ಹಕ್ಕಿ ಜ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
೧೦ ನೇ ಸಾಲು:
 
== ವೈರಸ್ ==
ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು [[ಉಸಿರು]] ರೋಗಾಣುಗಳಿಂದ (ವೈರಸ್) ತುಂಬಿರುತ್ತದೆ.<ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref> ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್‌ಮಯವಾಗಿರುತ್ತವೆ. <ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref>ಅತಿ ಅಪರೂಪವಾಗಿ ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಸೆರೆಯಾಗುತ್ತಾರೆ.<ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref> ಪಕ್ಷಿಗಳನ್ನು, ಮೊಟ್ಟೆಯನ್ನು ಮಾರುವವರಿಗೂ, ಕತ್ತರಿಸುವವರಿಗೂ, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿ ಜ್ವರ ಅಂಟುವ ಸಂಭವ ಇರುತ್ತದೆ.<ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref> ರೋಗಾಣುಗಳು ಮುಖ್ಯವಾಗಿ ಉಸಿರಾಡುವ ಗಾಳಿಯೊಂದಿಗೆ ಮಾನವನ ದೇಹ ಸೇರುತ್ತವೆ. ಮನುಷ್ಯನಿಗೆ ಅಂಟಿದ ಸೋಂಕು ಮತ್ತೊಬ್ಬರಿಗೆ ಅಂಟುವುದಿಲ್ಲ.<ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref> ಹಾಗೇನಾದರೂ ಆಗಿದ್ದರೆ ಸೋಂಕು ಅತ್ಯಂತ ತೀವ್ರಗತಿಯಲ್ಲಿ ಹರಡಿ ಮನುಷ್ಯರ ಮಾರಣಹೋಮವೇ ನಡೆದುಹೋಗುತ್ತಿತ್ತು.<ref>http://www.prajavani.net/article/ ಹಕ್ಕಿ-ಜ್ವರ-ಇರಲಿ-ಮುನ್ನೆಚ್ಚರ</ref>
 
 
"''ಏವಿಯನ್ ಇನ್‌ಫ್ಲೂಯೆನ್ಸಾ ಎಂದು ಕರೆಯುವ ವೈರಸ್‌ನಿಂದ ಈ ರೋಗ ಹಕ್ಕಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಫಾರಂಕೋಳಿಗಳಲ್ಲಿ ಹರಡುತ್ತದೆ. ಗಾಳಿ ಮೂಲಕ ಹರಡುವ ಈ ವೈರಸ್‌ಗಳು ಕುಕ್ಕುಟ ಪಾಲನೆಯಲ್ಲಿ ನಿರತರಾದ ಸಿಬ್ಬಂದಿಯಲ್ಲೂ ಕಾಣಿಸಿಕೊಳ್ಳಬಹುದು. ಹಕ್ಕಿಗಳಿಂದ ಹಕ್ಕಿಗಳಿಗೆ ಹಾಗೂ ಹಕ್ಕಿಗಳಿಂದ[[ಹಕ್ಕಿ]]ಗಳಿಂದ ಮನುಷ್ಯರಿಗೆ ಇದು ಹರಡಬಹುದು. ಆದರೆ ಮನುಷ್ಯರಿಂದ ಮನುಷ್ಯರಿಗೆ ಹಕ್ಕಿ ಜ್ವರದ ಸೋಂಕು ಹರಡಿದ ಉದಾಹರಣೆಗಳು ಇಲ್ಲ. ಹೀಗಾಗಿ ಹೆಚ್ಚಿನ ಆತಂಕ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ವೈರಸ್‌ಗಳು ಮನುಷ್ಯ ದೇಹಕ್ಕೆ ವರ್ಗಾವಣೆಗೊಂಡು ಬದುಕುಳಿಯುವ ಶಕ್ತಿ ಬೆಳೆಸಿಕೊಳ್ಳಬಹುದು. ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಚೆನ್ನಾಗಿ ಕುದಿಸುವುದರಿಂದಲೂ ವೈರಸ್‌ಗಳು ಸಾಯುತ್ತವೆ. ಹೀಗಾಗಿ ಮಾಂಸಾಹಾರಿಗಳು ಮತ್ತು ಕುಕ್ಕುಟ ಉದ್ಯಮ ಅತಂಕಕ್ಕೆ ಒಳಗಾಗಬೇಕಾಗಿಲ್ಲ",'' ಎನ್ನುತ್ತಾರೆ ಹಾಸನ ಪಶುವೈದ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಸುಶಾಂತ್ ಹಂಡಿಗೆ<ref>http://vijaykarnataka.indiatimes.com/articleshow/16957749.cms</ref>
 
 
"https://kn.wikipedia.org/wiki/ಹಕ್ಕಿ_ಜ್ವರ" ಇಂದ ಪಡೆಯಲ್ಪಟ್ಟಿದೆ