ಸದಸ್ಯ:Ranjithgowdank/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
218.248.46.167 (talk) ರ 619190 ಪರಿಷ್ಕರಣೆಯನ್ನು ವಜಾ ಮಾಡಿ - if you are this user, please login.
೧ ನೇ ಸಾಲು:
==ವೀರಗಾಸೆ==
ಕರ್ನಾಟಕದಾದ್ಯಂತ ಅಪಾರ ಜನಪ್ರಿಯತೆ ಪಡೆದ ದೈವಗಳಲ್ಲಿ ಒಂದಾದ ವೀರಭದ್ರ ದೇವರು ಪ್ರಮುಖವಾಗಿ ಶೈವ ಮತ್ತು ವೀರಶೈವರ ಆರಾಧ್ಯ ಪುರುಷ ಶಿವ ಮತ್ತು ದಕ್ಷಬ್ರಹ್ಮರ ನಡುವಿನ ವೈಷಮ್ಯದಲ್ಲಿ ಶಿವನ ಅಪಕ್ಷೇಯಂತೆ ಜನ್ಮ ತಾಳುವ ವೀರಭದ್ರ, ಶಿವನ ಅಣತಿಯಂತೆ ದಕ್ಷನನ್ನು ಕೊಂದು ನಂತರ ಪ್ರಮುಖ ಯುದ್ದ ದೈವವಾಗಿ ಕಾಣೀಸಿಕೊಂಡಿದ್ದಾನೆ.ಕೂರ್ಮ ಪುರಾಣ ಮತ್ತು ಭಾಗವತ ಮುರಾಣಗಳಲ್ಲಿ ವೀರಭದ್ರ ದಕ್ಷನನ್ನು ಕೊಂದ ಬಗೆಯನ್ನು ವಿವರಿಸಲಾಗಿದೆ. ಚಾಲುಕ್ಯರ ಕಾಲದಿಂದ ಆರಂಭವಾದ ವೀರಭದ್ರ ಮೂರ್ತಿಯ ಪ್ರತಿಷ್ಟಾಪನೆ ವಿಜಯನಗರದ ಅರಸರ ಕಾಲದಲ್ಲಿ ವ್ಯಾಪಕವಾಗಿ ಆದಂತೆ ಕಂಡು ಬರುತ್ತದೆ.
ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ.ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ,ಹಬ್ಬ ಹುಣ್ಣಿಮೆ,ವೀರಶೈವರ ಮದುವೆ,ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಬದ್ರನನ್ನು ಮನೆದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು'ಆಡಣಿ" ಎಂದು ಕರೆಯಲಾಗುತ‍್ತದೆ.ಇದು ಒಂದು ರೀತಿಯ ವೈಶೀಷ್ಟ ಪೂರ್ಣವಾದ ಆಚರಣೆಯೇ ಆಗಿರುತ್ತದೆ.
ಅದರಲ್ಲೂ ಅಪಾರ ಯುದ್ದಗಳು ಸಂಭವಿಸಿದ ವಿಜಯನಗರದ ಆಳ್ವಿಕೆ ದೇವರ ಆರಾಧನೆ ಪ್ರಾಮುಖ್ಯತೆ ಪಡೆದುಕೊಂಡಂತೆ ಕಾಣುತ್ತದೆ. ಕತ್ತಿ, ಬಿಲ್ಲು, ಬಾಣ, ತ್ರಿಶೂಲ ಇತ್ಯಾದಿ ಆಯುಧಗಳನ್ನು ಹಿಡಿದ ವೀರಭದ್ರನಿಗೆ ಕೆಲವು ಭಾಗಗಳಲ್ಲಿ ಎಂಟು ಕೈಗಳಿದ್ದರೆ, ಕೆಲವು ಭಾಗಗಳಲ್ಲಿ ನಾಲ್ಕು ಕೈಗಳಿವೆ. ವಿಜಯನಗರ ಶಾಸನವೊಂದರ ಪ್ರಕಾರ ವೀರಭದ್ರ ಎಂಟು ಕೈಗಳನ್ನು ಹೊಂದಿದ್ದು ಎಲ್ಲಾ ಕೈಗಳಲ್ಲೂ ವಿವಿಧ ಆಯುಧಗಳಿವೆ. ಹಾಗೂ ಆನೆಯ ಚರ್ಮದ ಉಡುಪು ತೊಟ್ಟಿದ್ದಾನೆ. ಕ್ರಿ.ಶ ೧೨೦೦ ಪ್ರಮುಖ ರಾಘವಾಂಕನ 'ವಿರೇಶ ಚರಿತೆ', ಕ್ರಿ. ಶ ೧೬೫೦ ರ ರಂಗನಾಥನ 'ವೀರಭದ್ರ ವಿಜಯ' ಮುಂತಾದ ಕೃತಿಗಳು ವೀರಭದ್ರನ ಅವತಾರವನ್ನು ಕುರಿತು ವಿವರಿಸುತ್ತದೆ.
ಸಾಮಾನ್ಯವಾಗಿ ವೀರಬದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮತ್ತು ಕಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ಐದು ಜನ ಹೆಣ್ಹು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ.ಮನೆಯಿಂದ ದೇವಸ್ಥಾನದವರೆಗೆ ಹೋಗುವಾಗ ನಡೆಮುಡಿಯನ್ನು ( ಮಡಿಬಟ್ಟೆ) ನೆಲಕ್ಕೆ ಹಾಸುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರ
ಕರ್ನಾಟಕದ ವೀರಶೈವ ಜನಾಂಗದ ಮನೆ ದೇವತೆಯಾದ ವೀರಭದ್ರ ಹಲವು ರೀತಿಯಲ್ಲಿ ಆರಾಧನೆಗೊಳ್ಳುತ್ತಿದ್ದಾನೆ. ವೀರಭದ್ರನ ಪ್ರೀತ್ಯರ್ಥವಾಗಿ 'ಗುಗ್ಗಳ ಸೇವೆಯನ್ನು ನಡೆಸುವ ಭಕ್ತರು ವೀರಗಾಸೆ ಪುರವಂತರ ಕುಣಿತ ಮುಂತಾದ ಕಲಾಸೇವೆಯನ್ನು ಅರ್ಪಿಸುತ್ತಾರೆ. ವೀರಭದ್ರನ ಹಾವಭಾವಗಳನ್ನು ಅಭಿನಯಿಸಿ ಅವನ ಪುರಾಣವನ್ನು ನಿರೂಪಿಸುವ ವೀರಭದ್ರನ ಕುಣಿತವು ರೂಢಿಯಲ್ಲಿದೆ. ಉತ್ತರಕರ್ನಾಟಕದ ಪುರವಂತರು ವಿವಿಧ ಶಸ್ತ್ರಗಳನ್ನು ಮೈತುಂಬ ಚುಚ್ಚಿಕೊಳ್ಳುವ ಮೂಲಕ ತಮ್ಮನ್ನೇ ದಂಟಿಸಿಕೊಳ್ಳುತ್ತಾ ವೀರಭದ್ರನನ್ನು ಸ್ತುತಿಸುತ್ತಾರೆ. ಕರ್ನಾಟಕದ ಪ್ರಮುಖ ವೀರಗಾಸೆ ಕಲಾವಿದರೊಬ್ಬರು ವೀರಭದ್ರನ ಕಥೆಯನ್ನು ಹೀಗೆ ಇಡುತ್ತಾರೆ. ಪುರಾಣ ಒಂದಾನೊಂದು ಕಾಲದಲ್ಲಿ ದುರುಳನಾದ ದಕ್ಷಬ್ರಹ್ಮನು ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಪರಶಿವನು ಅವನ ತಪಸ್ಸಿಗೆ ಮೆಚ್ಚಿ ದಕ್ಷಬ್ರಹ್ಮನೇ ನಿನಗೇನು ವರ ಬೇಕು ಎಂದು ಕೇಳಿದನು. ಆಗ ದಕ್ಷನು ಹರಿ, ಹರ ಬ್ರಹ್ಮಾದಿಗಳಿಂದ ಒಲೈಸಿಕೊಳ್ಳುವಂತೆಯೂ ದಕ್ಷಪತಿಗೆ ರಾಜನಾಗುವಂತೆಯೂ ಹರಸಬೇಕೆ<ದು ವರ ಕೇಳಿದನು. ಶಿವನು ಅದಕ್ಕೆ ತತಾಸ್ತು ಎಂದನು.
ದಕ್ಷಬ್ರಹ್ಮನಿಗೆ ಅರವತ್ತು ಮಂದಿ ಮಕ್ಕಳು. ಅವರನ್ನು ಆತ ದೇವಾನುದೇವತೆಗಳಿಗೆ ಮದುವೆ ಮಾಡಿ ಕೊಟ್ಟಿದ್ದನು. ಅದರಲ್ಲಿ ಚಂದ್ರನಿಗೆ ಇಪ್ಪತ್ತೆಳು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದನು. ಆದರೆ ಚಂದ್ರನು ಕೊನೆಯವಳಾದ ರೋಹಿಣಿಯೊಂದಿಗೆ ಅನುರಕ್ತನಾಗಿದ್ದನು. ಆಗ ದಕ್ಷಬ್ರಹ್ಮನು ಹದಿನೈದು ದಿನ ಕಳೆಗುಂದುವಂತೆಯೂ ಮತ್ತೆ ಹದಿನೈದು ದಿನ ಕಳೆದು ಹೋಗುವಂತೆಯೂ ಶಾಪ ಕೊಟ್ಟನು. ಆಮೇಲೆ ಕೊನೆಯವಳಾದ ದಾಕ್ಷಾತಿಣಿಯನ್ನು ಪರಶಿವನಿಗೆ ಲಗ್ನ ಮಾಡಿದನು. ಹೀಗಿರಲು ಒಂದಾನೊಂದು ದಿನ ಗೌರಿ ಹಬ್ಬ ಬಂತು. ದಕ್ಷಬ್ರಹ್ಮನು ಎಲ್ಲಾ ಮನೆಯ ಹೆಣ್ಣು ಮಕ್ಕಳ ಮನೆ ಮನೆಗೂ ಹೋಗಬೇಕೆಂದು ಸಿದ್ದನಾದನು. ಅದಕ್ಕೆ ತನ್ನ ಹೆಂಡತಿ ಪ್ರಸೂತಾದೇವಿಗೆ ಬಾಗಿಣವನ್ನು ತುಂಬಲು ಹೇಳಿದನು. ಆಕೆ ಉಳಿದವರಿಗೆಲ್ಲ ಸ್ವಲ್ಪ ಸ್ವಲ್ಪ ತುಂಬಿಸಿ ಗೌರಿಗೆ ಮಾತ್ರ ಬಹಳ ವಸ್ತುಗಳನ್ನು ತುಂಬಿಸಿದಳು. ಎಂಕೆಂದರೆ ಗೌರಿಯನ್ನು ಶಿವನಿಗೆ ಮದುವೆ ಮಾಡಿರುವುದಾಗಿ ತಿಳಿದಿದ್ದಳು. ದಕ್ಷಬ್ರಹ್ಮ ಎಲ್ಲರ ಮನೆಗೂ ಹೋದ ಮೇಲೆ ಕೊನೆಯಲ್ಲಿ ದಾಕ್ಷಾಯಿಣಿ ಮನೆಗೆ ಹೋದನು. ಆಗ ಪರಶಿವನ ಪೂಜೆಗೆ ಕುಳಿತಿರುವಂತಹ ಕಾಲ. ಪೂಜೆಯಲ್ಲಿ ಶಿವನು ತಲ್ಲೀನನಾಗಿದ್ದರೆ ಶಿವೆಯು ಆತನ ಸೇವೆಯಲ್ಲಿ ತೊಡಗಿದ್ದಳು. ಶಿವನು ದಕ್ಷಬ್ರಹ್ಮ ಬಂದವನು ಗಮನಿಸಲಿಲ್ಲ. ಹಾಗೇಯೆ ಮೇಲೆಳಲಿಲ್ಲ. ಇದರಿಂದ ದಕ್ಷಬ್ರಹ್ಮನಿಗೆ ಸಿಟ್ಟು ಬಂತು. ಶಿವನನ್ನು ಕೊಲ್ಲಲು ಇದೇ ತಕ್ಕ ಸಮಯ ಎಂದು ಮಾರಣ ಹೋಮ ಮಾಡಲು ಬಯಸಿದನು. ಇದಕ್ಕೆ ದೇವತೆಗಳ ಅನುಮತಿಯು ಇತ್ತು.
ದಕ್ಷಬ್ರಹ್ಮ ಯಜ್ಞ ಮಾಡುತ್ತಿರುವಾಗ ಅದರ ಆರ್ಭಟವನ್ನು ತಡೆಯಲಾರದೇ ಅಲ್ಲಿ ಸೇರಿದವರು ದಧೀಚಿಯನ್ನು ಕರೆಸಿದರು. ದಧೀಚಿಯು ಪರಶಿವನನ್ನು ನೋಡುವುದಾಗಿ ಅಪೇಕ್ಷಿಸಿದ. ಆಗ ದಕ್ಷಬ್ರಹ್ಮನು ತನ್ನ ಯೋಗದ ವಿಷಯವನ್ನು ಆತನಿಗೆ ತಿಳಿಸಿ ನೀನು ಇದ್ದರೆ ಇರಬಹುದು, ಇಲ್ಲದಿದ್ದರೆ ಹೋಗಬಹುದು ಎಂದನು. ಇದರಿಂದ ಕೋಪಗೊಂಡ ದಧೀಚಿಯು ದಕ್ಷಬ್ರಹ್ಮನ ತಲೆಯು ಹೋಮಕ್ಕೆ ಆಹುತಿಯಾಗುವಂತೆ ಶಾಪ ಕೊಟ್ಟ್ಉ ಹೊರಟು ಹೋದನು.
ನಾರದನ ಮುಖಾಂತರ ಈ ಸುದ್ದಿಯನ್ನು ತಿಳಿದ ಗೌರಿಯು ತಾನು ಹೋಮಕ್ಕೆಡ ಹೋಗುವುದಾಗಿ ತಿಳಿಸಿದಳು ಆದರೆ ಶಿವ ನಿರಾಕರಿಸಿದ. ಆಕೆ ಹಠ ಮಾಡಿ ಹೋರಟೇ ಬಿಟ್ಟಳು.. ಮೊದಲು ತಾಯಿಯಲ್ಲಿಗೆ ಬಂದಳು. ತಾಯಿ ಮಾತನಾಡಿಸಲಿಲ್ಲ ಆಮೇಲೆ ತನ್ನ ಅಕ್ಕಂದಿರನ್ನು ಮಾತನಾಡಿಸಲು ಹೋದಳು. ಅವರೂ ಮಾತನಾಡಲಿಲ್ಲ. ಕೊನೆಗೆ ತನ್ನ ತಂದೆಯ ಬಳಿಗೆ ಹೋಗಲು ಆತ ಅವಳನ್ನು ಎಡಗಾಲಿನಿಂದ ಒದ್ದು ಶಿವನನ್ನು ಪರಿಪರಿಯಾಗಿ ನಿಂದಿಸಿ ಹೊರ ನೂಕಿದನು. ಇದರಿಂದ ನೊಂದ ಗೌರಿ ಯಜ್ಞ ಕುಂಡಕ್ಕೆ ಹಾರಿ ಅಸುನೀಗಿದಳು.
ಗೌರಿಯ ಜೊತೆ ಬಂದಿದ್ದ ನಂದೀಶ್ವರನು ಶಿವನಿಗೆ ಈ ವಿಷಯ ತಿಳಿಸಿದನು.
"https://kn.wikipedia.org/wiki/ಸದಸ್ಯ:Ranjithgowdank/sandbox" ಇಂದ ಪಡೆಯಲ್ಪಟ್ಟಿದೆ