Content deleted Content added
No edit summary
No edit summary
೨೮ ನೇ ಸಾಲು:
# [[ಕಾಲಾ ಘೋಡ]],
(suMkadavar ೦೫:೦೧, ೨೬ ಸೆಪ್ಟೆಂಬರ್ ೨೦೧೫ (UTC))
ನಾನು ಮುಂಬಯಿನಗರಕ್ಕೆ ಬಂದಾಗಿನಿಂದ 'ಕಾಲಾಘೋಡ' ಎಂಬ ಸ್ಥಳದ ಬಗ್ಗೆ, ನನ್ನ ಗೆಳೆಯರು ಮಾತಾಡಿಕೊಳ್ಳುತ್ತಿದ್ದ ವಿಚಾರ ಕೇಳಿ. ಹಾಗಂದರೇನು ಎಂದು ಅಚ್ಚರಿಪಡುತ್ತಿದ್ದೆ. ಯಾರಬಳಿಯೂ ನನ್ನಆಸಕ್ತಿಯನ್ನು ತಣಿಸುವ ಉತ್ತರ ಸಿಕ್ಕಲಿಲ್ಲ. ಇಂಗ್ಲೀಷ್ ವಿಕಿಪೀಡಿಯವನ್ನು ನಂತರ ಹಲವು ವರ್ಷಗಳ ನಂತರ ಮೊರೆಹೋದೆ. ಆಗ ಕಂಪ್ಯೂಟರ್ ಬಳಕೆ ಇರಲೇ ಇಲ್ಲ. ನಾನು ೧೯೯೭-೯೮ ರಲ್ಲಿ ನನ್ನ ಮಗ ಕೊಂಡುತಂದ ಪುಸ್ತಕ,'ಬಾಂಬೆ ದ ಸಿಟೀಸ್ ವಿದ್ ಇನ್' ಎಂಬ ಶಾರದಾ ದ್ವಿವೇದಿ, ರಾಜೀವ್ ಮೆಹ್ರೊತ್ರ, ರಚಿಸಿದ ಅತ್ಯಂತ ಮಾಹಿತೀಪೂರ್ಣ ಸಚಿತ್ರಪುಸ್ತಕ ಓದಿದ ಮೇಲೆ ಹಲವಾರು ಮಾಹಿತಿಗಳು ನಿಖರವಾಗಿ ತಿಳಿದವು. ಆಗಲೇ ನಾಟುನಾನು ಜೆ.ಆರ್.ಡಿ.ಟಾಟರವರ ಬಗ್ಗೆ ಬಗಳವಾಗಿ ಅಧ್ಯಯನ ಮಾಡಿದೆ. ಮುಂದೆ ನನಗೆ ಬುದ್ಧಿಬಂದು ಕನ್ನಡ ವಿಕೀಪೀಡಿಯ ಮುಟ್ಟುವ ಆತ್ಮವಿಶ್ವಾಸ ೨೦೦೬ ರಲ್ಲಿ ಬಂದಾಗ, ಇಂಗ್ಲೀಷ್ ವಿಕೀಪೀಡಿಯದ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಲೇಖನ ಓದಿ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನಮಾಡಿದಾಗ ಕೆಲವು ತೃಟಿಗಳು ಕಣ್ಣಿಗೆ ಬಿದ್ದವು. ಯಾವ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯದ ಶಿಲಾನ್ಯಾಸಮಾಡಿದನೋ, ಯಾರ ಹೆಸರಿನಲ್ಲಿ ಆ ಸಂಸ್ಥೆ ಪ್ರಸಿದ್ಧಿ ಪಡೆದಿದೆಯೋ ಆತನ ಬಗ್ಗೆ ತಪ್ಪಾಗಿ ದಾಖಲಿಸಲಾಗಿತ್ತು. ಆಗ ನಾನು ಒಂದು ದಿನ ಮ್ಯೂಸಿಯಂಗೆ ಭೇಟಿನೀಡಿ 'ಕ್ಯುರೇಟರ್' ನ್ನು ಸಂಪರ್ಕಿಸಿ, ಅವರಿಗೆ ತಪ್ಪನ್ನು ವಿವರಿಸಿದೆ. ಅವರಿಗೆ ತಕ್ಷಣ ಆಗುಂತಕ ವೃದ್ಧನೊಬ್ಬ ಅವರ ವಲಯವನ್ನು ಪ್ರವೇಶಿಸಿ ಈ ತರಹದ ವಿವರಣೆ ಕೊಟ್ಟ ವರಸೆ ಹಿಡಿಸಲಿಲ್ಲ. ಅವರಿಗೆ ಮನದಟ್ಟುಮಾಡಲು ನನಗೆ ಬಹಳ ಸಮಯವೇ ಹಿಡಿಯಿತು. ಮ್ಯೂಸಿಯಂ ಮುಂಭಾಗದ ಪ್ರಿನ್ಸ್ ಆಫ್ ವೇಲ್ಸ್ ರ ಪುಥಳಿಯ ಫೋಟೋ (ಮುಂದೆ ಚಕ್ರವರ್ತಿಯ ಪದವಿಯನ್ನು ಗಳಿಸಿದ ೫ ನೆಯ ಜಾರ್ಜ್ ದೊರೆಗಳ)ತೆಗೆಯಲು ಪರವಾನಗಿಗಾಗಿ ಹರಸಾಹಸ ಮಾಡಬೇಕಾಗಿ ಬಂತು. ಮನೆಗೆ ಬಂದು ತಕ್ಷಣ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಮತ್ತು 'ಕಾಲಾಘೋಡ'ದ ಬಗ್ಗೆ ನನ್ನದೇ ಚಿತ್ರಮಾಹಿತಿಗಳನ್ನು ಅಳವಡಿಸಿ, ಲೇಖನವನ್ನು ಬರೆದು 'ವೆಬ್' ನಲ್ಲಿ ಸೇರಿಸಿದೆ. ಇಂದಿಗೂ ಅದು ಅತ್ಯಂತ ಮಾಹಿತಿಪೂರ್ಣ ಲೇಖನ ಎಂಬ ಆತ್ಮ ವಿಶ್ವಾಸ ನನಗಿದೆ. ಮುಂಬಯಿನಗರದ ಬೈಕುಲ್ಲಾ ಜಿಲ್ಲೆಯ 'ರಾಣಿ ಬಾಗ್' ಗೆ ಹೋಗಿ ಅಲ್ಲಿದ್ದ 'ಪ್ರಿನ್ಸ್ ಆಫ್ ವೇಲ್ಸ್'(೭ ನೆಯ ಕಿಂಗ್ ಎಡ್ವರ್ಡ್) ಪುಠಳಿಯ ಚಿತ್ರ ತೆಗೆದು ಅದನ್ನು ವಿಕಿಲೇಖನಕ್ಕೆ ಅಳವಡಿಸಿದೆ. 'ಇಂಗ್ಲೀಷ್ ವಿಕಿಪೀಡಿಯದ ಆಗಿನ ನಿರ್ವಾಹಕ'ರೊಬ್ಬರು ನನಗೆ ಧನ್ಯವಾದ ತಿಳಿಸಿದ್ದಲ್ಲದೆ ಅದನ್ನು ಸರಿಪಡಿಸಿದ ದಾಖಲೆಯನ್ನು ಇಂದಿಗೂ ಕಾಣಬಹುದು.
# [[ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬೈ]],
# [[ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬೈ]],
"https://kn.wikipedia.org/wiki/ಸದಸ್ಯ:Radhatanaya" ಇಂದ ಪಡೆಯಲ್ಪಟ್ಟಿದೆ