ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
 
“ಉದ್ದೇಶದ ಪ್ರಾಧಾನ್ಯತೆ, ಉಪಕರಣಗಳ ಮಿತತ್ವ ಮತ್ತು ದಿಗಿಲುಗೊಳಿಸುವಂತಹ ಫಲಿತಾಂಶಗಳು ಓರ್ವ ವ್ಯಕ್ತಿಯ ಶ್ರೇಷ್ಠತೆಯನ್ನು ಅಳೆಯಲು ಮೂರು ಮಾನದಂಡಗಳಾಗಿದ್ದರೆ, ಮುಹಮ್ಮದ್ರೊಂದಿಗೆ ಆಧುನಿಕ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಹೋಲಿಸಲು ಧೈರ್ಯಪಡುವವರಾರು? ಅತಿಪ್ರಸಿದ್ಧ ವ್ಯಕ್ತಿಗಳು ಕೇವಲ ಶಸ್ತ್ರಾಸ್ತ್ರ, ಕಾನೂನು ಮತ್ತು ಸಾಮ್ರಾಜ್ಯಗಳನ್ನಷ್ಟೇ ನಿರ್ಮಿಸಿದರು. ಕೊನೆಗೆ ಅವರು ಏನನ್ನಾದರೂ ಸಾಧಿಸಿದ್ದರೆ ಅದು ಅವರ ಕಣ್ಣುಗಳ ಮುಂದೆಯೇ ನಿರಂತರವಾಗಿ ಹೊಸಕಿ ಹಾಕಲ್ಪಡುತ್ತಿದ್ದ ಭೌತಿಕ ಅಧಿಕಾರಗಳಲ್ಲದೆ ಬೇರೇನೂ ಆಗಿರಲಿಲ್ಲ. ಆದರೆ ಈ ವ್ಯಕ್ತಿ (ಮುಹಮ್ಮದ್) ಸೈನ್ಯಗಳನ್ನೂ, ಶಾಸನಗಳನ್ನೂ, ಸಾಮ್ರಾಜ್ಯಗಳನ್ನೂ, ಜನರನ್ನೂ, ರಾಜವಂಶಗಳನ್ನೂ ಮುನ್ನಡೆಸಿದ್ದು ಮಾತ್ರವಲ್ಲದೆ ಅಂದಿನ ಜಾಗತಿಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದ ಕೋಟ್ಯಂತರ ಜನತೆಯನ್ನು ಮುನ್ನಡೆಸಿದ್ದರು. ಅದಕ್ಕಿಂತ ಮಿಗಿಲಾಗಿ ಅವರು (ಜನರಲ್ಲಿ ಮನೆಮಾಡಿದ್ದ) ಬಲಿಪೀಠಗಳು, ದೇವರುಗಳು, ಧರ್ಮಗಳು, ಪರಿಕಲ್ಪನೆಗಳು, ನಂಬಿಕೆಗಳು ಮತ್ತು ಆತ್ಮಗಳೆಲ್ಲವನ್ನೂ ಬದಲಾಯಿಸಿದರು.ಗೆದ್ದಾಗ ಅವರಿಗಿದ್ದ ಆತ್ಮಸಂಯಮ, ಅವರ ಮಹತ್ವಾಕಾಂಕ್ಷೆ, ಎಲ್ಲವನ್ನೂ ಸಂಪೂರ್ಣವಾಗಿ ಒಂದೇ ಗುರಿಯತ್ತ ಸಮರ್ಪಿಸಲಾಗಿತ್ತು. ಇದು ಯಾವುದೇ ರೀತಿಯಲ್ಲೂ ಒಂದು ಸಾಮ್ರಾಜ್ಯ ಸ್ಥಾಪನೆಯತ್ತ ನಡೆಸಿದ ಹೋರಾಟವಾಗಿರಲಿಲ್ಲ. ಅವರ ಕೊನೆಯಿಲ್ಲದ ಪ್ರಾರ್ಥನೆಗಳು, ತನ್ನ ದೇವನೊಡನೆ ನಡೆಸುವ ನಿಗೂಢ ಸಂಭಾಷಣೆಗಳು, ಅವರ ಮರಣ ಮತ್ತು ಮರಣಾನಂತರದ ವಿಜಯ, ಎಲ್ಲವೂ ಅವರೊಬ್ಬ ವಿಶಿಷ್ಠ ವ್ಯಕ್ತಿಯಾಗಲು ಬಯಸಿದ ನಯವಂಚಕನೆಂದು ದೃಢೀಕರಿಸುವುದಿಲ್ಲ. ಬದಲಾಗಿ ಒಂದು ಸಿದ್ಧಾಂತವನ್ನು ಸಂರಕ್ಷಿಸುವುದಕ್ಕಾಗಿ ಅವರಿಗೆ ಶಕ್ತಿ ನೀಡುತ್ತಿರುವ ಒಂದು ಬಲಿಷ್ಠವಾದ ವಿಶ್ವಾಸದಾರ್ಢ್ಯತೆಯು ಅವರಲ್ಲಿತ್ತೆಂಬುದನ್ನು ದೃಢೀಕರಿಸುತ್ತದೆ. ಈ ಸಿದ್ಧಾಂತವು ಎರಡೆಸಲಿನಂತಿದೆ.ದೇವನ ಏಕತ್ವ ಮತ್ತು ದೇವನ ಅಭೌತಿಕತೆ. ಮೊದಲನೆಯದು ದೇವನು ಏನು ಎಂಬುದನ್ನು ಸೂಚಿಸುತ್ತದೆ ಮತ್ತು ಎರಡನೆಯದು ದೇವನು ಏನು ಅಲ್ಲ ಎಂಬುದನ್ನು ಸೂಚಿಸುತ್ತದೆ. ಒಂದು ಖಡ್ಗದೊಂದಿಗೆ ಮಿಥ್ಯ ದೇವರುಗಳನ್ನು ಕಿತ್ತೊಗೆಯುವಾಗ ಮತ್ತೊಂದು ಮಾತುಗಳ ಮೂಲಕ ಚಿಂತನೆಗಳಿಗೆ ಚಾಲನೆ ನೀಡುತ್ತದೆ. ತತ್ವಜ್ಞಾನಿ, ವಾಗ್ಮಿ, ಧರ್ಮಪ್ರಚಾರಕ, ಶಾಸನಕಾರ, ಯೋಧ, ಊಹೆಗಳನ್ನು ದಮನಿಸಿದವನು, ವೈಚಾರಿಕ ಸಿದ್ಧಾಂತಗಳ, ಪ್ರತಿಮೆಗಳಿಲ್ಲದ ಉಪಾಸನಾ ಪದ್ಧತಿಯ ಸಂರಕ್ಷಕ, ಇಪ್ಪತ್ತು ಭೂಸಾಮ್ರಾಜ್ಯಗಳ ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸ್ಥಾಪಕ, ಅವರೇ ಮುಹಮ್ಮದ್. ಮನುಷ್ಯ ಶ್ರೇಷ್ಠತೆಯನ್ನಳೆಯುವ ಸರ್ವ ಮಾನದಂಡಗಳನ್ನು ಬಳಸಿ ಪರಿಶೋಧಿಸಿದ ನಂತರ ಖಂಡಿತವಾಗಿಯೂ ನಾವು ಕೇಳುವೆವು. ಮುಹಮ್ಮದ್ರಿಗಿಂತಲೂ ಶ್ರೇಷ್ಠವಾದ ವ್ಯಕ್ತಿ ಯಾರಾದರೂ ಇದ್ದಾರೆಯೇ? A. De Lamartine [Histoire de la Turquie, Paris, 1854, Vol. II, pp. 276
 
 
'''ಮಹಾತ್ಮಾ ಗಾಂಧಿ :'''
 
“ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿದ ಓರ್ವ ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯಬಯಸಿದ್ದೆ…. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ನಿಷ್ಕಾಪಟ್ಯತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ತನ್ನ ಸ್ನೇಹಿತರು ಮತ್ತು ಅನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಇವುಗಳಾಗಿದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೇನೂ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.” M. K Gandhi, Young India, September 23, 1924
 
 
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ