ಮುಮ್ಮಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು {{commonscat|Krishnaraja Wadiyar III}}
೪ ನೇ ಸಾಲು:
==ಕಂಪೆನಿ ಸರಕಾರದ ಶರತ್ತುಗಳು==
ಬ್ರಿಟಿಷರು ಒಪ್ಪಂದದಲ್ಲಿ ಆಂತರಿಕ ಆಡಳಿತವನ್ನು ಮಾತ್ರ ನಿರ್ವಹಿಸತಕ್ಕದ್ದೆಂದೂ; ಉಳಿದ ಎಲ್ಲಾ ಹೊರ ವ್ಯವಹಾರಗಳೂ [[ಈಸ್ಟ್ ಇಂಡಿಯ ಕಂಪನಿ]] ಸರ್ಕಾರದವೆಂದೂ ಷರತ್ತು ವಿಧಿಸಿದರು. ಮತ್ತು ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳುಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕೆಂದು ತೀರ್ಮಾನಿಸಲಾಯಿತು. ಒಪ್ಪಂದದ ಕಾಲದಲ್ಲಿ ಅರಮನೆಯ ಅಪಾರ ಐಶ್ವರ್ಯ ಬ್ರಿಟಿಷರ ಪಾಲಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸ ಮತ್ತು ತರಬೇತಿಯ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಮಹಾರಾಣಿಯವರು ೧೮೧೦ ರಲ್ಲಿ ಮರಣಿಸಿದರು. ನಂತರ ಅಧಿಕಾರ ವಹಿಸಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರು ಹೆಚ್ಚುಕಾಲ ಅಧಿಕಾರ ನಡೆಸಲು ಬ್ರಿಟಿಷ್ ಆಡಳಿತ ಅವಕಾಶ ಕೊಡಲಿಲ್ಲ. ಸರಿಯಾಗಿ ಕಪ್ಪ ಕೊಡಲಿಲ್ಲವೆಂಬ ನೆಪದಿಂದ ಆಗಿನ [[ಗೌರ್ನರ್ ಜನರಲ್]] [[ವಿಲಿಯಂ ಬೆಂಟಿಂಕ್]] , ಆಡಳಿತ ನಡೆಸಲು [[ಲುಷಿಂಗ್ಟನ್ ಕಬ್ಬನ್]] ಎಂಬ ಅಧಿಕಾರಿಗಳನ್ನು ನೇಮಿಸಿದನು .
 
==ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತ==
ಅತ್ಯಂತ ಸೀಮಿತ ಅವಧಿಯಲ್ಲಿಯೇ ಮುಮ್ಮಡಿ ಕೃಷ್ಣರಾಜರ ಆಡಳಿತ ತುಂಬಾ ಜನಪರವಾಗಿತ್ತು. ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಪ್ರಥಮವಾಗಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳು ಆರಂಭವಾದವು. ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳು ಆರಂಭವಾದವು. [[ಶಿವನಸಮುದ್ರ]]ದ ಬಳಿ [[ಕಾವೇರಿ ನದಿ]]ಗೆ ಸೇತುವೆ ನಿರ್ಮಾಣವಾಯಿತು. ಮೈಸೂರು ನಗರದಲ್ಲಿ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿದವು .