೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
 
==ಶಾಂತಿ==
[[ಉತ್ತರ ಆಫ್ರಿಕಾದಆಫ್ರಿಕಾ]]ದ ಪುಟ್ಟ [[ದೇಶ]] [[ಟ್ಯುನೀಸಿಯಾ]] ಆಂತರಿಕ ಸಂಘರ್ಷದಿಂದ ಬೆಂದಿ ಹೋಗುತ್ತಿದ್ದ ವಿಷಯ ಗಳಿಗೆಯಲ್ಲಿ ಪ್ರಜಾಸತ್ತೆಯ ಮೌಲ್ಯವನ್ನು ಜನತೆಯಲ್ಲಿ ಬಿತ್ತುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಟ್ಯುನೀಸಿಯಾ ರಾಷ್ಟ್ರೀಯ ಸಂವಾದ ಸಮೂಹ ಸಂಸ್ಥೆಗೆ ಈ ಬಾರಿಯ ಶಾಂತಿ ನೊಬೆಲ್ ದೊರೆತಿದೆ.
೨೦೧೧ರಲ್ಲಿ [[ಅರಬ್ ದೇಶಗಳುದೇಶ]]ಗಳು ಪ್ರಜಾಸತ್ತೆಗಾಗಿ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಜಾಸ್ಮಿನ್ ಕ್ರಾಂತಿಯ ಸಮಯ ಟ್ಯುನೀಸಿಯಾದಲ್ಲೂ ಪ್ರಜಾಪ್ರಭುತ್ವ ಪರ ಹೋರಾಟಗಳು ಕವು ಪಡೆದು ರಾಜಕೀಯ ಹತ್ಯಾಕಾಂಡಗಳು ವ್ಯಾಪಕ ಹಿಂಸಾಚಾರ ಎಗ್ಗಿಲ್ಲದೆ ನಡೆಯುತ್ತಿದ್ದವು. ಅಂಥ ಸಮಯದಲ್ಲಿ,೨೦೧೩ರಲ್ಲಿ ಹುಟ್ಟಿದ್ದು ರಾಷ್ಟ್ರೀಯ ಸಂವಾದ ಸಮೂಹ.ಇಡೀ ದೇಶದ ರಾಜಕೀಯ ಪಕ್ಷಗಳು ಮತ್ತು ಎಲ್ಲ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಸಂಧಾನ ನಡೆಸುವ ಮೂಲಕ ಇದು ಟ್ಯುನೀಸಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳುವಂತೆ ಮಾಡಿತು. ಮಾನವ ಹಕ್ಕುಗಳನ್ನು ರಕ್ಷಿಸುವ ಸಂವಿಧಾನಾತ್ಮಕ ಹೊಸ ಸರಕಾರವನ್ನು ರವಿಸಿತು.
ಟ್ಯುನೀಸಿಯಾದಲ್ಲಿ ಇತ್ತೀಚೆಗಷ್ಟೆ ಜಾರಿಯಾಗಿರುವ ಪ್ರಜಾಸತ್ತೆ ಆಳವಾಗಿ ಬೇರುಬಿಡುವ ವತಾವರಣ ಕಲ್ಪಿಸಲು ಜನತೆಯನ್ನು ಉತ್ತೇಜಿಸುವ ಸಲುವಾಗಿ ಶಾಂತಿ ನೊಬೆಲ್ ನೀಡಲಾಗುತ್ತಿದೆ. ಸೇನಾಡಳಿತ,ಸರ್ವಾಧಿಕಾರ,ಚಕ್ರಾಧಿಪತ್ಯ,ಧರ್ಮಪ್ರಭುತ್ವ ಮುಂತಾದ ವ್ಯವಸ್ಥೆಗಳನ್ನು ಹೊಂದಿರುವ ಇತರ ದೇಶಗಳು ಪ್ರಜಾಪ್ರಭುತ್ವದ ಹೋರಾಟವನ್ನು ರೂಪಿಸಿಕೊಳ್ಳಲು ಟ್ಯುನೀಸಿಯಾ ಮಾದರಿಯಾಗಲಿ. ಮಧ್ಯ ಪ್ರಾಚ್ಯ,ಉತ್ತರ ಆಫ್ರಿಕ ಜಗತ್ತಿನ ಇತರೆಡೆ ಶಾಂತಿ ಮತ್ತು ಪ್ರಜಾಸತ್ತೆ ಬಕಗೊಳ್ಳಲು ಈ ಪ್ರಶಸ್ತಿ ಪ್ರೋತ್ಸಾಹ ನೀಡಲಿ ಎಂಬ್ ಆಶಯ ಈ ಬಾರಿಯ ಶಾಂತಿ ನೊಬೆಲ್ನದ್ದು.