ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೯ ನೇ ಸಾಲು:
| portaldisp =
}}
'''ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್''',' ಸ್ಪಾನಿಷ್ ಭಾಷೆಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು ಬರೆದು, ತಾನು ಹುಟ್ಟಿ ಬೆಳೆದ ಲ್ಯಾಟಿನ್ ಅಮೆರಿಕದ ಸರ್ಕಾರದ ನೀತಿ, ಅಸಮಾನತೆ, ಜನರ ಚಿಂತೆನೆ, ಭಾವನೆಗಳು, ಕಂದಾಚಾರದ ಆಚರಣೆಗಳನ್ನು ತಮ್ಮ ಅದ್ಭುತ ಬರವಣಿಗೆಯ ಮೂಲಕ ಜನಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾದರು.
==ಜನನ, ವಿದ್ಯಾಭ್ಯಾಸ, ಲೇಖಕನಾಗಿ==
'''ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್''' ಲ್ಯಾಟಿನ್ ಅಮೇರಿಕಾದ [[ಕೊಲಂಬಿಯಾ]]ದ ಸಣ್ಣ ಗ್ರಾಮ,'ಅರಕಟಕ'ದಲ್ಲಿ 192೭ರ, ಮಾರ್ಚ್, ೬ ರಂದು ಜನಿಸಿದರು. ತನ್ನ ತಾತ-ಅಜ್ಜಿ, ಹಾಗೂ ಚಿಕ್ಕಮ್ಮ ನ ಆರೈಕೆಯಲ್ಲಿ ಬಾಲ್ಯವನ್ನು ಕಳೆದರು. ಕೊಲಂಬಿಯಾದ 'ಸಾವಿರ ದಿನಗಳು ಯುದ್ದ'ದಲ್ಲಿ ಕರ್ನಲ್ ಆಗಿದ್ದ ತಾತ, ತನ್ನ ಯೌವನದ ಸಾಹಸ ಕತೆಗಳನ್ನು ಹೇಳುತ್ತಾ, ಹೇಳುತ್ತಾ ಇತಿಹಾಸಕ್ಕೂ ನನಗೂ ಕಳ್ಳುಬಳ್ಳಿಯಾಗಿದ್ದ ಎನ್ನುತ್ತಾನೆ ಮಾರ್ಕ್ವೆಜ್. ಅಜ್ಜಿ ಕಟ್ಟುಕತೆಗಳನ್ನು ಹೇಳುವುದರಲ್ಲಿ ನಿಷ್ಣಾತೆ. ಕುಟುಂಬದವರ ಜೀವನ ಕತೆಗಳನ್ನು ಸಹ ಅವಳ ಕನಸಿನಲ್ಲಿ ಪಡೆದ ಸಂದೇಶಗಳನ್ನು ಅನುಸರಿಸಿ ಕಟ್ಟುತ್ತಿದ್ದಳು. ವಾಸ್ತವವನ್ನು ಅಲೌಕಿಕತೆ, ಯಕ್ಷಿಣೀ ಗುಣ ಹಾಗು ಮೂಢಾಚಾರಣೆಯ ನೋಟದಿಂದ ಅರಿಯಬಹುದು, ಎಂಬ ತಿಳುವಳಿಕೆಯನ್ನು ಅವಳಿಂದಲೇ ಅವನು ಕಲಿತದ್ದು. 20ನೇ ವಯಸ್ಸಿನಲ್ಲಿ 'ಸಾಯದೆ ಬದುಕಬೇಕೆಂದರೆ ಬರೆಯಲೇ ಬೇಕು' ಎಂಬ ಹಂಬಲದಲ್ಲಿ ಮಾಕ್ರ್ವೆಜ್ ಬರವಣಿಗೆ ಶುರುಮಾಡುತ್ತಾನೆ.