ಉತ್ತರ ಆಸ್ಟ್ರೇಲಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು ಕೊಂಡಿ ಸೇರ್ಪಡೆ
೧ ನೇ ಸಾಲು:
 
ಉತ್ತರ ಆಸ್ಟ್ರೇಲಿಯ: ಆಸ್ಟ್ರೇಲಿಯದ[[ಆಸ್ಟ್ರೇಲಿಯ]]ದ ಆರು ರಾಜಕೀಯ ವಿಭಾಗಗಳಲ್ಲಿ ಒಂದಾದ ಉತ್ತರ ಸೀಮೆ (ನಾರ್ದರ್ನ್ ಟೆರಿಟರಿ). ಆಸ್ಟ್ರೇಲಿಯದ ಸಂಯುಕ್ತ ಸರ್ಕಾರದ ಆಳ್ವಿಕೆಗೆ ಒಳಪಟ್ಟ ಎರಡು ಪ್ರದೇಶಗಳಲ್ಲಿ ಒಂದು. (ಇನ್ನೊಂದು ಆಸ್ಟ್ರೇಲಿಯದ ರಾಜಧಾನಿಯ ಪ್ರದೇಶ.) ಆಸ್ಟ್ರೇಲಿಯದ ಉತ್ತರ ಭಾಗದ ಮಧ್ಯದಲ್ಲಿರುವ ಈ ಪ್ರಾಂತ್ಯವು ದ. ಅ. 26ಲಿ ಯಿಂದ ಆಸ್ಟ್ರೇಲಿಯದ ಉತ್ತರ ತೀರದವರೆಗೂ ಪು.ರೇ. 129ಲಿ ಸೆ.=138ಲಿಸೆ.ಯ ವರೆಗೂ ಹಬ್ಬಿದೆ. ದಕ್ಷಿಣ ಪಾಶರ್ವ್‌ದಲ್ಲಿ ಮಕರಸಂಕ್ರಾಂತಿ ವೃತ್ತ ಹಾದು ಹೋಗುತ್ತದೆಯಾದ್ದರಿಂದ ಇದು ಬಹುಮಟ್ಟಿಗೆ ಉಷ್ಣವಲಯದಲ್ಲೇ ನೆಲಸಿರುವ ಪ್ರದೇಶ.
ವಿಸ್ತೀರ್ಣ: 1,349,130 ಚ.ಕಿಮೀ. ಜನಸಂಖ್ಯೆ : 200,019 (2001)
ಟಿಮಾರ್ ಸಮುದ್ರದ ಮೇಲಿರುವ ಡಾರ್ವಿನ್ ಮುಖ್ಯ ಬಂದರು, ರಾಜಧಾನಿ. ದಕ್ಷಿಣ ಭಾಗದಲ್ಲಿನ ಆಲಿಸ್ ಸ್ಟ್ರಿಂಗ್ಸ್‌ ಮುಖ್ಯಪಟ್ಟಣ.
೭ ನೇ ಸಾಲು:
==ವಾಯುಗುಣ==
ತೀರಪ್ರದೇಶ ಭಾರತದ ದಖನ್ ಪ್ರಸ್ಥಭೂಮಿಯಂತೆ ಮಾನ್ಸೂನ್ ಮಾದರಿಯ ವಾಯುಗುಣ ಹೊಂದಿದೆ. ಇಲ್ಲಿ ಮಾನ್ಸೂನ್ ಮಾರುತಗಳು ವಾಯವ್ಯ ದಿಕ್ಕಿನಿಂದ ಬೀಸುತ್ತವೆ. ನವೆಂಬರಿನಿಂದ ಏಪ್ರಿಲ್ ತಿಂಗಳವರೆಗೆ ಬೇಸಗೆ. ಆಗ ತೀರ ಪ್ರದೇಶದಲ್ಲಿ ಹೆಚ್ಚು ಮಳೆ. ಜನವರಿ ತಿಂಗಳು ಹೆಚ್ಚು ಶಾಖ. 50ಲಿಸೆ. ಉಷ್ಣತೆ. ಮೇ-ಅಕ್ಟೋಬರ್ ಚಳಿಗಾಲ, 33.3ಲಿ ಸೆ. ಉಷ್ಣತೆ.
ಈ ಪ್ರದೇಶ ಉಷ್ಣವಲಯದ ವಾಯುಗುಣದಿಂದ ಕೂಡಿರುವುದರಿಂದ ಇಲ್ಲಿ ಮಾನ್ಸೂನ್ ಕಾಡುಗಳೂ ಗುಲ್ಮವೃಕ್ಷದ ಕಾಡುಗಳೂ ಕಂಡುಬರುತ್ತವೆ. ಉತ್ತರದ ತೀರಪ್ರದೇಶ ದಲ್ಲಿ ಸವನ್ನ ಮಾದರಿಯ ಹುಲ್ಲುಗಾವಲಿಂದ ಕೂಡಿದ ಕಾಡುಗಳಿವೆ. ನೀಲಗಿರಿ ಮರ ಧಾರಾಳ. ಆಸ್ಟ್ರೇಲಿಯದ ಇತರ ಕಡೆಗಳಲ್ಲಿರುವಂತೆ ಇಲ್ಲೂ [[ಕಾಂಗರೂ]], ಮೊಸಳೆ, [[ಹಾವು]], ಮೊಲ, ಬಗೆಬಗೆಯ ಪಕ್ಷಿಗಳು, ಕಪ್ಪೆ, ಮೀನು ಇವೆ. ಹಿಂದೆ ಟಿಮಾರ್ನಿಂದ ಇಲ್ಲಿಗೆ ತಂದ ಕಾಡೆಮ್ಮೆಗಳನ್ನು ಚರ್ಮಕ್ಕಾಗಿ ಬೇಟೆಯಾಡಲಾಗಿದೆ. ಮಳೆಗಾಲದಲ್ಲಿ ಸೊಳ್ಳೆ ವಿಪರೀತ. ಗೆದ್ದಲಿನ ಹಾವಳಿಯೂ ಬಹಳ.
ಮಳೆ ಕಡಿಮೆಯಾಗಿದ್ದು ಮಣ್ಣೂ ಫಲವತ್ತಾಗಿಲ್ಲದಿರುವುದರಿಂದ ಹೆಚ್ಚು ವ್ಯವಸಾಯ ಸಾಧ್ಯವಿಲ್ಲ. ಸವನ್ನ ಹುಲ್ಲುಗಾವಲಿನ ಪ್ರದೇಶಗಳಲ್ಲಿ ದನ ಕುರಿಗಳನ್ನು ಸಾಕುವುದು ಜನರ ಮುಖ್ಯ ಕಸುಬು. ಗಣಿಗಾರಿಕೆಯೂ ತೀರಪ್ರದೇಶದಲ್ಲಿ ಮೀನುಗಾರಿಕೆಯೂ ಈ ಪ್ರದೇಶದ ಜನರ ಇತರ ಕಸುಬು.
ಖನಿಜೋತ್ಪತ್ತಿ, ಕೈಗಾರಿಕೆ: ಡಾರ್ವಿನ್ನಿಗೆ 80 ಕಿಮೀ ದಕ್ಷಿಣಕ್ಕಿರುವ ರಂಜಂಗಲ್ನಲ್ಲಿ 1949ರಲ್ಲಿ ಯುರೇನಿಯಂ ಪತ್ತೆಯಾಗಿ 1954ರಲ್ಲಿ ಇದರ ಪರಿಷ್ಕರಣ ಕೈಗಾರಿಕೆ ಆರಂಭವಾದಂದಿನಿಂದ ಇಲ್ಲಿ ಗಣಿ ಉದ್ಯಮ ಬೆಳೆದಿದೆ. ಆದರೆ ಇದರ ಪ್ರಮಾಣ ಹಾಗೂ ಮೌಲ್ಯ ಎಷ್ಟೆಂಬುದು ಕಾಯ್ದಿಟ್ಟ ರಹಸ್ಯ. ಉಳಿದ ಖನಿಜಗಳ ಮೌಲ್ಯದಲ್ಲಿ ಅರ್ಧಪಾಲು ತಾಮ್ರದ್ದು; 3ನೆಯ ಒಂದು ಭಾಗ ಚಿನ್ನ. ಇವೆರಡನ್ನೂ ಟೆನ್ನಾಂಟ್ ಕ್ರೀಕ್ ಎಂಬಲ್ಲಿ ತೆಗೆಯಲಾಗುತ್ತಿದೆ. ಹಾಟ್ಸ್‌ ಪರ್ವತ ಶ್ರೇಣಿಯಲ್ಲಿ ಮ್ಯಾಂಗನೀಸ್ ಮತ್ತು ಅಭ್ರಕ ದೊರಕುತ್ತವೆ. ತವರ, ಬೆಳ್ಳಿ ಇಲ್ಲಿ ಸಿಗುವ ಇತರ ಎರಡು ಲೋಹಗಳು.
"https://kn.wikipedia.org/wiki/ಉತ್ತರ_ಆಸ್ಟ್ರೇಲಿಯ" ಇಂದ ಪಡೆಯಲ್ಪಟ್ಟಿದೆ