ವಿರಾಮ ಚಿಹ್ನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
೧ ನೇ ಸಾಲು:
ಕನ್ನಡದಲ್ಲಿ[[ಕನ್ನಡ]]ದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು.
 
ವಿರಾಮ ಚಿಹ್ನೆಗಳು ಓದುಗನಿಗೆಂದು ಲೇಖಕನು ನೀಡುವ ಮಾರ್ಗದರ್ಶನ ಎಂದು ತಿಳಿಯಬೇಕು. ಓದುಗನು ಒಂದು ಲೇಖನವನ್ನು ಓದುವಾಗ ಕೆಲವು ಕಡೆ ಸ್ವಲ್ಪ ತಡೆದು ಓದುತ್ತಾನೆ. ಆಗ ಓದಿದ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಒಂದೊಂದು ವಿರಾಮ ಚಿಹ್ನೆಗೂ ಒಂದು ಅರ್ಥವಿದೆ. ಅದನ್ನು ಉಪಯೋಗಿಸುವಾಗ ಲೇಖಕನು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನೆ. ಆದುದರಿಂದ ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿವಳಿಕೆ ಹೊಂದಿರುವುದು, ಲೇಖಕನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ದೃಷ್ಟಿಯಿಂದ ವಿರಾಮ ಚಿಹ್ನೆಗಳನ್ನೂ ಅವುಗಳನ್ನೂ ಉಪಯೋಗಿಸುವ ಬಗೆಯನ್ನೂ ಕುರಿತು ವಿವರಣೆಯನ್ನು ನೀಡಲಾಗಿದೆ.
"https://kn.wikipedia.org/wiki/ವಿರಾಮ_ಚಿಹ್ನೆ" ಇಂದ ಪಡೆಯಲ್ಪಟ್ಟಿದೆ