ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೮ ನೇ ಸಾಲು:
 
== ಎಲೆಗಳ ರಚನೆ ==
ದಾಸವಾಳದಂಥ[[ದಾಸವಾಳ]]ದಂಥ ಒಂದು ಸಾಮಾನ್ಯ ರೀತಿಯ ಎಲೆಗೆ ಒಂದು ಬುಡವೂ ಒಂದು ತೊಟ್ಟೂ ಒಂದು ಪತ್ರ ಭಾಗವೂ ಇವೆ. ಬುಡದ ಇಕ್ಕೆಲದಲ್ಲೂ ವೃಂತಪರ್ಣಗಳು (ಸ್ಟಿಫ್ಯೂಲ್) ಕಾಣಬರುತ್ತವೆ. ಪತ್ರದ ಉದ್ದಕ್ಕೂ ಮಧ್ಯದಲ್ಲಿ ಒಂದು ದೊಡ್ಡ ನಾಳವೂ ಇದರ ಎರಡು ಕಡೆಗಳಲ್ಲಿಯೂ ಸಣ್ಣ ನಾಳಗಳೂ ಇವುಗಳ ಕವಲುಗಳೂ ಇರುವುವು. ಎಲಚಿಯಂಥ ಎಲೆಗಳಲ್ಲಿ, ಮೂರು ಮುಖ್ಯವಾದ ನಾಳಗಳಿರುತ್ತವೆ. ಇಂಥ ಎಲೆಗೆ ಮಲ್ಟಿಕಾಸ್ಟೇಟ್ ಎನ್ನುವರು. ಕಾವಿನ ಒಳಗೂ ನಾಳಗಳಿದ್ದು, ಇವು ಕಾಂಡದಲ್ಲಿರುವ ನೀರಿನ ಮತ್ತು ಆಹಾರದ ಕೊಳವೆಗಳ ಸಮೂಹವನ್ನು ಸೇರಿಕೊಳ್ಳುತ್ತವೆ. ಎಲೆಯ ನಾಳಸಮೂಹ ದ್ವಿದಳ ಸಸ್ಯಗಳಲ್ಲಿ ಬಲೆಯ ರೂಪದಲ್ಲಿಯೂ ಏಕದಳಸಸ್ಯಗಳಲ್ಲಿ ಸಮಾನಾಂತರವಾಗಿಯೂ ಜರಿಗಿಡಗಳಲ್ಲಿ ಕವಲೊಡೆಯುವ ರೀತಿಯಲ್ಲಿಯೂ ಇರುತ್ತದೆ. ಆದರೆ ಈ ಸೂತ್ರಕ್ಕೆ ವಿರೋಧ ವಾಗಿ ಕೆಸವಿನ ದಂಟು ಮುಂತಾದ ಏಕದಳ ಸಸ್ಯಗಳಲ್ಲಿ ಬಲೆಯ ರೀತಿಯ ನಾಳಜಾಲವೂ ಸುರಹೊನ್ನೆಯಂಥ ದ್ವಿದಳ ಸಸ್ಯಗಳಲ್ಲಿ ಸಮಾನಾಂತರ ರೀತಿಯ ನಾಳಸಮೂಹವೂ ಇರುವುದುಂಟು. ಗೊಡ್ಡೀಚಲಿನ (ಸೈಕಾಸ್) ಪತ್ರ ಭಾಗಗಳಲ್ಲಿ ಮಧ್ಯದ ನಾಳ ಎಡಬಲಕ್ಕೆ ಕವಲೊಡೆಯು ವುದೇ ಇಲ್ಲ. ಹರಳೆಲೆಯಲ್ಲಿ, ಮುಖ್ಯವಾದ ನಾಳಗಳು ಹಸ್ತದ ಬೆರಳುಗಳನ್ನು ಹೋಲುವ ರೀತಿಯಲ್ಲಿ ಇರುತ್ತವೆ. ನಾಳಸಮೂಹಗಳಿಂದ ಎಲೆಯ ಹಸಿರು ಜೀವಕಣಗಳಿಗೆ ನೀರೂ ಲವಣಗಳೂ ಒದಗುವುದಲ್ಲದೆ, ಇವುಗಳಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಗಿಡದ ಇತರ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಾಳ ಸಮೂಹಗಳು ಎಲೆಯ ರಚನೆಗೆ ಆಧಾರವಾಗಿದ್ದು, ತೆಳುವಾಗಿದ್ದರೂ ಅವು ಗಾಳಿಯ ಹೊಡೆತವನ್ನು ತಡೆಯುವ ಶಕ್ತಿಯನ್ನು ಕೊಡುತ್ತವೆ. ಆದರೆ ಬಾಳೆಯ ಎಲೆಯ ಅಂಚಿನಲ್ಲಿ ಈ ತರಹ ರಚನೆ ಇಲ್ಲದ ಕಾರಣ ಅದು ಬೇಗನೆ ಹರಿದುಹೋಗುತ್ತದೆ.
 
ಕೆಲವು ಎಲೆಯ ಮೈಮೇಲೆ ಕೂದಲುಗಳೂ ಹೂವರ್ಚಿಯಲ್ಲಿರುವಂತೆ ಸಣ್ಣಸಣ್ಣ ಪೊರೆಗಳೂ ಇರುವುದುಂಟು. ಇವುಗಳಿಂದ ಎಲೆಗಳ ಆವಿ ಹೊರಹೊಮ್ಮುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಎಲೆಯ ಅಂಚಿನಲ್ಲಿ ಮುಳ್ಳುಗಳಿದ್ದು (ಉಮ್ಮತ್ತಿ) ಅಥವಾ ಎಲೆಯ ವೃಂತಪರ್ಣಗಳು ಮುಳ್ಳುಗಳಾಗಿದ್ದು (ಎಲಚಿ) ಅಥವಾ ಪುರ್ಣ ಎಲೆಯೇ ಮುಳ್ಳಿನ ರೀತಿಯಲ್ಲಿದ್ದು (ಪಾಪಸುಕಳ್ಳಿ) ಆಡು ಮುಂತಾದ ಪ್ರಾಣಿಗಳಿಂದ ಈ ಗಿಡಗಳಿಗೆ ರಕ್ಷಣೆಯನ್ನು ದೊರಕಿಸುತ್ತದೆ. ನಿಂಬೆ, ನಾಗದಾಳಿ, ಯೂಕಲಿಪ್ಟಸ್, ವೀಳೆಯದೆಲೆ, ಕರಿಬೇವಿನ ಸೊಪ್ಪು ಮುಂತಾದ ಗಿಡಗಳ ಎಲೆಗಳಲ್ಲಿ, ತೈಲವಿರುತ್ತದೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ