ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೮ ನೇ ಸಾಲು:
ಸಹಾಯದಿಂದ ಇವು ನಿಯಂತ್ರಿತ ಪ್ರಮಾಣದಲ್ಲಿ ಎಂಜಿನ್ನಿಗೆ ಹೋಗುವಂತೆ ಮಾಡುತ್ತಾರೆ.
[[ಚಿತ್ರ:V-2 rocket diagram (with English labels).svg|thumbnail]]
 
ಬಹುಹಂತ ರಾಕೆಟ್ಟುಗಳು
 
ಭಾರವಾದ ಹೊರೆಯನ್ನು ಎತ್ತುವುದು ಒಂದೇ ರಾಕೆಟ್ಟಿನಿಂದ ಸಾಧ್ಯವಾಗದು. ಹೆಚ್ಚು
ಎತ್ತರಗಳಿಗೆ ಹೋಗಬೇಕಾದರೆ ಹೊರೆಯೂ (ನೋದನಕಾರಿಗಳ ರಾಶಿ) ಹೆಚ್ಚಾಗುತ್ತದೆ.
ರಾಕೆಟ್ ಮೇಲೇರಲು ಅಗತ್ಯವಿರುವ ಸಾಮಥ್ರ್ಯ ಒದಗಿಸಲು ಒಂದರಂತೆ ಹಲವು
ರಾಕೆಟ್ಟುಗಳನ್ನು ಜೋಡಿಸುತ್ತಾರೆ. ಈ ರೀತಿ ನಿರ್ಮಿತವಾದ ರಾಕೆಟ್ಟುಗಳಿಗೆ ಬಹುಹಂತ
ರಾಕೆಟ್ಟುಗಳು ಎಂದು ಹೆಸರು.
 
ಬಹುಹಂತ ರಾಕೆಟ್ಟುಗಳನ್ನು ಉಪಯೋಗಿಸುವುದರಿಂದ ಇಂಧನ ಬಳಕೆಯ ಬೇಡಿಕೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ರಾಕೆಟ್ಟು ಸುಮಾರು 100 ಞm ಎತ್ತರ ತಲುಪಿದಾಗ ಅದರ ಮೊದಲ ಹಂತ ಕಳಚಿ ಬೀಳುತ್ತದೆ. ಈ ಕ್ಷಣದಲ್ಲಿ ಎರಡನೇ ಹಂತದ ಎಂಜಿನ್ ಕಾರ್ಯರಂಭ ಮಾಡುತ್ತದೆ. ಮೊದಲ ಹಂತದೊಳಗಿದ್ದ ಟ್ಯಾಂಕುಗಳು ಮತ್ತು ನೋದನಕಾರಿಗಳು ಈಗ ಇಲ್ಲದಿರುವುದರಿಂದ ರಾಕೆಟ್ಟಿನ ಒಟ್ಟು ರಾಶಿ ಕಡಿಮೆ ಆಗುತ್ತದೆ. ಎರಡನೇ ಹಂತವು ರಾಕೆಟ್ಟನ್ನು ಇನ್ನೂ ಎತ್ತರಕ್ಕೆ ಒಯ್ದು ಕಳಚಿಕೊಳ್ಳುತ್ತದೆ. ಅದರ ಸ್ಥನದಲ್ಲಿ ಮೂರನೇ ಹಂತ ಕಾರ್ಯಾರಂಭ ಮಾಡುತ್ತದೆ. ಈ ಪ್ರತಿಕ್ರಿಯೆಯು ರಾಕೆಟ್ಟಿನ ದಕ್ಷತೆಯನ್ನು ಹೆಚ್ಚಿಸುತ್ತದೆ.
 
ವ್ಯೋಮನೌಕೆಗಳನ್ನು ಉಡಾಯಿಸಲು ಉಪಯೋಗಿಸುವ ಬಹುಪಾಲು ರಾಕೆಟ್ಟುಗಳಲ್ಲಿ ಬೃಹತ್ತಾದ ಮೊದಲು ಬೂಸ್ಟರ್ ಹಂತದ ಜೋತೆಗೆ ಎರಡು ಸಣ್ಣ ಹಂತಗಳು ಇರುತ್ತವೆ.
 
ರಾಕೆಟ್ಟುಗಳನ್ನು ವಾಯುಮಂಡಲದ ಅಧ್ಯಯನಗಳಿಗೆ ಅಲ್ಲದೆ ವ್ಯೋಮನೌಕೆ ಮತ್ತು ಕ್ಷಿಪಣಿಗಳ ಉಡಾವಣೆಗೂ ಉಪಯೋಗಿಸುತ್ತಾರೆ. ವಾಯುಮಂಡಲದ ಉನ್ನುತ ಸ್ತರಗಳ ವೈಜ್ಞಾನಿಕ ಸಂಶೋಧನೆ ಮಾಡುವಾಗ ರಾಕೆಟ್ಟಿನಲ್ಲಿ ಇತರ ವೈಜ್ಞಾನಿಕ ಸಾಧನಗಳ ಜೋತೆಗೆ ರೇಡಿಯೊ ಪ್ರೇಷಕಗಳನ್ನೂ ಇಟ್ಟಿರುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ಕೂಡಲೇ ಭೂಮಿಗೆ ರವಾನಿಸುವುದು ಇದರಿಂದ ಸಾಧ್ಯವಾಗುತ್ತದೆ.
 
==ಉಲ್ಲೇಖಗಳು==
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ