಲಿತವಿದ್ದ ಕಾಲದಲ್ಲೇ ಯಕ್ಷಗಾನ-ಬಯಲಾಟ ಕಲೆಗಳು ಇದ್ದುವಾದರೂ ಈ ಕಲಾ ತಂಡಗಳು ಬಹುಶಃ ವೆಚ್ಚದ ದೃಷ್ಟಿಯಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಪ್ರದರ್ಶನ ನೀಡುವುದು ಕಷ್ಟವಾಗಿತ್ತು. ಅಂತಹ ಸನ್ನಿವೇಶದಲ್ಲಿ ಸೀಮಿತ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದ ಸೂತ್ರದ ಗೊಂಬೆಯಾಟದ ತಂಡಗಳು ಆಹ್ವಾನ ಬಂದ ಸ್ಥಳಗಳಿಗೆ ಹೋಗಿ ಪ್ರದರ್ಶನ ನೀಡುತ್ತಿದ್ದುವು. ಈ ಕಾರಣದಿಂದಾಗಿ ಸೂತ್ರ ಗೊಂಬೆ ಪೂರ್ವಕಾಲದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತ್ತು.
 
ಸೂತ್ರದ ಗೊಂಬೆಯಾಟ ಪ್ರಮುಖವಾಗಿ ತುಮಕೂರು, [[ಮೈಸೂರು]], [[ಮಂಡ್ಯ]], [[ದಕ್ಷಿಣ ಕನ್ನಡ]], ಚಿತ್ರದುರ್ಗ ಜಿಲ್ಲೆಗಳಲ್ಲಿ ಹಾಗೂ ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಈ ಕಲೆ ತಲೆತಲಾಂತರಗಳಿಂದ ಬೆಳೆದು ಬಂದಿದ್ದರೂ ಇದನ್ನೇ ಜೀವನವೃತ್ತಿಯನ್ನಾಗಿ ಅವಲಂಬಿಸಿರುವವರು ಕಡಿಮೆ. ಈ ಕಲೆ ಪ್ರಚಲಿತವಿರುವ ಪ್ರದೇಶಗಳಲ್ಲಿ ಕೆಲವು ಆಸಕ್ತ ಕುಟುಂಬಗಳು ತಮ್ಮದೇ ಆದ ಮಂಡಳಿಗಳನ್ನು ರಚಿಸಿಕೊಂಡು ಕಲಾಪ್ರದರ್ಶನ ನೀಡುತ್ತ ಬಂದಿವೆ. ಇವರಿಗೆ ಇದೇ ಮೂಲ ವೃತ್ತಿಯಲ್ಲ; ಒಂದು ಹವ್ಯಾಸ. ಇಂಥ ಜನಾಂಗದವರೇ ಈ ಕಲೆಯನ್ನು ಪ್ರದರ್ಶಿಸಬೇಕೆಂಬ ನಿಯಮ-ನಿಬಂಧನೆಗಳೂ ಇಲ್ಲ. ಈ ಕಲಾಪ್ರದರ್ಶಕರಲ್ಲಿ ವ್ಯವಸಾಯ ಹಾಗೂ ಕುಶಲಕರ್ಮಿ ಕುಟುಂಬಗಳು ಹೆಚ್ಚು.
 
ಹತ್ತರಿಂದ ಹದಿನೈದು ಕಲಾವಿದರಿಂದ ಕೂಡಿದ ಕಲಾ ತಂಡದಲ್ಲಿ ಪ್ರತಿಯೊಂದು ಗೊಂಬೆಗೂ ಹಿನ್ನೆಲೆಯಲ್ಲಿ ಒಬ್ಬೊಬ್ಬ ಸೂತ್ರಧಾರನಿರಬೇಕು. ಈ ಆಟದಲ್ಲಿ ಭಾಗವತನೇ ಪ್ರಮುಖ. ತೆರೆಯ ಮುಂದೆ ಬರುವ ಪಾತ್ರಗಳಿಗೆ ತಕ್ಕಂತೆ ಭಾಗವತನಾದವನು ಹಾಡುತ್ತಾನೆ. ಉಳಿದವರು ದನಿಗೂಡಿಸುತ್ತಾರೆ. ಗೊಂಬೆಗಳ ಕುಣಿತ ನಡೆಯುತ್ತದೆ ಪಾತ್ರಗಳಿಗೆ ತಕ್ಕ ಮಾತುಗಳನ್ನು ಆಯಾ ಪಾತ್ರಗಳ ಸೂತ್ರಧಾರರೇ ಆಡುತ್ತಾರೆ. ಮಾತಿಗೆ ತಕ್ಕಂತೆ ಸೂತ್ರದ ಮೂಲಕ ಗೊಂಬೆಗಳ ಅಂಗಚಲನೆ, ಭಾವಾಭಿನಯ ವ್ಯಕ್ತವಾಗುತ್ತದೆ.
"https://kn.wikipedia.org/wiki/ಸೂತ್ರದ_ಗೊಂಬೆಯಾಟ" ಇಂದ ಪಡೆಯಲ್ಪಟ್ಟಿದೆ