ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಕೃಷಿ using HotCat
ಚು Wikipedia python library
೬ ನೇ ಸಾಲು:
==ಕೆಲಸಗಳು==
ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಕೆಳಗೆ ಅನೇಕ ವಿಭಾಗಗಳಲ್ಲಿ ನೂರಾರು ರಾಷ್ಟ್ರಗಳ ಸುಮಾರು ಸಾವಿರಾರು ಸ್ತ್ರೀಪುರುಷರ ಸಿಬ್ಬಂದಿ ಕೆಲಸ ಮಾಡುತ್ತದೆ.
 
ರೋಮ್ನಲ್ಲಿ ಎರಡು ವರ್ಷಗಳಿಗೊಮ್ಮೆ ಸೇರುತ್ತಿದ್ದ ಸಾಮಾನ್ಯ ಸಭೆಗಳಿಗೆ ಮತ್ತು ಯುರೋಪಿನ ನೂರಾರು ಸ್ಥಳಗಳಲ್ಲಿ ಆಗಾಗ ಸೇರುತ್ತಿದ್ದ ವಿಶೇಷ ಸಭೆಗಳಿಗೆ ಸೂಕ್ತ ಸಿದ್ಧತೆಗಳನ್ನು ಮಾಡುವುದು ಇದರ ಮುಖ್ಯ ಕೆಲಸಗಳಲ್ಲೊಂದಾಗಿತ್ತು. ಲೀಗ್ ಆಫ್ ನೇಷನ್್ಸ, ಅಂತಾರಾಷ್ಟ್ರೀಯ ಕಾರ್ಮಿಕ ಕಚೇರಿ ಮತ್ತು 1927, 1933, 1939ರಲ್ಲಿ ಸಮಾವೇಶಗೊಂಡ ಆರ್ಥಿಕ ಸಮ್ಮೇಳನಗಳೊಂದಿಗೆ ಈ ಸಂಸ್ಥೆ ಪೂರ್ಣ ಸಹಕಾರ ತೋರಿತಲ್ಲದೆ ಜಾಗತಿಕ ಅರಣ್ಯ ಪರಿಷತ್ತು. ಕುಕ್ಕುಟ ಮತ್ತು ಕ್ಷೀರ ಸಂವರ್ಧನ ಪರಿಷತ್ತುಗಳ ಸಭೆಗಳಲ್ಲಿ ಭಾಗವಹಿಸಿತು.
 
ಈ ಸಂಸ್ಥೆಯ ಕಾರ್ಯಗಳನ್ನು ಅನೇಕ ಶ್ರೇಣಿಗಳಲ್ಲಿ ಪ್ರಚುರಪಡಿಸಿ ವಿವರಗಳನ್ನು ಸರ್ಕಾರ ಹಾಗೂ ಸಾರ್ವಜನಿಕರಿಗೆ ಹಂಚಲಾಯಿತು. ಈ ಸಂಸ್ಥೆ ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನೊಳಗೊಂಡು ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಒಕ್ಕಲುತನ ಕಾಯಿದೆಯ ವಾರ್ಷಿಕ ಗ್ರಂಥಗಳು, ಅಂತಾರಾಷ್ಟ್ರೀಯ ಅರಣ್ಯ ಸಂಖ್ಯಾ ಸಂಗ್ರಹಣ ವಾರ್ಷಿಕ ಗ್ರಂಥಗಳು ಮತ್ತು ರಾಷ್ಟ್ರೀಯ ಒಕ್ಕಲುತನ ವಿಮರ್ಶಿಸುವ ಮಾಸಿಕ ಪತ್ರಿಕೆಗಳು ಇತ್ಯಾದಿ ಅತ್ಯುಪಯುಕ್ತವಾದ ಪುಸ್ತಕಗಳನ್ನು ಪ್ರಕಟಿಸಿತು.
 
ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ಸಂಸ್ಥೆಯ ಅಂತಾರಾಷ್ಟ್ರೀಯ ಧೋರಣೆಯನ್ನು ಒಪ್ಪದ ಯುದ್ಧಾಸಕ್ತ ರಾಷ್ಟ್ರಗಳ ಬಲದಿಂದಾಗಿ ಇದರ ಕಾರ್ಯಾಸಕ್ತಿ ಕ್ಷೀಣಿಸಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಹಾರ ಮತ್ತು ಕೃಷಿಸಂಸ್ಥೆ (ಎಫ್.ಎ.ಒ.) 1943ರಲ್ಲಿ ಸ್ಥಾಪನೆಗೊಂಡಾಗ ಖ್ಯಾತ ಡೇವಿಡ್ ಲೂಬಿನ್ ಸ್ಮಾರಕ ಗ್ರಂಥಾಲಯದ ಎಲ್ಲ ಗ್ರಂಥಗಳನ್ನೂ ರೋಮ್ ನಗರದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿಗೆ ರವಾನಿಸಲಾಯಿತು (1946)
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಸಂಘ-ಸಂಸ್ಥೆಗಳು]]