ಅಂತಾರಾಷ್ಟ್ರೀಯ ಆರ್ಥಿಕ ಮಂಡಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
No edit summary
೩೧ ನೇ ಸಾಲು:
# ಈ ನೆರವಿನಿಂದ ತನಗೂ ಮತ್ತು ನೆರವು ನೀಡಿದ ಇತರ ಖಾಸಗಿ ಬಂಡವಾಳಗಾರರಿಗೂ ಎಷ್ಟರಮಟ್ಟಿಗೆ ಲಾಭವಾಗುತ್ತದೆ
# ಬಂಡವಾಳ ವಿನಿಯೋಗದಿಂದ ಎಷ್ಟರಮಟ್ಟಿಗೆ ರಾಷ್ಟ್ರದ ಆರ್ಥಿಕ ಪ್ರಗತಿ ಸಾಧಿಸಬಹುದು?
[[File:International Finance Corporation Building.JPG|thumb|right|200px|IFC headquarters building, designed by architect [[Michael Graves]]]]
 
ಈ ವಿಷಯಗಳನ್ನು ಪರಿಶೀಲಿಸಿ ಮಂಡಲಿ ತನಗೆ ಸೂಕ್ತ ತೋರಿದ ಹಲವಾರು ರೀತಿಯಲ್ಲಿ ತನ್ನ ಬಂಡವಾಳವನ್ನು ವಿನಿಯೋಗಿಸುವ ಪರಮಾಧಿಕಾರವನ್ನು ಹೊಂದಿದೆ. ಇದು ತಾನು ನೆರವು ನೀಡುವ ಸಂಸ್ಥೆಯ [[ಷೇರು]] ಅಥವಾ ಬಾಂಡುಗಳನ್ನು ನೇರವಾಗಿ ಕೊಳ್ಳುವುದಿಲ್ಲ. ಸಾಲದ ರೂಪದಲ್ಲಿ ಸಹಾಯಧನ ನೀಡಲು ಸಿದ್ಧವಿದೆ; ಆದರೆ ಇತರ ಸಾಲಗಾರರಂತೆ ಕೇವಲ ಬಡ್ಡಿಗಾಗಿ ಮಾತ್ರ ಸಾಲ ಕೊಡುವುದಿಲ್ಲ. ಖಾಸಗಿ ಕ್ಷೇತ್ರದಲ್ಲಿ ಬಹು ಲಾಭದಾಯಕವಾಗಿ ಸುಲಭವಾಗಿ ಮಾರಾಟವಾಗುವ ಸೆಕ್ಯೂರಿಟಿಗಳನ್ನು ಮಾರುವ ಅಥವಾ ಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತದೆ. ಸುಲಭವಾಗಿ ಮಾರಾಟವಾಗುವ ಷೇರುಗಳ ಮತ್ತು ಸ್ಟಾಕುಗಳ ಮೇಲೆ ಬಂಡವಾಳ ವಿನಿಯೋಗಿಸುವ ಹಕ್ಕು ಪಡೆದಿದ್ದು ಇದರಿಂದ ತನಗೆ ಲಾಭದಾಯಕವಾದ ಸೆಕ್ಯೂರಿಟಿಗಳನ್ನು ಸೂಕ್ತ ತೋರಿದಾಗ ಮಾರಿ, ಬೇರೆ ಉದ್ಯಮಗಳಲ್ಲಿ ಬಂಡವಾಳ ವಿನಿಯೋಗದಿಂದ ಸಂಭವಿಸಿರಬಹುದಾದ ತನ್ನ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಅವಕಾಶ ಮತ್ತು ಅಧಿಕಾರವನ್ನು ಈ ಸಂಸ್ಥೆ ಹೊಂದಿದೆ. ಈ ರೀತಿ ಸಮತೋಲನವಾದ ರೀತಿಯಲ್ಲಿ ಬಂಡವಾಳ ವಿನಿಯೋಗ ಮಾಡಿ ತನ್ನ ಹಣಕಾಸಿನ ಭದ್ರತೆಯನ್ನು ಮತ್ತು ತನ್ನ ವ್ಯವಹಾರ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಲು ಈ ಸಂಸ್ಥೆ ಶ್ರಮಿಸುತ್ತದೆ. ಈ ಸಂಸ್ಥೆ ತಾನು ಪಡೆದಿರುವ ಅನೇಕ ಸೆಕ್ಯೂರಿಟಿಗಳನ್ನು ಇತರ ಖಾಸಗಿ ಉದ್ಯಮಿಗಳಿಗೆ ಮಾರುವ ಹಕ್ಕನ್ನು ಪಡೆದಿದ್ದರೂ ಇತರ ಬಂಡವಾಳಗಾರರಂತೆ ಬರೀ ಲಾಭಕ್ಕಾಗಿ ವ್ಯವಹಾರ ನಡೆಸುವುದಿಲ್ಲ; ತನ್ನ ಬಂಡವಾಳ ವಿನಿಯೋಗದ ನೀತಿಯನ್ನು ತನಗೆ ಸೂಕ್ತ ಕಂಡಂತೆ ಬದಲಾಯಿಸುವ ಅಧಿಕಾರವನ್ನು ಹೊಂದಿದೆ.
 
ಇದು ನೀಡುವ ಧನಸಹಾಯ 5 ರಿಂದ 15 ವರ್ಷಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವಾಗಿರಬಹುದು. ಈ ಸಾಲ ಒಟ್ಟಾಗಿಯಾಗಲಿ ಅಥವಾ ಆವಶ್ಯಕವಾದ ಕಂತುಗಳ ರೂಪದಲ್ಲಾಗಲಿ ಇರಬಹುದು. ಬಡ್ಡಿ ಸಂದರ್ಭಾನುಸಾರವಾಗಿ ಹೆಚ್ಚು ಅಥವಾ ಕಡಿಮೆ ಇರಬಹುದು. ಇದು ಸಾಲ ಕೊಡಬೇಕಾದರೆ ಆ ಉದ್ಯಮದಲ್ಲಿ ಅನುಭವಪುರ್ಣವಾದ ದಕ್ಷತೆಯಿಂದ ಕೂಡಿದ ಆಡಳಿತ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ತಾನು ಸಹಾಯಧನ ನೀಡುವ ಸಂಸ್ಥೆಯ ಆಡಳಿತ ವರ್ಗದಲ್ಲಿ ತನ್ನ ಪರವಾಗಿ ಒಬ್ಬ ನಿರ್ದೇಶಕ ಇರಲೇಬೇಕೆಂದು ಸೂಚಿಸಬಹುದು ಅಥವಾ ನಿಯಮಿಸಬಹುದು. ತನ್ನಿಂದ ಸಾಲ ಪಡೆದ ಯಾವ ಉದ್ಯಮದಲ್ಲಿಯಾಗಲೀ ಬಂಡವಾಳ ವೆಚ್ಚವಾಗುವ ವಿಧಾನವನ್ನು ಆಗಿಂದಾಗ್ಗೆ ಪರಿಶೀಲಿಸುವ ವಿಶೇಷ ಹಕ್ಕನ್ನು ಈ ಸಂಸ್ಥೆ ಪಡೆದಿದೆ. ಈ ರೀತಿ ಸಹಾಯಧನ ನೀಡಲು ತಾನು ಮುಂದೆ ಬಂದಾಗ ಯಾವ ಸರ್ಕಾರವಾಗಲಿ ಆಕ್ಷೇಪಿಸಿದರೆ ಕೂಡಲೆ ಸಹಾಯ ನಿಲ್ಲಿಸುವ ಸ್ವಾತಂತ್ರ್ಯ ಈ ಸಂಸ್ಥೆಗೆ ಇದೆ.
ಹೀಗೆ ಈ ಸಂಸ್ಥೆ ಹಲವಾರು ರೀತಿಯಲ್ಲಿ ಖಾಸಗಿ ವಲಯದ ಅನೇಕ ಉದ್ಯಮಗಳಿಗೆ ಬಂಡವಾಳರೂಪದಲ್ಲಿ ಸಹಾಯಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ತನ್ನ ವ್ಯವಹಾರದಿಂದ ಸಂಭವಿಸಬಹುದಾದ ಎಲ್ಲ ಲಾಭನಷ್ಟಗಳಿಗೂ ಈ ಸಂಸ್ಥೆಯೇ ಪುರ್ಣವಾಗಿ ಹೊಣೆಯಾಗಿದೆ. ತಾನು ಸಹಾಯ ನೀಡುವ ಉದ್ಯಮಗಳಿಗೆ ಇದು ಸಾಧಾರಣವಾಗಿ ಇತರ ಅಂತಾರಾಷ್ಟ್ರೀಯ ಧನಸಹಾಯ ಸಂಸ್ಥೆಗಳಿಗೆ ಸರ್ಕಾರದ ಖಾತರಿಯನ್ನು ಅಪೇಕ್ಷಿಸುವುದಿಲ್ಲ. ಇದರಿಂದ ಈ ಸಂಸ್ಥೆಯ ಮೂಲ ಉದ್ದೇಶ ಖಾಸಗಿ ಕ್ಷೇತ್ರದಲ್ಲಿ ಹಲವಾರು ರೀತಿಯ ಉದ್ಯಮಗಳನ್ನು ಸ್ಥಾಪಿಸಿ ತನ್ಮೂಲಕ ಆ ರಾಷ್ಟ್ರಗಳ ನಾನಾ ಮುಖವಾದ ಆರ್ಥಿಕಪ್ರಗತಿಯನ್ನು ಸಾಧಿಸುವುದಾಗಿದೆ ಎಂಬುದು ವ್ಯಕ್ತವಾಗುತ್ತದೆ. ಈ ಸಂಸ್ಥೆ ಭಾರತ ದೇಶದಲ್ಲಿ ಈಚೆಗೆ ಅಸ್ಸಾಂ ಪ್ರಾಂತ್ಯದ ಸಿಲಿಮೆನೈಟ್ ಕೈಗಾರಿಕೆಗೆ ಮತ್ತು ಕೆ.ಎಸ್.ಬಿ.ಪಂಪ್ಸ್ ಲಿಮಿಟೆಡ್ ಎಂಬ ಕೈಗಾರಿಕಾ ಸಂಸ್ಥೆಗೆ ಧನಸಹಾಯ ನೀಡಿ ಈ ಕೈಗಾರಿಕೆಗಳ ಪ್ರಗತಿಗೆ ಕಾರಣವಾಗಿದೆ. ಹಿಂದುಳಿದ ರಾಷ್ಟ್ರಗಳ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನ ನೆರವು ಮತ್ತು ತಾಂತ್ರಿಕತಜ್ಞರ ಸಲಹೆಗಳನ್ನು ಒದಗಿಸಿ ತನ್ನ ಬಂಡವಾಳದ ಜೊತೆಗೆ ಆಯಾ ದೇಶಗಳ ಖಾಸಗಿ ಬಂಡವಾಳ ಮುಂದೆ ಬರುವಂತೆ ಅನುಕೂಲ ವಾತಾವರಣವನ್ನು ಕಲ್ಪಿಸುವುದು ಸಾಧ್ಯವಾಗಿದೆ.
==ಬಾಹ್ಯ ಸಂಪರ್ಕಗಳು==
 
*[http://www.ifc.org/ Official '''IFC—International Finance Corporation''' website]
*[http://www.gcgf.org/wps/wcm/connect/CORP_EXT_Content/IFC_External_Corporate_Site/About+IFC/Articles+of+Agreement/ IFC Articles of Agreement]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]