ಗೀಟ್ರೀ, ಸಾಚಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಆಂಗ್ಲ ಅಂಕಿಗಳನ್ನು ಕನ್ನಡಕ್ಕೆ ಬದಲಾಯಿಸಲಾಯಿತು.
ಕೊಂಡಿ ಸೇರ್ಪಡೆ
೧ ನೇ ಸಾಲು:
೧೮೮೫-೧೯೫೭. ಫ್ರೆಂಚ್ ನಟ, ನಾಟಕಕಾರ, [[ಚಲನಚಿತ್ರ]] ನಿರ್ಮಾಪಕ ಹಾಗು ನಿರ್ದೇಶಕ. ಹುಟ್ಟಿದುದು ರಷ್ಯದ ಸೇಂಟ್ ಪೀಟರ್ಸಬರ್ಗಿನಲ್ಲಿ. ತಂದೆ ಲೂಸಿಯನ್ ಗೀಟ್ರೀ ರಂಗಭೂಮಿಯ ನಟ. ವಂಶಾನುಗುಣವಾಗಿ ಬಂದ ಅಭಿನಯಕಲೆಯ ಜೊತೆಗೆ ಸ್ವಪ್ರತಿಭೆಯೂ ಸೇರಿ ೨೧ರ ಕಿರಿಯ ಪ್ರಾಯದಲ್ಲೇ ನೋನೊ ಎಂಬ ನಾಟಕವನ್ನು ಬರೆದು ಪ್ರಯೋಗ ಮಾಡಿ ಯಶಸ್ಸನ್ನು ಸಂಪಾದಿಸಿದ. ಪ್ರೋತ್ಸಾಹಿತ ನಾಗಿ ಚೆಜ಼್ ಲೆ ಜ಼ೋವಾಕ್ವೆಸ್ (೧೯೦೬) ಎಂಬ ಮತ್ತೊಂದು ನಾಟಕವನ್ನು ಬರೆದು ಪ್ರದರ್ಶಿಸಿದ. ಹೀಗೆಯೇ ೧೯೦೮ರಲ್ಲಿ ಪೆಟೀಟ್ ಹಾಲ್ಲಂಡ್ ಮತ್ತು ಲೆ ಸ್ಕ್ಯಾಂಡಲ್ ಡಿ ಮಾಂಟ್ ಕಾರ್ಲೋ ಎಂಬ ಮತ್ತೆರಡು ನಾಟಕಗಳನ್ನು ರಂಗಭೂಮಿಯ ಮೇಲೆ ತಂದ. ೧೯೧೧ರಲ್ಲಿ ಇವನ ಅತ್ಯುತ್ಕೃಷ್ಟ ನಾಟಕಗಳಲ್ಲಿ ಒಂದಾದ ಲೆ ವೀಲ್ಯೂರ್ ಡಿ ನ್ಯೂಟ್ ಮತ್ತು ಉನ್ ಬೊ ಮ್ಯಾರಿಯೇಜ್ ಎಂಬ ನಾಟಕಗಳೂ ಪ್ರಕಾಶಗೊಂಡವು.
 
 
ಲಘು ಪ್ರಹಸನಗಳಲ್ಲಿ ಸಾಚಾ ಗೀಟ್ರೀ ಎತ್ತಿದ ಕೈ ಎಂದೆನಿಸಿ ಬಹುಜನರ ಮೆಚ್ಚುಗೆಯನ್ನು ಪಡೆದ. ಮೊಲ್ಯೇರನ ಹರ್ಷಕಗಳಿಗೆ ಸಮನಾದ ಶ್ರೇಷ್ಠ ಪ್ರಹಸನಗಳನ್ನು ಈತ ಬರೆದಿದ್ದಾನೆ. ರಂಗದ ಮೇಲೆ ಪ್ರದರ್ಶಿತವಾದಾಗ ಮನ ಸೆಳೆಯುವಂತಿದ್ದರೂ ಈ ನಾಟಕಗಳು ಓದಿದಾಗ ತೀರ ಸಾಧಾರಣ ಎನಿಸುತ್ತವೆ. [[ನಾಟಕ]] ಪ್ರಯೋಗ ತಂತ್ರ ಪರಿಣಿತನೂ ಅಭಿನಯ ವಿಶಾರದನೂ ಆಗಿದ್ದ ಗೀಟ್ರೀಯ ನಿರ್ದೇಶನ ಕೌಶಲದಿಂದ ಅವು ರಂಗದ ಮೇಲೆ ರಂಜಿಸುತ್ತಿದ್ದವು. ಅವು ಎಂದಿಗೂ ಅಲ್ಪತೆಗಿಳಿಯದೆ ಸದಾ ಜನಮನೋರಂಜನೆ ಮಾಡುತ್ತಿದ್ದುದರಿಂದ ಜಾರ್ಜ್ ಬರ್ನಾಡ್ ಷಾ ಇವನ್ನು ಬಹುವಾಗಿ ಪ್ರಶಂಸಿಸಿದ್ದಾನೆ.
 
 
"https://kn.wikipedia.org/wiki/ಗೀಟ್ರೀ,_ಸಾಚಾ" ಇಂದ ಪಡೆಯಲ್ಪಟ್ಟಿದೆ