ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
 
ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೬ ಪುಟದಿಂದ
೧ ನೇ ಸಾಲು:
{{under construction}}
=ವಿಕಿಪೀಡಿಯದಲ್ಲಿ ವ್ಯಕ್ತಿಗಳ ಪುಟಗಳನ್ನು ಸೇರಿಸುವ ನೀತಿನಿಯಮಗಳ ಬಗ್ಗೆ==
 
‍ಕನ್ನಡ ವಿಕಿಪೀಡಿಯ ಪುಟದಲ್ಲಿ ವ್ಯಕ್ತಿಗಳ ಬಗ್ಗೆ ಪುಟಗಳನ್ನು ಸೇರಿಸುವಾಗ ಸಂಪಾದಕರು ಗಮನಕ್ಕೆ ತೆಗೆದುಕೊಳ್ಳಬೇಕಾದ ಮಾನದಂಡಗಳ ಬಗ್ಗೆ ಚರ್ಚೆ ಮಾಡಿ ನಿಯಮಗಳನ್ನು ರೂಪಿಸಬೇಕಿದೆ. ಈ ಕೆಳಗೆ ಕೆಲವು ಅಂಶಗಳನ್ನು ಚರ್ಚೆಗೆ ಕೊಡಲಾಗಿದೆ. ವಿಕಿಪೀಡಿಯ ಸಂಪಾದಕರು ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸಬಹುದು.
 
===ಲೇಖಕ/ಲೇಖಕಿಯರು===
* ಸ್ಥಳೀಯವಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ತನ್ನ ಬರೆವಣಿಗೆಯಿಂದ ಗುರುತಿಸಲ್ಪಟ್ಟಿರಬೇಕು ಮತ್ತು ಅವರ ಕನಿಷ್ಠ ಐದು ಪುಸ್ತಕಗಳು ಬಿಡುಗಡೆಗೊಂಡಿರಬೇಕು.
* ರಾಜ್ಯಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಪ್ರಶಸ್ತಿ/ಮನ್ನಣೆಯನ್ನು ಗಳಿಸಿರಬೇಕು.
* ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ ಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು.
* ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.
 
===ಚಲನಚಿತ್ರ ನಟನಟಿಯರು===
* ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು.
* ಅವರು ಕನಿಷ್ಟ ಎರಡು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು.
 
===ಆಟಗಾರರು===
* ಆ ವ್ಯಕ್ತಿ ಕನಿಷ್ಠ ದೇಶೀಯ ಮಟ್ಟದಲ್ಲಿ ಒಂದು ರಾಜ್ಯವನ್ನು ಪ್ರತಿನಿಧಿಸಿರಬೇಕು.
* ಕನಿಷ್ಠ ೫ ಪ್ರಶಸ್ತಿಗಳನ್ನು ಪಡೆದಿರಬೇಕು.
 
===ಕಲಾವಿದರು===
* ಕನಿಷ್ಟ ೫೦ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಟ್ಟಿರಬೇಕು.
* ಈ ವಿಚಾರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಕಟವಾಗಿರಬೇಕು.
* ಕನಿಷ್ಟ ಒಂದು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತನಾಗಿರಬೇಕು.
 
===ರಾಜಕೀಯ ವ್ಯಕ್ತಿಗಳು===
* ಕನಿಷ್ಠ ೫೦೦೦ ಜನರನ್ನು ‍ಪ್ರತಿನಿಧಿಸಬೇಕು‍.
* ಪ್ರತಿಷ್ಟಿತ ಪತ್ರಿಕೆಗಳಲ್ಲಿ ಕನಿಷ್ಠ ಮೂರು ಲೇಖನಗಳು ಪ್ರಕಟವಾಗಿರಬೇಕು.
* ಪ್ರಕಟವಾದ ಲೇಖನಗಳು ಅವರ ವ್ಯಕ್ತಿತ್ವವಲ್ಲದೆ ಕೆಲಸಗಳನ್ನು ಸೂಚಿಸುವಂತಿರಬೇಕು.‍‍‍
 
(ಹಿಂದೊಮ್ಮೆ ಅರಳಿಕಟ್ಟೆಯಲ್ಲಿ ನಡೆದ [[https://kn.wikipedia.org/wiki/ವಿಕಿಪೀಡಿಯ:ಅರಳಿ_ಕಟ್ಟೆ/ಕಾರ್ಯನೀತಿ_ಚರ್ಚೆ-archive೬#.E0.B2.B5.E0.B2.BF.E0.B2.95.E0.B2.BF.E0.B2.AA.E0.B3.80.E0.B2.A1.E0.B2.BF.E0.B2.AF.E0.B2.A6.E0.B2.B2.E0.B3.8D.E0.B2.B2.E0.B2.BF_.E0.B2.B5.E0.B3.8D.E0.B2.AF.E0.B2.95.E0.B3.8D.E0.B2.A4.E0.B2.BF.E0.B2.97.E0.B2.B3_.E0.B2.AA.E0.B3.81.E0.B2.9F.E0.B2.97.E0.B2.B3.E0.B2.A8.E0.B3.8D.E0.B2.A8.E0.B3.81_.E0.B2.B8.E0.B3.87.E0.B2.B0.E0.B2.BF.E0.B2.B8.E0.B3.81.E0.B2.B5_.E0.B2.A8.E0.B3.80.E0.B2.A4.E0.B2.BF.E0.B2.A8.E0.B2.BF.E0.B2.AF.E0.B2.AE.E0.B2.97.E0.B2.B3_.E0.B2.AC.E0.B2.97.E0.B3.8D.E0.B2.97.E0.B3.86|ಚರ್ಚೆಯಿಂದ]])