ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
 
ರಾಕೆಟ್ಟು ಕೆಲಸ ಮಾಡುವುದು ಇದೇ ತತ್ವದ ಮೇಲೆ. ರಾಕೆಟ್ಟು ಹಾರುವಾಗ ಇಂಧನ ದಹನಗೊಂಡು ಉಚ್ಚ ಒತ್ತಟದಲ್ಲಿರುವ ಅನಿಲಗಳಾಗಿ ಪರಿವರ್ತನೆಗೊಳ್ಳುತ್ತೆದೆ. ಈ ಅನಿಲಗಳು ರಾಕೆಟ್ಟಿನ ಸೂಸುಬಾಯಿಯ ಮೂಲಕ ಉಚ್ಚ ವೇಗದಲ್ಲಿ ಹೊರನುಗ್ಗುತ್ತವೆ. ರಾಕೆಟ್ಟು ವಿರುದ್ಧ ದಿಕ್ಕಿನಲ್ಲಿ ಸಮ ಸಂವೇಗವನ್ನು ಗಳಿಸಿಕೊಳ್ಳುತ್ತದೆ.
 
==ರಾಕೆಟ್ಟಿನ ಕಾರ್ಯವಿಧಾನ==
ರಾಕೆಟ್ಟು ಅಥವಾ ಜೆಟ್ ವಿಮಾನಗಳಲ್ಲಿ ಇಂಧನ ಉರಿಸಿದಾಗ ಬಿಡುಗಡೆಯಾಗುವ ಬಿಸಿ ಅನಿಲಗಳು ಹಿಂದಕ್ಕೆ ಚಿಮ್ಮುತ್ತವೆ. ಹಿಂದಕ್ಕೆ ಚಿಮ್ಮಿ ಬರುವ ಬಿಸಿ ಅನಿಲಗಳ ಪ್ರತಿಕಿಯೆಯು ರಾಕೆಟ್ ಅಥವಾ ಜೆಟ್ ವಿಮಾನಕ್ಕೆ ಮುಮ್ಮುಖ ನೂಕುಬಲವನ್ನು ಒದಗಿಸುತ್ತದೆ.
ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲವು. ಇದು ಸಾಧ್ಯವಾಗುವುದಕ್ಕೆ ರಾಕೆಟ್ಟುಗಳು ತಮ್ಮದೇ ಆದ ಆಕ್ಸಿಡಕವನ್ನೂ ಒಯ್ಯುವುದು ಕಾರಣ. ಇಂಧನ ದಹನಕ್ಕೆ ಆಕ್ಸಿಜನ್ ಒದಗಿಸುವ ಪದಧರ್ಥಕ್ಕೆ ಆಕ್ಸಿಡಕ ಎಂದು ಹೆಸರು. ಇಂಧನ ಮತ್ತು ಆಕ್ಸಿಡಕಗಳನ್ನು ಒಟಾಗಿ ನೋದನಕಾರಿಗಳು ಎನ್ನುತ್ತಾರೆ.
 
ಪ್ರತಿಕ್ಷೇಪಿತವೇಗದೊಂದಿಗೆ ರಾಕೆಟ್ ಲಂಬವಾಗಿ ಮೇಲಕ್ಕೆ ಚಲಿಸಬೇಕಾದಲ್ಲಿ ಭೂಮಿಯೆಡೆಗೆ ವರ್ತಿಸುತ್ತಿರುವ ಒಂದು ಕ್ರಿಯಾಬಲ ಇರಲೇ ಬೇಕು. ರಾಕೆಟ್ಟಿನಲ್ಲಿ ಇಂಧನವನ್ನು ದಹಿಸಿದಾಗ ಈ ಕ್ರಿಯಾಬಲ ಉಂಟಾಗುತ್ತದೆ. ಇಂಧನ ದಹಿಸಿದಾಗ ನಿಷ್ಕಾಸಅನಿಲಗಳು ಸೂಸುಬಾಯಿಯ ಮೂಲಕ ಭೂಮಿಯೆಡೆಗೆ ಚಿಮ್ಮುತ್ತದೆ.
ರಾಕೆಟ್ಟಿನ ಒಟ್ಟು ರಾಶಿಯು (M) ನೋದನಕಾರಿಗಳ ರಾಶಿಯನ್ನೂ ಅದರಲ್ಲಿರುವ ವೈಜ್ಞಾನಿಕ ಸಾಧನ ಅಥವಾ ಉಪಗ್ರಹಕ್ಕೆ ಉಪಯುಕ್ತ ಹೊರೆ ಅಥವಾ ಪೇಲೋಡ್ ಎನ್ನುತ್ತಾರೆ. ರಾಕೆಟ್ಟನಲ್ಲಿ ಇಂಧನ ದಹನಗೊಂಡು ನಿಷ್ಕಾಸವನ್ನ ಬಿಡುಗಡೆ ಮಾಡಿದಾಗ ರಾಕೆಟ್ಟಿನ ವೇಗ ಏರುತ್ತದೆ. ರಾಕೆಟ್ಟಿನ ವೇಗೋತ್ಕರ್ಷವು ಇಂಧನ ದಹನದ ಪ್ರಮಾಣವನ್ನೂ ನಿಷ್ಕಾಸ ವೇಗ (Vex) ವನ್ನೂ ಅವಲಂಬಿಸಿರುತ್ತದೆ. ಜೊತೆಗೆ ರಾಕೆಟ್ಟಿನ ರಾಶಿಯ (M) ಪಾತ್ರವೂ ಇದೆ. ರಾಕೆಟ್ಟಿನ ರಾಶಿ ಹೆಚ್ಚಾದಷ್ಟೂ ವೇಗೋತ್ಕರ್ಷ ಕಡಿಮೆಯಾಗುತ್ತದೆ. ಇವುಗಳ ಸಂಬಂಧವನ್ನು ಹೀಗೆ ತೋರಿಸಬಹುದು.
 
(ಇಂಧನ ಉಪಯೋಗವಾಗುವ ದರ * ನಿಷ್ಕಾಸ ವೇಗ) = (ರಾಕೆಟ್ಟಿನ ರಾಶಿ *ವೇಗೋತ್ಕರ್ಷ)
 
ರಾಕೆಟ್ಟಿನ ರಾಶಿ ಮತ್ತು ವೇಗೋತ್ಕರ್ಷಗಳ ಗುಣಲಬ್ದವನ್ನು ರಾಕೆಟ್ ಮೇಲಿನ ನೂಕುಬಲ ಎನ್ನುತ್ತಾರೆ.
 
ನೂಕುಬಲ = RVex = ma
 
ಇಲ್ಲಿ'R' ಎಂಬುದು ಇಂಧನ ಉಪಯೋಗವಾಗುವ ದರವನ್ನು ಸೂಚಿಸುತ್ತದೆ.
 
ನಾವು ಪರಿಗಣಿಸಲೇ ಬೇಕಾದ ಇತರ ವ್ಯಾವಹರಿಕ ಅಂಶಗಳಿವೆ:
(i)ರಾಕೆಟ್ಟಿನಲ್ಲಿರುವ ಇಂಧನ ಖರ್ಚಾಗುತ್ತಾ ಹೋದಂತೆ ರಾಕೆಟ್ಟಿನ ಒಟ್ಟು ರಾಶಿ ಕಡಿಮೇಯಾಗುತ್ತಾ
ಹೋಗುತ್ತದೆ.
(ii) ರಾಕೆಟ್ ಮೇಲೆ ಮೇಲೆ ಹೋದಂತೆಲ್ಲಾ ಗುರುತ್ವ ವೇಗೋತ್ಕರ್ಷ ನಿರಂತರವಾಗಿ ಬದಲಾಗುತ್ತಿರುತ್ತದೆ.
(iii) ವಾಯುಮಂಡಲದ ಕೆಳಸ್ತರಗಳು ರಾಕೆಟ್ಟಿನ ಚಲನೆಗೆ ಪ್ರತಿರೋಧ ಒಡ್ಡತ್ತವೆ.
 
ರಾಕೆಟ್ಟಿನ ಮುಖ್ಯ ಭಾಗಗಳನ್ನು ಚಿತ್ರ ಇಲ್ಲಿ ವಿವರಿಸಿದೆ. ರಾಕೆಟ್ಟಿನ ಕೋಷ್ಠಕವನ್ನು
ಎಂಜಿನ್ ಎನ್ನುತ್ತಾರೆ. ಇದರಲ್ಲಿ ಇಂಧನ ದಹನವಾಗಿ ನಿಷ್ಕಾಸಾನಿಲಗಳು ಸೂಸುಬಾಯಿಯ
ಮೂಲಕ ಹೊರಬರುತ್ತದೆ. ಉಪಯುಕ್ತಹೊರೆ (m) ಮತ್ತು ಇಂಧನದ ರಾಶಿ (M) ಗಳ ನಿಷ್ಪತ್ತಿಗೆ
ಉಪಯುಕ್ತಹೊರೆ ನಿಷ್ಕಾಸ ಎನ್ನುತ್ತಾರೆ. ರಾಕೆಟ್ಟನ್ನು ವಿನ್ಯಾಸಗೊಳಿಸುವುದಕ್ಕೆ ಈ ಮಾಹಿತಿ
ಬೇಕು. ಇಂಧನ ಮತ್ತು ಆಕ್ಸೀಡಕಗಳನ್ನು ಪ್ರತ್ಯೇಕ ಟ್ಯಾಂಕುಗಳಲ್ಲಿ ಇಟ್ಟಿರುತ್ತಾರೆ. ಕವಾಟಗಳ
ಸಹಾಯದಿಂದ ಇವು ನಿಯಂತ್ರಿತ ಪ್ರಮಾಣದಲ್ಲಿ ಎಂಜಿನ್ನಿಗೆ ಹೋಗುವಂತೆ ಮಾಡುತ್ತಾರೆ.
[[ಚಿತ್ರ:V-2 rocket diagram (with English labels).svg|thumbnail]]
 
==ಉಲ್ಲೇಖಗಳು==
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ