ಕತ್ತಿವರಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up, replaced: → (5) using AWB
೧೬ ನೇ ಸಾಲು:
| website = [http://www.fie.ch/ www.fie.ch]<br/>[http://www.fie.org/ www.fie.org]
}}
 
 
'''ಕತ್ತಿವರಸೆ'''ಮೂಲತಃ ಆತ್ಮರಕ್ಷಣೆಗೂ ಶತ್ರುವಿನ ವಿರುದ್ಧ ಆಕ್ರಮಣೆಗೂ ಕತ್ತಿಯನ್ನು ಬಳಸುವ ಚಾಕಚಕ್ಯತೆ (ಫೆನ್ಸಿಂಗ್). ಕ್ರಮೇಣ ಇದು ಬದಲಾವಣೆಗೊಂಡು ಇಂದು ಒಂದು ಕುಶಲ ಕಲೆಯಾಗಿ ಮಾತ್ರ ಉಳಿದಿದೆ.
==ಪ್ರಾಚೀನತೆ==
[[File:Angelo Domenico Malevolti Fencing Print, 1763.JPG|thumb|360px|left|1763 fencing print from [[Domenico Angelo]]'s instruction book. Angelo was instrumental in turning fencing into an athletic sport.]]
ಪ್ರಾಚೀನ ಭಾರತೀಯ [[ಸಾಹಿತ್ಯ]]ದಲ್ಲೂ ಗ್ರೀಕ್ ಸಾಹಿತಿ ಹೋಮರನ ಇಲಿಯಡ್ ಗ್ರಂಥದಲ್ಲೂ ಕತ್ತಿವರಸೆಯ ಉಲ್ಲೇಖವಿದೆ. ಪ್ರಾಚೀನ [[ರೋಮ್| ರೋಮಿನ]] ಖಡ್ಗಮಲ್ಲರೂ ಮಧ್ಯಯುಗದ ಅಶ್ವವೀರರೂ ಕತ್ತಿ ಕಾಳಗವಾಡುತ್ತಿದ್ದರು. ಬಂದೂಕು ಮದ್ದನ್ನು ಉಪಜ್ಞಿಸುವ (ಇನ್ವೆಂಟ್)ವರೆಗೂ ಕತ್ತಿಯುದ್ಧಗಳು ನಡೆಯುತ್ತಿದ್ದವು. [[ಬಂದೂಕು]] ಬಂದ ಅನಂತರ ಎದುರಾಳಿಯ [[ಯುದ್ಧಕವಚ]]ವನ್ನು ಕತ್ತಿ ಹೊಡೆತದಿಂದ ಸೀಳುವುದು ಉಪಯೋಗವಾಗಲಿಲ್ಲ. ಬದಲು, ಬಲಗೈಯಲ್ಲಿ ಕತ್ತಿಯಿಂದ ಎದುರಾಳಿಯ ಮೇಲೆ ಹಾಯುವುದೂ ಆತ್ಮರಕ್ಷಣೆಗೋಸ್ಕರ ಎಡಗೈಯಲ್ಲಿ [[ಗುರಾಣಿ]], [[ಕಠಾರಿ]], [[ಖೇಲಕ]]ಗಳನ್ನು ಹಿಡಿಯುವುದೂ ಆಚರಣೆಗೆ ಬಂತು. ಮೊದಮೊದಲು ಖಡ್ಗಶಿಕ್ಷಕರು ರಹಸ್ಯ ವರಸೆಗಳನ್ನು ಇತರರಿಗೆ ಗೊತ್ತಾಗದಂತೆ ತಮ್ಮ ಶಿಷ್ಯರಿಗೆ ಮಾತ್ರ ಕಲಿಸುತ್ತಿದ್ದರು. ಕ್ರಮೇಣ ಅನೇಕ ಪ್ರವೀಣ ಶಿಕ್ಷಣ ಕೇಂದ್ರಗಳು ಸ್ಥಾಪಿತವಾದವು. ಖಡ್ಗನಿಪುಣರು [[ಗಣಿತ]]ವಿಜ್ಞಾನದ ನಿಯಮಗಳನ್ನೊಳಗೊಂಡ ಶಾಸ್ತ್ರೋಕ್ತ ಗ್ರಂಥಗಳನ್ನು ರಚಿಸಿದರು.[[ಇಂಗ್ಲಂಡ್|ಇಂಗ್ಲೆಂಡಿನ]] ರಾಜ ಎಂಟನೆಯ ಹೆನ್ರಿಯೂ ಕತ್ತಿ ಸಾಧನಕ್ಕೆ ಉತ್ತೇಜನ ಕೊಟ್ಟ. ಅನೇಕ ದೇಶಗಳಲ್ಲಿ ದರೋಡೆಯವರ ಕಾಟ ಹೆಚ್ಚಾಗಲು ಆತ್ಮರಕ್ಷಣೆಗೆ ಜನರಿಗೆ ಕತ್ತಿಸಾಧನೆ ಅಗತ್ಯವಾಯಿತು. ಖಡ್ಗಚತುರರು ರಾಜಸ್ಥಾನಗಳಲ್ಲಿ ಅಂಗರಕ್ಷಕರಾಗಿಯೂ ಮಹಾ ವ್ಯಕ್ತಿಗಳ ಸಂಗಾತಿಗಳಾಗಿಯೂ ನೇಮಿಸಲ್ಪಡುತ್ತಿದ್ದರು.
==ಸಂಪ್ರದಾಯಗಳು==
[[ಜರ್ಮನಿ]]ಯ ನ್ಯಾಯ ಸಂಸ್ಥೆಗಳಲ್ಲಿ ನ್ಯಾಯವನ್ನು ಕತ್ತಿಕಾಳಗಗಳಿಂದ ತೀರ್ಮಾನಿಸುವ ವ್ಯವಸ್ಥೆಯಿತ್ತು.ವ್ಯಕ್ತಿಗಳ ಪರಸ್ಪರ [[ವಿವಾಹ]], [[ವ್ಯಾಜ್ಯ]], ಮಾನಾಪಮಾನ ಸಮಸ್ಯೆಗಳನ್ನು ಕತ್ತಿಯ ದ್ವಂದ್ವಯುದ್ಧದಿಂದ ನಿರ್ಣಯಿಸುವ ಸಂಪ್ರದಾಯ [[ಯುರೋಪ್]], [[ಅಮೆರಿಕ]]ಗಳಲ್ಲಿ ಅನೇಕ ಶತಮಾನ ಕಾಲ ಪ್ರಬಲಿಸಿದ್ದು ಸಣ್ಣಪುಟ್ಟ ಕಲಹಗಳಿಗೂ ಕತ್ತಿಕಾಳಗದ ಹುಚ್ಚು ಜನರಿಗಿತ್ತು. ಇದಕ್ಕೂ ಕಟ್ಟುಕಟ್ಟಳೆ, ಶಿಷ್ಟಾಚಾರಗಳಿದ್ದವು. ಲಾರ್ಡ್ಬೈರನ್, ಚಾಲ್ರ್ಸ್‌ ಫಾಕ್ಸ್‌, ಷೆರಿಡನ್, ಜ್ಯೇಷ್ಠ ಪಿಟ್, ಕ್ಯಾನಿಂಗ್ನಂಥ ಹಿರಿಯರೂ ಕತ್ತಿಯ ದ್ವಂದ್ವಯುದ್ಧ ಮಾಡಬೇಕಾಯಿತು. ಅನೇಕರು ಕೊಲೆಯಾದ್ದರಿಂದ ಇದನ್ನು ನಿಷೇಧಿಸಲು 19ನೆಯ ಶತಮಾನದಲ್ಲಿ ಕಾನೂನಾಯಿತು.
Line ೪೨ ⟶ ೪೧:
ಮೇಲೆ ಬೀಳುವವನ ಗುರಿ ಎದುರಾಳಿಯ ದೇಹದ ಮುಂಡ ಮಾತ್ರ; ತಲೆ, ತೋಳು, ಕಾಲುಗಳಲ್ಲ. ಅವನು ಗುರಿಯನ್ನು ಕತ್ತಿಯಿಂದ ಒಂದು ಸಾರಿ ಮುಟ್ಟಿದರೆ ಒಂದು ಅಂಶ ಗೆದ್ದಂತೆ. ಐದು ಸಾರಿ ಮುಟ್ಟಿದರೆ ಒಂದು ಸುತ್ತು ಗೆದ್ದಂತೆ. ಹೆಂಗಸು ಒಂದು ಸುತ್ತನ್ನು ಗೆಲ್ಲಲು ನಾಲ್ಕು ಸಾರಿ ಮುಟ್ಟಿದರೆ ಸಾಕು. ಗುರಿಯ ಆಚೆ ಮುಟ್ಟಿದರೆ ಅದು ಲೆಕ್ಕಕ್ಕಿಲ್ಲ; ದಂಡನೆಯುಂಟು.
ಆಕ್ರಮಣಕಾರನಿಗೆ ಎದುರಾಳಿಯ ಮೇಲೆ ನುಗ್ಗಲು ಹಕ್ಕಿದೆ. (ರೈಟ್ ಆಫ್ ವೇ). ಆಗ ಎದುರಾಳಿ ಈ ಏಟನ್ನು ತಪ್ಪಿಸಿಕೊಂಡರೆ ಆಕ್ರಮಣದ ಹಕ್ಕು ಅವನಿಗೆ ಬರುತ್ತದೆ. ಹಕ್ಕು ಸರ್ತಿಯ ಪ್ರಕಾರ ಪರಸ್ಪರ ಬದಲಿಸುತ್ತದೆ. ಇಬ್ಬರೂ ಏಕಕಾಲದಲ್ಲಿ ಪರಸ್ಪರ ಮುಟ್ಟಿದರೆ ಹಕ್ಕುದಾರನ ಹೊಡೆತಕ್ಕೆ ಮಾತ್ರ ಲೆಕ್ಕ. ಆಕ್ರಮಣದಲ್ಲಿ ಗುರಿಯ ಬೇರೆ ಬೇರೆ ಭಾಗಗಳನ್ನು ಮುಟ್ಟಲು ನಾನಾ ವಿಧಗಳಿವೆ; ಎದುರಾಳಿಯ ಕತ್ತಿಯಿಲ್ಲದ ಗುರಿಯ ಕಡೆ ಕತ್ತಿ ಇರಿಯುವುದು; ತಿವಿತಕ್ಕೆ ದಾರಿ ಕೊಡದಂತೆ ಎದುರಾಳಿ ಕತ್ತಿ ಹಿಡಿದುಕೊಂಡಿದ್ದರೆ ಅದನ್ನು ಚುರುಕಾಗಿ ಬಡಿದು ಅಥವಾ ಅದುಮಿ ದಾರಿ ಮಾಡಿಕೊಂಡು ತಿವಿಯುವುದು; ಕತ್ತಿ ತುದಿಯನ್ನು ಎದುರಾಳಿಯ ಕಾಪಿನ ಸುತ್ತಲೂ ತಿರುಗಿಸಿ, ತಿವಿತಕ್ಕೆ ದಾರಿ ಮಾಡಿಕೊಳ್ಳುವುದು; ಕತ್ತಿಯಿಂದ ತಿವಿಯುವಂತೆ ನಟಿಸಿ ಅದನ್ನು ಬೇರೆ ಕಡೆ ತಿರುಗಿಸಿ ತಿವಿಯುವುದು; ಓಡುತ್ತ ಅಥವಾ ನೆಗೆಯುತ್ತ ಹೋಗಿ ತಿವಿಯುವುದು; ಎದುರಾಳಿಯ ಕತ್ತಿ ಕೊನೆಯ ಮೇಲೆ ತನ್ನ ಕತ್ತಿಯನ್ನು ನುಗ್ಗಿಸಿ ಬೇರೆ ದಿಕ್ಕಿನಿಂದ ಮುಟ್ಟುವುದು; ಇತ್ಯಾದಿ. ಎದುರಾಳಿ ತನ್ನ ಮೇಲೆ ಬೀಳುವ ಆಕ್ರಮಣದ ಏಟುಗಳನ್ನು ನಿವಾರಿಸಲೂ ಎಂಟು ವಿಧಗಳಿವೆ; ಆಕ್ರಮಣಕಾರಿಯ ಕತ್ತಿಯನ್ನು ಚುರುಕಾಗಿ ಬಡಿದು ಪಕ್ಕಕ್ಕೆ ತಿರುಗಿಸಿ ಮಾರ್ಗ ತಪ್ಪಿಸುವುದು; ತನ್ನ ಕತ್ತಿ ಕೊನೆಯನ್ನು ಆಕ್ರಮಣಕಾರಿಯ ಕತ್ತಿಯ ಸುತ್ತಲೂ ಸುತ್ತಿಸಿ ಅಲಗನ್ನು ಪಕ್ಕಕ್ಕೆ ತಿರುಗಿಸುವುದು; ಇತ್ಯಾದಿ. ಇವುಗಳಿಗೆಲ್ಲ ಖಡ್ಗಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿವೆ.ಸ್ಪರ್ಧೆಯ ತೀರ್ಮಾನಕ್ಕೆ ನಾಲ್ಕು ಪಂಚಾಯತರೂ ಒಬ್ಬ ಅಧ್ಯಕ್ಷನೂ ಇರುತ್ತಾರೆ. ಸ್ವಯಂಚಾಲಕ ವಿದ್ಯುತ್ ಸಲಕರಣೆಯು ಗಂಟೆಶಬ್ದ, ದೀಪಗಳನ್ನುಂಟು ಮಾಡಿ ಪ್ರತಿಯೊಂದು ಇರಿತವನ್ನೂ ನಿಖರವಾಗಿ ತಿಳಿಸುತ್ತದೆ. ಇದಕ್ಕೆ ಒಬ್ಬನೇ ಸಾಕು.
 
'''ಏಪೇ''' : ಇದು ಹಿಂದಿನ ದ್ವಂದ್ವಯುದ್ಧ ಕತ್ತಿಯ ಪ್ರತಿರೂಪ. ಅಲಗಿನ ಕೊನೆಯಲ್ಲಿ ಚೂಪಾದ ಬಿಂದುವಿನ ಬದಲು ಚಪ್ಪಟೆ ಗುಂಡಿಯಂಥ ಮೊಳೆಯ ತಲೆ ಮೊಂಡು ಮಾಡಿದೆ. ಫಾಯಿಲ್ನಷ್ಟೇ ಉದ್ದ. ಅದಕ್ಕಿಂತ ಹೆಚ್ಚು ಭಾರ; 27 ಔನ್ಸ್‌. ತ್ರಿಕೋನಾಕಾರ. ಗಡುಸು. ಬಹು ದೊಡ್ಡ ಕಾಪು. ಫಾಯಿಲ್ನಂತೆ ತಿವಿಯುವ ಆಯುಧ; ಹಕ್ಕಿನ ಕ್ರಮವಿದೆ. ಕತ್ತಿ ತುದಿಗೆ ಸಿಕ್ಕಿಸಿದ ಮೂರು ಚಿಕ್ಕ ಮುಳ್ಳುಗೋಲುಗಳು ಬಟ್ಟೆಗೆ ಸಿಕ್ಕಿಕೊಂಡು ಕತ್ತಿ ತಗಲಿದ್ದನ್ನು ಸ್ಪಷ್ಟಪಡಿಸುತ್ತವೆ. ತಲೆಯಿಂದ ಕಾಲ್ಬೆರಳವರೆಗೆ ಇಡೀ ಶರೀರ ಗುರಿ. ಎಲ್ಲಿ ಮುಟ್ಟಿದರೂ ಎಣಿಕೆ, ಯಾರು ಮೊದಲು ಮುಟ್ಟುತ್ತಾರೋ ಅವರಿಗೆ ಎಣಿಕೆ. ಇಬ್ಬರೂ ಏಕಕಾಲದಲ್ಲಿ ಮುಟ್ಟಿದರೆ ಇಬ್ಬರಿಗೂ ಎಣಿಕೆ. ಫಲಿತಾಂಶನಿರ್ಣಯಕ್ಕೆ ಇದರಲ್ಲೂ ಐದು ಮಂದಿ. ವಿದ್ಯುತ್ ಸಲಕರಣೆಯಿಂದ ನಿರ್ಣಯಿಸುವ ಕ್ರಮವೂ ಬಂದಿದೆ.
 
'''ಕೊಂಕು ಕತ್ತಿ''' : ಇದು ಒಂದನೆಯ ಎಲಿಜಬೆತ್ ರಾಣಿಯ ಕಾಲದ ಕತ್ತಿಯಿಂದಲೂ ಅಶ್ವಪಡೆಯ ಭಾರದ ಕತ್ತಿಯಿಂದಲೂ ವಿಕಸಿತವಾಗಿದೆ. ಚಪ್ಪಟೆಯಾದ ಮಣಿಯುವ ಅಲಗಿದೆ. ಇದರಿಂದ ಕತ್ತರಿಸಲೂ, ತಿವಿಯಲೂ ಸಾಧ್ಯ. ಮುಂದಿನ ಅಂಚಿನಿಂದ ಪುರ್ತಿ ಯಾಗಿಯೂ ಹಿಂದಿನ ಅಂಚಿನ 1/2ರಷ್ಟು ಭಾಗದಿಂದಲೂ ಅಥವಾ ತುದಿಯಿಂದಲೂ ಹೊಡೆಯಬಹುದು. ಅಲಗು ಮೊಂಡ; ಕೆಡಕು ಮಾಡುವುದಿಲ್ಲ. ತೆಳ್ಳಗಿದೆ. ಫಾಯಿಲ್ನಂತೆ ಗಿ ಆಕಾರ. ಲೋಹದ ದೊಡ್ಡ ಕಾಪು ಕೈಯ ಹಿಂದಿನ ಸುತ್ತಲೂ ಬಾಗಿ ಕೈಗಣ್ಣುಗಳನ್ನೂ ತೋಳನ್ನೂ ರಕ್ಷಿಸುತ್ತದೆ. ಇದರಲ್ಲಿ ಹಕ್ಕಿನ ನಿಯಮವಿಲ್ಲ. ಸೊಂಟದ ಮೇಲಿನ ಎಲ್ಲ ಭಾಗವೂ ಗುರಿ; ಕಾಲುಗಳೂ ಪಾದಗಳೂ ಸೇರಿಲ್ಲ. ಇದು ರೋಮಾಂಚಕಾರಿ ಆಟ. ಹೆಂಗಸರಿಗೆ ಇದರಲ್ಲಿ ಪ್ರಧಾನತ್ವ ಬಂದಿದೆ.
==ಭಾರತದಲ್ಲಿ==
ಭಾರತದಲ್ಲಿ ಕತ್ತಿವರಸೆ ಬಹುಶಃ ಕುಸ್ತಿಯ ಜೊತೆಗೆ ಕೂಡಿಯೇ ಇರುತ್ತಿತ್ತು. ಗರಡಿ ಮನೆಯ ಅಖಾಡದಲ್ಲಿ ವಸ್ತಾಜಿಗಳು ತಮ್ಮ ಶಿಷ್ಯರಿಗೆ ಕುಸ್ತಿಯೊಂದಿಗೆ ಕತ್ತಿ ವರಸೆ ಮುಂತಾದವನ್ನು ಕಲಿಸುತ್ತಿದ್ದರು. ಈ ದೇಶದ ಕೆಲ ಭಾಗಗಳಲ್ಲಿ ಈಗಲೂ ಮೆರವಣಿಗೆಗಳ ಅಂಗವಾಗಿ ಗದೆ, ಕೋಲು, ಬರ್ಜಿ, ಈಟಿ ಇವುಗಳ ಜೊತೆಗೆ ಕತ್ತಿ ವರಸೆಗಳನ್ನೂ ಪ್ರದರ್ಶಿಸುತ್ತಾರೆ. ಇಂಗ್ಲೆಂಡ್ ಮತ್ತು ಇತರ ದೇಶಗಳಲ್ಲಿ ಕೆಲವು ಕಾಲ ಬಳಕೆಯಲ್ಲಿದ್ದಂತೆ, ಕತ್ತಿವರಸೆಗೆ ಉದ್ದವಾದ ಕತ್ತಿಯೇ ಆಯುಧ.
 
==ಬಾಹ್ಯ ಸಂಪರ್ಕಗಳು==
* [http://fie.ch/download/status/en/FIE%20Statutes%20ang.pdf FIE Statutes]
"https://kn.wikipedia.org/wiki/ಕತ್ತಿವರಸೆ" ಇಂದ ಪಡೆಯಲ್ಪಟ್ಟಿದೆ